Asianet Suvarna News Asianet Suvarna News

ಫ್ಯಾನ್ಸ್​ ಅಂದ್ರೆ ಸುಮ್ಮನೇನಾ? ಎದ್ದೆನೋ, ಬಿದ್ದೆನೋ ಎಂದು ಓಡಿ ಹೋದ ನಟಿ ಅನುಷ್ಕಾ ಶೆಟ್ಟಿ

ಒಡಿಶಾದಲ್ಲಿ ಚಿತ್ರೀಕರಣದ ಸಂದರ್ಭದಲ್ಲಿ ನಟಿ ಅನುಷ್ಕಾ  ಶೆಟ್ಟಿಯನ್ನು ಫ್ಯಾನ್ಸ್​ ಸುಸ್ತು ಮಾಡಿರೋ ಘಟನೆ ನಡೆದಿದೆ. ನಟಿ ಓಡಿ ಹೋಗಿರುವ ವಿಡಿಯೋ ವೈರಲ್​ ಆಗಿದೆ. 
 

Lady Superstar craze hits Odisha as Anushka Shetty gets spotted in Jeypore Odissa suc
Author
First Published Feb 8, 2024, 2:02 PM IST

ಇತ್ತೀಚೆಗೆ ಅನುಷ್ಕಾ ಶೆಟ್ಟಿ ಸಿನಿಮಾಕ್ಕಿಂತ ಹೆಚ್ಚು ಪ್ರಚಾರದಲ್ಲಿ ಇರುವುದು ತೆಲುಗಿನ ಖ್ಯಾತ ನಟ ಪ್ರಭಾಸ್ (Prabhas) ಅವರ ಜೊತೆಗಿನ ಮದುವೆ ವಿಷಯದಲ್ಲಿ.  ಹಿಂದೊಮ್ಮೆ  ತಿರುಪತಿಯಲ್ಲಿ  ನಡೆದಿದ್ದ ಆದಿ ಪುರುಷ ಸಿನಿಮಾದ ಪ್ರಿ ರಿಲೀಸ್ ಇವೆಂಟ್​ನಲ್ಲಿಯೂ ಮದುವೆ ವಿಷಯವನ್ನು ಪ್ರಭಾಸ್​ ಅವರಿಗೆ ಕೇಳಿದ್ದಾಗ,  ಮದುವೆಗೆ ಕಾಲ ಕೂಡಿ ಬರಲಿ. ಇದೇ ತಿರುಪತಿಯಲ್ಲೇ ನಾನು ಮದುವೆ ಮಾಡಿಕೊಳ್ಳುತ್ತೇನೆ ಎಂದಿದ್ದರು. ಇದಾದ ಬಳಿಕವಂತೂ  ಅನುಷ್ಕಾ ಜೊತೆ ಹೆಸರು ಕೇಳಿಬರುತ್ತಲೇ ಇದೆ.  ಅನುಷ್ಕಾ ಮತ್ತು ಪ್ರಭಾಸ್ ಜೊತೆ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ. ಮೊದಲು ಬಿಲ್ಲಾ ಜೊತೆ ಒಟ್ಟಿಗೆ ಕೆಲಸ ಮಾಡಿದ್ದರು. ಆ ನಂತರ ಮಿರ್ಚಿ ಮತ್ತು ಬಾಹುಬಲಿ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಇದಾದ ಬಳಿಕ ಈ ಇಬ್ಬರು ನಟರ ಅಭಿಮಾನಿಗಳು ಎಐ ಮೂಲಕ ಮದುವೆಯಾಗಿರುವಂತೆ ಫೋಟೋಗಳನ್ನು ವೈರಲ್​ ಮಾಡಿದ್ದೂ ಆಯ್ತು. ಇದನ್ನು ಕಂಡು ಅನುಷ್ಕಾ ಪಾಲಕರು ಪೊಲೀಸರಲ್ಲಿ ದೂರು ಕೊಡಲು ಚಿಂತನೆ ನಡೆಸುತ್ತಿದ್ದಾರೆ.

ಇದರ ನಡುವೆಯೇ, ಅನುಷ್ಕಾ ಶೆಟ್ಟಿ ಶೂಟಿಂಗ್​ಗೆ ಹೋದ ಸಮಯದಲ್ಲಿ ಅಭಿಮಾನಿಗಳು ಮುತ್ತುವರೆದು ನಟಿಯರನ್ನು ಸುಸ್ತು ಮಾಡಿರುವ ಘಟನೆ ನಡೆದಿದೆ. ಎದ್ದೆನೋ, ಬಿದ್ದೆನೋ ಎಂದು ನಟಿ ಓಡಿ ಹೋಗಿರುವ ವಿಡಿಯೋ ಇದೀಗ ವೈರಲ್​ ಆಗಿದೆ. ಅಷ್ಟಕ್ಕೂ ನಟ-ನಟಿಯರನ್ನು ನೋಡಿದರೆ ಹೀಗೆ ಮುಗಿ ಬೀಳುವುದು ಮಾಮೂಲೇ. ಆದರೆ ಅನುಷ್ಕಾ ಶೆಟ್ಟಿ ಅವರನ್ನು ನೋಡಿ ಅಭಿಮಾನಿಗಳು ಇಷ್ಟು ಎಕ್ಸೈಟ್​ ಆಗಲು ಇನ್ನೊಂದು ಕಾರಣವೂ ಇದೆ.

ನಟರಾದ ಅನುಷ್ಕಾಶೆಟ್ಟಿ- ಪ್ರಭಾಸ್​ ಮದ್ವೆ ಫೋಟೋಗಳು ವೈರಲ್​: ದೂರು ದಾಖಲಿಸಿದ ಪೋಷಕರು!

ಅದೇನೆಂದರೆ, ನಟಿ ಇತ್ತೀಚಿನ ದಿನಗಳಲ್ಲಿ  ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ.  ಸಿನಿಮಾ ಪ್ರಚಾರ, ಶೂಟಿಂಗ್  ಇದ್ದಾಗ ಮಾತ್ರ ಕಾಣಿಸಿಕೊಳ್ಳುತ್ತಾರೆ. ಹೀಗೆ ಕಾಣಿಸಿಕೊಂಡಾಗಲೂ ಮಾಸ್ಕ್​ ಹಾಕಿಕೊಂಡಿದ್ದಾರೆ. ಆದರೂ ತಮ್ಮ ನೆಚ್ಚಿನ ನಟಿಯನ್ನು ಗುರುತಿಸದೇ ಇರುತ್ತಾರಾ ಫ್ಯಾನ್ಸ್​. ಮುತ್ತಿಕೊಂಡುಬಿಟ್ಟಿದ್ದಾರೆ. ನಟಿ ಓಡೋಡಿ ಹೋಗಿದ್ದು, ಅದರ ವಿಡಿಯೋ ವೈರಲ್​ ಆಗಿದೆ.

ಅಂದಹಾಗೆ, ಈ ವಿಡಿಯೋ ಒಡಿಶಾದಿಂದ ಬಂದಿದೆ. ನಟಿ ಸದ್ಯ  ಒಡಿಶಾದಲ್ಲಿ ಶೂಟಿಂಗ್​ನಲ್ಲಿದ್ದಾರೆ.  ಒಡಿಶಾದ ಜೇಪೋರ್​ನಲ್ಲಿ ಈ ಘಟನೆ ನಡೆದಿದೆ. ರಮ್ಯಾಕೃಷ್ಣ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಕ್ರಿಶ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಹೊಸ ಸಿನಿಮಾದ ಶೀರ್ಷಿಕೆ ಇನ್ನೂ ಘೋಷಣೆ ಆಗಿಲ್ಲವಾದರೂ, ಚಿತ್ರೀಕರಣ ನಡೆಯುತ್ತಿದೆ. ಸದ್ಯ ಒಡಿಶಾದ ಕೋರಾಪುಟ್ ಜಿಲ್ಲೆಯ ಹಲವು ಭಾಗಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.   ಈಕೆ ಒಡಿಶಾಕ್ಕೆ ಬರುತ್ತಿದ್ದಾರೆ ಎಂದು ಮೊದಲೇ ಅಲ್ಲಿ ಗುಲ್ಲಾಗಿತ್ತು. ಅದಕ್ಕಾಗಿ ಅನುಷ್ಕಾ ಬರವಿಗೆ ಫ್ಯಾನ್ಸ್​ ಕಾಯುತ್ತಿದ್ದರು. ನಟಿ ಮಾಸ್ಕ್​ ಹಾಕಿಕೊಂಡು ಬಂದರೂ ಅಭಿಮಾನಿಗಳು ಬಿಡಲಿಲ್ಲ. ಮೊದಲೇ  ಜಮಾಯಿಸಿದ್ದ ಜನರು, ಅನುಷ್ಕಾ ಕಾರಿನಿಂದ ಇಳಿಯುತ್ತಿದ್ದಂತೆಯೇ ಮುತ್ತಿಗೆ ಹಾಕಲು ಹೋದರು. ಸೆಲ್ಫಿಗಾಗಿ ಹಾತೊರೆದರು. ಮುಂದೇನಾಗುತ್ತದೆ ಎಂದು ತಿಳಿದ ಅನುಷ್ಕಾ ಅಲ್ಲಿಂದ ಓಡಿ ಹೋಗಿದ್ದಾರೆ.  

ಎದ್ದು ಕುಣಿರೋ, ಬಿದ್ದು ಕುಣಿರೋ ಹಾಡಿನ ಜೊತೆ ಪ್ರತಾಪ್​ಗೆ ಮಹಾದೇಶ್ವರ ಬೆಟ್ಟದಲ್ಲಿ ಭರ್ಜರಿ ಸ್ವಾಗತ!

 

Follow Us:
Download App:
  • android
  • ios