ಅನಿವಾರ್ಯವಾಗಿ ಒಂಟಿಯಾಗಿರುವೆ; ಶ್ರೀದೇವಿ ಇಲ್ಲದೆ ಜೀವನ ಕ್ರೂರ: ಜಾನ್ವಿ ಕಪೂರ್ ಕಣ್ಣೀರು

 ನನ್ನನ್ನು ಜಡ್ಜ್‌ ಮಾಡಲು ತಾಯಿ ಬಿಟ್ಟು ಬೇರೆ ಯಾರಿಗೂ ಅವಕಾಶವಿಲ್ಲ. ಲಾಕ್‌ಡೌನ್‌ ಸಮಯದಲ್ಲಿ ಒತ್ತಾಯದಿಂದ ಒಂಟಿಯಾಗಿ ಸಮಯ ಕಳೆದೆ ಎಂದು ಜಾನ್ವಿ ಹೇಳಿಕೊಂಡಿದ್ದಾರೆ. 

Life without mom is not easy says Janhvi Kapoor in Barkha Dutt interview vcs

ಬಾಲಿವುಡ್ ಕ್ಯೂಟಿ ಜಾನ್ವಿ ಕಪೂರ್ 'ಧಡಕ್' ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ್ದರು. ತಮ್ಮ ಮೊದಲ ಸಿನಿಮಾ ರಿಲೀಸ್‌ಗೂ ಮೂರ್ನಾಲ್ಕು ತಿಂಗಳು ಮುನ್ನ ತಾಯಿಯನ್ನು ಕಳೆದುಕೊಂಡ ಜಾನ್ವಿಗೆ ಇಡೀ ಭಾರತವೇ ಬೆನ್ನೆಲುಬಾಗಿ ನಿಂತಿತ್ತು. ಶ್ರೀದೇವಿ ಇಲ್ಲದ ಸಿನಿಮಾ ಜರ್ನಿ ಹೇಗಿದೆ, ನೆಗೆಟಿವ್ ಕಾಮೆಂಟ್‌ ಮತ್ತು ಟ್ರೋಲ್‌ಗಳನ್ನು  ಹೇಗೆ ಎದರಿಸುತ್ತಾರೆಂದು ನಟಿ ಹೇಳಿ ಕೊಂಡಿದ್ದಾರೆ. 

'ತಾಯಿ ಶ್ರೀದೇವಿ ನನ್ನ ಜೊತೆಗಿದ್ದಾಗ ನನ್ನ ಜೀವನ ತುಂಬಾನೇ ವಿಭಿನ್ನವಾಗಿತ್ತು. ಆಕೆಯನ್ನು ಕಳೆದುಕೊಂಡಾಗ ನನ್ನ ಮೊದಲ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಸಿನಿಮಾ ರಿಲೀಸ್ ಆದ ಮೇಲೆ ನನ್ನ ಜೀವನವೇ ಬದಲಾಗಿತ್ತು. ಐಡಿಯಲ್ ಫಿಕ್ಷನ್ ಜೀವನ ಲೀಡ್ ಮಾಡುತ್ತಿದ್ದೆ. ಆದರೆ ತಾಯಿನ ಕಳೆದುಕೊಂಡ ನಂತರ ಸಂಪೂರ್ಣ ಬದಲಾಗಿದೆ. ಪದೆ ಪದೇ ಅದನ್ನೇ ನೆನಪು ಮಾಡಿಕೊಂಡು ಅಳಬಾರದು ಎಂದು ನಾನು ಕೆಲಸದಲ್ಲಿ ಹೆಚ್ಚು ಮಗ್ನಳಾದೆ. ಅಮ್ಮನ ಅಗಲಿಕೆಗೂ ಮೂರ್ನಾಲ್ಕು ತಿಂಗಳ ಹಿಂದೆ ನನಗೆ  'ಈ ದಾರಿಯನ್ನೇ ಜೀವನವಾಗಿ ಆಯ್ಕೆ ಮಾಡಿಕೊಂಡಿರುವೆ. ಹೀಗಾಗಿ ಶ್ರಮದಿಂದ ಕೆಲಸ ಮಾಡು,' ಎಂದು ಹೇಳುತ್ತಿದ್ದರು. ಈಗಲೂ ಆ ಮಾತು ನನ್ನ ಕಿವಿಯಲ್ಲಿಯೇ ಅನುರಣಿಸುತ್ತಿದೆ,' ಎಂದು ಜಾನ್ವಿ ಕಪೂರ್ ಮಾತನಾಡಿದ್ದಾರೆ.

ಏನ್ ತಿಂದ್ರೂ ದಪ್ಪ ಆಗಲ್ಲ; ಶ್ರೀದೇವಿ ಪುತ್ರಿ ಬೆಳ್ಳಂಬೆಳಗ್ಗೆ ಒಂದು ಸ್ಪೂನ್ ತುಪ್ಪ ತಿನ್ನೋದು ಯಾಕೆ?

'ಕೋವಿಡ್‌ ಸಮಯದಲ್ಲಿ ನನ್ನ ಜೊತೆಯೇ ನಾನು ಸಮಯ ಕಳೆಯುವುದು ಅನಿವಾರ್ವುಯವಾಯಿತು. ನೋವು ಮರೆಯಬೇಕೆಂದು ನಾನು ಸುಮ್ಮನೆ ಕೆಲಸ ಮಾಡುತ್ತಿದ್ದೆ. ಕೋವಿಡ್‌ ಸಮಯದಲ್ಲಿ ನನ್ನ ಅಮ್ಮನ ಅಗಲಿಕೆಯಿಂದಾದ ನೋವು ನನ್ನ ಮನಸ್ಸಿಗೆ ಅರ್ಥವಾಗಿತ್ತು. ನನ್ನ ಕೆಲಸ, ನನ್ನ ಮಾತುಗಳು, ನನ್ನ ವರ್ತನೆಗಳ ಬಗ್ಗೆ ಅಮ್ಮ ಯಾವಾಗಲೂ ನಿರ್ಧರಿಸುತ್ತಿದ್ದರು. ಸರಿ ತಪ್ಪುಗಳನ್ನು ತಿದ್ದುತ್ತಿದ್ದರು. ಆದರೆ ಮೊದಲ ಸಿನಿಮಾದ ಸಮಯ ರಿಲೀಸ್ ವೇಳೆ ಆಕೆ ಇಲ್ಲದ ಕಾರಣ ಆ ಜವಾಬ್ದಾರಿಯನ್ನು ಜನರಿಗೆ ಕೊಟ್ಟೆ. ಆರಂಭದಲ್ಲಿ ಪಡೆಯುತ್ತಿದ್ದ ಪ್ರೀತಿಯಲ್ಲಿ ಅಮ್ಮನನ್ನೇ ಕಾಣುತ್ತಿದ್ದೆ. ಆದರೆ ನಾನು ತಪ್ಪು ಮಾಡಿದೆ....ಮೊದಲ ಸಿನಿಮಾ ಅಂತ ಪ್ರೀತಿ ಕೊಟ್ಟರು. ಮತ್ತೊಂದು ಶ್ರೀದೇವಿ ಪುತ್ರಿ ಎಂದು ಪ್ರೀತಿ ಕೊಟ್ಟರು. ಸರಿ ತಪ್ಪುಗಳನ್ನು ತಿದ್ದಲಿಲ್ಲ,' ಎಂದು ಹೇಳಿದ್ದಾರೆ.  

Life without mom is not easy says Janhvi Kapoor in Barkha Dutt interview vcs

'ಒಂದು ಕ್ಷಣ ಕಣ್ಣು ಮುಚ್ಚಿಕೊಂಡು ತಾಯಿಯನ್ನು ನೆನಪು ಮಾಡಿಕೊಂಡರೆ ಆಕೆ ನನ್ನ ಕಿವಿಯಲ್ಲಿ ಲಡ್ಡು ಎಂದು ಕರೆಯುತ್ತಿದ್ದ ಕ್ಷಣಗಳು ಮೊದಲು ನೆನಪಾಗುತ್ತದೆ. ಪ್ರತಿ ಸಲವೂ ಶೂಟ್‌ನಲ್ಲಿ ಕ್ಯಾಮೆರಾ ಎದುರಿಸುವಾಗ ನನ್ನ ತಾಯಿಗೆ ಹತ್ತಿರವಾಗುತ್ತಿರುವೆ ಅನಿಸುತ್ತದೆ.  ಏಕೆಂದರೆ ಆಕೆ ಅತಿ ಹೆಚ್ಚು ಗೌರವಿಸುತ್ತಿದ್ದ ಜಾಗವದು. ನಮಗೆ ಎಷ್ಟೇ ಸವಲತ್ತು ಇದ್ದರೂ ಒಂದು ರೀತಿ ಕಷ್ಟಗಳು ಇರುತ್ತದೆ ನನ್ನ ಕೆಲಸ ನಾನೇ ಮಾಡಬೇಕು ಏಕೆಂದರೆ ನನ್ನ ಅನ್ನಕ್ಕೆ ನಾನು ದುಡಿಯಬೇಕು. ಖ್ಯಾತ ನಟಿಯ ಮಗಳು ಎನ್ನುವ ಕಾರಣಕ್ಕೆ ಯಾರೂ ಪ್ರೀತಿ ಕೊಡಬಾರದು. ನನ್ನ ಕಲೆಯನ್ನು ಗುರುತಿಸಿಕೊಡಬೇಕು. ಸಾವಿರಾರು ಮಂದಿ ಆಡಿಷನ್ ಕೊಟ್ಟು ಆಯ್ಕೆ ಆಗುತ್ತಾರೆ ನನಗೆ ಆ ರೀತಿ ನಡೆದಿಲ್ಲ ಎನ್ನಬಹುದು. ಅದರೆ ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳುತ್ತಿರುತ್ತೆ. ಟ್ರೋಲ್ ಮಾಡುವವರು ಎಲ್ಲಿದ್ದರೂ ಟ್ರೋಲ್ ಮಾಡುತ್ತಾರೆ,' ಎಂದಿದ್ದಾರೆ ಜಾನ್ವಿ.  

Latest Videos
Follow Us:
Download App:
  • android
  • ios