ಬ್ಯಾಗ್ರೌಂಡ್ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಟ ವಿಜಯ್ ಸೇತುಪತಿ ಈಗ  ದಕ್ಷಿಣ ಚಿತ್ರರಂಗದ ಬೇಡಿಕೆಯ ನಾಯಕನಟ ಹಾಗೂ ವಿಲನ್‌ ಆಗಿ ಗುರುತಿಸಿಕೊಂಡಿದ್ದಾರೆ. 16ಕ್ಕೂ ಹೆಚ್ಚು ಬೆಸ್ಟ್‌ ನಟ ಹಾಗೂ ವಿಲನ್ ಪ್ರಶಸ್ತಿ ಪಡೆದಿರುವ ವಿಜಯ್‌ ಹೆಣ್ಣು ಮಕ್ಕಳ ಫೇವರೆಟ್ ಹೀರೋ. ಆದರೀಗ  ಹಿಂದೂ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ ಆರೋಪ ಕೇಳಿ ಬಂದಿದೆ. ಮೊದಲ ಬಾರಿಗೆ ಇಂಥದ್ದೊಂದು ಆರೋಪದಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ . 

ಹಿಂದು ದೇವರ ಬಗ್ಗೆ ಹೇಳಿಕೆ:

ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿಜಯ್ ಸೇತುಪತಿ ಒಂದು ಪ್ರಸಂಗವನ್ನು ವಿವರಿಸುವ ಮೂಲಕ ಹಿಂದು ಧಾರ್ಮಿಕ ಆಚರಣೆ ಬಗ್ಗೆ ಮಾತನಾಡಿದ್ದಾರೆ. 

'ಚಿಕ್ಕ ಹುಡುಗಿ ತಾತನ ಬಳಿ ಒಂದು ಪ್ರಶ್ನೆ ಕೇಳುತ್ತಿದ್ದಳು. ಯಾಕೆ ತಾತ ದೇವರಿಗೆ ಅಲಂಕಾರ ಮಾಡುವುದನ್ನು ತೋರಿಸುವುದಿಲ್ಲ ಆದರೆ ದೇವರಿಗೆ ಸ್ನಾನ ಮಾಡಿಸುವುದನ್ನು ಮಾತ್ರ ತೋರಿಸುತ್ತಾರೆ ಎಂದು. ಈ ಪ್ರಶ್ನೆಗೆ ನನಗೂ ಉತ್ತರ ತಿಳಿಯಲಿಲ್ಲ' ಎಂದು ಕಾರ್ಯಕ್ರಮದಲ್ಲಿ ವಿಜಯ್ ಮಾತನಾಡಿದ್ದಾರೆ.

ವಿಜಯ್ ದಳಪತಿ 'ಮಾಸ್ಟರ್‌' ಹಾಡಿನಲ್ಲಿ ವಿಜಯ್‌ ಸೇತುಪತಿ; ವಿಡಿಯೋ ವೈರಲ್‌!

ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಅಗುತ್ತಿದ್ದಂತೆ ವಿಜಯ್ ವಿರುದ್ಧ ಅನೇಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 'ಇವರು ವೃತ್ತಿ ಜೀವನದಲ್ಲಿ ಪ್ರಚಾರ ಬೇಕೆಂದು ಹಿಂದು ಧರ್ಮವನ್ನು ಬಳಸಿಕೊಳ್ಳುವುದು ಎಷ್ಟು ಸರಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ವಿಜಯ್ ನೀಡಿರುವ ಹೇಳಿಕೆ ತುಂಬಾನೇ ವೈರಲ್ ಆಗುತ್ತಿದ್ದಂತೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಸಭಾ ಪೊಲೀಸ್‌ ಕಮಿಷನರ್‌ ಅವರಲ್ಲಿ ಮನವಿ ಮಾಡಿಕೊಂಡಿದೆ.