Asianet Suvarna News Asianet Suvarna News

Lata Mangeshkar Health Update ಗಾನ ಕೋಗಿಲೆ ಕುರಿತು ಸುಳ್ಳು ಸುದ್ದಿ ಹರಡಬೇಡಿ, ಕುಟುಂಬದ ಮನವಿ!

  • ಕೊರೋನಾ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲತಾಜಿ
  • ಐಸಿಯುನಲ್ಲಿ ಚಿಕಿತ್ಸೆ, ಆರೋಗ್ಯದಲ್ಲಿ ಕೊಂಚ ಚೇತರಿಕೆ
  • ಸುಳ್ಳು ಸುದ್ದಿ ಹರಡದಂತೆ ಕುಟುಂಬ ಸದಸ್ಯರಿಂದ ಮನವಿ
     
Lata Mangeshkar Health Update bollywood playback singer family request Dont Spread fake news ckm
Author
Bengaluru, First Published Jan 23, 2022, 1:00 AM IST

ಮುಂಬೈ(ಜ.22):  ಕೊರೋನಾ ವೈರಸ್(Coronvirus) ಕಾರಣ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ದೇಶದ ಹಿರಿಯ ಗಾಯಕಿ ಲತಾ ಮಂಗೇಶ್ಕರ್(Lata Mangeshkar) ಆರೋಗ್ಯ ಕೊಂಚ ಚೇತರಿಕೆ ಕಂಡಿದೆ. ಆದರೆ ಸ್ಥಿತಿ ಗಂಭೀರವಾಗಿದೆ. ಈ ಕುರಿತು ಲತಾ ಮಂಗೇಶ್ಕರ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಂಗೇಶ್ಕರ್ ಕುಟುಂಬ ಸದಸ್ಯರು ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಮಂಗೇಶ್ಕರ್ ಕುರಿತು ಸುಳ್ಳು ಸುದ್ದಿ ಹರಡದಂತೆ ಮನವಿ ಮಾಡಿದ್ದಾರೆ.

ಕೊರೋನಾ ವೈರಸ್ ಕಾಣಿಸಿಕೊಂಡ ಭಾರತದ ಗಾನಕೋಗಿಲೆ ಮಂಗೇಶ್ಕರ್ ಜನವರಿ 11 ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. 92 ವರ್ಷದ ಲತಾ ಮಂಗೇಶ್ಕರ್ ಕಳೆದ ಎರಡು ವಾರದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಹಲವು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣ(Social Media) ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ಕುಟುಂಬ ಸದಸ್ಯರು ಸ್ಪಷ್ಟನೆ ನೀಡಿದ್ದಾರೆ. ಲತಾಜಿ ಆರೋಗ್ಯ ಚೇತರಿಕೆಗೆ(responding well) ಎಲ್ಲರೂ ಪ್ರಾರ್ಥಿಸೋಣ ಎಂದು ಟ್ವಿಟರ್ ಮೂಲಕ ಮನವಿ ಮಾಡಲಾಗಿದೆ.

 

Lata Mangeshkar Faced Rejection: ತೆಳು ಧ್ವನಿ ಎಂದು ಲತಾರನ್ನು ರಿಜೆಕ್ಟ್‌ ಮಾಡಿದ್ದರು ಈ ವ್ಯಕ್ತಿ

ಲತಾ ಮಂಗೇಶ್ಕರ್ ಆಸ್ಪತ್ರೆ ದಾಖಲಾದ ಬಳಿಕ ಹಲವು ಊಹಾಪೋಹ ಸುದ್ದಿಗಳು ಹರಿದಾಡಿದೆ. ಆರೋಗ್ಯ ಸ್ಥಿತಿ ಕುರಿತ ಸುಳ್ಳು ಸುದ್ದಿಗಳು ದೇಶದಲ್ಲಿ ಆತಂಕದ ಅಲೆಯನ್ನು ಸೃಷ್ಟಿಸಿತ್ತು. ಆದರೆ ಇಂದು ಈ ರೀತಿ ಸುಳ್ಳು ಸುದ್ದಿ ಪ್ರಮಾಣ ಹೆಚ್ಚಾಗಿತ್ತು. ವ್ಯಾಟ್ಸ್ಆ್ಯಪ್ ಸೇರಿದಂತೆ ಚಾಟಿಂಗ್ ಆ್ಯಪ್‌ಗಳಲ್ಲೂ ಲತಾ ಮಂಗೇಶ್ಕರ್ ಸುಳ್ಳು ಸುದ್ದಿಗಳನ್ನು ಹರಡಲಾಗಿತ್ತು. ಇದರ ಬೆನ್ನಲ್ಲೇ ಕುಟುಂಬ ಸದಸ್ಯರು ಸ್ಪಷ್ಟನೆ ನೀಡಿದ್ದಾರೆ.

2019-20ರ ಸಾಲಿನಲ್ಲಿ ಕೊರೋನಾ ಅಲೆಯಿಂದ ತತ್ತರಿಸಿದ ಭಾರತಕ್ಕೆ ಲತಾ ಮಂಗೇಶ್ಕರ್ ನೆರವಿನ ಹಸ್ತ ಚಾಚಿದ್ದರು. ಮಹಾರಾಷ್ಟ ಸರ್ಕಾರಕ್ಕೆ 7 ಲಕ್ಷ ರೂಪಾಯಿ ನೀಡಿದ್ದರು. ಸಿಎಂ ಉದ್ಧವ್ ಠಾಕ್ರೆ  ಈ ಮೊತ್ತವನ್ನು ಕೊರೋನಾ ವಿರುದ್ಧದ ಹೋರಾಟಕ್ಕೆ ಬಳಸುತ್ತೇವೆ ಎಂದಿದ್ದರು. ಇದೀಗ ಲತಾ ಮಂಗೇಶ್ಕರ್ ಕೊರೋನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Film Fare ಪ್ರಶಸ್ತಿಯನ್ನೊಮ್ಮೆ ನಿರಾಕರಿಸಿದ್ದ ಗಾನ ಕೋಗಿಲೆ ಲತಾ ಮಂಗೇಶ್ಕರ್! 

1929ರ ಸೆಪ್ಟೆಂಬರ್ 28ರಂದು ಮಧ್ಯಪ್ರದೇಶ ಇಂದೋರ್‌ನಲ್ಲಿ ಹುಟ್ಟಿದ ಲತಾ ಮಂಗೇಶ್ಕರ್ ಭಾರತ ಕಂಡ ಅಪರೂಪದ ಗಾಯಕಿ. ಇಡೀ ಭಾರತವನ್ನು ತಮ್ಮ ಕಂಠದಿಂದ ಒಂದಾಗಿಸಿದ ಗಾಯಕಿ ಮಂಗೇಶ್ಕರ್. ಬಾಲಿವುಡ್ ಚಿತ್ರರಂಗಕ್ಕೆ ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಲತಾ ಮಂಗೇಶ್ಕರ್, 6 ಭಾಷೆಗಳ ಚಿತ್ರಗೀತೆಗಳನ್ನು ಹಾಡಿದ್ದಾರೆ. 

ಲತಾ ಮಂಗೇಶ್ಕರ್ ಮೊದಲ ಹೆಸರು ಹೇಮಾ
ಲತಾ ಮಂಗೇಶ್ಕರ್ ಮೊದಲ ಹೆಸರು ಹೇಮಾ. ಲತಾ ಮಂಗೇಶ್ಕರ್ ತಂದೆ ದೀನನಾಥ್ ಮಂಗೇಶ್ಕರ್ ಖ್ಯಾತ ರಂಗಭೂಮಿ ಕಲಾವಿಧರಾಗಿದ್ದರು. ಅವರು ಅಭಿನಯಿಸಿದ ಲತಿಕಾ ಎಂಬ ಮಹಿಳೆ ಪಾತ್ರ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಜನಪ್ರಿಯತೆ ಬಳಿಕ ಹೇಮಾ ಹೆಸರನ್ನು ಲತಾ ಎಂದು ಮರುನಾಮಕರಣ ಮಾಡಿದ್ದರು. 

ಮಂಗೇಶ್ಕರ್ ಸರ್‌ನೇಮ್:
ಮಂಗೇಶ್ಕರ್ ಸರ್‌ನೇಮ್ ಹಿಂದೆಯೂ ವಿಶೇಷ ಕತೆ ಇದೆ.   ದೀನನಾಥ್ ಅವರ ಮೂಲ ಗೋವಾದಲ್ಲಿರುವ ಮಂಗೇಶಿ ಎಂಬ ಗ್ರಾಮ. ತಮ್ಮ ಊರಿನ ಹೆಸರನ್ನು ಬದಲಿಸಿ ದಿನನಾಥ್ ಮಂಗೇಶ್ಕರ್ ಎಂದು ಬದಲಿಸಿದ್ದರು. 

ದಾದಾ ಸಾಹೇಬ್ ಪಾಲ್ಕೆ, ಭಾರತ ರತ್ನ, ಪ್ಲೇ ಬ್ಯಾಕ್ ಸಿಂಗರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ಲತಾ ಮಂಗೇಶ್ಕರ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಸುವರ್ಣನ್ಯೂಸ್.ಕಾಂ ಸಮಸ್ತ ಓದುಗರ ಪ್ರಾರ್ಥಿಸುತ್ತಿದೆ.

Follow Us:
Download App:
  • android
  • ios