ಅಷ್ಟು ಸುಲಭವಾಗಿ ಮಾಧುರಿ ದೀಕ್ಷಿತ್ ನಿವಾಸಕ್ಕೆ ಅಪರಿಚಿತರು ಪ್ರವೇಶಿಸಬಹುದಾ? ಎಲೆಕ್ಟ್ರೀಶಿಯನ್‌ ಅಲ್ಲ ಅಂದ್ರೆ ಇವ ಯಾರು?

ಬಾಲಿವುಡ್ ಡ್ಯಾನ್ಸಿಂಗ್ ಡಾಲ್ ಮಾಧುರಿ ದೀಕ್ಷಿತ್‌ರನ್ನು (Madhuri Dixit) ಮಾತನಾಡಿಸಬೇಕು ಅಂದ್ರೆ ಅಭಿಮಾನಿಗಳು ತಿಂಗಳುಗಳ ಕಾಲ ಮನೆ ಬಳಿ, ಶೂಟಿಂಗ್ ಸ್ಪಾಟ್‌ನಲ್ಲಿ ಕಾಯುತ್ತಾರೆ. ಆದರೆ ಇಲ್ಲೊಬ್ಬ ಅಪರಿಚಿತ ವ್ಯಕ್ತಿ ಎಷ್ಟು ಸುಲಭವಾಗಿ ನಟಿಯ ಮನೆಗೆ ಎಂಟ್ರಿ ಕೊಟ್ಟಿದ್ದಾನೆ ಅಂದ್ರೆ ಹೋಗೋ ಅಂತ ಹೇಳಿದರೂ ಹೊರ ನಡೆಯದೆ ನಿಂತುಬಿಟ್ಟಿದ್ದನಂತೆ.

ನಟ ಸಂಜಯ್ ದತ್ (Sanjay Dutt) ಮತ್ತು ಮನ್ವ ಕೌಲ (Manva Kaul) ಜೊತೆ ತಮ್ಮ ಮುಂದಿನ ಸೀರಿಸ್‌ 'ದಿ ಫೇಮ್‌ ಗೇಮ್'(The Fame Name) ಪ್ರಚಾರಕ್ಕೆ ಮಾಧುರಿ ದೀಕ್ಷಿತ್ ದಿ ಕಪಿಲ್ ಶರ್ಮಾ (The Kapil Sharma) ಕಾಮಿಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಜೀವನದಲ್ಲಿ ಎಂದೂ ಮರೆಯಲಾಗದ ಘಟನೆಯನ್ನು ನೆನಪಿಸಿಕೊಂಡು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ವಾಹಿನಿಯವರು ಹಂಚಿಕೊಂಡಿರುವ ಸಣ್ಣ ವಿಡಿಯೋದಿಂದ ಈ ಸಾಲುಗಳನ್ನು ಬರೆಯಲಾಗಿದೆ. ಸಂಪೂರ್ಣ ವಿಡಿಯೋ ಎಪಿಸೋಡ್‌ ಪ್ರಸಾರದ ನಂತರವೇ ಸಿಗುವುದು.

Reality shows: ಬಾಲಿವುಡ್ ಸೆಲೆಬ್ರಿಟಿ ಸಂಭಾವನೆ ಪಡೆಯೋದು ಕೋಟಿಯಲ್ಲಿ, ಅದೂ ಒಂದು ಸಂಚಿಕೆಗೆ!

ಏನಿದು ಘಟನೆ: 

'ನನ್ನ ಮನೆಯಲ್ಲಿ ಒಂದು ದಿನ ಸ್ವಿಚ್ ಬೋರ್ಡ್‌ (Switch Board) ಕೆಟ್ಟಿತ್ತು. ನಾನು ಎಲೆಕ್ಟ್ರೀಶಿಯನ್‌ಗೆ (Electrician) ಕರೆ ಮಾಡಿ ಕೂಡಲೇ ಬಂದು ಸರಿ ಮಾಡುವಂತೆ ಹೇಳಿದೆ. ನನ್ನ ಆಶ್ಚರ್ಯಕ್ಕೆ ನಾಲ್ಕು ಮಂದಿ ಬಂದರು. ಯಾವ ಬೋರ್ಡ್‌ ಹಾಳಾಗಿದೆ ಎಂದು ಒಬ್ಬರು ಕೇಳಿದರು. ನಾನು ಅವರನ್ನು ಕರೆದುಕೊಂಡು ಎಲ್ಲಿ ಎಂದು ತೋರಿಸಿದೆ. ಆಗ ಒಬ್ಬ ಅದನ್ನು ಓಪನ್ ಮಾಡಿ ಸರಿ ಮಾಡಿದ. ಎಲ್ಲಾ ಸರಿ ಆದ ಮೇಲೆ ನಾನು ಹೇಳಿದೆ, ಈಗ ಸರಿ ಆಗಿದೆ ನೀವು ಹೊರಡಬಹುದು ಎಂದು. ಎಲ್ಲರೂ ಹೊರಟರು ಆದರೆ ಒಬ್ಬ ವ್ಯಕ್ತಿ ಮಾತ್ರ ನನ್ನ ಹಿಂದೆ ನಿಂತು ಬಿಟ್ಟಿದ್ದ. ನಾನು ಕೇಳಿದೆ ಯಾಕೆ ನೀನು ಹೊರಟಿಲ್ಲ ಏನು ಮಾಡ್ತಿದ್ಯಾ.? ಎಂದು. ಆ ವ್ಯಕ್ತಿ 'ನಾನು ಅವರ ಜೊತೆ ಬಂದಿಲ್ಲ ನಿಮ್ಮನ್ನು ನೋಡಲು ಅವರ ಜೊತೆ ಒಳಗೆ ಬಂದೆ' ಎಂದ. ಆಗ ನನಗೆ ಶಾಕ್ ಆಯ್ತು ಯಾವ ರೀತಿ ಪ್ರತಿಕ್ರಿಯೆ ಕೊಡಬೇಕು ಗೊತ್ತಾಗಲಿಲ್ಲ' ಎಂದು ಮಾಧುರಿ ಮಾತನಾಡಿದ್ದಾರೆ.

ಮನೆಗೆ ಬಂದ ಎಲೆಕ್ಟ್ರೀಶಿಯನ್‌ಗಳು ಇದು ಮಾಧುರಿ ಮನೆ ಎಂದು ತಿಳಿಯುತ್ತಿದ್ದಂತೆ ಹೇಗೆ ವರ್ತಿಸಿದ್ದರು, ಹಾಗೇ ಬಾಯ್ ಹೇಳುವಾಗ ಹೇಗೆ ನಗುತ್ತಿದ್ದರು ಎಂದು ಮಾಧುರಿ ನಟಿಸಿ ತೋರಿಸಿದ್ದಾರೆ.

Madhuri Dixit beauty secret: ಮಾಧುರಿಯ ಕಲೆರಹಿತ ತ್ವಚೆಯ ಸೀಕ್ರೆಟ್ ಇದು

Netflix ನ 'ಸೀರಿಸ್‌ ದಿ ಫೇಮ್‌ ಗೇಮ್‌' ನಲ್ಲಿ ಮಾಧುರಿ ನಟಿಸಿದ್ದಾರೆ. ಅನಾಮಿಕಾ ಆನಂದ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಾಧುರಿ ಬಾಲಿವುಡ್ ಐಕಾನ್ ಅಗಿ ಸದಾ ಲೈಮ್‌ ಲೈಟ್‌ನಲ್ಲಿರುವ ನಟಿ ಯಾರಿಗೂ ಗೊತ್ತಾಗದಂತೆ ಕಾಣೆಯಾಗುತ್ತಾರೆ. ಇದೇ ಈ ಸೀರಿಸ್‌ನ ಒಂದು ಲೈನ್‌ ಸ್ಟೋರಿ. ಕೆಲವು ದಿನಗಳ ಹಿಂದೆ ಖಾಸಗಿ ಸಂದರ್ಶನದಲ್ಲಿ ಕಾಣಿಸಿಕೊಂಡ 54 ವರ್ಷದ ನಟಿ ತಮ್ಮ ಪಾತ್ರದ ಬಗ್ಗೆ ಸೀರಿಸ್‌ ಬಗ್ಗೆ ಮಾತನಾಡಿದ್ದರು.

'ನನಗೆ ಮೊದಲು ಈ ಸೀರಿಸ್‌ನ ಸ್ಕ್ರಿಪ್ಟ್‌ ಇಷ್ಟ ಆಯ್ತು. ಪಾತ್ರದ ಜರ್ನಿ ತುಂಬಾನೇ ಇಷ್ಟ ಆಯ್ತು. ಜೀವನದಲ್ಲಿ ಫೇಮ್‌ ಇದ್ರೆ ಎಷ್ಟು ಲಕ್ಕಿ ಆಗುತ್ತಾರೆ ಅನಿಸುತ್ತದೆ ಹಾಗೇ ಅದರಿಂದ ಜೀವನ ಹೇಗೆ ಹಾಳಾಗುತ್ತದೆ ಎಂದು ತೋರಿಸಲಾಗಿದೆ. ಜೀವನ ಪರ್ಫೆಕ್ಟ್‌ ಆಗಿರುವ ಹುಡುಗಿ ಅನಾಮಿಕ ಆದರೆ ಒಂದು ದಿನ ಕಾಣೆಯಾಗುತ್ತಾಳೆ, ಇಡೀ ದೇಶವೇ ಆಕೆ ಎಲ್ಲಿ ಹೋದಳು ಎಂದು ಹುಡುಕಲು ಶುರು ಮಾಡುತ್ತಾರೆ. ಏನು ಮಾಡುತ್ತಿರುತ್ತಾಳೆ ಹೇಗೆ ಸಿಗುತ್ತಾಳೆ ಅನ್ನೋದೆ ಈ ಸೀರಿಸ್‌ ಕಥೆ' ಎಂದು ಮಾಧುರಿ ಹೇಳಿದ್ದಾರೆ.