Asianet Suvarna News Asianet Suvarna News

ನಯನತಾರಾ ಎಂದು ಹೆಸರಿಟ್ಟವರು ಯಾರು? ಶುರುವಾಯ್ತು ನಿರ್ದೇಶಕರ ವಾರ್!

ಕಾಲಿವುಡ್‌ ಬ್ಯೂಟಿ ಕ್ವೀನ್‌ ನಯನತಾರಾ ಹೆಸರಿಟ್ಟವರು ನಾನು, ನಾನೆಂದು ನಿರ್ದೇಶಕರು ಪೈಪೋಟಿಗೆ ಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಿಗ್ ವಾರ್‌ ಕ್ರಿಯೇಟ್‌ ಆಗುತ್ತಿರುವ ಈ ಪೋಸ್ಟಿನ ಹಿಂದಿನ ರಹಸ್ಯ ಇಲ್ಲಿದೆ ನೋಡಿ...
 

Kollywood director war on social media for Nayantara
Author
Bangalore, First Published Jan 30, 2020, 12:22 PM IST
  • Facebook
  • Twitter
  • Whatsapp

ಕಾಲಿವುಡ್‌ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಹೆಸರು ಕೇಳಿದರೆ ಯಾರೀಕೆ? ಒಮ್ಮೆ ನೋಡಬೇಕು ಎಂದು ಅನಿಸುವುದು ಸಹಜ. ಅದರಲ್ಲೂ 'ರಾಜ ರಾಣಿ' ಚಿತ್ರದಲ್ಲಿ ಆಕೆಯ ಅಭಿನಯಕ್ಕೆ ಫಿದಾ ಆಗದವರೇ ಇಲ್ಲ.

2003ರಲ್ಲಿ 'ಮನಸಿನಕ್ಕರೆ' ಚಿತ್ರದ ಮೂಲಕ ಮಾಲಿವುಡ್‌ಗೆ ಕಾಲಿಟ್ಟ ಡಯಾನಾ ಮಾಡಿಯಮ್ಮ ಕುರಿಯನ್‌ ಎಂಬ ಬ್ಯೂಟಿ ಕ್ವೀನ್ ತಮ್ಮ ಚಿತ್ರಕ್ಕಾಗಿ 'ನಯನಾತಾರಾ' ಎಂದು ಹೆಸರು ಬದಲಾಯಿಸಿಕೊಂಡರು. ಅಂದಿನಿಂದಲೂ ಆಕೆಯ ಆನ್‌ ಸ್ಕ್ರೀನ್‌ ಹೆಸರು ನಯನಾತಾರಾ ಎಂದೇ ಬದಲಾಯಿತು. ಈ ವಿಚಾರದ ಬಗ್ಗೆ ನಿರ್ದೇಶಕರಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಇದೀಗ ಚರ್ಚೆ ಶುರುವಿಟ್ಟುಕೊಂಡಿದ್ದಾರೆ. 

'ಬಿಗಿಲ್'ನ ರಾಣಿ ನಯನತಾರಾ ನಟಿಯಾಗದಿದ್ದರೆ ಏನ್ ಮಾಡ್ತಿದ್ರು ಗೊತ್ತಾ?

ಹೌದು! ನಯನತಾರಾ ಎಂದು ಹೆಸರಿಟ್ಟಿದ್ದು ನಾನು ಎಂದು ಡಿಟ್ಟೋ ಜಾನ್‌ ಹೇಳಿದ್ರೆ, ಮತ್ತೊಂದೆಡೆ ಸತ್ಯನ್, ಡಯಾನಾಗೆ ಹೊಸ ಹಸರು ಆಯ್ಕೆ ಮಾಡಿದ್ದು ನಾನೆಂದು ಹೇಳುತ್ತಿದ್ದಾರೆ. ಈ ವಿವಾದದ ಬಗ್ಗೆ ನಯನತಾರಾ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸತ್ಯನ್‌ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

'ನಾನು, ನನ್ನ ಸ್ನೇಹಿತನಾದ ನಿರ್ದೇಶಕ ರಂಜನ್‌ ಪ್ರಮಾದ್‌ ಸೇರಿ ನಯನತಾರಾಗೆ ಈ ಹೆಸರೆಟ್ಟೆವು. ನನಗೆ ಜಾನ್‌ ಡಿಟ್ಟೋ ಯಾರೂ ಅಂತ ಗೊತ್ತಿಲ್ಲ. ಇಷ್ಟಕ್ಕೂ ಈ ವಿಚಾರವನ್ನು ಇಷ್ಟೆಲ್ಲಾ ಚರ್ಚಿಸಬೇಕಾದ ಅಗತ್ಯವೇ ಇಲ್ಲ. ಮನಸ್ಸಿನಕ್ಕರೆ ಶೂಟಿಂಗ್‌ ನಡೆಯುತ್ತಿರಬೇಕಾದರೆ ನಾನು, ನಿರ್ದೇಶಕರ ರಂಜನ್ ಸೇರಿ ನಯನತಾರಾಗೆ ಯಾವ ಹೆಸರಿಟ್ಟರೆ ಚೆನ್ನಾಗಿರುತ್ತದೆ ಎಂದು ಆಲೋಚಿಸಿದೆವು. ಆಗ ನಯನತಾರಾ ಎಂಬ ಹೆಸರು ಹೊಳೆಯಿತು. ಡಯಾನಾ ಅವರೇ ಈ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದು. ಮುಂದೆ ಅದೇ ಅವರ ಸ್ಕ್ರೀನ್‌ ನೇಮ್‌ ಆಯಿತು' ಎಂದು ಪೋಸ್ಟ್‌ ಮಾಡಿದ್ದಾರೆ. 

'ಸೀತೆ' ಆಗಲು ಮಾಂಸಾಹಾರ ತ್ಯಜಿಸಿದ ನಯನತಾರಾ!

ಆ ಮೂಲಕ ಒಬ್ಬ ನಟಿಗೆ ಹೆಸರು ಬದಲಾಯಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಕೋಲ್ಡ್ ವಾರ್‌ಗೆ ತೆರೆ ಬಿದ್ದಿದೆ ಎಂದುಕೊಳ್ಳಬಹುದು.

Follow Us:
Download App:
  • android
  • ios