ಲಾಲ್ ಸಿಂಗ್ ಚಡ್ಡಾ ಹೀನಾಯ ಸೋಲು; 13 ವರ್ಷಗಳಲ್ಲೇ ಇಂಥ ಸೋಲು ಕಂಡಿರಲಿಲ್ಲ ಆಮೀರ್ ಖಾನ್
ಬಾಲಿವುಡ್ ಸ್ಟಾರ್ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ರಿಲೀಸ್ ಆಗಿದೆ. ಆಗಸ್ಟ್ 11ರಂದು ಲಾಲ್ ಸಿಂಗ್ ಚಡ್ಡಾ ದೇಶ- ವಿದೇಶಗಲ್ಲಿ ತೆರೆಗೆ ಬಂದಿದೆ. ಭಾರಿ ನಿರೀಕ್ಷೆಯೊಂದಿಗೆ ರಿಲೀಸ್ ಆದ ಲಾಲ್ ಸಿಂಗ್ ಚಡ್ಡಾ ಅಭಿಮಾನಿಗಳ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ. ಬಾಕ್ಸ್ ಆಫೀಸ್ ನಲ್ಲೂ ಆಮೀರ್ ಖಾನ್ ಕಮಾಲ್ ಮಾಡಿಲ್ಲ.
ಬಾಲಿವುಡ್ ಸ್ಟಾರ್ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ರಿಲೀಸ್ ಆಗಿದೆ. ಆಗಸ್ಟ್ 11ರಂದು ಲಾಲ್ ಸಿಂಗ್ ಚಡ್ಡಾ ದೇಶ- ವಿದೇಶಗಲ್ಲಿ ತೆರೆಗೆ ಬಂದಿದೆ. ಭಾರಿ ನಿರೀಕ್ಷೆಯೊಂದಿಗೆ ರಿಲೀಸ್ ಆದ ಲಾಲ್ ಸಿಂಗ್ ಚಡ್ಡಾ ಅಭಿಮಾನಿಗಳ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ. ಬಾಕ್ಸ್ ಆಫೀಸ್ ನಲ್ಲೂ ಆಮೀರ್ ಖಾನ್ ಕಮಾಲ್ ಮಾಡಿಲ್ಲ. ಒಂದು ಕಾಲದಲ್ಲಿ ಆಮೀರ್ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ ಸಾಕು ಆ ಕ್ರೇಸ್ ಬೇರೆಯದೆ ಹಂತದಲ್ಲಿ ಇರುತ್ತಿತ್ತು. ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದರು. ಮೊದಲ ದಿನದ ಕಲೆಕ್ಷನ್ 50ಕೋಟಿ ರೂಪಾಯಿಗೆ ಮೋಸ ಇರಲಿಲ್ಲ. ಆಮೀರ್ ಖಾನ್ ಒಂದು ಸಿನಿಮಾಗೆ ಅನೇಕ ಸಮಯ ತೆಗೆದುಕೊಳ್ಳುತ್ತಾರೆ. ವರ್ಷಕೊಂದೆ ಸಿನಿಮಾ ಮಾಡಿದ್ರು ಬ್ಲಾಕ್ ಬಸ್ಟರ್ ಸಿನಿಮಾ ಕೊಡುತ್ತಿದ್ದರು. ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಕಮಾಯಿ ಮಾಡುತ್ತಿತ್ತು. ಆದರೀಗ ಹಾಗಿಲ್ಲ. ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಳಿಕ ಆಮೀರ್ ಖಾನ್ ಜಮಾನ ಮುಗಿದಿದೆ ಎನ್ನುತ್ತಿದ್ದಾರೆ ಸಿನಿ ಪ್ರೇಕ್ಷಕರು.
ಲಾಲ್ ಸಿಂಗ್ ಚಡ್ಡಾ ಮೊದಲ ದಿನ ಕಲೆಕ್ಷನ್ ಮಾಡಿದ್ದು 11 ರಿಂದ 12 ಕೋಟಿ ರೂಪಾಯಿ. ಆಮೀರ್ ಖಾನ್‌ಗೆ ಈ ಸಂಖ್ಯೆ ತೀರ ಕಗಿಮೆ. ಕಡಿಮೆ ಎಂದರೂ ಮಿಸ್ಟರ್ ಪರ್ಫೇಕ್ಷನಿಸ್ಟ್ ಸಿನಿಮಾ ಮೊದಲ ದಿನ 30 ಕೋಟಿ ರೂ. ಅಧಿಕ ಬಾಚಿಕೊಳ್ಳುತ್ತಿತ್ತು. ಆದರೆ ಲಾಲ್ ಸಿಂಗ್ ಚಡ್ಡಾ ಮೊದಲ ದಿನ 11 ರಿಂದ 12 ಕೋಟಿ ಕಲೆಕ್ಷನ್ ನೋಡಿ ಅಚ್ಚರಿಯಾಗಿದೆ. ಆಮೀರ್ ಖಾನ್ ನಟನೆಯ 2018ರಲ್ಲಿ ತೆರೆಗೆ ಬಂದ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ಕೂಡ ಹೀನಾಯ ಸೋಲು ಕಂಡಿತ್ತು. ಆದರೆ ಮೊದಲ ದಿನ ಉತ್ತಮ ಕಲೆಕ್ಷನ್ ಮಾಡಿತ್ತು. ಆದರೆ ನಂತರ ಸಂಪೂರ್ಣ ಕಡಿಮೆಯಾಗಿತ್ತು. ಆದರೆ ಲಾಲ್ ಸಿಂಗ್ ಚಡ್ಡಾ ವಿಚಾರದಲ್ಲಿ ಮೊದಲ ದಿನವೇ ಭಾರಿ ನಿರಾಸೆಯಾಗಿದೆ.
ಕಳೆದ 13 ವರ್ಷಗಳಲ್ಲಿ ಆಮೀರ್ ಖಾನ್ ಸಿನಿಮಾ ಈ ಪರಿ ಸೋಲು ಕಂಡಿದ್ದೇ ಇರಲಿಲ್ಲ. ಅದ್ಭುತ ಸಿನಿಮಾಗಳನ್ನು ನೀಡುತ್ತಾ ಬಾಕ್ಸ್ ಆಫೀಸ್ ನಲ್ಲೂ ಮೋಡಿಮಾಡುತ್ತಿದ್ದರು. 3 ಈಡಿಯಟ್ಸ್, ತಲಾಶ್, ಧೂಮ್-3, ಪಿಕೆ, ದಂಗಲ್ ಹೀಗೆ ಒಂದಮೇಲೊಂದು ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದ ಆಮೀರ್ ಖಾನ್ ಇದೀಗ ಹೀನಾಯ ಸೋಲು ಕಂಡಿದ್ದಾರೆ. ಸುಮಾರು 4 ವರ್ಷಗಳ ಬಳಿಕ ಆಮೀರ್ ಖಾನ್ ತೆರೆಮೇಲೆ ಬಂದಿದ್ದಾರೆ. ಈ ಸಿನಿಮಾ ಮೇಲೆ ಆಮೀರ್ ಖಾನ್ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೀಗ ಅಷ್ಟೆ ನಿರಾಸೆ ಮೂಡಿಸಿದೆ.
Fact Check: ಅಮೀರ್ ಖಾನ್ ಹಳೆಯ ಸಂದರ್ಶನದ ವಿಡಿಯೋ ತಪ್ಪು ಉಲ್ಲೇಖದೊಂದಿಗೆ ವೈರಲ್
ಅಂದಹಾಗೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ಹಾಲಿವುಡ್ ನ ಸೂಪರ್ ಹಿಟ್ ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್ ಆಗಿದೆ. ಆಸ್ಕರ್ ವಿನ್ನರ್ ಸಿನಿಮಾ ಇದಾಗಿತ್ತು. ಆಸ್ಕರ್ ಗೆದ್ದು ಬೀಗಿದ್ರು ಸಹ ಈ ಸಿನಿಮ ಹಾಲಿವುಡ್ ನಲ್ಲಿ ಸೋಲು ಕಂಡಿತ್ತು. ಈ ಸಿನಿಮಾ ವನ್ನು ಬಾಲಿವುಡ್ ನಲ್ಲಿ ಮಾಡಿ ಆಮೀರ್ ಖಾನ್ ಸೋತಿದ್ದಾರೆ.
ಲಾಲ್ ಸಿಂಗ್ ಚಡ್ಡಾ ಟ್ವಿಟ್ಟರ್ ವಿಮರ್ಶೆ; ಆಮೀರ್ ಖಾನ್ ಸಿನಿಮಾ ನೋಡಿ ಪ್ರೇಕ್ಷಕರು ಹೇಳಿದ್ದೇನು? ಫ್ಯಾನ್ಸ್ ಫಸ್ಟ್ ರಿಯಾಕ್ಷನ್
ಸೋಲಿಗೆ ಕಾರಣವಾಯ್ತಾ ಅಸಹಿಷ್ಣುತೆ ಹೇಳಿಕೆ?
ಆಮೀರ್ ಖಾನ್ ಈ ಸಿನಿಮಾ ಅನೌನ್ಸ್ ಮಾಡಿದಾಗಿನಿಂದ ಬಾಯ್ಕಟ್ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ಆಮೀರ್ ಖಾನ್ ಈ ಹಿಂದೆ ನೀಡಿದ್ದ ಹೇಳಿಕೆ. ಮಾಜಿ ಪತ್ನಿ ಕಿರಣ್ ರಾವ್ ಜೊತೆ ಈ ದೇಶದಲ್ಲಿ ಅಸಹಿಷ್ಣುತೆ ಜಾಸ್ತಿಯಾಗಿದೆ ದೇಶ ಬಿಟ್ಟು ಹೋಗಲು ನಿರ್ಧರಿಸಿದ್ದೆ ಎಂದು ಹೇಳಿದ್ದರು. ಇದು ಆಮೀರ್ ಖಾನ್ ಗೆ ಭಾರಿ ಹಿನ್ನಡೆಯಾಗಿತ್ತು. ಆಮೀರ್ ಖಾನ್‌ಗೆ ದೇಶ ವಿರೋಧಿ ಎನ್ನುವ ಹಣೆಪಟ್ಟಿ ಕಟ್ಟಲಾಯಿತು. ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಯ ವೇಳೆ ಬಾಯ್ಕಟ್ ಅಭಿಯಾನ ಜೋರಾಯ್ತು. ಆದರೆ ಆಮೀರ್ ಖಾನ್ ಬಹಿರಂಗವಾಗಿ ಕ್ಷಮೆ ಕೇಳಿದ್ದರು. ನಾನು ದೇಶ ವಿರೋಧಿ ಅಲ್ಲ, ಸಿನಿಮಾ ಬಾಯ್ಕಟ್ ಮಾಡಬೇಡಿ, ಎಲ್ಲರೂ ಸಿನಿಮಾ ನೋಡಿ' ಕೇಳಿಕೊಂಡಿದ್ದರು. ಆದರೂ ಬಾಯ್ಕಟ್ ಅಭಿಯಾನ ನಿಂತಿರಲಿಲ್ಲ, ಲಾಲ್ ಸಿಂಗ್ ಚಡ್ಡಾ ಸಿನಿಮಾ ಹೀನಾಯ ಸೋಲು ಅನುಭವಿಸಿದೆ.