Asianet Suvarna News Asianet Suvarna News

ಜಾಕ್ವಲಿನ್ ಬಳಿಕ ಸನ್ನಿ ಲಿಯೋನ್‌ಗೆ ಇಡಿ ವಿಚಾರಣೆ ಸಂಕಷ್ಟ, ನಟಿ ಬೆಂಬಲಕ್ಕೆ ನಿಂತ ಫ್ಯಾನ್ಸ್!

ಭಾರತದ ಬೆಟ್ಟಿಂಗ್ ಆ್ಯಪ್ ಮಾಲೀಕನ ಮದುವೆಯನ್ನು ದುಬೈನಲ್ಲಿ ಆಯೋಜಿಸಲಾಗಿತ್ತು. ಬರೋಬ್ಬರಿ 200 ಕೋಟಿ ರೂಪಾಯಿ ಖರ್ಚು ಮಾಡಿ ವಿವಾಹ ನಡೆದಿದೆ.  ಮಾಲೀಕನ ಮನೆ, ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಷ್ಟೇ ಅಲ್ಲ ಈ ಮದುವೆಯಲ್ಲಿ ಕುಣಿದ ಬಾಲಿವುಡ್ ಸೆಲೆಬ್ರೆಟಿಗಳ ವಿಚಾರಣೆಗೆ ಇಡಿ ಅಧಿಕಾರಿಗಳು ಮುಂದಾಗಿದ್ದಾರೆ.
 

Mahadev betting app Sourabh Chandrakar Rs 200 crore marriage Bollywood celebrities under ED scan ckm
Author
First Published Sep 16, 2023, 3:48 PM IST

ಮುಂಬೈ(ಸೆ.16) ಮಹದೇವ್ ಆನ್‌ಲೈನ್ ಬುಕ್ ಬೆಟ್ಟಿಂಗ್ ಆ್ಯಪ್ ಮಾಲೀಕ ಸೌರಬ್ ಚಂದ್ರಾಕರ್ ಮದುವೆ ದುಬೈನಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಈ ಮದುವೆ ಖರ್ಚು ಬರೋಬ್ಬರಿ 200 ಕೋಟಿ ರೂಪಾಯಿ.  ಸನ್ನಿ ಲಿಯೋನ್, ನೇಹಾ ಕಕ್ಕರ್, ಟೈಗರ್ ಶ್ರಾಫ್ ಸೇರಿದಂತೆ 17 ಬಾಲಿವುಡ್ ಸೆಲೆಬ್ರೆಟಿಗಳು ಈ ಮದುವೆಯಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸಿದ್ದರು. ಇದೀಗ ದುಬಾರಿ ಮದುವೆ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಬಾಲಿವುಡ್ ಸೆಲೆಬ್ರೆಟಿಗಳ ವಿಚಾರಣೆಗೆ ಮುಂದಾಗಿದ್ದಾರೆ.  ಈ ಮಾಹಿತಿ ಹೊರಬೀಳುತ್ತದ್ದಂತೆ ಸನ್ನಿ ಲಿಯೋನ್ ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ. ಸೌರಬ್ ಚಂದ್ರಕಾರ್ ವಿಚಾರಣೆ ನಡೆಸಿ ಸತ್ಯ ಬಯಲಿಗೆಳೆಯಲು ಆಗ್ರಹಿಸಿದ್ದಾರೆ.

ಫೆಬ್ರವರಿ ತಿಂಗಳಲ್ಲಿ ಈ ಮದುವೆ ನಡೆದಿತ್ತು. ಸೌರಬ್ ತಮ್ಮ ಮದುವೆಗೆ 200 ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಅದ್ಧೂರಿ ವಿವಾಹದ ಖರ್ಚು ನೋಡಿ ಇಡಿ ಅಧಿಕಾರಿಗಲು ದಂಗಾಗಿದ್ದಾರೆ. ಇಷ್ಟೇ ಅಲ್ಲ ಇಷ್ಟು ಮೊತ್ತಕ್ಕೆ ದಾಖಲೆ ಹಾಗೂ ಸೌರಬ್ ಆದಾಯ ಪರಿಶೀಲಿಸಿದ ಇಡಿ ಅಧಿಕಾರಿಗಳಿಗೆ ಹಲವು ಅಕ್ರಮಗಳು ವಾಸನೆ ಪತ್ತೆಯಾಗಿದೆ. ಹೀಗಾಗಿ ಸೌರಬ್ ಕಚೇರಿ ಹಾಗೂ ಮನೆ ಮೇಲೆ ದಾಳಿ ಮಾಡಿದ್ದಾರೆ.  ಈ ವೇಳೆ ಬರೋಬ್ಬರಿ 416 ಕೋಟಿ ರೂಪಾಯಿ ಮೊತ್ತದ ಆಸ್ತಿ ಪತ್ತೆಯಾಗಿದೆ.

ಡೇಟಿಂಗ್ ಪ್ಲಾನ್ ಇದೆಯಾ? ಬಹುದಿನಗಳ ಬೇಡಿಕೆ ಈಡೇರಿಸಿದ ಸನ್ನಿ ಲಿಯೋನ್!

ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಮೂಲಕ ಸೌರಬ್ ಹಾಗೂ ಈತನ ಬ್ಯೂಸಿನೆಸ್ ಪಾರ್ಟ್ನರ್ ರವಿ ಉಪ್ಪಲ್ ಬರೋಬ್ಬರಿ 5,000 ಕೋಟಿ ರೂಪಾಯಿ ಅಕ್ರಮ ನಡೆಸಿರುವುದು ಬೆಳಕಿಗೆ ಬಂದಿದೆ. ಚತ್ತೀಸಘಡ ಮೂಲದ ಇಬ್ಬರು ಉದ್ಯಮಿಗಳು ಸಾವಿರಾರು ಕೋಟಿ ರೂಪಾಯಿ ಅಕ್ರಮ ಹಣವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. 2023ರ ಫೆಬ್ರವರಿ ತಿಂಗಳಲ್ಲಿ ದುಬೈನಲ್ಲಿ ಮದುವೆಯಾದ ಸೌರಬ್ ಕೋಟಿ ಕೋಟಿ ರೂಪಾಯಿ ಹಣ ಖರ್ಚು ಮಾಡಿದ್ದರು. ಇದರಲ್ಲಿ ಬಹುಪಾಲು ಹಣವನ್ನು ಬಾಲಿವುಡ್ ಸೆಲೆಬ್ರೆಟಿಗಳಿಗೆ ನೀಡಲಾಗಿದೆ. ಸನ್ನಿ ಲಿಯೋನ್, ಟೈಗರ್ ಶ್ರಾಫ್, ನೇಹಾ ಕಕ್ಕರ್ ಸೇರಿದಂತೆ 17 ಬಾಲಿವುಡ್ ಸೆಲೆಬ್ರೆಟಿಗಳು ಸೌರಬ್ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ್ದರು.  2022ರ ಡಿಸೆಂಬರ್ ತಿಂಗಳಲ್ಲಿ ಆರಂಭಗೊಂಡ ಮಹದೇವ್ ಗ್ಯಾಂಬ್ಲಿಂಗ್ ಬೆಟ್ಟಿಂಗ್ ಆ್ಯಪ್ ಮೂಲಕ ಕೇವಲ ಒಂದುು ವರ್ಷದಲ್ಲಿ 5,000 ಕೋಟಿ ರೂಪಾಯಿಗೂ ಅಧಿಕ ಅಕ್ರಮ ಹಣ ವರ್ಗಗಾವಣೆ ಮಾಡಲಾಗಿದೆ.  ಈತನ ಜೊತೆಗೆ ಕೆಲ ಬಾಲಿವುಡ್ ಸೆಲೆಬ್ರೆಟಿಗಳು ಶಾಮೀಲಾಗಿರು ಅನುಮಾನ ವ್ಯಕ್ತವಾಗಿದೆ.

 

ಎದೆ ಕಾಣಿಸೋ ಬ್ಲೌಸ್‌, ಸೊಂಟಕ್ಕೆ ದುಪ್ಪಟ್ಟಾ ಸುತ್ಕೊಂಡು ವೈದ್ಯಳಾದ ಸನ್ನಿ ಲಿಯೋನ್!

ಸೌರಬ್ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಬಾಲಿವುಡ್ ಸೆಲೆಬ್ರೆಟಿಗಳನ್ನು ವಿಚಾರಣೆ ನಡೆಸಿ ಕೆಲ ಮಾಹಿತಿ ಹಾಗೂ ದಾಖಲೆ ಕಲೆ ಹಾಕಲು ಇಡಿ ಅಧಿಕಾರಿಗಳು ಮುಂದಾಗಿದ್ದಾರೆ. ಈತನ ಬೆಟ್ಟಿಂಗ್ ಆ್ಯಪ್‌ನ್ನು ಕೆಲ ಬಾಲಿವುಡ್ ಸೆಲೆಬ್ರೆಚಿಗಳು ಯ್ಯೂಟ್ಯೂಬ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡಿದ್ದಾರೆ.  ತನಿಖೆ ಚುರುಕುಕೊಂಡಿದ್ದು, ಬಾಲಿವುಡ್ ಸೆಲೆಬ್ರೆಟಿಗಳ ಮೇಲೆ ಇದೀಗ ಇಡಿ ತೂಗು ಗತ್ತಿ ನೇತಾಡುತ್ತಿದೆ.

ಇತ್ತ ಅಧಿಕಾರಿಗಳು ಸೌರಬ್ ಅವರ ಮುಂಬೈ ಹಾಗೂ ಕೋಲ್ಕತಾ ಕೇಚರಿಗೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 46 ಕೋಟಿ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗಿದೆ.  ಈ ಆಸ್ತಿಯನ್ನು ಇಡಿ ಅಧಿಕಾರಿಗಳ ವಶಕ್ಕೆ ಪಡೆದಿದ್ದಾರೆ.

Follow Us:
Download App:
  • android
  • ios