ಕಳೆದ ಒಂದು ವಾರದಿಂದ ಟ್ಟಿಟರ್‌ನಲ್ಲಿ ಚರ್ಚೆ ಹುಟ್ಟು ಹಾಕಿದ ವಿಚಾರಕ್ಕೆ ಈಗ ಶ್ರೀಲಂಕಾ ಪೊಲೀಸರು ಅಂತ್ಯ ಹಾಡಿದ್ದಾರೆ. ವಿಜಯ್ ಸೇತುಪತಿ ಸುಮ್ಮನಾದರೂ ಅವರ ಅಭಿಮಾನಿಗಳು ಮಾತ್ರ ಸುಮ್ಮನಾಗುತ್ತಿಲ್ಲ. ಸೇತುಪತಿ ಮಗಳಿಗೆ ರೇಪ್ ಬೆದರಿಕೆ ಹಾಕಿದ ಪಾರಿಯ ಮುಖ ತೋರಿಸಿ, ಪಾಠ ಕಲಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ನಟ ವಿಜಯ್ ಅಪ್ರಾಪ್ತ ಮಗಳ ಮೇಲೆ ರೇಪ್ ಬೆದರಿಕೆ 

ವಿಡಿಯೋ ಮೂಲಕ ಕ್ಷಮೆ:
IBC ತಮಿಳು ಚಾನಲ್ ಮೂಲಕ ಶ್ರೀಲಂಕಾ ವ್ಯಕ್ತಿ ವಿಜಯ್ ಸೇತುಪತಿಗೆ ಕ್ಷಮೆ ಕೇಳಿದ್ದಾರೆ. 'ಲಾಕ್‌ಡೌನ್‌ನಲ್ಲಿ ಕೆಲಸ ಕಳೆದುಕೊಂಡ ಕಾರಣ ತುಂಬಾನೇ ತಾಳ್ಮೆ ಕಳೆದುಕೊಂಡಿದ್ದೆ. ಇದೇ ಸಮಯದಲ್ಲಿ ವಿಜಯ್ ಅವರು ಶ್ರೀಲಂಕಾ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಬಗ್ಗೆ ಬಯೋಪಿಕ್ ಮಾಡುತ್ತಿದ್ದಾರೆ ಅಂತ ಕೇಳಿ ಇನ್ನೂ ಸಿಟ್ಟು ಹೆಚ್ಚಾಯ್ತು. ಅದಕ್ಕೆ ನಾನು ಸೇತುಪತಿ ಮಗಳ ಮೇಲೆ ಅತ್ಯಾಚಾರ ಮಾಡುವ ಬೆದರಿಕೆ ಹಾಕಿದೆ,' ಎಂದು ಲಂಕಾ ವ್ಯಕ್ತಿ ಮಾತನಾಡಿದ್ದಾನೆ.

'ನಾನು ನನ್ನ ಜೀವನದಲ್ಲಿ ಎಂದೂ ಈ ರೀತಿ ಮಾತನಾಡಿಲ್ಲ. ನಾನು ಎಂದೂ ಈ ತಪ್ಪನ್ನು ಮುಂದುವರಿಸುವುದಿ,ಲ್ಲ' ಎಂದು ಹೇಳಿದ್ದಾನೆ.  ವಿಡಿಯೋದಲ್ಲಿ ಮುಖ ಬ್ಲರ್ ಅಗಿರುವ ಕಾರಣ ಅಭಿಮಾನಿಗಳು ಮತ್ತಷ್ಟು ಸಿಟ್ಟಾಗಿದ್ದಾರೆ. ತಪ್ಪು ಮಾಡಿದ್ದಾನೆ. ಅವನಿಗೆ ಕಾನೂನು ರೀತಿ ಶಿಕ್ಷೆ ಕೊಡದಿದ್ದರೇನು? ನಾವು ಕೊಡುತ್ತೇವೆ, ಅವನ ಮುಖ ತೋರಿಸಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿ; ನಟ ವಿಜಯ್ ವಿರುದ್ಧ ಆಕ್ರೋಶ! 

ಶ್ರೀಲಂಕಾ ವ್ಯಕ್ತಿಯನ್ನು ಪೊಲೀಸರು ವಿಚಾರಣೆಗೆ ತೆಗೆದುಕೊಂಡ ನಂತರ ತಿಳಿಯಿತು ಈತ ವಿಜಯ್ ಮಗಳಿಗೆ ಮಾತ್ರವಲ್ಲದೇ ಅನೇಕ  ಹೆಣ್ಣು ಮಕ್ಕಳಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದಾನೆ ಎಂದು.  ಇವನ ಟ್ಟಿಟರ್ ಖಾತೆ ಬ್ಲಾಕ್ ಮಾಡಿ ಪೊಲೀಸರು ಆತನನ್ನು ಕಸ್ಟಡಿಯಲ್ಲಿ ಇರಿಸಿಕೊಂಡಿದ್ದಾರೆ.

'ನಾನು ತಮಿಳು ನಾಡಿದ ರಾಜ ವಿಜಯ್ ಅಣ್ಣ, ಅವರ ಪತ್ನಿ ಹಾಗೂ ಪುತ್ರಿ ಬಗ್ಗೆ ಮಾತನಾಡಿರುವುದಕ್ಕೆ ಕ್ಷಮೆ ಕೇಳುತ್ತೆನೆ. ನಿಮ್ಮ ಪತ್ನಿ ಹಾಗೂ ನಿಮ್ಮ ಪುತ್ರ ನನಗೆ ಅಕ್ಕ-ತಂಗಿಯರು ಇದ್ದ ಹಾಗೆ,' ಎಂದಿದ್ದಾನೆ. ವಿಡಿಯೋದಲ್ಲಿ ಆರೋಪಿ ಮಾತ್ರವಲ್ಲದೇ ಆತನ ತಾಯಿಯೂ ಬಂದು ಕ್ಷಮೆ ಕೇಳಿದ್ದಾರೆ.