ಏನ್ ತಿಂದ್ರೂ ದಪ್ಪ ಆಗಲ್ಲ; ಶ್ರೀದೇವಿ ಪುತ್ರಿ ಬೆಳ್ಳಂಬೆಳಗ್ಗೆ ಒಂದು ಸ್ಪೂನ್ ತುಪ್ಪ ತಿನ್ನೋದು ಯಾಕೆ?
ಎಷ್ಟೇ ಬ್ಯುಸಿ ಇದ್ದರೂ ವರ್ಕೌಟ್ ಮಿಸ್ ಮಾಡದ ಜಾನ್ವಿ ಕಪೂರ್ ದಿನದಲ್ಲಿ ಏನು ತಿನ್ನುತ್ತಾರೆ? ಎಷ್ಟು ತಿನ್ನುತ್ತಾರೆ? ಏನನ್ನು ಇಷ್ಟ ಪಡುತ್ತಾರೆ ಗೊತ್ತಾ?
ಬಾಲಿವುಡ್ ಎವರ್‌ಗ್ರೀನ್ ನಟಿ ಶ್ರೀದೇವಿ ಆರೋಗ್ಯದ ಬಗ್ಗೆ ಹೆಚ್ಚಿಗೆ ಕಾಳಜಿ ವಹಿಸುತ್ತಿದ್ದರು. ಅದೇ ಗುಣ ಈಗ ಅವರ ಹಿರಿಯ ಪುತ್ರಿ ಜಾನ್ವಿ ಕಪೂರ್‌ಗೆ ಬಂದಿದೆ. ದಿನಕ್ಕವೂ ತಪ್ಪದೆ ವರ್ಕೌಟ್ ಮಾಡುತ್ತಾರೆ.
'ಏನೇ ತಿಂದರೂ ಬೇಗ ಜೀರ್ಣ ಮಾಡಿಕೊಳ್ಳುವ ಶಕ್ತಿ ನನಗಿದೆ. ಒಂದು ಚಿತ್ರಕ್ಕೆ ದಪ್ಪ ಆಗಬೇಕೆಂದು ಎಷ್ಟು ತಿನ್ನುತ್ತಿದ್ದರೂ ದಪ್ಪ ಆಗುತ್ತಿರಲಿಲ್ಲ. ಈಗಲೂ ತುಂಬಾ ತಿನ್ನುತ್ತೀನಿ ಅದರ ಹೆದರಿಕೆಯಿಂದ ವರ್ಕೌಟ್ ಮಾಡುವುದಕ್ಕೆ ಶುರು ಮಾಡುತ್ತೀನಿ' ಎಂದು ಪಿಂಕ್‌ವಿಲ್ಲ ಸಂದರ್ಶದಲ್ಲಿ ಹಂಚಿಕೊಂಡಿದ್ದಾರೆ.
ಹಲವು ವರ್ಷಗಳಿಂದ ದಿನ ಬೆಳಗ್ಗೆ ತಪ್ಪದೆ ಒಂದು ಸ್ಪೂನ್ ತುಪ್ಪ ಸೇವಿಸುವೆ. ಇದರಿಂದ ಆರೋಗ್ಯಕ್ಕೆ ತುಂಬಾನೇ ಸಹಾಯವಾಗುತ್ತದೆ. ನೀವು ಒಮ್ಮೆ ಟ್ರೈ ಮಾಡಿ ಎಂದಿದ್ದಾರೆ.
ಊಟಕ್ಕೆ ನಾನು ಪರೋಟಾ ಮತ್ತು ಮೊಸರು ಸೇವಿಸುವೆ ಇಲ್ಲವಾದರೆ ಬೆಂಡೆಕಾಯಿ ಪಲ್ಯ, ದಾಲ್ ಪಲ್ಯ, ಗುಜರಾತಿ ದಾಲ್, ಮೆಂತ್ಯೆ ದಾಲ್ ಅಥವಾ ಪಾಲಕ್ ಪನ್ನೀರ್ ಸೇವಿಸುವೆ.
ಊಟದ ನಂತರ ನನಗೆ ಚಾಕೋಲೆಟ್ ಅಥವಾ ಐಸ್ ಕ್ರೀಮ್ ಸೇವಿಸುವುದಕ್ಕೆ ಇಷ್ಟವಾಗುತ್ತದೆ. ರಾತ್ರಿ ಊಟವನ್ನು 10 ಗಂಟೆ ಒಳಗೆ ಮುಗಿಸುವ ಪ್ರಯತ್ನ ಮಾಡುವೆ ಚಿತ್ರೀಕರಣ ಇದ್ದ ಸಮಯದಲ್ಲಿ ಮಾತ್ರ ರಾತ್ರಿ ಇಡೀ ತಿನ್ನುವ ಮೂಲಕ ನನ್ನನ್ನು ನಾನು ಎಚ್ಚರವಾಗಿಟ್ಟುಕೊಳ್ಳುವೆ.
ನಿದ್ರೆ ವಿಚಾರದಲ್ಲಿ ಶಿಸ್ತು ಕಾಪಾಡಿಕೊಳ್ಳುವೆ. ಬೆಳಗ್ಗೆ ಬೇಗ ಎದ್ದು ದಿನ ಆರಂಭಿಸುವುದಕ್ಕೆ ಇಷ್ಟ ಪಡುವೆ. ರಾತ್ರಿ ವಿಮಾನದಲ್ಲಿ ಪ್ರಯಾಣ ಮಾಡಿದರೆ ಮಾತ್ರ ಹೆಚ್ಚಿಗೆ ನಿದ್ರ ಮಾಡಲು ಇಷ್ಟ ಪಡುವೆ.
ನಾನು ಅಡುಗೆ ಮಾಡುವುದು ಕಡಿಮೆ ಅದರಲ್ಲಿ Nachos & chess ತುಂಬಾ ಚೆನ್ನಾಗಿ ತಯಾರಿ ಮಾಡುವೆ. ಸಾಮಾನ್ಯವಾಗಿ ವಿದೇಶ ಪ್ರಯಾಣ ಮಾಡುವಾಗ Nachos ಜೊತೆಗಿರುತ್ತದೆ.
ವರ್ಕೌಟ್ ಆದ ಮೇಲೆ ನಾನು ರಾಗಿ ಮತ್ತು ಆಲೂಗಡ್ಡೆ ಬಳಸಿ ಮಾಡುವ ಪರೋಟಾ ಸೇವಿಸುತ್ತಿರುವೆ. ನನ್ನ ದೇಹ gluten ಪದಾರ್ಥಗಳನ್ನು ಬೇಗ ಜೀರ್ಣ ಮಾಡಿಕೊಳ್ಳುವುದಿಲ್ಲ.