ಗಡಾಂಗ್‌ ರುಕ್ಕಮ್ಮ ಹಾಡು  ಬಿಡುಗಡೆ ಬಿಡುಗಡೆಯಾದ ಸ್ವಲ್ಪ ಹೊತ್ತಿನಲ್ಲೇ ಮೂರು ಲಕ್ಷಕ್ಕೂ ಅಧಿಕ ಜನರಿಂದ ವೀಕ್ಷಣೆ ಸುನಿಧಿ ಚೌಹಾಣ್‌, ನಕಾಶ್ ಅಜೀಜ್ ಧ್ವನಿಯಲ್ಲಿ ಮೂಡಿಬಂದ ಹಾಡು

ನಟ ಸುದೀಪ್‌ ಅವರ ವಿಕ್ರಾಂತ್‌ ರೋಣ ಸಿನಿಮಾದ ಗಡಾಂಗ್‌ ರುಕ್ಕಮ್ಮ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಈ ಹಾಡನ್ನು ಬಾಲಿವುಡ್‌ ಬೆಡಗಿ ಜಾಕ್ವೆಲಿನ್‌ ಫರ್ನಾಡಿಸ್‌ ಹಾಗೂ ಸುದೀಪ್ ಈ ಹಾಡಿನಲ್ಲಿದ್ದು, ಸದ್ಯ ಲಿರೀಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಬಿಡುಗಡೆಯಾದ ಸ್ವಲ್ಪ ಹೊತ್ತಿನಲ್ಲೇ ಮೂರು ಲಕ್ಷಕ್ಕೂ ಅಧಿಕ ಜನ ಈ ಹಾಡನ್ನು ವೀಕ್ಷಿಸಿದ್ದಾರೆ. ಗಡಾಂಗ್ ರುಕ್ಕಮ್ಮ ಹಾಡನ್ನು ಮುಂಗಾರು ಮಳೆ ಖ್ಯಾತಿಯ ಹಾಗೂ ಸುನಿಧಿ ಚೌಹಾಣ್‌ ಎ.ಆರ್ ರೆಹಮಾನ್‌ ಜತೆ ಕೆಲಸ ಮಾಡಿರುವ ನಕಾಶ್ ಅಜೀಜ್ ಅವರು ಹಾಡಿದ್ದಾರೆ. 

ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತಾ ನಿರ್ದೇಶನ ಮಾಡಿದ್ದಾರೆ. ಅನುಪ್ ಭಂಡಾರಿ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ (Kichcha Sudeep) ಜೊತೆ ನಿರೂಪ್ ಭಂಡಾರಿ (Nirup Bhandari), ನೀತಾ ಅಶೋಕ್ (Neetha Ashok) ಹಾಗೂ ಜಾಕ್ವೆಲಿನ್ ಫರ್ನಾಡೀಂಸ್ (Jacqueline Fernandez) ತಾರಾಗಣದಲ್ಲಿದ್ದಾರೆ. 

ವಿಕ್ರಾಂತ್​ ರೋಣ ಮೂವಿ ಟೀಸರ್​​ಗೆ ವಿರೇಂದ್ರ ಸೆಹ್ವಾಗ್ ಕ್ಲೀನ್​​ಬೋಲ್ಡ್..!

ನಟ ಸುದೀಪ್‌ ಅವರ ‘ವಿಕ್ರಾಂತ್‌ ರೋಣ’ (Vikranth Rona) ಸಿನಿಮಾ ತೆರೆಗೆ ಬರುವುದಕ್ಕೆ ಹತ್ತಿರವಾಗುತ್ತಿರುವಂತೆ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಚಿತ್ರದ ವಿತರಣೆ ಹಕ್ಕು, ವಿದೇಶಗಳಲ್ಲಿ ಬಿಡುಗಡೆ ಮಾಡುವ ಪ್ಲಾನು, ಸಲ್ಮಾನ್‌ ಖಾನ್‌ (Salman Khan) ಜತೆಯಾಗಿರುವುದರ ಜೊತೆ ಪಿವಿಆರ್‌ ಸಂಸ್ಥಯೂ ಉತ್ತರ ಭಾರತದ ರಾಜ್ಯಗಳಲ್ಲಿ ಈ ಚಿತ್ರದ ವಿತರಣೆ ಹಕ್ಕು ಪಡೆದುಕೊಂಡಿದೆ. ಈ ಮೂಲಕ ಸಾಕಷ್ಟು ಸುದ್ದಿಯಾಗುತ್ತಿದೆ. 

'ಗಡಾಂಗ್‌ ರುಕ್ಕಮ್ಮ' ಹಾಡು ಈ ಚಿತ್ರದ ಮೊದಲ ಹಾಡಾಗಿದೆ. ಒಂದೊಂದು ದಿನ ಒಂದೊಂದು ಭಾಷೆ ಸೇರಿ ಐದು ಭಾಷೆಗಳಲ್ಲಿ ಹಾಡು ಬಿಡುಗಡೆ ಆಗುತ್ತಿದೆ. ಮೊದಲಿಗೆ ಇಂದು ಕನ್ನಡದಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ನಾಳೆ ಮೇ.24ರಂದು ಹಿಂದಿಯಲ್ಲಿ, (Hindi) ಮೇ.25ಕ್ಕೆ ತೆಲುಗಿನಲ್ಲಿ, ಮೇ.26ಕ್ಕೆ ತಮಿಳಿನಲ್ಲಿ ಹಾಗೂ ಮಲಯಾಳಂನಲ್ಲಿ (Maleyalam) ಮೇ.27ರಂದು ಹಾಡು ಬಿಡುಗಡೆ ಆಗುತ್ತಿದೆ. ಆ ಮೂಲಕ ವಾರ ಪೂರ್ತಿ 'ಗಡಾಂಗ್‌ ರುಕ್ಕಮ್ಮ' ಹಾಡಿನ ಹಬ್ಬ ಮಾಡಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ.

ಗೆಳೆಯನ ಬ್ಲಾಕ್ ಬಸ್ಟರ್ ಮೂವಿ ಬರ್ತಿದೆ ಸಿದ್ಧರಾಗಿ ಎಂದ ಸಿಡಿಲ ಮರಿ ಸೆಹ್ವಾಗ್..!

ಇದು ಸುದೀಪ್‌ ಹಾಗೂ ಬಾಲಿವುಡ್‌ ಬೆಡಗಿ ಜಾಕ್ವೆಲಿನ್‌ ಫರ್ನಾಡಿಸ್‌ ಕಾಂಬಿನೇಶನ್‌ನ ಹಾಡಾಗಿದೆ. ಈಗಾಗಲೇ ಹಾಡಿನ ಬಿಡುಗಡೆ ಸುದ್ದಿಯನ್ನು ನಟ ಸುದೀಪ್‌ (Actor Sudeep) ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅನೂಪ್‌ ಭಂಡಾರಿ ನಿರ್ದೇಶನದ ಈ ಚಿತ್ರವನ್ನು ಶಾಲಿನಿ ಆರ್ಟ್ಸ್‌ (Shalini Arts) ಮೂಲಕ ಜಾಕ್‌ ಮಂಜು (Jack Manju) ಅವರು ನಿರ್ಮಿಸಿದ್ದಾರೆ. ಅಲಾಂಕಾರ್‌ ಪಾಂಡ್ಯನ್‌ (Alankar Pandyan) ಅವರು ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಜುಲೈ 28ರಂದು ಪ್ರಪಂಚದಾದ್ಯಂತ ಈ ಸಿನಿಮಾ ತೆರೆಗೆ ಬರುತ್ತಿದೆ.

ಅಭಿನಯ ಚಕ್ರವರ್ತಿ ಅಂತ ಕರೆಸಿಕೊಳ್ಳೋ ಸುದೀಪ್‌ ಅವರನ್ನ ಟೀಂ ಇಂಡಿಯಾ ದಿಗ್ಗಜ, ಸಿಡಿಲ ಮರಿ ಖ್ಯಾತಿಯ ವೀರೇಂದ್ರ ಸೆಹ್ವಾಗ್ ಅವರು ಈ ಹಿಂದೆ ಈ ಸಿನಿಮಾ ವಿಚಾರವಾಗಿ ಹಾಡಿ ಹೊಗಳಿದ್ದರು. 3 ವರ್ಷಗಳ ಹಿಂದೆ ಸ್ಯಾಂಡಲ್​ವುಡ್​​​​​​ ಬಾದ್‌ಷಾ ಮತ್ತು ಕ್ರಿಕೆಟ್​ ಬಾದ್‌ಷಾ ನಡುವೆ ಫ್ರೆಂಡ್ಸಿಪ್‌​ ಚಿಗುರೊಡೆದಿತ್ತು. ಸದ್ಯ ಇಬ್ಬರ ಸ್ನೇಹ ಎಷ್ಟೊಂದು ಸ್ಟ್ರಾಂಗ್ ಅನ್ನೋದು ಗೊತ್ತಾಗಿದೆ. ಕಿಚ್ಚ ನಟನೆಯ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಟೀಸರ್​ ರಿಲೀಸ್ ವೇಳೆ ಟೀಸರ್‌ ನೋಡಿದ ಸೆಹ್ವಾಗ್ ಹಾಡಿ ಹೊಗಳಿದ್ದರು.