Asianet Suvarna News Asianet Suvarna News

ಸಮಂತಾ ಆಯ್ತು ಈಗ ಮಾಜಿ ಪತಿ; ರಾಕಿಂಗ್ ಸ್ಟಾರ್ ಯಶ್ ನನ್ನ ಫೇವರಿಟ್ ಎಂದ ನಾಗ ಚೈತನ್ಯ

ನಾಗ ಚೈತನ್ಯ ಕನ್ನಡದ ಸ್ಟಾರ್, ಪ್ಯಾನ್ ಇಂಡಿಯಾ ಹೀರೋ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮಾತನಾಡಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಾಗ ಚೈತನ್ಯ ಅವರಿಗೆ ನಿರೂಪಕ, 'ನಿಮ್ಮ ಇಷ್ಟದ ಪ್ಯಾನ್ ಇಂಡಿಯಾ ಸ್ಟಾರ್ ಯಾರು ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ನಾಗ ಚೈತನ್ಯ ರಾಕಿಂಗ್ ಸ್ಟಾರ್ ಯಶ್ ಎಂದು ಹೇಳಿದರು. 

laal singh chaddha Actor Naga Chaitanya says KGF star Yash is my favourite pan-India superstar sgk
Author
Bengaluru, First Published Aug 10, 2022, 4:16 PM IST

ಟಾಲಿವುಡ್ ನಟ ನಾಗಚೈತನ್ಯ ಸದ್ಯ ಮೊದಲ ಬಾಲಿವುಡ್ ಸಿನಿಮಾ ರಿಲೀಸ್‌ನ ಬ್ಯುಸಿಯಲ್ಲಿದ್ದಾರೆ. ಮಜಿಲಿ ಸ್ಟಾರ್ ಸದ್ಯ ಸಿನಿಮಾ ಪ್ರಮೋಷನ್ ಗಳಲ್ಲಿ ತೊಡಗಿಕೊಂಡಿದ್ದಾರೆ. ಹೌದು ಟಾಲಿವುಡ್ ಸ್ಟಾರ್ ನಾಗ ಚೈತನ್ಯ ಬಾಲಿವುಡ್ ಸ್ಟಾರ್ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ನಾಗ ಚೈತನ್ಯ ಲುಕ್ ರಿವೀಲ್ ಆಗಿದ್ದು ಸೈನಿಕನಾಗಿ ನಟಿಸಿದ್ದಾರೆ. ಮೊದಲ ಬಾಲಿವುಡ್ ಸಿನಿಮಾ ರಿಲೀಸ್ ಗೆ ಇನ್ನೇನು ಒಂದೇ ಒಂದು ದಿನ ಬಾಕಿ ಇದೆ. ಆಗಸ್ಟ್ 11ರಂದು ಸಿನಿಮಾ ದೇಶ-ವಿದೇಶಗಳಲ್ಲಿ ರಿಲೀಸ್ ಆಗುತ್ತಿದೆ.  ಆಮೀರ್ ಖಾನ್ ಮತ್ತು ನಾಗಚೈತನ್ಯ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಅನೇಕ ಆಂಗ್ಲ ಮಾಧ್ಯಮಗಳಿಗೆ ನಾಗಚೈತನ್ಯ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಸಂದರ್ಶನದಲ್ಲಿ ಅನೇಕ ಇಂಟ್ರಸ್ಟಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಮಾಜಿ ಪತ್ನಿ ಸಮಂತಾ ಬಗ್ಗೆ ಮಾಡಿದ್ದ ವಿಡಿಯೋಗಳು ವೈರಲ್ ಆಗಿತ್ತು. ಇದೀಗ ನಾಗ ಚೈತನ್ಯ ಕನ್ನಡದ ಸ್ಟಾರ್, ಪ್ಯಾನ್ ಇಂಡಿಯಾ ಹೀರೋ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮಾತನಾಡಿದ್ದಾರೆ. 

ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಾಗ ಚೈತನ್ಯ ಅವರಿಗೆ ನಿರೂಪಕ, 'ನಿಮ್ಮ ಇಷ್ಟದ ಪ್ಯಾನ್ ಇಂಡಿಯಾ ಸ್ಟಾರ್ ಯಾರು ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ನಾಗ ಚೈತನ್ಯ ರಾಕಿಂಗ್ ಸ್ಟಾರ್ ಯಶ್ ಎಂದು ಹೇಳಿದರು. ಬಳಿಕ ನಿರೂಪಕ ಕೆಜಿಎಫ್ ಸಿನಿಮಾವನ್ನು ನಿಜಕ್ಕೂ ಇಷ್ಟ ಪಟ್ರಾ ಎಂದು ಕೇಳಿದರು. ಇದಕ್ಕೆ ನಾಗ ಚೈತನ್ಯ ಹೌದು, ನನಗೆ ಕೆಜಿಎಫ್ ತುಂಬಾ ಇಷ್ಟವಾಯಿತು ಎಂದು ಹೇಳಿದರು.  ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಶ್ ಅಭಿಮಾನಿಗಳು ನಾಗಚೈತನ್ಯ ವಿಡಿಯೋ ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ. 

ಸಮಂತಾ ಸಿಕ್ಕಿದ್ರೆ ಹೀಗ್ ಮಾಡ್ತಾರಂತೆ ಮಾಜಿ ಪತಿ ನಾಗಚೈತನ್ಯ

ಸಮಂತಾಗೂ ಇಷ್ಟ ಯಶ್

ಅಂದಹಾಗೆ ಇತ್ತೀಚಿಗಷ್ಟೆ ಸಮಂತಾ ಕೂಡ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮಾತನಾಡಿದ್ದರು. ಕಾಫಿ ವಿತ್ ಕರಣ್ ಶೋನಲ್ಲಿ ಸಮಂತಾಗೆ ಕರಣ್ ಜೋಹರ್ ಜಿಪಿಎಸ್ ನಲ್ಲಿ ಯಾರ ಧ್ವನಿ ಕೇಳಲು ಇಷ್ಟಪಡುತ್ತೀರಿ ಎಂದು ಕೇಳಿದ್ದರು. ಇದಕ್ಕೆ ಸಮಂತಾ ರಾಕಿಂಗ್ ಸ್ಟಾರ್ ಯಶ್ ಎಂದಿದ್ದರು. ಸಮಂತಾ ಅವರ ಆ ವಿಡಿಯೋ ಕೂಡ ವೈರಲ್ ಆಗಿತ್ತು. ಅಲ್ಲದೇ ಯಶ್ ಅಭಿಮಾನಿಗಳು ವಿಡಿಯೋ ಶೇರ್ ಮಾಡಿ ಖುಷಿ ಪಟ್ಟಿದ್ದರು. ಇದೀಗ ಸ್ಯಾಮ್ ಮಾಜಿ ಪತಿ ಕೂಡ ರಾಕಿಂಗ್ ಸ್ಟಾರ್ ಇಷ್ಟ ಎಂದಿರುವುದು ಯಶ್ ಅಭಿಮಾನಿಗಳಿಗೆ ಸಂತಸ ತಂದಿದೆ.

ಆಮೀರ್ ಖಾನ್ 'ಲಾಲ್ ಸಿಂಗ್ ಚಡ್ಡಾ'ದಿಂದ ವಿಜಯ್ ಸೇತುಪತಿ ಔಟ್ ಆಗಿದ್ದೇಕೆ? ಕಾರಣ ಬಿಚ್ಚಿಟ್ಟ ನಾಗಚೈತನ್ಯ

ಇನ್ನು ಲಾಲ್ ಸಿಂಗ್  ಚಡ್ಡಾ ಸಿನಿಮಾ ಬಗ್ಗೆ ಹೇಳುವುದಾದರೆ ಈಗಾಗಲೇ ಮುಂಗಡ ಬುಕ್ಕಿಂಗ್ ಓಪನ್ ಆಗಿದೆ. ದಾಖಲೆಯ ಬುಕ್ಕಿಂಗ್ ಆಗಿದ್ದು ಬಹುತೇಕ ಶೋಗಳು ಫುಲ್ ಆಗಿವೆ. ಬುಕ್ಕಿಂಗ್ ನಲ್ಲೂ ದಾಖಲೆ ಬರೆದಿರುವ ಲಾಲ್ ಸಿಂಗ್ ಚಡ್ಡಾ ಮೊದಲ ದಿನದ ಕಲೆಕ್ಷನ್ ಎಷ್ಟಾಗಲಿದೆ ಎನ್ನುವ ಕುತೂಹಲ ಬಾಲಿವುಡ್ ಸೇರಿದಂತೆ ಎಲ್ಲಾ ಸಿನಿಮಂದಿಗಿದೆ. ಅಂದಹಾಗೆ ಲಾಲ್ ಸಿಂಗ್ ಚಡ್ಡಾ ಹಾಲಿವುಡ್ ನ ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್ ಆಗಿದೆ. ಈ ಸಿನಿಮಾದಲ್ಲಿ ಆಮೀರ್ ಖಾನ್ ಗೆ ನಾಯಕಿಯಾಗಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ.    

Follow Us:
Download App:
  • android
  • ios