Asianet Suvarna News Asianet Suvarna News

ಲಾಲ್ ಸಿಂಗ್ ಚಡ್ಡಾ ಟ್ವಿಟ್ಟರ್ ವಿಮರ್ಶೆ; ಆಮೀರ್ ಖಾನ್ ಸಿನಿಮಾ ನೋಡಿ ಪ್ರೇಕ್ಷಕರು ಹೇಳಿದ್ದೇನು? ಫ್ಯಾನ್ಸ್ ಫಸ್ಟ್ ರಿಯಾಕ್ಷನ್

ಬಾಲಿವುಡ್ ಸ್ಟಾರ್ ಆಮೀರ್ ಖಾನ್ ನಟನೆಯ ಬಹುನಿರೀಕ್ಷೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ದೇಶ-ವಿದೇಶಗಳಲ್ಲಿ ಅದ್ದೂರಿಯಾಗಿ ತೆರೆಗೆ ಬಂದಿದೆ. ಆಗಸ್ಟ್ 11ರಂದು ಸಿನಿಮಾ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆಮೀರ್ ಖಾನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಿಸ್ಟರ್ ಪರ್ಫೆಕ್ಷನಿಸ್ಟ್‌ಗೆ ನಾಯಕಿಯಾಗಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ. ಇನ್ನು ವಿಶೇಷ ಎಂದರೆ ಈ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ನಾಗ ಚೈತನ್ಯ ಕೂಡ ನಟಿಸಿದ್ದಾರೆ. 

Laal Singh Chaddha Twitter review: Fans first reaction of   Aamir Khans film sgk
Author
Bengaluru, First Published Aug 11, 2022, 11:21 AM IST

ಬಾಲಿವುಡ್ ಸ್ಟಾರ್ ಆಮೀರ್ ಖಾನ್ ನಟನೆಯ ಬಹುನಿರೀಕ್ಷೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ದೇಶ-ವಿದೇಶಗಳಲ್ಲಿ ಅದ್ದೂರಿಯಾಗಿ ತೆರೆಗೆ ಬಂದಿದೆ. ಆಗಸ್ಟ್ 11ರಂದು ಸಿನಿಮಾ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆಮೀರ್ ಖಾನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಿಸ್ಟರ್ ಪರ್ಫೆಕ್ಷನಿಸ್ಟ್‌ಗೆ ನಾಯಕಿಯಾಗಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ. ಇನ್ನು ವಿಶೇಷ ಎಂದರೆ ಈ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ನಾಗ ಚೈತನ್ಯ ಕೂಡ ನಟಿಸಿದ್ದಾರೆ. ಸೈನಿಕನಾಗಿ ನಾಗ್ ಚೈತನ್ಯ ಮಿಂಚಿದ್ದಾರೆ. ಇದು ನಾಗ ಚೈತನ್ಯ ನಟನೆಯ ಮೊಜಲ ಬಾಲಿವುಡ್ ಸಿನಿಮಾವಾಗಿದೆ. ಅಂದಹಾಗೆ ಆಮೀರ್ ಖಾನ್ ಸಿನಿಮಾ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಮರ್ಶೆ ಮಾಡುತ್ತಿದ್ದಾರೆ. 

ಸಿನಿ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಟ್ವಿಟ್ಟರ್ ಮೂಲಕ ಹೊರಹಾಕಿದ್ದಾರೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಪಾಸಿಟಿವ್ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಂದಹಾಗೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ಹಾಲಿವುಡ್ ನ ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್ ಆಗಿದೆ. ಕೆಲವರು ಮೂಲ ಸಿನಿಮಾಗಿಂತ ಅದ್ಭುತವಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

ಸಿನಿಮಾ ನೋಡಿದ ಅಭಿಮಾನಿಯೊಬ್ಬ ಟ್ವಿಟ್ಟರ್ ನಲ್ಲಿ ವಿಮರ್ಶೆ ಮಾಡಿದ್ದಾರೆ. ಲಾಲ್ ಸಿಂಗ್ ಚಡ್ಡಾ ಡೀಸೆಂಟ್ ಸಿನಿಮಾ. ಆಮೀರ್ ಅಭಿನಯ ಚೆನ್ನಾಗಿದೆ. ಎರಡನೇ ಭಾಗದಲ್ಲಿ ಹೆಚ್ಚು ಮಿಂಚುತ್ತಾರೆ. ಕರೀನಾ ಕಪೂರ್, ನಾಗ ಚೈತನ್ಯ ಕೂಡ ಚೆನ್ನಾಗಿ ನಟಿಸಿದ್ದಾರೆ. ಪೋಷಕ ಕಲಾವಿದರು ಅದ್ಭುತ. ಸಂಗೀತ ಮತ್ತು ಛಾಯಾಗ್ರಾಹಣ ಸೂಪರ್. ಸ್ವಲ್ಪ ದೀರ್ಘವಾದ ಸಿನಿಮಾವಾಗಿದೆ. 2ನೇ ಭಾಗ ಅದ್ಭತವಾಗಿದೆ. 5ಕ್ಕೆ 3 ಸ್ಟಾರ್ ' ಎಂದು ಬರೆದುಕೊಂಡಿದ್ದಾರೆ.

ಮತ್ತೋರ್ವ ಅಭಿಮಾನಿ, ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ದುಬೈನಲ್ಲಿ ವೀಕ್ಷಿಸಿದೆ. ಇದು ಸಾಮಾನ್ಯ ಸಿನಿಮಾವಲ್ಲ. ಭಾವನಾತ್ಮಕವಾಗಿ ರಿಚ್ ಆದ ಸಿನಿಮಾ. ನಾನು ಅನೇಕ ಬಾರಿ ಹುಸಿರುಗಟ್ಟಿ ನೋಡಿದೆ. ಇದು ಫಾರೆಸ್ಟ್ ಗಂಪ್ ಸಿನಿಮಾದ ದೇಶಿ ರಿಕ್ರಿಯೇಶನ್ ಎಂದು ಹೇಳಿದ್ದಾರೆ.

ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು  ಅದ್ವೈತ್ ಚಂದನ್ ಅದ್ಭುತವಾಗಿ ಮಾಡಿದ್ದಾರೆ. ಫಾರೆಸ್ಟ್ ಗಂಪ್ ಸಿನಿಮಾದ ಅದ್ಭುತವಾದ ರೂಪಾಂತರ. ಅನೇಕ ದೃಶ್ಯ, ಪಾತ್ರಗಳು ಮತ್ತು ಕಥಾ ವಸ್ತುಗಳಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಮೂಲ ಸಿನಿಮಾ ನೋಡಿದ್ದರೂ ಸಹ ಈ ಸಿನಿಮಾವನ್ನು ಎಂಜಾಯ್ ಮಾಡುತ್ತೀರಿ. ಸಿನಿಮಾ ಸ್ವಲ್ಪ ನಿಧಾವನಾಗಿದೆ' ಎಂದು ಹೇಳಿದ್ದಾರೆ.

             

Follow Us:
Download App:
  • android
  • ios