ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳದೇ ಕೇವಲ ತಮ್ಮ ಅಭಿನಯದ ಮೂಲಕ ಸಿನಿ ಪ್ರೇಮಿಗಳ  ಮನಸ್ಸು ಕದ್ದಿರುವ ನಯನತಾರಾಳ ರಿಯಲ್‌ ಲೈಫ್‌ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಿ! 

'ಬಿಗಿಲ್'ನ ರಾಣಿ ನಯನತಾರಾ ನಟಿಯಾಗದಿದ್ದರೆ ಏನ್ ಮಾಡ್ತಿದ್ರು ಗೊತ್ತಾ?

ನಿರ್ದೇಶಕ ವಿಘ್ನೇಶ್‌  ಶಿವನ್ ಜೊತೆ ದಾಂಪತ್ಯ ಜೀವನಕ್ಕೆ ಸಜ್ಜಾಗುತ್ತಿರುವ ನಯನತಾರಾ ವಿದೇಶ ಪ್ರವಾಸದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.  ನಯನತಾರಾ ದಿನ ನಿತ್ಯದ ಸಹಾಯಕರಿಗೆ ಕೊಡುವ ವೇತನ ಅಷ್ಟಿಷ್ಟಲ್ಲ! ಸಾಮಾನ್ಯ ಕಂಪನಿಗಳಲ್ಲಿ ಕೆಲಸ ಮಾಡುವವರು ಒಂದು ತಿಂಗಳಿಗೆ ತೆಗೆದುಕೊಳ್ಳುವ ವೇತನವನ್ನು ನಯನತಾರಾ ಸಹಾಯಕರು ಒಂದು ದಿನಕ್ಕೆ ತೆಗೆದುಕೊಳ್ಳುತ್ತಾರೆ!  

ನಯನತಾರಾ ಎಂದು ಹೆಸರಿಟ್ಟವರು ಯಾರು? ಶುರುವಾಯ್ತು ನಿರ್ದೇಶಕರ ವಾರ್!

ಹೌದು! ನಯನತಾರಾಳ ಸಹಾಯಕರು ದಿನಕ್ಕೆ 10 ರಿಂದ 12 ಸಾವಿರ ರೂ. ಸಂಭಾವನೆ ಪಡೆಯುತ್ತಾರೆ. ಒಂದು ದಿನಕ್ಕೆ 7 ಜನರಿಗೆ ಸುಮಾರು 70-80 ಸಾವಿರ ಆಗಬಹುದು ಅಂದರೆ ಒಂದು ತಿಂಗಳಿಗೆ ಸುಮಾರು 3 ಲಕ್ಷಕ್ಕೂ ಹೆಚ್ಚು ಆದಾಯ ಪಡೆಯುತ್ತಾರೆ. ಈಕೆ ಬರೀ ವೇತನಕ್ಕೆ ಇಷ್ಟು ಖರ್ಚು ಮಾಡಿದರೆ ಮೇಕಪ್, ಬಟ್ಟೆಗೆ ಇನ್ನೆಷ್ಟು ಖರ್ಚು ಮಾಡಬಹುದು? ಒಟ್ಟಿನಲ್ಲಿ ನಯನತಾರಾ ಸೌತ್ ಇಂಡಿಯನ್‌ ಮೋಸ್ಟ್ ದುಬಾರಿ ನಟಿ ಅನ್ನೋದು ಇದಕ್ಕೆ!

ವಿಘ್ನೇಶ್ ಶಿವನ್‌ ಕೈ ಬಿಟ್ರಂತೆ ನಯನತಾರಾ; ಮದ್ವೆ ಎಲ್ಲಾ ಸುಳ್ಳಾ?

ಸಹಾಯಕರಿಗೆ ಇಷ್ಟು ಖರ್ಚು ಮಾಡುವ ನಯನತಾರಾ ಸಂಭಾವನೆ ಎಷ್ಟು ಎಂದು ಕೇಳಬಹುದು. ಕೆಲ ಮೂಲಗಳ ಪ್ರಕಾರ ನಯನ ಒಂದು ಚಿತ್ರಕ್ಕೆ 2-4 ಕೋಟಿ ಸಂಭಾವನೆ ಪಡೆಯುತ್ತಾರಂತೆ!

"