Lata Mangeshkar Faced Rejection: ತೆಳು ಧ್ವನಿ ಎಂದು ಲತಾರನ್ನು ರಿಜೆಕ್ಟ್ ಮಾಡಿದ್ದರು ಈ ವ್ಯಕ್ತಿ
ಗಾನ ಕೋಗಿಲೆ ಲತಾ ಮಂಗೇಶ್ಕರ್ (Lata Mangeshkar) ಅವರನ್ನು ಕಳೆದ 14 ದಿನಗಳಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರೋನಾ ಪಾಸಿಟಿವ್ ಮತ್ತು ನ್ಯುಮೋನಿಯಾದ ನಂತರ ಅವರನ್ನು ಜನವರಿ 8 ರಂದು ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಲತಾ ಮಂಗೇಶ್ಕರ್ ಅವರು ಇದುವರೆಗೆ ವಿವಿಧ ಭಾಷೆಗಳಲ್ಲಿ 30 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಆದಾಗ್ಯೂ, ಲತಾಜಿಗೆ ಇಲ್ಲಿಗೆ ತಲುಪುವ ಪ್ರಯಾಣವು ಸುಲಭವಾಗಿರಲಿಲ್ಲ. ವಾಸ್ತವವಾಗಿ, ಒಬ್ಬ ವ್ಯಕ್ತಿಯು ತನ್ನ ಧ್ವನಿ ತೆಳುವಾಗಿದೆ ಎಂದು ಹೇಳಿ ಲತಾ ಮಂಗೇಶ್ರ್ ಅವರಿಗೆ ಅವಕಾಶ ನೀಡಲು ನಿರಾಕರಿಸಿದ್ದರು. ಅಷ್ಟಕ್ಕೂ ಆ ವ್ಯಕ್ತಿ ಯಾರು?
ಆರಂಭದಲ್ಲಿ, ಅನೇಕ ಜನರು ಲತಾಜಿಯವರ ಧ್ವನಿಯನ್ನು ತೆಳ್ಳಗೆ ಮತ್ತು ವೀಕ್ ಎಂದು ರಿಜೆಕ್ಟ್ ಮಾಡಿದ್ದರು. ಆದರೆ ಲತಾ ತನ್ನ ರಾಗದಲ್ಲಿ ಗಟ್ಟಿಯಾಗಿದ್ದರು. ತಪ್ಪುಗಳಿಂದ ಪಾಠಗಳನ್ನು ಕಲಿತು ಜಗತ್ತಿನಲ್ಲಿ ತನ್ನದೇ ಆದ ಸ್ಥಾನ ಗಳಿಸಿದರು. ಖ್ಯಾತ ಚಲನಚಿತ್ರ ನಿರ್ಮಾಪಕ ಎಸ್ ಮುಖರ್ಜಿ ಅವರು ಲತಾಜಿಯವರ ಧ್ವನಿಯನ್ನು ತೆಳ್ಳಗೆ ಎಂದು ರಿಜೆಕ್ಟ್ ಮಾಡಿದ ಮೊದಲ ವ್ಯಕ್ತಿ.
ಒಮ್ಮೆ ಲತಾ ಮಂಗೇಶ್ಕರ್ ಅವರ ಗುರು ಗುಲಾಮ್ ಹೈದರ್ ಸಾಹಿಬ್ ಅವರು ದಿಲೀಪ್ ಕುಮಾರ್ ಮತ್ತು ಕಾಮಿನಿ ಕೌಶಲ್ ಅವರ 'ಶಹೀದ್' ಚಿತ್ರಕ್ಕಾಗಿ ಚಲನಚಿತ್ರ ನಿರ್ಮಾಪಕ ಎಸ್ ಮುಖರ್ಜಿ ಅವರಿಗೆ ಲತಾ ಅವರ ಧ್ವನಿಯ ಬಗ್ಗೆ ಹೇಳಿದರು. ಮುಖರ್ಜಿಯವರು ಮೊದಲು ಅವರ ಹಾಡನ್ನು ಗಮನವಿಟ್ಟು ಆಲಿಸಿದರು ಮತ್ತು ನಂತರ ಲತಾ ಅವರ ಧ್ವನಿ ತುಂಬಾ ತೆಳುವಾಗಿರುವ ಕಾರಣ ತಮ್ಮ ಸಿನಿಮಾದಲ್ಲಿ ಕೆಲಸ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
ಅದೇ ಸಮಯದಲ್ಲಿ ಗುರು ಗುಲಾಮ್ ಹೈದರ್ ಸಾಹೇಬ್, ಲತಾ ಮಂಗೇಶ್ಕರ್ ಮತ್ತು ದಿಲೀಪ್ ಕುಮಾರ್ ಮುಂಬೈನಲ್ಲಿ ಲೋಕಲ್ ರೈಲಿನಲ್ಲಿ ಪ್ರಯಾಣಿಸಿಸುತ್ತಿದ್ದರು. ಹೀಗಿರುವಾಗ ಲತಾರ ಧ್ವನಿಯನ್ನು ದಿಲೀಪ್‌ಕುಮಾರ್‌ಗೆ ಕೇಳಿಸಿದರೆ ಏನಾದರೂ ಕೆಲಸ ಸಿಗಬಹುದೆಂದು ಹೈದರ್ ಯೋಚಿಸಿದರು
ನಂತರ ಲತಾ ಮಂಗೇಶ್ಕರ್ ಹಾಡಲು ಪ್ರಾರಂಭಿಸಿದ ತಕ್ಷಣ, ದಿಲೀಪ್ ಕುಮಾರ್ ಅವರನ್ನು ಅಡ್ಡಿಪಡಿಸಿದರು ಮತ್ತು ಮರಾಠಿಗಳ ಧ್ವನಿಯು 'ದಾಲ್-ಅನ್ನ' ವಾಸನೆಯನ್ನು ಹೊಂದಿದೆ ಎಂದು ಹೇಳಿದರು. ಅವರು ಲತಾ ಅವರ ಉಚ್ಚಾರಣೆಯ ಬಗ್ಗೆ ಹೀಗೆ ಟೀಕೆ ಮಾಡಿದ್ದರು. ಇದಾದ ನಂತರ ಲತಾ ಅವರು ಹಿಂದಿ ಮತ್ತು ಉರ್ದು ಕಲಿಯಲು ಶಿಕ್ಷಕರನ್ನು ನೇಮಿಸಿಕೊಂಡರು ಮತ್ತು ಅವರ ಉಚ್ಚಾರಣೆಯನ್ನು ಸರಿಪಡಿಸಿದರು.
ಲತಾ ಮಂಗೇಶ್ಕರ್ ಅವರು 33 ವರ್ಷದವರಾಗಿದ್ದಾಗ ಅವರಿಗೆ ವಿಷ ನೀಡಿ ಕೊಲ್ಲುವ ಪ್ರಯತ್ನ ನಡೆದಿತ್ತು. ಲತಾ ಅವರ ಆಪ್ತ ಗೆಳತಿ ಪದ್ಮಾ ಸಚ್‌ದೇವ್ ಅವರ ‘ಐಸಾ ಕಹಾನ್ ಸೆ ಲಾವೂನ್’ ಪುಸ್ತಕದಲ್ಲೂ ಇದನ್ನು ಉಲ್ಲೇಖಿಸಲಾಗಿದೆ. ಈ ಘಟನೆ 1963 ರದ್ದು ಲತಾಜಿ ಅವರು ನಿರಂತರವಾಗಿ ವಾಂತಿ ಮಾಡಿಕೊಳ್ಳುತ್ತಿದ್ದರು. ಪರೀಕ್ಷೆಯ ನಂತರ ಸ್ಲೋ ಪಾಯ್ಸನ್ ನೀಡಿರುವುದಾಗಿ ವೈದ್ಯರು ತಿಳಿಸಿದರು.
ಆದಾಗ್ಯೂ, ನಂತರ ಲತಾ ಮಂಗೇಶ್ಕರ್ ಅವರೇ ಈ ಕಥೆಯ ಬಗ್ಗೆ ಮಾತಾನಾಡಿದರು.'ನಾವು ಮಂಗೇಶ್ಕರರು ಇದರ ಬಗ್ಗೆ ಮಾತನಾಡುವುದಿಲ್ಲ. ಏಕೆಂದರೆ ಅದು ನಮ್ಮ ಜೀವನದ ಅತ್ಯಂತ ಕೆಟ್ಟ ಅವಧಿ. ನಾನು ಹಾಸಿಗೆಯಿಂದ ಹೊರಬರಲು ಸಾಧ್ಯವಾಗದಷ್ಟು ದುರ್ಬಲ ಭಾವನೆಯನ್ನು ಅನುಭವಿಸಲು ಪ್ರಾರಂಭಿಸಿದೆ' ಎಂದು ಲತಾ ಮಂಗೇಶ್ಕರ್ ಅವರು ಸಂವಾದದಲ್ಲಿ ಹೇಳಿದ್ದರು.
ವೈದ್ಯರು ಮತ್ತೆ ಹಾಡಲು ಸಾಧ್ಯವಿಲ್ಲ ಎಂದು ನಿಮಗೆ ಹೇಳಿದ್ದು ನಿಜವೇ ಲತಾ ಮಂಗೇಶ್ಕರ್ ಅವರನ್ನು ಕೇಳಿದಾಗ 'ಇದು ನಿಜವಲ್ಲ. ಇದು ನನಗೆ ನೀಡಿದ ಸ್ಲೋ ಪಾಯಿಸನ್ ಸುತ್ತ ಹೆಣೆದಿರುವ ಕಾಲ್ಪನಿಕ ಕಥೆ' ಎಂದು ಲತಾಜಿ ಪ್ರತಿಕ್ರಿಯೆ ನೀಡಿದ್ದರು.
ಲತಾ ಮಂಗೇಶ್ಕರ್ ಅವರು 5 ಒಡಹುಟ್ಟಿದವರಲ್ಲಿ ಹಿರಿಯರು. ಮೀನಾ, ಆಶಾ, ಉಷಾ ಲತಾರ ಸಹೋದರಿಯರು ಮತ್ತು ಸಹೋದರ ಹೃದಯನಾಥ್ ಮಂಗೇಶ್ಕರ್ . ತಂದೆ ದೀನದಯಾಳ್ ರಂಗಭೂಮಿ ಕಲಾವಿದರಾಗಿದ್ದರಿಂದ ಲತಾ ಅವರು ಕೇವಲ 5 ನೇ ವಯಸ್ಸಿನಲ್ಲಿ ಗಾಯನವನ್ನು ಕಲಿಯಲು ಪ್ರಾರಂಭಿಸಿದರು. ಲತಾ ಅವರು ರಕ್ತದಲ್ಲೇ ಸಂಗೀತ ಕಲೆಯನ್ನು ಪಡೆದಿದ್ದಾರೆ.
ಮಧ್ಯಮ ವರ್ಗದ ಮರಾಠಾ ಕುಟುಂಬದಲ್ಲಿ ಇಂದೋರ್‌ನಲ್ಲಿ ಸೆಪ್ಟೆಂಬರ್ 28, 1929 ರಂದು ಜನಿಸಿದ ಲತಾ ಮಂಗೇಶ್ಕರ್ ಅವರಿಗೆ ಮೊದಲು 'ಹೇಮಾ' ಎಂದು ಹೆಸರಿಡಲಾಗಿಯಿತು. ಆದರೆ, ಹುಟ್ಟಿದ ಐದು ವರ್ಷಗಳ ನಂತರ ಆಕೆಯ ತಂದೆ-ತಾಯಿ ‘ಲತಾ’ ಎಂದು ಹೆಸರಿಟ್ಟರು.
2011 ರಲ್ಲಿ, ಲತಾ ಮಂಗೇಶ್ಕರ್ ಅವರು ಕೊನೆಯ ಬಾರಿಗೆ 'ಸತ್ರಂಗಿ ಪ್ಯಾರಾಚೂಟ್' ಸಿನಿಮಾದ ಹಾಡನ್ನು ಹಾಡಿದರು. ಅದರ ನಂತರ ಅವರು ಗಾಯನದಿಂದ ದೂರವಿದ್ದಾರೆ.