ನನ್ನ ತಲೆಯಲ್ಲಿ ಇನ್ನೂ ಉಳಿದಿದೆ; ಅಕ್ಷಯ್ ಕುಮಾರ್ ಜೊತೆಗಿನ ನಿಶ್ಚಿತಾರ್ಥ ಮುರಿದ ಬಗ್ಗೆ ಮೌನ ಮುರಿದ ರವೀನಾ ಟಂಡನ್
ಅಕ್ಷಯ್ ಕುಮಾರ್ ಜೊತೆಗಿನ ನಿಶ್ಚಿತಾರ್ಥ ಮುರಿದ ಬಗ್ಗೆ ನಟಿ ರವೀನಾ ಟಂಡನ್ ಮೌನ ಮುರಿದಿದ್ದಾರೆ.
ಬಾಲಿವುಡ್ ಖ್ಯಾತ ನಟಿ ರವೀನಾ ಟಂಡನ್ ಮತ್ತೆ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. 90ರ ದಶಕದ ಸ್ಟಾರ್ ನಟಿ ರವೀನಾ ಟಂಡನ್ ಚಿತ್ರರಂಗ ಕೆಲವು ಕೆಟ್ಟ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ರವೀನಾ ಸಾಕಷ್ಟು ವಿಚಾರಗಳನ್ನು ಬಹಿರಂಗ ಪಡಿಸಿದರು. ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಿದರು. ಆ ವೇಳೆ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಜೊತೆಗಿನ ಸಂಬಂಧದ ಬಗ್ಗೆಯೂ ಮಾತನಾಡಿದರು. ಹೌದು ಒಂದು ಕಾಲದಲ್ಲಿ ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು. ಇಬ್ಬರೂ ಮದುವೆ ಆಗ್ತಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಗುಲ್ಲಾಗಿತ್ತು. ಮೊಹ್ರಾ ಸಿನಿಮಾದಲ್ಲಿ 'ಟಿಪ್ ಟಿಪ್ ಬರ್ಸಾ ಪಾನಿ..' ಹಾಡಿನಲ್ಲಿ ಅಕ್ಷಯ್ ಮತ್ತು ರವೀನಾ ಕೆಮಿಸ್ಟ್ರಿ ಇಂದಿಗೂ ಅಭಿಮಾನಿಗಳ ಹಾಟ್ ಫೇವರಿಟ್ ಜೋಡಿಗಳಲ್ಲಿ ಒಂದಾಗಿದೆ. ಈ ಹಾಡಿನ ಬಳಿಕ ಇಬ್ಬರ ಪ್ರೀತಿ, ಪ್ರೇಮದ ವಿಚಾರ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.
ಇಬ್ಬರೂ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಬಳಿಕ ಬ್ರೇಕಪ್ ಮಾಡಿಕೊಂಡರು. ಈ ಬಗ್ಗೆ ರವೀನಾ ಈಗ ಮಾತನಾಡಿದ್ದಾರೆ. ಎಲ್ಲರೂ ಮುಂದೆ ಸಾಗಿದ್ದಾರೆ ಆದರೆ ಜನರು ಮಾತ್ರ ಇನ್ನೂ ಮುರಿದ ನಿಶ್ಚಿತಾರ್ಥದ ಬಗ್ಗೆಯೇ ಯಾಕೆ ಮಾತನಾಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ANI ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ರವೀನಾ ಟಂಡನ್ ಇಂದಿಗೂ ತನ್ನನ್ನು ಕಾಡುತ್ತಿರುವ ಮುರಿದ ನಿಶ್ಚಿತಾರ್ಥದ ಬಗ್ಗೆ ಬಹಿರಂಗ ಪಡಿಸಿದರು. ಇದರಿಂದ ಹೊರಬರಲು ತನಗೆ ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ. 'ಒಮ್ಮೆ ನಾನು ಅವರ ಜೀವನದಿಂದ ಹೊರಬಂದ ಬಳಿಕ ಮತ್ತೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದೆ. ಅವರು ಕೂಡ ಆಗಲೇ ಬೇರೆ ಯುವತಿ ಜೊತೆ ಡೇಟಿಂಗ್ ಮಾಡುತ್ತಿದ್ದರು. ಹಾಗಿದ್ದ ಮೇಲೆ ಅಯೂಸೆ ಎಲ್ಲಿಂದ ಬರುತ್ತೆ' ಎಂದು ಹೇಳಿದರು.
ಕಿಸ್ಸಿಂಗ್, ರೇಪ್ ದೃಶ್ಯಗಳಲ್ಲಿ ನಟಿಸಿಲ್ಲ, ದುರಹಂಕಾರಿ ಎನ್ನುತ್ತಿದ್ದರು; KGF 2 ನಟಿ ರವೀನಾ ಟಂಡನ್
'ನಾವು ಮೊಹ್ರಾ ಸಮಯದಲ್ಲಿ ಹಿಟ್ ಪೇರ್ ಆಗಿದ್ದೆವು. ಈಗಲೂ ನಾವು ಭೇಟಿಯಾಗುತ್ತೇವೆ. ಮಾತನಾಡುತ್ತೇವೆ. ಎಲ್ಲರೂ ಮುಂದೆ ಸಾಗಿದ್ದಾರೆ. ಕಾಲೇಜಿನಲ್ಲಿ ಹುಡುಗಿಯರು ಪ್ರತಿ ವಾರ ತಮ್ಮ ಗೆಳೆಯರನ್ನು ಬದಲಾಯಿಸುತ್ತಿದ್ದಾರೆ. ಆದರೆ ಮುರಿದುಹೋದ ನಿಶ್ಚಿತಾರ್ಥ ಮಾತ್ರ ಇನ್ನೂ ನನ್ನ ತಲೆಯಲ್ಲಿ ಸಿಲುಕಿಕೊಂಡಿತ್ತು. ಆದರೆ ಯಾಕೆಂದು ನನಗೆ ತಿಳಿದಿಲ್ಲ. ಎಲ್ಲರೂ ಮುಂದೆ ಸಾಗಿದ್ದಾರೆ. ಅನೇಕರು ವಿಚ್ಛೇದನ ಪಡೆದಿದ್ದಾರೆ ಅವರೂ ಮೂವ್‌ಆನ್ ಆಗಿದ್ದಾರೆ. ಅದೇನು ದೊಡ್ಡ ವಿಷಯವಲ್ಲ' ಎಂದು ಹೇಳಿದ್ದಾರೆ.
ಬಾಲಿವುಡ್ಗೆ ಎಂಟ್ರಿ ಕೊಡಲು ಸಿದ್ಧಳಾದ ರವೀನಾ ಟಂಡನ್ ಪುತ್ರಿ!
ಅಕ್ಷಯ್ ಕುಮಾರ್ ಬ್ರೇಕಪ್ ಬಳಿಕ ರವೀನಾರಂತೆ ಕಾಣುವ ಮಹಿಳೆಯರೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಎಂಬ ವದಂತಿಯ ಬಗ್ಗೆ ಕೇಳಿದಾಗ ಆ ಬಗ್ಗೆ ನನಗೆ ಏನು ಗೊತ್ತಿಲ್ಲ ಎಂದು ಹೇಳಿದರು. ರವೀನಾ ಜೊತೆ ಬ್ರೇಕಪ್ ಬಳಿಕ ಅಕ್ಷಯ್ ಕುಮಾರ್ ಇಂಟರ್ನ್ಯಾಷನಲ್ ಕಿಲಾಡಿ ಸಹ ನಟಿ ಟ್ವಿಂಕಲ್ ಖನ್ನಾ ಜೊತೆ ಡೇಟಿಂಗ್ ಪ್ರಾರಂಭಿಸಿದರು. ಬಳಿಕ ಇಬ್ಬರೂ 2001ರಲ್ಲಿ ಮದುವೆಯಾದರು. ಅಕ್ಷಯ್ ಮತ್ತು ಟ್ವಿಂಕಲ್ ದಂಪತಿಗೆ ಆರವ್ ಮತ್ತು ನಿತಾರಾ ಇಬ್ಬರೂ ಮಕ್ಕಳಿದ್ದಾರೆ. ಬಳಿಕ ರವೀನಾ ಕೂಡ ಮದುವೆಯಾದರು. ಉದ್ಯಮಿ ಅನಿಲ್ ಥಡಾನಿ ಜೊತೆ ದಾಂಪತ್ಯಕ್ಕೆ ಕಾಲಿಟ್ಟರು. ರವಿನಾ ಮತ್ತು ಅನಿಲ್ ದಂಪತಿಗೆ ರಶಾ ಥಡಾನಿ ಮತ್ತು ರಣಬೀರವರ್ಧನ್ ಥಡಾನಿ ಇಬ್ಬರು ಮಕ್ಕಳಿದ್ದಾರೆ. ಸಂತೋಷದ ಜೀವನ ನಡೆಯುತ್ತಿದ್ದಾರೆ.