ಪಿಕೆಗಾಗಿ ಆಮೀರ್ ಸಂಪೂರ್ಣ ಬೆತ್ತಲಾಗಿದ್ದು ಯಾಕೆ? ಇಂಟರೆಸ್ಟಿಂಗ್ ವಿಷ್ಯ ಬಹಿರಂಗಗೊಳಿಸಿದ ನಟ!
ಪಿಕೆ ಚಿತ್ರಕ್ಕಾಗಿ ಸಂಪೂರ್ಣ ಬೆತ್ತಲಾಗಿದ್ದು ಏಕೆ ಎಂಬ ಇಂಟರೆಸ್ಟಿಂಗ್ ವಿಷಯವನ್ನು ನಟ ಆಮೀರ್ ಖಾನ್ ಬಹಿರಂಗಗೊಳಿಸಿದ್ದಾರೆ.
ಹತ್ತು ವರ್ಷಗಳ ಹಿಂದೆ ಅಂದರೆ 2014ರಲ್ಲಿ ಬಿಡುಗಡೆಯಾಗಿದ್ದ ನಟ ಆಮೀರ್ ಖಾನ್ ಅವರ ಪಿಕೆ ಚಿತ್ರ ಸಕತ್ ಸದ್ದು ಮಾಡಲು ಕಾರಣ ಈ ಚಿತ್ರದಲ್ಲಿ ನಟ ಆಮೀರ್ ಖಾನ್ ಸಂಪೂರ್ಣ ಬೆತ್ತಲಾಗಿದ್ದು! 30 ಸೆಕೆಂಡುಗಳ ಕಾಲ ರೇಡಿಯೋ ಒಂದನ್ನು ಖಾಸಗಿ ಅಂಗಕ್ಕೆ ಅಡ್ಡಲಾಗಿ ಮುಚ್ಚಿಕೊಂಡಿದ್ದ ನಟನ ಈ ಸೀನ್ ಸಾಕಷ್ಟು ಕೋಲಾಹಲವನ್ನೂ ಸೃಷ್ಟಿಸಿತ್ತು, ಮಾತ್ರವಲ್ಲದೇ ಈ ಚಿತ್ರ ಬ್ಲಾಕ್ಬಸ್ಟರ್ ಕೂಡ ಆಗಿತ್ತು. ಈ ಕುರಿತು ನಟ ಆಮೀರ್ ಖಾನ್ ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಕಪಿಲ್ ಶರ್ಮಾ ಅವರ ದಿ ಗ್ರೇಟ್ ಕಪಿಲ್ ಶರ್ಮಾ ಷೋದಲ್ಲಿ ಈ ವಿಷಯದ ಕುರಿತು ನಟ ಮಾತನಾಡಿದ್ದಾರೆ. ಚಿತ್ರಕ್ಕೆ ತಕ್ಕಂತೆ ಅಂದು ಬೆತ್ತಲಾಗಿದ್ದು ನಿಜ. ಚೂರು ಬಟ್ಟೆ ಇದ್ದಿರಬಹುದು ಎಂದು ಜನ ಊಹಿಸುತ್ತಾರೆ. ಆದರೆ ಸಂಪೂರ್ಣ ಬೆತ್ತಲಾಗಿದ್ದೆ. ಅದು ಸುಮಾರು ಮೂವತ್ತು ಸೆಕೆಂಡುಗಳ ದೃಶ್ಯವಾಗಿತ್ತು ಎಂದಿದ್ದಾರೆ ನಟ. ಪಿಕೆ ಸಿನಿಮಾದಲ್ಲಿ ಖಾಸಗಿ ಅಂಗಾಂಗಕ್ಕೆ ರೇಡಿಯೋ ಮುಚ್ಚಿಕೊಂಡು ಓಡುವ ದೃಶ್ಯವೊಂದಿದೆ. ಈ ದೃಶ್ಯದಲ್ಲಿ ತಾವು ಸಂಪೂರ್ಣ ಬೆತ್ತಲೆಯಾಗಿಯೇ ನಟಿಸಿದ್ದೆ. ಅದೊಂದು ರೀತಿಯಲ್ಲಿ ಮುಜಗರ ಕೂಡ ತಂದಿತ್ತು. ಮಾಡಲೇಬೇಕಾದ ಅನಿವಾರ್ಯ ಕೂಡ ಎದುರಾಗಿತ್ತು ಎಂದಿದ್ದಾರೆ ಅವರು.
ಅಷ್ಟಕ್ಕೂ ಷಾರ್ಟ್ಸ್ ಏನಾದರೂ ಧರಿಸಬಹುದಿತ್ತಲ್ಲವೆ ಎಂದು ಜನರು ಪ್ರಶ್ನಿಸಬಹುದು. ಆದರೆ ಅದನ್ನೂ ಧರಿಸಿದ್ದೆ. ಏಕೆಂದರೆ ಸಂಪೂರ್ಣ ಬೆತ್ತಲಾಗಲು ಮುಜುಗರ ಎನಿಸಿತ್ತು. ಅದಕ್ಕಾಗಿ ನಿರ್ದೇಶಕ ರಾಜ್ ಕುಮಾರ್ ಹಿರಾನಿ, ಶಾರ್ಟ್ಸ್ ಧರಿಸಲು ಕೊಟ್ಟಿದ್ದರು. ಆದರೆ ಅದನ್ನು ಹಾಕಿಕೊಂಡು ಓಡಲು ಸಾಧ್ಯವಾಗಲೇ ಇಲ್ಲ. ಪದೇ ಪದೇ ಬಿಚ್ಚಿ ಬಿದ್ದೋಗುತ್ತಿತ್ತು. ಅನೇಕ ಬಾರಿ ರೀ ಶೂಟ್ ಮಾಡಬೇಕಾಯಿತು. ಅದಕ್ಕಾಗಿ ಆದದ್ದು ಆಗಲಿ ಎಂದು ಶಾರ್ಟ್ಸ್ ಕಿತ್ತಾಕಿ, ನಿಜವಾಗಿಯೂ ಬೆತ್ತಲಾಗಿ ಬಿಟ್ಟೆ ಎಂದಿದ್ದಾರೆ. ಇದೇ ಕಾರಣಕ್ಕೆ ನಿಮ್ಮನ್ನು ಮಿಸ್ಟರ್ ಫರ್ಫೆಕ್ಷನಿಸ್ಟ್ ಎನ್ನುತ್ತಾರೆ ಎಂದು ಕಪಿಲ್ ಶರ್ಮಾ ತಮಾಷೆ ಮಾಡಿದ್ದಾರೆ.
ಜಿಮ್ಮೂ ಇಲ್ಲ, ಡಯೆಟೂ ಇಲ್ಲ, ಕ್ರೀಂ-ಶ್ಯಾಂಪೂ ಗೊತ್ತೇ ಇರ್ಲಿಲ್ಲ... ಆದ್ರೂ 59ನೇ ವಯಸ್ಸಲ್ಲೂ ಸ್ಮಾರ್ಟ್-ಫಿಟ್ ಹೇಗೆ?
ಹಳ್ಳಿಯೊಂದರಲ್ಲಿ ಚಿತ್ರೀಕರಣ ನಡೆದಿದ್ದರಿಂದ ಜನರೂ ಇರಲಿಲ್ಲ. ಶೂಟಿಂಗ್ ಸ್ಪಾಟ್ ನಲ್ಲೂ ಕಡಿಮೆ ಸದಸ್ಯರು ಇದ್ದರು. ಆದರೂ, ಆತಂಕದಲ್ಲೇ ಆ ದೃಶ್ಯವನ್ನು ಮುಗಿಸಿದೆ ಎಂದು ಅಂದು ನಡೆದ ಘಟನೆಯನ್ನು ಆಮೀರ್ ಹೇಳಿದ್ದಾರೆ. ಆದರೆ ಈ ಚಿತ್ರದ ರಿಲೀಸ್ಗೂ ಮುನ್ನ ನಗ್ನ ದೃಶ್ಯದ ಪೋಸ್ಟರ್ ವೈರಲ್ ಆಗಿತ್ತು. ಇದು ಅಶ್ಲೀಲತೆ ಎನ್ನುವ ಕಾರಣಕ್ಕೆ ರಾಜ್ಕುಮಾರ್ ಪಾಂಡೆ ಎನ್ನುವವರು ಭೋಪಾಲ್ ಕೋರ್ಟ್ಗೆ ಇದರ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಆದರೆ ಇದನ್ನು ಕೋರ್ಟ್ ಮಾನ್ಯ ಮಾಡಿರಲಿಲ್ಲ.
ಅಂದಹಾಗೆ ಪಿಕೆ ವಿಶೇಷತೆ ಏನೆಂದರೆ, ಇದನ್ನು 1.22 ಶತಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ವಿಶ್ವಾದ್ಯಂತ ₹ 7 ಶತಕೋಟಿ ಮತ್ತು US $ 100 ಮಿಲಿಯನ್ ಗಳಿಸಿದ ಮೊದಲ ಭಾರತೀಯ ಚಲನಚಿತ್ರ ಎಂಬ ಹೆಗ್ಗಳಿಕೆ ಇದರದ್ದು. ಬಿಡುಗಡೆಯ ಸಮಯದಲ್ಲಿ, ಇದು ಸಾರ್ವಕಾಲಿಕ ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಚಲನಚಿತ್ರವಾಗಿ ಹೊರಹೊಮ್ಮಿದೆ. ಚಿತ್ರದ ಅಂತಿಮ ವಿಶ್ವಾದ್ಯಂತ ಗಳಿಕೆಯು ₹769.89 ಕೋಟಿ (US$118.92 ಮಿಲಿಯನ್) ಆಗಿತ್ತು. ಈ ಚಿತ್ರದಲ್ಲಿ ಆಮೀರ್ ಖಾನ್ಗೆ ಅನುಷ್ಕಾ ಶರ್ಮಾ ನಾಯಕಿಯಾಗಿದ್ದರು. ದಿವಂಗತ ಸುಶಾಂತ್ ಸಿಂಗ್ ರಜಪೂತ್, ಸಂಜಯ್ ದತ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದರಲ್ಲಿದೆ.
ಆಮೀರ್ ಖಾನ್@ 59: ಆರು ರೂ. ಶಾಲಾ ಫೀಸ್ ಕಟ್ಟಲಾಗದೇ ಒದ್ದಾಡಿದ್ದ ನಟನ ರೋಚಕ ಸ್ಟೋರಿ ಇಲ್ಲಿದೆ..