ಮಲೈಕಾ ಅರೋರಾ ಜೊತೆ ಮದುವೆ ಮುರಿದುಕೊಂಡಿದ್ಯಾಕೆ, ಅರ್ಬಾಜ್ ಖಾನ್ ಹೇಳಿದ್ದಿಷ್ಟು!
ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಬೇರ್ಪಟ್ಟು ಹಲವು ವರ್ಷಗಳು ಕಳೆದಿವೆ. ಇದೀಗ ಅರ್ಬಾಜ್ ಖಾನ್ ತಮ್ಮ ವಿಫಲ ಮದುವೆಯ ಕುರಿತು ಮಾತನಾಡಿದ್ದಾರೆ.
ಮಲೈಕಾ ಅರೋರಾ (Malaika Arora) ಮತ್ತು ಅರ್ಬಾಜ್ ಖಾನ್ ಅವರನ್ನು ಹಿಂದಿನ ದಿನದ ಹಾಟೆಸ್ಟ್ ಜೋಡಿಗಳಲ್ಲಿ ಒಂದು ಎಂದೇ ಕರೆಯಲಾಗುತ್ತಿತ್ತು. ಆದರೆ ಅವರು ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್ ಖಾನ್ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಮಲೈಕಾ. ಮಲೈಕಾ ಕೆಲ ವರ್ಷಗಳಿಂದ ದೇಹ ಪ್ರದರ್ಶನವಿಲ್ಲದ ಬಟ್ಟೆಗಳನ್ನು ಧರಿಸಿದ್ದೇ ಇಲ್ಲ ಎನ್ನಬಹುದೇನೋ. ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಾಗ ಆಗುವಷ್ಟು ಟ್ರೋಲ್ ಇನ್ನಾವುದಕ್ಕೂ ಆಗುತ್ತಿಲ್ಲ ಎನ್ನಬಹುದೇನೋ. ಅದೇನೇ ಇದ್ದರೂ ಇವರಿಬ್ಬರೂ ಯಾರಿಗೂ ಡೋಂಟ್ಕೇರ್ ಎನ್ನದೇ ಜೀವನ ನಡೆಸುತ್ತಿದ್ದಾರೆ.
ಈ ನಡುವೆಯೇ, ಅರ್ಬಾಜ್ ಖಾನ್, ಮಲೈಕಾ ಜೊತೆಗಿನ ತಮ್ಮ ವಿಫಲ ದಾಂಪತ್ಯದ ಕುರಿತು ಮಾತನಾಡಿದ್ದಾರೆ. ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ ಒಟ್ಟಿಗೇ ಮೊದಲಿಗೆ ಸಿಕ್ಕಿದ್ದು, ಕಾಫಿ ಬ್ರಾಂಡ್ ಜಾಹೀರಾತಿನ ಚಿತ್ರೀಕರಣದ ಸಮಯದಲ್ಲಿ. ಅದು ಸಾಕಷ್ಟು ಬೋಲ್ಡ್ ಆಗಿದ್ದರಿಂದ ಜಾಹೀರಾತು ವಿವಾದಕ್ಕೀಡಾಗಿತ್ತು. ಆದರೆ, ಈ ಜೋಡಿ ಪ್ರೀತಿಯಲ್ಲಿ ಬಿದ್ದವು. ಇದಾದ ನಂತರ ಇಬ್ಬರೂ ಜೊತೆಯಾಗಿ ಹಲವು ಪ್ರಾಜೆಕ್ಟ್ ಗಳನ್ನು ಮಾಡಿದ್ದು, 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಅದಾದ ಬಳಿಕ, ಅರ್ಬಾಜ್ (Arbaaz Khan) ಅವರಿಗೆ ತಾವೇ ಪ್ರಪೋಸ್ ಮಾಡಿದುದಾಗಿ ಮಲೈಕಾ ಹೇಳಿಕೊಂಡಿದ್ದರು. ‘ನಾನು ಮದುವೆಯಾಗಲು ಬಯಸುತ್ತೇನೆ. ನೀವು ಸಿದ್ಧರಿದ್ದೀರಾ?' ಎಂದು ಕೇಳಿದ್ದೆ. ಅರ್ಬಾಜ್ 'ನೀವು ದಿನ ಮತ್ತು ಸ್ಥಳವನ್ನು ಆಯ್ಕೆ ಮಾಡಿ' ಎಂದು ನನಗೆ ಹೇಳಿದರು ಎಂದು ಸಂದರ್ಶನವೊಂದರಲ್ಲಿ ಮಲೈಕಾ ಹೇಳಿಕೊಂಡಿದ್ದರು. ಇದಾದ ಬಳಿಕ 1998 ರಲ್ಲಿ ಮದುವೆಯಾಗಿದ್ದು, ಅವರಿಗೆ ಮಗ ಕೂಡ ಇದ್ದಾನೆ.
ಮಲೈಕಾ ಅರೋರಾ- ಅರ್ಜುನ್ ಕಪೂರ್ ಅಪ್ಪ-ಅಮ್ಮ ಆಗ್ತಿದ್ದಾರಾ? ನಟ ಹೇಳಿದ್ದೇನು?
ಆದಾಗ್ಯೂ, ಮದುವೆಯಾದ 20 ವರ್ಷಗಳ ನಂತರ, ಇಬ್ಬರೂ ಬೇರೆಯಾಗಿದ್ದಾರೆ. ಆದರೆ ಮಲೈಕಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್ ಖಾನ್ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್ ಆಗುತ್ತಲೇ ಇರುತ್ತವೆ.
ಈಗ ಅರ್ಬಾಜ್ ಖಾನ್ ಹಿಂದಿನ ಜೀವನ ಮತ್ತು ಮುರಿದ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಹೇಗೆ ತಮ್ಮ ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತವಾಗಿ ಬದಲಾವಣೆಗಳು ಪ್ರಾರಂಭವಾದವು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇಬ್ಬರ ನಡುವೆ ಯಾವುದೂ ಸರಳವಾಗಿ ಹೇಗೆ ಕೆಲಸ ಮಾಡಲಿಲ್ಲ ಎಂಬುದನ್ನು ಹಂಚಿಕೊಂಡ ಅವರು, ಪರಸ್ಪರ ದೂರ ಇರುವುದನ್ನು ಬಿಟ್ಟು ಬೇರೆ ಆಯ್ಕೆಗಳು ಇರಲಿಲ್ಲ ಎಂದಿದ್ದಾರೆ. ತಮ್ಮಿಬ್ಬರ ನಡುವೆ ಯಾವುದೇ ಕೆಟ್ಟ ಭಾವನೆಗಳು ಇರಲಿಲ್ಲ. ಅತ್ಯಂತ ಸೌಹಾರ್ದಯುತವಾಗಿ ಬೇರ್ಪಟ್ಟಿದ್ದೇವೆ ಎಂದಿದ್ದಾರೆ. ಒಬ್ಬರನ್ನೊಬ್ಬರು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲದ ಸಂದರ್ಭದಲ್ಲಿ ವಿಚ್ಛೇದನವೇ ದಾರಿ ಎನ್ನಿಸಿತು. ಯಾರೂ ತಮಗೆ ಏನು ಬೇಕೋ ಅದನ್ನು ಪಡೆದುಕೊಳ್ಳುವುದು ಕಷ್ಟ. ತಮಗೆ ಬೇಕು ಎನ್ನುವುದು ಸಿಗದಿದ್ದಾಗ ಇಬ್ಬರ ನಡುವೆ ವೈಮನಸ್ಸು ಬರುವುದು ಸಹಜ. ಹಾಗೆಯೇ ನಮ್ಮ ಜೀವನದಲ್ಲಿಯೂ ಆಗಿದೆ ಎಂದಿದ್ದಾರೆ. ವಿಚ್ಛೇದನದ ನಂತರದ ಜೀವನ ಮತ್ತು ಮದುವೆಯ ಸಂಸ್ಥೆಯಲ್ಲಿ ಹೇಗೆ ನಂಬಿಕೆಯನ್ನು ಕಳೆದುಕೊಂಡಿಲ್ಲ ಎಂದಿರುವ ಅರ್ಬಾಜ್ ಸದ್ಯ ಮಾಡೆಲ್ ಜಾರ್ಜಿಯಾ ಆಂಡ್ರಿಯಾನಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ತನ್ನನ್ನು ಭ್ರಮನಿರಸನಗೊಳಿಸಲು ವಿಚ್ಛೇದನಕ್ಕೆ ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ.
ಮಲೈಕಾ- ಅರ್ಜುನ್ ನೈಟ್ ಔಟ್: ಮುದಿ ಕುದುರೆಗೆ ಯುವ ಜಾಕಿ ಅನ್ನೋದಾ ನೆಟ್ಟಿಗರು!