'KGF 2' ಮೊದಲ ವಿಮರ್ಶೆ ಔಟ್; ಭಾರತೀಯ ಚಿತ್ರರಂಗದ ಕಿರೀಟ ಎಂದ ಸೆನ್ಸಾರ್ ಸದಸ್ಯ
ಕೆಜಿಎಫ್-2 ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬರುತ್ತಿದೆ. ಆದರೆ ಸಿನಿಮಾ ತೆರೆಗೆ ಬರುವ ಮೊದಲೆ ಮೊದಲ ವಿಮರ್ಶೆ(Kgf2 First Review) ಹೊರಬಿದ್ದಿದೆ. ಓವರ್ ಸೀಸ್ ಸೆನ್ಸಾರ್ ಮಂಡಳಿಯ ಸದಸ್ಯರಲ್ಲಿ ಒಬ್ಬರಾದ ಉಮೈರ್ ಸಂಧು ಕೆಜಿಎಫ್2 ಸಿನಿಮಾ ವೀಕ್ಷಿಸಿದ್ದು ಚಿತ್ರವನ್ನು ಭಾರತೀಯ ಸಿನಿಮಾರಂಗದ ಕಿರೀಟ ಎಂದು ಬಣ್ಣಿಸಿದ್ದಾರೆ.
ಯಶ್(Yash) ನಟನೆಯ ಕೆಜಿಎಫ್-2(KGF2) ಸಿನಿಮಾ ಬಿಡುಗಡೆಗು ಮೊದಲು ಬಾರಿ ಸದ್ದು ಮಾಡುತ್ತಿದೆ. ಮೊದಲ ಭಾಗ ನೋಡಿದ ಪ್ರತಿಯೊಬ್ಬರು 2ನೇ ಭಾಗ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ದೊಡ್ಡ ಪರದೆ ಮೇಲೆ ರಾಕಿ ಭಾಯ್ ಮತ್ತು ಅಧೀರನ ಮುಖಾಮುಖಿ ಕ್ಷಣವನ್ನು ಕಣ್ತುಂಬಿಕೊಳ್ಳಲು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್, ಸಂಜಯ್ ದತ್(Sanjay Dutt), ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ನಟಿಸಿರುವ ಕೆಜಿಎಫ್-2 ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬರುತ್ತಿದೆ. ಆದರೆ ಸಿನಿಮಾ ತೆರೆಗೆ ಬರುವ ಮೊದಲೆ ಮೊದಲ ವಿಮರ್ಶೆ(Kgf2 First Review) ಹೊರಬಿದ್ದಿದೆ.
ಮೊದಲ ಭಾಗಕ್ಕಿಂತ 2ನೇ ಭಾಗ ಮತ್ತಷ್ಟು ರೋಚಕವಾಗಿರಲಿದೆ ಎನ್ನುವುದು ಪ್ರೇಕ್ಷಕರಿಗೆ ಗೊತ್ತಾಗಿದೆ. ಈಗಾಗಲೇ ಸಿನಿಮಾ ನೋಡಿದ ವ್ಯಕ್ತಿ ಚಿತ್ರದ ಮೊದಲ ವಿಮರ್ಶೆ ನೀಡುವ ಮೂಲಕ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಓವರ್ ಸೀಸ್ ಸೆನ್ಸಾರ್ ಮಂಡಳಿಯ ಸದಸ್ಯರಲ್ಲಿ ಒಬ್ಬರಾದ ಉಮೈರ್ ಸಂಧು ಕೆಜಿಎಫ್2 ಸಿನಿಮಾ ವೀಕ್ಷಿಸಿದ್ದು ವಿಮರ್ಶೆ ಸಹ ಮಾಡಿದ್ದಾರೆ. ಯಶ್ ನಟನೆಯ ಕೆಜಿಎಫ್2 ಸಿನಿಮಾವನ್ನು ಕನ್ನಡ ಚಿತ್ರರಂಗದ ಕಿರೀಟ ಎಂದು ಬಣ್ಣಿಸಿದ್ದಾರೆ. ಅಷ್ಟೆಯಲ್ಲ 5 ಕ್ಕೆ 5 ಸ್ಟಾರ್ ನೀಡುವ ಮೂಲಕ ಬ್ಲಾಕ್ ಬಸ್ಟರ್ ಸಿನಿಮಾ ಆಗುವುದರಲ್ಲಿ ಯಾವುದೇ ಅನುಮಾನ ಎನ್ನುವುದು ಹೇಳಿದ್ದಾರೆ. ಅಲ್ಲದೆ ಚಿತ್ರದ ಕ್ಲೈಮ್ಯಾಕ್ಸ್ ನಿಜಕ್ಕೂ ಬೆಚ್ಚಿ ಬೀಳಿಸುತ್ತದೆ ಎಂದಿದ್ದಾರೆ.
KGF 2 ಫಸ್ಟ್ ಡೇ ಫಸ್ಟ್ ಶೋ ನೋಡಲು ಬಯಸುತ್ತಿರೋರಿಗೆ ಇಲ್ಲಿದೆ ಸಖತ್ ನ್ಯೂಸ್!
ಈ ಬಗ್ಗೆ ಉಮೈರ್ ಸಂಧು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. 'ಈ ಸಿನಿಮಾ ಕನ್ನಡ ಸಿನಿಮಾರಂಗದ ಕಿರೀಟವಾಗಿದೆ. ಕೆಜಿಎಫ್-2 ಪ್ರಾರಂಭದಿಂದ ಕೊನೆಯವರೆಗೂ ಹೈ ವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ ಮತ್ತು ಸಸ್ಪೆನ್ಸ್ ಥ್ರಿಲ್ ನಿಂದ ತುಂಬಿದೆ. ಚಿತ್ರದ ಸಂಭಾಷಣೆ ಶಾರ್ಪ್ ಆಗಿದೆ. ಸಂಗೀತ ಡೀಸೆಂಟ್ ಆಗಿದೆ, ಅಬ್ಬರದ ಬ್ಯಾಗ್ರೌಂಡ್ ಸರಿಹೊಂದಿಸಿದೆ. ಅದ್ಭುತವಾದ ಸಿನಿಮಾ, ಸಿನಿಮಾದುದ್ದಕ್ಕೂ ತೀವ್ರತೆ ಕಾಪಾಡಿಕೊಂಡಿದ್ದಾರೆ. ಪ್ರತಿಯೊಬ್ಬರ ಅಭಿನಯ ಅದ್ಭುತವಾಗಿದೆ. ಈ ಸಿನಿಮಾ ಕೇವಲ ಸ್ಯಾಂಡಲ್ ವುಡ್ ಬ್ಲಾಕ್ ಬಸ್ಟರ್ ಮಾತ್ರ ಅಲ್ಲ, ಇದು ವಿಶ್ವ ಮಟ್ಟದ ಸಿನಿಮಾವಾಗಿದೆ. ಪ್ರಶಾಂತ್ ನೀಲ್ ನಿರ್ದೇಶನ ಯಶ್ ಮತ್ತು ಸಂಜಯ್ ದತ್ ಪ್ರಮುಖ ಹೈಲೆಟ್ ಆಗಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ಶಾಕ್ ನೀಡುತ್ತೆ ಮತ್ತು ರೋಮಾಂಚನವಾಗುತ್ತದೆ' ಎಂದು ಹೇಳಿದ್ದಾರೆ.
ಅತ್ಯಂತ ರಿಚ್ ಆಗಿ ವಿನ್ಯಾಸ ಮಾಡಿದ ರೀತಿ, ಬೆರಗುಗೊಳಿಸುವ ದೃಶ್ಯ ಅದ್ಭುತವಾಗಿದೆ. ಮತ್ತೆ ಮತ್ತೆ ನೋಡಬೇಕು ಎನಿಸುತ್ತದೆ. ಕಜಿಎಫ್-2 ನುರಿತ ತಾರಾಗಣದಿಂದ ಶಕ್ತಿಶಾಲಿ ಪ್ರದರ್ಶನ ವಿದೆ. ವೀಕ್ಷಕರ ಕಣ್ಣು ಚಿತ್ರದ ನಾಯಕ ಮತ್ತು ಖಳನಟನ ಮೇಲೆಯೇ ಇರುತ್ತದೆ ಎಂದು ಹೇಳಿದ್ದಾರೆ.
KGF Chapter 2: ಗ್ರೀಸ್ ಚಿತ್ರಮಂದಿರಗಳಲ್ಲಿ ರಾಕಿ ಭಾಯ್ ಹವಾ!
ಉಮೈರ್ ಸಂಧು ಸಿನಿಮಾ ಬಿಡುಗಡೆಗೂ ಮೊದಲು ವಿಮರ್ಶೆ ಮಾಡುತ್ತಿರುವುದು ಇದೇ ಮೊದಲಲ್ಲ. ಈಗಾಗಲೇ ಆರ್ ಆರ್ ಆರ್ ಸಿನಿಮಾವನ್ನು ನೋಡಿ ಮೊದಲ ವಿಮರ್ಶೆ ನೀಡಿದ್ದರು. ಅದರಂತೆ ಆರ್ ಆರ್ ಆರ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಸದ್ಯ ಕೆಜಿಎಫ್2 ಮತ್ತು ಬೀಸ್ಟ್ ಸಿನಿಮಾದ ಮೊದಲ ವಿಮರ್ಶೆಯನ್ನು ನೀಡಿದ್ದಾರೆ. ಉಮೈರ್ ಸಂಧು ಹೇಳಿದ ಮೇಲೆ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಆದರೆ ಭಾರತೀಯರು ಏಪ್ರಿಲ್ 14ರ ವರೆಗೂ ಕಾಯಲೇ ಬೇಕಾಗಿದೆ.