ಎದೆ ಕಾಣಿಸೋ ಬ್ಲೌಸ್, ಸೊಂಟಕ್ಕೆ ದುಪ್ಪಟ್ಟಾ ಸುತ್ಕೊಂಡು ವೈದ್ಯಳಾದ ಸನ್ನಿ ಲಿಯೋನ್!
ಸನ್ನಿಲಿಯೋನ್ ಶೂಟಿಂಗ್ ಸೆಟ್‌ನಲ್ಲಿ ಗಾಯಗೊಂಡ ತಮ್ಮ ಸಹೋದ್ಯೋಗಿಗೆ ಸನ್ನಿಲಿಯೋನ್ ತಾನೇ ಸ್ವತಃ ಡಾಕ್ಟರ್ ಆಗಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ಮಾಜಿ ಪಾರ್ನ್‌ಸ್ಟಾರ್ ಸನ್ನಿ ಲಿಯೋನ್ ತಮ್ಮ ಹಳೆಯ ವೃತ್ತಿ ಜೀವನವನ್ನು ಬಿಟ್ಟು, ಭಾರತದ ಬಾಲಿವುಡ್, ಮಾಲಿವುಡ್, ಸ್ಯಾಂಡಲ್‌ವುಡ್ ಸೇರಿ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಅವರ ವೃತ್ತಿ ಜೀವನದ ಹೊರತಾಗಿ ಎಲ್ಲರೊಂದಿಗೂ ಹೊಂದಿಕೊಳ್ಳುವ ಸನ್ನಿಲಿಯೋನ್ ಶೂಟಿಂಗ್ ಸೆಟ್‌ನಲ್ಲಿ ಗಾಯಗೊಂಡ ತಮ್ಮ ಸಹೋದ್ಯೋಗಿಗೆ ತಾನೇ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಆಗ ಪಕ್ಕದಲ್ಲಿದ್ದ ಇನ್ನೊಬ್ಬರು ಸನ್ನಿ ಡಾಕ್ಟರ್ ಎಂದು ಕರೆದು ಗೇಲಿ ಮಾಡಿದ್ದಾರೆ. ಈ ವೀಡಿಯೋವನ್ನು ಸನ್ನಿಲಿಯೋನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೈದ್ಯಳಾಗಿ ಚಿಕಿತ್ಸೆ ನೀಡಿದಾಗ ಆಕೆ, ಬ್ಲೌಸ್ ಹಾಗೂ ಚಡ್ಡಿಯ ಮೇಲೆ ತೆಳುವಾದ ದುಪ್ಪಟ್ಟಾ ಸುತ್ತಿಕೊಂಡು ಹಾಟ್‌ಆಗಿ ಕಾಣಿಸಿದ್ದಾಳೆ. ವಿಡಿಯೋ ನೋಡಿರುವ ನೆಟ್ಟಿಗರು ತಾ ಮುಂದು, ನೀ ಮುಂದು ಎಂದು ಪೇಷಂಟ್ ಆಗುವುದಾಗಿ ಕಮೆಂಟ್ ಮಾಡುತ್ತಿದ್ದಾರೆ.
ಇನ್ನು ತಮ್ಮ ಶೂಟಿಂಗ್ ಸೆಟ್‌ನಲ್ಲಿ ಗಾಯಗೊಂಡವರ ಕಾಲು ತರಚಿದ್ದು, ಅದಕ್ಕೆ ಟೀಂಚರ್ ಹಾಕುವ ಮೂಲಕ ಚಿಕಿತ್ಸೆ ನೀಡಿದ್ದಾಳೆ. ಈ ವೇಳೆ ಗಾಯದ ಮೇಲೆ ಟೀಂಚರ್ ಹಾಕಿದಾಗ ಅದು ಉರಿಯಲು ಆರಂಭಿಸಿದೆ. ಆಗ ಗಾಯದಿಂದ ಕೂಗಿಕೊಳ್ಳುತ್ತಿದ್ದ ವ್ಯಕ್ತಿಯ ಕಾಲಿಗೆ ತಾನೇ ಪಕ್ಕದಲ್ಲಿದ್ದ ಪೇಪರ್ ಒಂದನ್ನು ತೆಗೆದುಕೊಂಡು ಗಾಳಿ ಬೀಸಿದ್ದಾಳೆ. ಈ ವೇಳೆ ಎಲ್ಲರೂ ನಗುತ್ತಲೇ ಸನ್ನು ಡಾಕ್ಟರ್... ಸನ್ನಿ ಡಾಕ್ಟರ್ ಎಂದು ಗೇಲಿ ಮಾಡಿದ್ದಾರೆ. ಆದರೆಮ ಇದ್ಯಾವುದನ್ನೂ ಲೆಕ್ಕಿಸದೇ ಸನ್ನಿಲಿಯೋನ್ ಚಿಕಿತ್ಸೆ ನೀಡಿ, ನಂತರ ತಾನೂ ನಗಾಡಿದ್ದಾಳೆ.
ಅಮೆರಿಕದ ಅಡಲ್ಟ್ ಫಿಲ್ಮ್ ಇಂಡಸ್ಟ್ರಿಯಲ್ಲಿ ತಮ್ಮ ಹಾಟ್ ಅವತಾರಗಳಿಂದಲೇ ಪಡ್ಡೆಗಳಿಗೆ ನಿದ್ದೆಗೆಡಿಸಿದ್ದ ಸನ್ನಿ ಲಿಯೋನ್ ಇಂದು ಕೂಡ ಬಾಲಿವುಡ್ ಸೇರಿದಂತೆ ಭಾರತದ ಹಲವು ಭಾಷೆಗಳ ಚಲನಚಿತ್ರಗಳಿಗೆ ಪ್ರಮುಖ ತಾರೆಯಾಗಿದ್ದಾಳೆ. ದೊಡ್ಡ ದೊಡ್ಡ ನಾಯಕರ ಜೊತೆಯಲ್ಲಿ ಸಿನಿಮಾ ಅವಕಾಶಗಳನ್ನು ಈಕೆ ಪಡೆದುಕೊಳ್ಳದೇ ಇದ್ದರೂ, ಸಿಕ್ಕಿರುವ ಅವಕಾಶಗಳೇನೂ ಕಡಿಮೆಯಿಲ್ಲ. ಈಗಾಗಲೇ ಸಾಕಷ್ಟು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಸನ್ನಿ ಲಿಯೋನ್, ದಕ್ಷಿಣ ಭಾರತದ ವಿವಿಧ ಸಿನಿಮಾ ಇಂಡಸ್ಟ್ರಿಗಳಲ್ಲೂ ನಟಿಸಿದ್ದಾರೆ.
ಇತ್ತೀಚೆಗೆ ಸನ್ನಿ ಲಿಯೋನ್ ಕೇರಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಸೀರೆಯಲ್ಲಿ ಕಂಗೊಳಿಸಿರುವ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿದ್ದವು. ಬಾಲಿವುಡ್‌ನ ಅಗ್ರ ದರ್ಜೆಯ ನಟಿ ಅಲ್ಲದೇ ಇದ್ದರೂ, ಸನ್ನಿ ಲಿಯೋನ್ ಅವರ ಜನಪ್ರಿಯತೆ ಭಾರತದಲ್ಲಿ 2019ರಿಂದಲೂ ಕಡಿಮೆಯಾಗಿಲ್ಲ. ಗೂಗಲ್ ಸರ್ಚ್‌ನಲ್ಲಿ ಸನ್ನಿ ಲಿಯೋನ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಲಿವುಡ್‌ನ ಕಿಂಗ್ ಖಾನ್‌ಗಳನ್ನೂ ಕೂಡ ಹಿಂದೆ ಹಾಕಿರುವುದು ವಿಶೇಷ.
ಕನ್ನಡ ಕಿರುತೆರೆಯ ವಿಜಯ್, ರಾಮಚಾರಿ, ವೈಷ್ಣವ್, ರಾಮನ ರಿಯಲ್ ವಯಸ್ಸೆಷ್ಟು?
ದಕ್ಷಿಣ ಭಾರತದಲ್ಲಿ ಈಗಾಗಲೇ ಮಲಯಾಳಂ ಚಿತ್ರರಂಗದಲ್ಲಿ ಕಾಲಿಡುವ ತಯಾರಿಯಲ್ಲಿರುವ ಸನ್ನಿ ಲಿಯೋನ್, 2024ರಲ್ಲಿ ರಂಗೀಲಾ ಎನ್ನುವ ಸಿನಿಮಾದೊಂದಿಗೆ ಕೇರಳ ಸಿನಿ ಇಂಡಸ್ಟ್ರಿಗೆ ಕಾಲಿಡಲಿದ್ದಾರೆ. ಇನ್ನು ಈಗಾಗಲೇ ಕನ್ನಡದಲ್ಲಿ ಕೆಲವು ವರ್ಷಗಳ ಹಿಂದೆಯೇ ಲವ್ ಯು ಆಲಿಯಾ ಸಿನಿಮಾದಲ್ಲಿ ಹಾಡಿಗೆ ನೃತ್ಯ ಮಾಡುವ ಮೂಲಕ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.