ಹೊಸ ಮನೆಗೆ ಶಿಫ್ಟ್ ಆದ ನಟಿ ಮಾಧುರಿ ದೀಕ್ಷಿತ್; ತಿಂಗಳ ಬಾಡಿಗೆ ಕೇಳಿದ್ರೆ ಅಚ್ಚರಿ ಪಡುತ್ತೀರಿ
ಬಾಲಿವುಡ್ ಖ್ಯಾತ ನಟಿ, ಡಾನ್ಸರ್ ಮಾಧುರಿ ದೀಕ್ಷಿತ್ ಮತ್ತು ಪತಿ ಶ್ರೀರಾಮ್ ನೆನೆ(Madhuri Dixit And Shriram Nene) ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ. ಹೊಸ ಮನೆಗೆ ತಿಂಗಳಿಗೆ ಬರೋಬ್ಬರಿ 12.5 ಲಕ್ಷ ರೂ. ಬಾಡಿಗೆ ಕಟ್ಟುತ್ತಿದ್ದಾರೆ ಎನ್ನಲಾಗಿದೆ.
ಬಾಲಿವುಡ್ ಖ್ಯಾತ ನಟಿ, ಡಾನ್ಸರ್ ಮಾಧುರಿ ದೀಕ್ಷಿತ್ ಮತ್ತು ಪತಿ ಶ್ರೀರಾಮ್ ನೆನೆ(Madhuri Dixit And Shriram Nene) ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ. ಮುಂಬೈನ ಐಷಾರಾಮಿ ಪ್ರದೇಶ ವಾರ್ಲಿಗೆ ಶಿಫ್ಟ್ ಆಗಿರುವ ಮಾಧುರಿ ದೀಕ್ಷಿತ್ ಬಹು ಮಹಡಿ ಕಟ್ಟಡದಲ್ಲಿ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಇತ್ತೀಚಿಗಷ್ಟೆ ನೆಟ್ ಫ್ಲಿಕ್ಸ್ ವೆಬ್ ಸರಣಿ ದಿ ಫೇಮ್ ಗೇಮ್ ಮೂಲಕ ಸದ್ದು ಮಾಡಿದ್ದ ಮಾಧುರಿ ಇದೀಗ ಹೊಸ ಮನೆಯ ವಿಚಾರವಾಗಿ ಮತ್ತೆ ಸುದ್ದಿಯಾಗಿದ್ದಾರೆ.
ಅಂದಹಾಗೆ ಮಾಧುರಿ ಅವರ ಹೊಸ ಮನೆ 29ನೇ ಮಹಡಿಯಲ್ಲಿದೆ. ಈ ಐಷಾರಾಮಿ ಅಪಾರ್ಟ್ಮೆಂಟ್ ಕಾರ್ಪೆಟ್ ಪ್ರದೇಶವು 5500 ಚದರ ಅಡಿಗಳಿಗಿಂತ ಹೆಚ್ಚಿದೆ ಎನ್ನಲಾಗಿದೆ. ಇನ್ನು ವಿಶೇಷ ಎಂದರೆ ಮಾಧುರಿ ದಂಪತಿ ತಿಂಗಳಿಗೆ ಕಟ್ಟುವ ಬಾಡಿಗೆಯ ಮೊತ್ತ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಹೌದು, ತಿಂಗಳಿಗೆ ಬರೋಬ್ಬರಿ 12.5 ಲಕ್ಷ ಬಾಡಿಗೆ (Rs 12.5 Lakh A Month) ಕಟ್ಟುತ್ತಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಹೊಸ ಮನೆ ಇಂಟೀರಿಯರ್ ಡಿಸೈನ್ ಮಾಡಿದ ಅಪೂರ್ವ ಬಹಿರಂಗ ಪಡಿಸಿದ್ದಾರೆ. ಸ್ಟಾರ್ ದಂಪತಿಯ ಹೊಸ ಮನೆಯ ವಿನ್ಯಾಸವನ್ನು ತ್ವರಿತವಾಗಿ ಮಾಡಬೇಕಿತ್ತು. ವಾರ್ಲಿಯಲ್ಲಿರುವ ಬಹುಮಹಡಿ ಕಟ್ಟದ 29ನೇ ಮಹಡಿಯಲ್ಲಿ ಮನೆ ಇದ್ದು ಅದ್ಭುತ ನೋಟವನ್ನು ಹೊಂದಿದೆ ಎಂದಿದ್ದಾರೆ.
Madhuri Dixit: ಸ್ಟಾರ್ ನಟಿ ಆದ್ರೂ ಧಕ್ ಧಕ್ ಸುಂದರಿಗೆ ಮನೆಯಲ್ಲಿ ತಪ್ಪದ ಬೈಗುಳ !
ನಟಿ ಮಾಧುರಿ ದೀಕ್ಷಿತ್ 1984ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅಬೋಧ್ ಚಿತ್ರದ ಮೂಲಕ ನಟನೆಯನ್ನು ಪ್ರಾರಂಭ ಮಾಡಿದ ಮಾಡಿದರು. 1988ರಲ್ಲಿ ತೇಜಬ್ ಸಿನಿಮಾ ಬಳಿಕ ಯಶಸ್ಸು ಗಳಿಸಿದರು. ಈ ಸಿನಿಮಾದಲ್ಲಿ ನಟ ಅನಿಲ್ ಕಪೂರ್ ನಾಯಕನಾಗಿ ಕಾಣಿಸಿಕೊಂಡಿದ್ದರು. ದಿಲ್ ತೋ ಪಾಗಲ್ ಹೇ, ದೇವದಾಸ್, ಕೊಯ್ಲಾ, ಅಂಜಾಮ್, ಹಮ್ ಆಪ್ ಕೆ ಕೌನ್, ಸಾಜನ್ ಸೇರಿದಂತೆ ಇನ್ನು ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
1999ರಲ್ಲಿ ಮಾಧುರಿ ದೀಕ್ಷಿತ್ ಶ್ರೀರಾಮ್ ನೆನೆ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಾಧುರಿ ಅರಿನ್ ಮತ್ತು ರಾಯನ್ ಎನ್ನುವ ಇಬ್ಬರು ಮುದ್ದಾದ ಗಂಡು ಮಕ್ಕಳ ತಾಯಿಯಾಗಿದ್ದಾರೆ. ಮದುವೆ ಬಳಿಕವೂ ಚಿತ್ರರಂಗದಲ್ಲಿ ಸಕ್ರೀಯರಾಗಿರುವ ಮಾಧುರಿ ಅನೇಕ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಸಿನಿಮಾ ಜೊತೆಗೆ ಮಾಧುರಿ ಕಿರುತೆರೆಯ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಡಾನ್ಸ್ ರಿಯಾಲಿಟಿ ಶೋಗೆ ಜಡ್ಜ್ ಆಗುವ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.
ಎಲೆಕ್ಟ್ರೀಶಿಯನ್ ಎಂದು ಹೇಳಿಕೊಂಡು ನಟಿ Madhuri Dixit ಮನೆಗೆ ನುಗ್ಗಿದ ವ್ಯಕ್ತಿ; ಆಮೇಲೆ ಏನಾಯ್ತು?
ಇನ್ನು ಇತ್ತೀಚಿಗಷ್ಟೆೆ ಮಾಧುರಿ ಒಟಿಟಿ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಮೊದಲ ಒಟಿಟಿ ಬಿಡುಗಡೆಯಾದ ದಿ ಫೇಮ್ ಗೇಮ್ ಮೂಲಕ ಮಾಧುರಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇದರಲ್ಲಿ ಸಂಜಯ್ ಕಪೂರ್ ಮತ್ತು ಮನವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ಬಿಜೋಯ್ ನಂಬಿಯಾರ್ ಮತ್ತು ಕರೀಷ್ಮಾ ಕೊಹ್ಲಿ ನಿರ್ದೇಶನ ಮಾಡಿದ್ದಾರೆ. ಕರಣ್ ಜೋಹರ್ ಬಂಡವಾಳ ಹೂಡಿದ್ದಾರೆ. ಫೆಬ್ರವರಿ 25ರಿಂದ ನೆಟ್ ಫ್ಲಕ್ಸ್ ನಲ್ಲಿ ಸ್ಟ್ರೀಮಿಂಗ್ ಪ್ರಾರಂಭ ಮಾಡಿದೆ.