Asianet Suvarna News Asianet Suvarna News

53ರ ವಯಸ್ಸಿನಲ್ಲೂ ಗಂಡಿಗಾಗಿ ಕಾಯುತ್ತಿರೋ 'ದುರಂತ ನಾಯಕಿ' ಮನಿಷಾ ಕೊಯಿರಾಲಾ!

ಜೀವನದಲ್ಲಿ ಹಲವಾರು ರೀತಿಯಲ್ಲಿ ಏಳು-ಬೀಳು ಕಂಡಿರುವ ನಟಿ ಮನಿಷಾ ಕೊಯಿರಾಲಾ ಇದೀಗ ತಮ್ಮ ಮದುವೆ, ಪುರುಷನ ಕುರಿತು ಹೇಳಿದ್ದೇನು? 
 

Manisha Koirala Finally Breaks Silence On Divorce And Finding Love Again Main Apna Time Waste suc
Author
First Published May 1, 2024, 4:17 PM IST

ಬಾಲಿವುಡ್ ನಟಿ ಮನಿಷಾ ಕೊಯಿರಾಲಾ ಅವರು ತಮ್ಮ ಐಕಾನಿಕ್ ಚಿತ್ರಗಳ ಮೂಲಕ ಪ್ರೇಕ್ಷಕರ ದೊಡ್ಡ ವರ್ಗವನ್ನು ಆಕರ್ಷಿಸಿದವರು, ಅವರ ಸೌಂದರ್ಯಕ್ಕೆ ಮಾರು ಹೋದವರು, ಈಕೆಯನ್ನು ಒಮ್ಮೆಯಾದರೂ ಭೇಟಿಯಾಗಬೇಕು ಎಂದುಕೊಂಡವರು, ಒಮ್ಮೆಯಾದರೂ ಈಕೆಯನ್ನು ಬದುಕಬೇಕು ಎಂದವರು, ನನ್ನ ಬಾಳಸಂಗಾತಿಯಾಗಿ ಈಕೆಯೇ ಬರಬಾರದೇ ಎಂದುಕೊಂಡವರಿಗೆ ಲೆಕ್ಕವೇ ಇಲ್ಲ. ಆದರೆ ಮನಿಷಾ ಕೊಯಿರಾಲಾ ಅವರ ಬದುಕು ದುರಂತಗಳ ಸರಮಾಲೆ. ಬಹುತೇಕ ಎಲ್ಲಾ ಚಿತ್ರ ತಾರೆಯರ ಬಾಳೂ ಇದೇ ರೀತಿ ಇರುತ್ತದೆ. ಆದರೆ ಬಣ್ಣದ ಲೋಕದ ಈ ಬಣ್ಣದ ಬದುಕು ಮೇಕಪ್​ ಕಳಚಿದ ಮೇಲೆ ಮರೆಯಾಗುತ್ತದೆ. ಒಂದಷ್ಟು ವರ್ಷ ತೆರೆ ಮೇಲೆ ಕಾಣಿಸಿಕೊಳ್ಳಲಿಲ್ಲ ಎಂದ ತಕ್ಷಣ, ಅವರನ್ನು ಹಾಡಿ ಹೊಗಳಿದವರೇ  ಕಾಲ ಕಸಕ್ಕಿಂತಲೂ ನೋಡಿರುವ ಎಷ್ಟೋ ಉದಾಹರಣೆಗಳಿವೆ.  

ಹಲವು ಚಿತ್ರ ತಾರೆಯರಂತೆಯೇ ಮನಿಷಾ ಅವರ ಬಾಳಲ್ಲೂ 12ಕ್ಕೂ ಅಧಿಕ ಮಂದಿ ಎಂಟ್ರಿ ಕೊಟ್ಟಿದ್ದಾರೆ. ಆದರೆ ಈಗ 53ನೇ ವಯಸ್ಸಿನಲ್ಲಿ ಎಲ್ಲರೂ ದೂರವಾಗಿ ಒಂಟಿಯಾಗಿ ಬಾಳುತ್ತಿದ್ದಾರೆ ನಟಿ. ಆದರೂ ಈ ವಯಸ್ಸಿನಲ್ಲಿಯೂ ಮದುವೆಯ ಆಸೆಯನ್ನು ಅವರ ಬಿಟ್ಟಿಲ್ಲ. ಕಾಲ ಕೂಡಿ ಬಂದರೆ ಉತ್ತಮ ಸಂಗಾತಿ ಸಿಕ್ಕೇ ಸಿಗುತ್ತಾನೆ ಎಂದು ಆಶಾಭಾವನೆ ಹೊಂದಿದ್ದಾರೆ ನಟಿ.  ಮನಿಷಾ ಕೊಯಿರಾಲಾ 33 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರೂ ಇವರ ಬಾಳಲ್ಲಿ ಬಿರುಗಾಳಿಗಳು ಹಲವಾರು ಎದ್ದಿವೆ. ಇವರು ನೇಪಾಳಿ ಉದ್ಯಮಿ ಸಾಮ್ರಾಟ್ ದಹಲ್ ಅವರನ್ನು 2010 ರಲ್ಲಿ ವಿವಾಹವಾದರು. ಆದರೆ ಕಾರಣಾಂತಗಳಿಂದ 2 ವರ್ಷಗಳಲ್ಲಿ ವಿಚ್ಛೇದನ ಪಡೆದರು.

ಪೆನ್​ಡ್ರೈವ್​ ಪ್ರಕರಣದ ನಡುವೆ ನಟಿ ರಶ್ಮಿ ಗೌತಮ್​ ಪೋಸ್ಟ್​ ವೈರಲ್​: ಸಂಚಲನ ಸೃಷ್ಟಿಸಿರೋ ಹೇಳಿಕೆ...  

ವೈಯಕ್ತಿಕ ಬದುಕಿನ ಕುರಿತು ಹೆಚ್ಚಿಗೆ ಹೇಳಲು ಬಯಸದ ನಟಿ, ಇದೇ ಮೊದಲ ಬಾರಿಗೆ ಅದರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಜೂಮ್‌ಗೆ ನೀಡಿದ ಸಂದರ್ಶನದಲ್ಲಿ,  “ಕೆಲವರು ಅದೃಷ್ಟವಂತರು. ಆದರೆ ಹಲವರಿಗೆ ಈ ಅದೃಷ್ಟ ಇರುವುದಿಲ್ಲ.  ನಾನು ನನ್ನ ಜೀವನದಲ್ಲಿ ಕಹಿ- ಸಿಹಿಗಳ ಅನುಭವಗಳ ದೊಡ್ಡ ಸಮ್ಮಿಲನವನ್ನು ಹೊಂದಿದ್ದೇನೆ. ಒಂದು ರೀತಿಯಲ್ಲಿ ಸಿಹಿಯೇ ನನಗೆ ಸಿಕ್ಕಿದೆ. ನಾನು ಅದೃಷ್ಟಶಾಲಿ. ಜೀವನದಲ್ಲಿ ಎಷ್ಟೇ ಕಹಿ ಬಂದರೂ, ನನ್ನ ಜೀವನದ ಬಗ್ಗೆ ನನ್ನ ದೃಷ್ಟಿಕೋನವು ಕಹಿಯಾಗಿಲ್ಲ ಎಂದಿದ್ದಾರೆ. ಈ ಡಿವೋರ್ಸ್​ ಬೆನ್ನಲ್ಲೇ ಕ್ಯಾನ್ಸರ್​ ಇವರಿಗೆ ಅಂಟಿಕೊಂಡಿತು. ನಂತರ ಅದನ್ನು ಜಯಿಸಿ ಬಂದರು ನಟಿ ಮನಿಷಾ. ಜೀವನದೊಂದಿಗೆ ಹೋರಾಡುವ ಗುಣ ಕ್ಯಾನ್ಸರ್​ ಕಲಿಸಿಕೊಟ್ಟಿದೆ ಎಂದು ಸಂದರ್ಶನದಲ್ಲಿ ಅವರು ಹೇಳಿದ್ದಾರೆ. 

ಇನ್ನು ಮದುವೆಯ ಕುರಿತು ಮಾತನಾಡಿರುವ ನಟಿ, ನಾನು ಯಾವಾಗಲೂ ಆಶಾವಾದಿ.  ನಾನು ಗಾಜಿನ ಖಾಲಿಯಾದ ಅರ್ಧ ಭಾಗ ನೋಡುವುದಿಲ್ಲ. ತುಂಬಿರುವ ಅರ್ಧಭಾಗ ನೋಡುತ್ತೇನೆ. ಜೀವನ ಹಲವಾರು ರೀತಿಯ ಪೆಟ್ಟು ಕೊಟ್ಟಿವೆ. ಅದರಿಂದ ಸಾಕಷ್ಟು ಕಲಿತಿದ್ದೇನೆ. ಇಂಥ ಆಘಾತಗಳಿಂದಲೇ ಅನುಭವಗಳ ಶ್ರೀಮಂತಿಕೆಯನ್ನು ಪಡೆದುಕೊಂಡಿದ್ದೇನೆ ಎಂದಿದ್ದಾರೆ ಮನಿಷಾ. ಜೀವನದಲ್ಲಿ ಹಲವಾರು ಬಾರಿ  ಅಸುರಕ್ಷಿತನಾಗಿದ್ದೇನೆ ಎನ್ನಿಸಿದ್ದು ಉಂಟು, ಖಿನ್ನತೆಗೂ ಜಾರಿದ್ದೇನೆ. ಆದರೆ ಪ್ರತಿ ಸಲವೂ ಎದ್ದು ಬಂದಿದ್ದೇನೆ. ನನ್ನನ್ನು ನಾನೇ ಸಮಾಧಾನ ಪಡಿಸಿಕೊಳ್ಳಲೇಬೇಕಾಗಿತ್ತು. ಅದನ್ನು ಜಯಿಸಿದ್ದೇನೆ ಎಂದಿದ್ದಾರೆ.  

ಪಿಕೆಗಾಗಿ ಆಮೀರ್​ ಸಂಪೂರ್ಣ ಬೆತ್ತಲಾಗಿದ್ದು ಯಾಕೆ? ಇಂಟರೆಸ್ಟಿಂಗ್​ ವಿಷ್ಯ ಬಹಿರಂಗಗೊಳಿಸಿದ ನಟ!

 ಮತ್ತೊಂದು ಮದುವೆಯ ಕುರಿತು ಮಾತನಾಡಿದ ದನಟಿ, ನನ್ನ ಜೀವನದಲ್ಲಿ ಪುರುಷ ವ್ಯಕ್ತಿ ಇರಬೇಕು ಎಂದು ಬರೆದಿದ್ದರೆ ಅದು ಆಗುತ್ತದೆ. ಆದರೆ  ಆದರ್ಶ ಪುರುಷನಿಗಾಗಿ ಕಾಯುತ್ತಾ  ಸಮಯವನ್ನು ವ್ಯರ್ಥ ಮಾಡಲು ನಾನು ಬಯಸುವುದಿಲ್ಲ. ಏಕೆಂದರೆ ಎಲ್ಲವೂ ವಿಧಿ ಲಿಖಿತ ಎನ್ನುವುದು ನನಗೆ ಗೊತ್ತಿದೆ. ಯಾವಾಗ ಯಾರು ನಮ್ಮ ಬಾಳಲ್ಲಿ ಬರಬೇಕೋ ಅವರು ಬರುತ್ತಾರೆ.  ಹಾಗೆಂದು ನಾನು ಪುರುಷ ಬರುವುದು ಬೇಡ ಎಂದು ಹೇಳುತ್ತೇನೆ ಎಂದರೆ ಅದು ಸುಳ್ಳಾಗುತ್ತದೆ.  ನನ್ನ ಜೀವನದಲ್ಲಿ ಪುರುಷ ಆಕೃತಿ ಇದ್ದಂತೆ ನನಗೆ ಖಂಡಿತವಾಗಿ ಅನಿಸುತ್ತದೆ. ನನ್ನ ಜೀವನದಲ್ಲಿ ಪಾಲುದಾರರಿದ್ದರೆ, ಬಹುಶಃ, ಅದನ್ನು ಹೊಂದಲು ಸಂತೋಷವಾಗುತ್ತದೆ ಎಂದಿದ್ದಾರೆ. 

Latest Videos
Follow Us:
Download App:
  • android
  • ios