ಪ್ರಧಾನಿ ಮೋದಿ ನೋಡಲು ಬಂದು ಜೀವವನ್ನೇ ಕಳೆದುಕೊಂಡ ಅಭಿಮಾನಿ; ವೇದಿಕೆ ಮುಂದೆಯೇ ಅನಾಥ ಶವವಾಗಿ ಪತ್ತೆ!
ಬಾಗಲಕೋಟೆ ಬಿಜೆಪಿ ಸಮಾವೇಶಕ್ಕೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ನೋಡಲು ಆಗಮಿಸಿದ್ದ ವಿಜಯಪುರದ ಅಭಿಮಾನಿ ವೇದಿಕೆ ಮುಂಭಾಗವೇ ಸಾವನ್ನಪ್ಪಿದ ಘಟನೆ ನಡೆದಿದೆ.
ಬಾಗಲಕೋಟೆ (ಮೇ 01): ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದ ಉತ್ತರ ಭಾಗದ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನೋಡಲು ಬಂದ ಬಾಗಲಕೋಟೆ ಅಭಿಮಾನಿಯೊಬ್ಬ ಬಿಸಿಲಿಗೆ ಬಳಲು ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಹೌದು, ಪ್ರಧಾನಿ ಮೋದಿ ಅವರನ್ನು ನೋಡಲು ಬಂದ ಅಭಿಮಾನಿಯೊಬ್ಬ ಜೀವ ಕಳೆದುಕೊಂಡಿರುವ ಘಟನೆ ನಡೆದಿದೆ. ಶ್ರೀಶೈಲ್ ಬಸಪ್ಪ ದೇಸಾಯಿ(39) ಮೃತ ಅಭಿಮಾನಿ ಆಗಿದ್ದಾರೆ. ಏಪ್ರಿಲ್ 29ರಂದು ಬಾಗಲಕೋಟೆಯಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ್ದರು. ಈ ಸಮಾವೇಶಕ್ಕೆ ಬಂದಿದ್ದ ಶ್ರೀಶೈಲ್ ಬಸಪ್ಪ ದೇಸಾಯಿ ಅವರು ಸಮಾವೇಶ ಮುಗಿದು ಎಲ್ಲರೂ ಮನೆಯತ್ತ ಹೊರಡುವಾಗ ಬಿಸಿಲ ಬೇಗೆಗೆ ನಿಶ್ಯಕ್ತಿಯಿಂದ ಬಳಲಿ ನಿತ್ರಾಣಗೊಂಡು ಸ್ಥಳಲ್ಲಿಯೇ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕದಲ್ಲಿ ಕುಡಿಯಲು ನೀರಿಲ್ಲದಿದ್ದರೂ ಕಾವೇರಿ ನೀರು ಕೇಳಿದ ತಮಿಳುನಾಡಿಗೆ ಭಾರಿ ಮುಖಭಂಗ
ಮೃತ ಶ್ರೈಶೈಲ್ ಬಸಪ್ಪ ದೇಸಾಯಿ ವಿಜಯಪುರ ಜಿಲ್ಲೆ ನಿಡಗುಂದಿ ತಾಲ್ಲೂಕಿನ ಹೆಬ್ಬಾಳ ಗ್ರಾಮದ ನಿವಾಸಿಯಾಗಿದ್ದರು. ಇವರು ಕಳೆದ ಕೆಲವು ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು ಎಂಬ ಮಾಹಿತಿಯಿದೆ. ಅನಾರೀಗ್ಯದ ನಡುವೆಯೂ ತಾನು ಮೋದಿಯನ್ನು ನೋಡಲೇಬೇಕೆಂದು ತಮ್ಮ ಊರಿನ ಬಿಜೆಪಿ ಕಾರ್ಯಕರ್ತರೊಂದಿಗೆ ಸಮಾವೇಶಕ್ಕೆ ಆಗಮಿಸಿದ್ದರು. ಕಿಕ್ಕಿರಿದು ನೆರೆದಿದ್ದ ಸಮಾವೇಶದಲ್ಲಿ ತಮ್ಮ ಊರಿನವರು ವೇದಿಕೆ ಮುಂಭಾಗಕ್ಕೆ ತೆರಳಿದ್ದಾರೆ. ಆದರೆ, ಕಾರ್ಯಕ್ರಮ ವೀಕ್ಷಣೆ ವೇಳೆ ಶ್ರೀಶೈಲ್ ಬಸಪ್ಪ ತನ್ನೂರಿನವರಿಂದ ತಪ್ಪಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ವಸೂಲಿ ಗ್ಯಾಂಗ್ ನಡೆಸ್ತಿರುವ ಕಾಂಗ್ರೆಸ್: ಪ್ರಧಾನಿ ಮೋದಿ
ಇನ್ನು ಕಾರ್ಯಕ್ರಮದಲ್ಲಿ ಕಾಣೆಯಾದ ಶ್ರೀಶೈಲನಿಗಾಗಿ ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ. ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಎಷ್ಟೇ ಹುಡುಕಿದ್ರೂ ಶ್ರೀಶೈಲ್ ಸಿಗದ ಕಾರಣ ಗ್ರಾಮಸ್ಥರು ಆತನನ್ನು ಬಿಟ್ಟು ಮರಳಿ ಊರಿಗೆ ಹೋಗಿದ್ದರು. ಆದರೆ, ಎಲ್ಲ ಕಾರ್ಯಕ್ರಮ ಮುಗಿದ ನಂತರ ಶಾಮಿಯಾನ ಎಲ್ಲವನ್ನೂ ತೆರವುಗೊಳಿಸುವಾಗ ಶ್ರೀಶೈಲ್ ಶವ ಪತ್ತೆಯಾಗಿದೆ. ಕೂಡಲೇ ಶಾಮಿಯಾನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ ಪೊಲೀಸರಿಗೆ ವಿಜಯಪುರ ಮೂಲದ ಶ್ರೀಶೈಲ್ ಎಂಬುದು ತಿಳಿದುಬಂದಿದೆ. ಈ ಘಟನೆ ಕುರಿತಂತೆ ಬಾಗಲಕೋಟೆಯ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.