ಸಮಂತಾ ಸಿಕ್ಕಿದ್ರೆ ಹೀಗ್ ಮಾಡ್ತಾರಂತೆ ಮಾಜಿ ಪತಿ ನಾಗಚೈತನ್ಯ
ನಾಗಚೈತನ್ಯ ಮತ್ತೆ ಸಮಂತಾ ಬಗ್ಗೆ ಮಾತನಾಡಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಾಗ್ ಟ್ಯಾಟೂ ಮತ್ತು ಮಾಜಿ ಪತ್ನಿ ಬಗ್ಗೆ ಮಾತನಾಡಿದ್ದಾರೆ. ನಾಗಚೈತನ್ಯ ಸದ್ಯ ಹಿಂದಿಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಆಗಸ್ಟ್ 11ಕ್ಕೆ ರಿಲೀಸ್ ಆಗುತ್ತಿದೆ. ಸಿನಿಮಾ ರಿಲೀಸ್ ಗೆ ಇನ್ನೇನು ದಿನಗಣನೆ ಪ್ರಾರಂಭವಾಗಿದೆ. ಆಮೀರ್ ಖಾನ್ ಮತ್ತು ನಾಗಚೈತನ್ಯ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಇತ್ತೀಚಿಗಷ್ಟೆ ನಾಗಚೈತನ್ಯ ಆಂಗ್ಲ ವೆಬ್ ಸೈಟ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಸಮಂತಾ ಬಗ್ಗೆ ಮಾತನಾಡಿದ್ದಾರೆ.
ತೆಲುಗಿನ ಸ್ಟಾರ್ ಕಪಲ್ ಸಮಂತಾ ಮತ್ತು ನಾಗಚೈತನ್ಯಾ ದೂರ ದೂರ ಆಗಿ ಅನೇಕ ತಿಂಗಳುಗಳೇ ಕಳೆದಿವೆ. ಸ್ಯಾಮ್ ಮತ್ತು ಚೈ ವಿಚ್ಛೇದನ ಸುದ್ದಿ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಮದುವೆಯಾಗಿ ಮೂರು ವರ್ಷಗಳ ಕಾಲ ಜೊತೆಯಲ್ಲಿದ್ದ ಈ ಜೋಡಿ ದಿಢೀರ್ ದೂರ ದೂರ ಆಗುವ ನಿರ್ಧಾರ ತೆಗೆದುಕೊಳ್ತಾರೆ ಅಂತ ಯಾರು ಊಹಿಸಿರಲಿಲ್ಲ. ಅಕ್ಟೋಬರ್ 2, 2021ರಲ್ಲಿ ಇಬ್ಬರೂ ವಿಚ್ಛೇದನ ಪಡೆಯುತ್ತಿದ್ದೀವಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದರು. ಸಮಂತಾ ಮತ್ತು ನಾಗಚೈತನ್ಯ ಅವರ ಈ ನಿರ್ಧಾರ ಸಂಚಲನ ಸೃಷ್ಟಿಮಾಡಿತ್ತು. ವಿಚ್ಛೇದನ ವಿಚಾರ ಬಹಿರಂಗ ಪಡಿಸಿದ ಸ್ಟಾರ್ ಜೋಡಿ ಯಾವುದೇ ಪ್ರತಿಕ್ರಿಯೆಯೂ ನೀಡಿರಲಿಲ್ಲ. ಆದರೀಗ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾ ಪ್ರಚಾರ ವೇಳೆ ನಾಗಚೈತನ್ಯ ಸಮಂತಾ ಬಗ್ಗೆ ಮತ್ತು ವಿಚ್ಛೇದನ ಬಗ್ಗೆ ಮಾತನಾಡಿದರು. ಸಮಂತಾ ಕೂಡ ಹಿಂದಿಯ ಕಾಫಿ ವಿತ್ ಕರಣ್ ಸೀಸನ್7ನಲ್ಲಿ ಈ ಬಗ್ಗೆ ಮಾತನಾಡಿದ್ದರು. 'ವಿಚ್ಛೇದನದ ಬಳಿಕ ತುಂಬಾ ಕಷ್ಟವಾಗಿತ್ತು. ಆದರೀಗ ಆರಾಮಾಗಿ ಇದ್ದೀನಿ, ಮೊದಲಿಗಿಂತ ಉತ್ತಮವಾಗಿದ್ದೀನಿ. ಮತ್ತಷ್ಟು ಬಲಿಷ್ಟ ಆಗಿದ್ದೀನಿ' ಎಂದು ಹೇಳಿದ್ದರು.
ಇದೀಗ ನಾಗಚೈತನ್ಯ ಮತ್ತೆ ಸಮಂತಾ ಬಗ್ಗೆ ಮಾತನಾಡಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಾಗ್ ಟ್ಯಾಟೂ ಮತ್ತು ಮಾಜಿ ಪತ್ನಿ ಬಗ್ಗೆ ಮಾತನಾಡಿದ್ದಾರೆ. ನಾಗಚೈತನ್ಯ ಸದ್ಯ ಹಿಂದಿಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಆಗಸ್ಟ್ 11ಕ್ಕೆ ರಿಲೀಸ್ ಆಗುತ್ತಿದೆ. ಸಿನಿಮಾ ರಿಲೀಸ್ ಗೆ ಇನ್ನೇನು ದಿನಗಣನೆ ಪ್ರಾರಂಭವಾಗಿದೆ. ಆಮೀರ್ ಖಾನ್ ಮತ್ತು ನಾಗಚೈತನ್ಯ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಇತ್ತೀಚಿಗಷ್ಟೆ ನಾಗಚೈತನ್ಯ ಆಂಗ್ಲ ವೆಬ್ ಸೈಟ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಸಮಂತಾ ಬಗ್ಗೆ ಮಾತನಾಡಿದ್ದಾರೆ.
ಮಾಜಿ ಪತ್ನಿ ಸಮಂತಾ ಜೊತೆ ಮತ್ತೆ ಸಿನಿಮಾ ಮಾಡ್ತೀರಾ? ನಾಗಚೈತನ್ಯ ಉತ್ತರ ಹೀಗಿತ್ತು
ಟ್ಯಾಟೂ ತೆಗಿಯಲ್ಲ ಎಂದ ಚೈ
ನಾಗಚೈತನ್ಯ ಇತ್ತೀತಚಿಗೆ ನೀಡಿದ ಸಂದರ್ಶನದಲ್ಲಿ ರ್ಯಾಪಿಡ್ ಫೈರ್ ನಲ್ಲಿ, ಟ್ಯಾಟೂ ಬಗ್ಗೆ ಮಾತನಾಡಿದ್ದಾರೆ. ಸಮಂತಾ ಮತ್ತು ನಾಗಚೈತನ್ಯ ಒಂದೇ ರೀತಿ ಟ್ಯಾಟೂ ಹಾಕಿದ್ದಾರೆ. ಅಂದಹಾಗೆ ನಾಗಚೈತನ್ಯ ಕೈಯಲ್ಲಿರುವ ಟ್ಯಾಟೂ ಏನು ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಈ ಬಗ್ಗೆ ನಾಗ್ ಬಹಿರಂಗ ಪಡಿಸಿದ್ದಾರೆ. ಇದು ಮದುವೆಯಾದ ದಿನಾಂಕದ ಬಗ್ಗೆ ಇರುವ ಟ್ಯಾಟೂ ಎಂದು ಹೇಳಿದ್ದಾರೆ. ಅಲ್ಲದೇ ಈ ಟ್ಯಾಟೂ ಸದ್ಯಕ್ಕೆ ತೆಗೆಸುವ ಪ್ಲಾನ್ ಇಲ್ಲ ಎಂದಿದ್ದಾರೆ. ಅಲ್ಲದೇ ಅಭಿಮಾನಿಗಳಿಗೆ ಚೈ ಟ್ಯಾಟೂ ಹಾಕಿಸಿಕೊಳ್ಳದಂತೆ ಮನವಿ ಮಾಡಿದ್ದಾರೆ.
ರೂಮರ್ ಗರ್ಲ್‌ಫ್ರೆಂಡ್ ಶೋಭಿತಾ ಬಗ್ಗೆ ಕೇಳಿದ್ದಕ್ಕೆ ಹೀಗ್ ಹೇಳೋದಾ ನಾಗಚೈತನ್ಯ
ಸಮಂತಾ ಸಿಕ್ಕರೆ ಏನು ಮಾಡುತ್ತಾರೆ ನಾಗಚೈತನ್ಯ
ಸಂದರ್ಶನದಲ್ಲಿ ನಾಗಚೈತನ್ಯ ಅವರಿಗೆ ನಿರೂಪಕ ಒಂದು ವೇಳೆ ಸಮಂತಾ ಸಿಕ್ಕರೆ ಏನು ಮಾಡುತ್ತೀರಿ ಎಂದು ಹಕೇಳಿದರು. ಇದಕ್ಕೆ ನಾಗ್, ಹಾಯ್ ಹೇಳು ಒಂದು ಹಗ್ ಮಾಡುತ್ತೇನೆ ಎಂದು ಹೇಳಿದರು.
ನಾಗಚೈತನ್ಯ ಸದ್ಯ ಬಾಲಿವುಡ್ ನ ಮೊದಲ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಮೂಲಕ ನಾಗಚೈತನ್ಯ ಅವರಿಗೆ ಬಾಲಿವುಡ್ ನಲ್ಲಿ ದೊಡ್ಡ ಅವಕಾಶ ಓಪನ್ ಆಗುವ ಸಾಧ್ಯತೆ ಇದೆ. ಇತ್ತೀಚಿಗಷ್ಟೆ ಸಂಜಯ್ ಲೀಲಾ ಬನ್ಸಾಲಿ ಆಫೀಸ್ ನಲ್ಲಿ ಕಾಣಿಸಿಕೊಂಡಿದ್ದರು. ಹಾಗಾಗಿ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಜೊತೆ ಸಿನಿಮಾ ಮಾಡುವ ಸಾಧ್ಯತೆಯೂ ಇದೆ. ಚೈ ಮುಂದಿನ ಸಿನಿಮಾಗಳ ಬಗ್ಗೆ ಕಾದುನೋಡಬೇಕು.