Asianet Suvarna News Asianet Suvarna News

ವಿಕ್ರಾಂತ್​ ರೋಣ ಮೂವಿ ಟೀಸರ್​​ಗೆ ವಿರೇಂದ್ರ ಸೆಹ್ವಾಗ್ ಕ್ಲೀನ್​​ಬೋಲ್ಡ್..!

* ತೆರೆಕಾಣಲು ಸಜ್ಜಾಗಿದೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನೆಮಾ

* ವಿಕ್ರಾಂತ್ ರೋಣ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದ ವಿರೇಂದ್ರ ಸೆಹ್ವಾಗ್

* ಅಷ್ಟಕ್ಕೂ ವೀರೂ-ಕಿಚ್ಚ ದೋಸ್ತಿಗಳಾಗಿದ್ದು ಹೇಗೆ..?

Former Cricketer Virender Sehwag Released Kichcha Sudeep starer Vikrant Rona teaser kvn
Author
Bengaluru, First Published Apr 5, 2022, 2:57 PM IST

ಬೆಂಗಳೂರು(ಏ.05): ಕ್ರಿಕೆಟರ್ಸ್​ಗೂ ಸಿನಿಮಾ ಲೋಕಕ್ಕೆ ಒಂದು ಬಿಡಿಸಲಾರದ ನಂಟಿದೆ. ಕೆಲ ಸ್ಟಾರ್ ಕ್ರಿಕೆಟರ್ಸ್​ ಸ್ಟಾರ್ ನಟಿಯರನ್ನ ವರಿಸಿದ್ದಾರೆ. ಇನ್ನು ಕೆಲವರು ಡೇಟಿಂಗ್ಸ್​​ ನಡೆಸ್ತಿದ್ದಾರೆ. ಇನ್ನು ಕೆಲ ಮಾಜಿ ಕ್ರಿಕೆಟರ್ಸ್​ ನಿವೃತ್ತಿ ಬಳಿಕ ಬಣ್ಣ ಹಚ್ಚಿ ಘರ್ಜಿಸಿದ್ದು ಇದೆ. ಇನ್ನು ಮತ್ತೆ ಹಲವರು ನೆಚ್ಚಿನ ಸ್ನೇಹಿತರ ಮೂವಿಗಳಿಗೆ ಶುಭ ಕೋರುವುದು ಉಂಟು. ಸದ್ಯ ಸ್ಯಾಂಡಲ್​ವುಡ್​ನ ಬಾದ್​ಶಾ, ಅಭಿನಯ ಚಕ್ರವರ್ತಿ ಅಂತ ಕರೆಸಿಕೊಳ್ಳೋ ಸುದೀಪ್​​ರನ್ನ ಟೀಂ ಇಂಡಿಯಾ ದಿಗ್ಗಜ, ಸಿಡಿಲ ಮರಿ ಖ್ಯಾತಿಯ ವೀರೇಂದ್ರ ಸೆಹ್ವಾಗ್ ಸಿನಿಮಾ ವಿಚಾರವಾಗಿ ಹಾಡಿ ಹೊಗಳಿದ್ದಾರೆ.

ವಿಕ್ರಾಂತ್​ ರೋಣ ಮೂವಿ ಟೀಸರ್​​ಗೆ ವೀರೂ ಕ್ಲೀನ್​​ಬೋಲ್ಡ್​:

ಕಿಚ್ಚ ಸುದೀಪ್ ಮತ್ತು ವಿರೇಂದ್ರ ಸೆಹ್ವಾಗ್​​​ರನ್ನ ಬೆಸ್ಟ್ ಫ್ರೆಂಡ್ಸ್. ಇಬ್ಬರದ್ದು ಪ್ರೊಪೆಷನ್ಸ್ ಬದಲಾದ್ರು ಇಬ್ಬರ ಗೆಳೆತನ ಗಟ್ಟಿ. 3 ವರ್ಷಗಳ  ಹಿಂದೆ ಸ್ಯಾಂಡಲ್​ವುಡ್​​​​​​ ಬಾದ್​ಶಾ ಮತ್ತು ಕ್ರಿಕೆಟ್​ ಬಾದ್​​ಶಾ ನಡುವೆ ಫ್ರೆಂಡ್ಸ್​​ಶಿಪ್​ ಚಿಗುರೊಡೆದಿತ್ತು. ಸದ್ಯ ಇಬ್ಬರ ಸ್ನೇಹ ಎಷ್ಟೊಂದು ಸ್ಟ್ರಾಂಗ್ ಅನ್ನೋದು ಗೊತ್ತಾಗಿದೆ. ಕಿಚ್ಚ ನಟನೆಯ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಟೀಸರ್​ ರಿಲೀಸ್ ಆಗಿ ಹವಾ ಎಬ್ಬಿಸಿದೆ. 

IPL 2022: ಮ್ಯಾಕ್ಸ್‌ವೆಲ್‌ RCB ಪರ ಕಣಕ್ಕಿಳಿಯೋದು ಯಾವಾಗ? ಮೈಕ್ ಹೆಸನ್ ಹೇಳಿದ್ದೇನು..?

ಚಿತ್ರತಂಡ ಕನ್ನಡ ಸೇರಿದಂತೆ ಹಲವು ಭಾಷೆಯಲ್ಲಿ ಟೀಸರ್ ಬಿಡುಗಡೆಯಾಗಿತ್ತು. ನೆಚ್ಚಿನ ಸ್ನೇಹಿತನ ಮೂವಿಯ ಟೀಸರ್​ ರಿಲೀಸ್ ಆಗ್ತಿದ್ದಂತೆ ವೀರೂ ವೀಕ್ಷಿಸಿದ್ದಾರೆ. ವಿಕ್ರಾಂತ್​​​ ರೋಣ ಮೂವಿಗೆ ಮನಸೋತಿರೋ ನಜಾಫಗಡದ ನವಾಬ ಟ್ವೀಟರ್​​​ನಲ್ಲಿ ಸುದೀಪ್​ರನ್ನ  ಹಾಡಿ ಹೊಗಳಿದ್ದಾರೆ. ಇಂಗ್ಲಿಷ್ ಟೀಸರ್ ನೋಡಿರೋ ಸೆಹ್ವಾಗ್​ ಬ್ಲಾಕ್‌ಬಸ್ಟರ್ ಬರ್ತಾ ಇದೆ, ವಾಹ್ ವಿಕ್ರಾಂತ್ ರೋಣ ವಾಹ್, ನನ್ನ ಗೆಳೆಯ ಕಿಚ್ಚ ಸುದೀಪ್ ಅವರನ್ನು ಬೆಳ್ಳಿತೆರೆಯ ಮೇಲೆ ಕಾಣಲು ಸಿದ್ಧರಾಗಿ, ಚಿತ್ರ ಜುಲೈ 28ರಂದು ವಿಶ್ವದಾದ್ಯಂತ 3ಡಿಯಲ್ಲಿ ಬಿಡುಗಡೆಯಾಗುತ್ತಿದೆ ಎಂದು ಟ್ವೀಟರ್​​​ನಲ್ಲಿ  ಬರೆದುಕೊಂಡಿದ್ದಾರೆ.

KCC ನಲ್ಲಿ ಚಿಗುರೊಡೆದ ಸುದೀಪ್​​​-ವೀರೂ ಸ್ನೇಹ: 

ಈ ಪ್ರಶ್ನೆ ನಿಮ್ಮನ್ನ ಖಂಡಿತ ಕಾಡಿರುತ್ತೆ. ಎಲ್ಲಿಯ ಸುದೀಪ್​​, ಎಲ್ಲಿಯ ವೀರೂ ಎಲ್ಲಿಂದೆಲ್ಲಿಗೆ ಸಂಬಂಧವಯ್ಯ ಅನ್ನಿಸಿರುತ್ತೆ. ಇಬ್ಬರ ಸ್ನೇಹ ಚಿಗುರೊಡೆದಿದ್ದು ಕರ್ನಾಟಕ ಚಲನಚಿತ್ರ ಕಪ್​​​ನಿಂದ. ಹೌದು, 2019ರಲ್ಲಿ ನಡೆದ ಕೆಸಿಸಿ ಕ್ರಿಕೆಟ್ ಟೂರ್ನಿಯಿಂದ ಇಬ್ಬರಿಗೆ ಪರಿಚಯವಾಗಿತ್ತು. ಒಂದೇ ತಂಡದ ಪರ ಸುದೀಪ್​ ಮತ್ತು ವೀರೂ ಆರಂಭಿಕರಾಗಿ ಆಡಿದ್ರು.  ಕೆಸಿಸಿ ಯಿಂದ ಶುರುವಾದ ಇಬ್ಬರ ಫ್ರೆಂಡ್ಸ್​ಶಿಪ್​ ಇಲ್ಲಿಗೆ ಬಂತು ನಿಂತಿದೆ. ಮುಂದೆಯೂ ಸುದೀಪ್​ ಮತ್ತು ವೀರೂ ಗೆಳೆತನ ಹೀಗೆ ಗಟ್ಟಿಯಾಗಿರ್ಲಿ ಎಂದು ನಾವು ಹಾರೈಸ್ತೀವಿ.

Follow Us:
Download App:
  • android
  • ios