ಕಿಸ್ಸಿಂಗ್, ರೇಪ್ ದೃಶ್ಯಗಳಲ್ಲಿ ನಟಿಸಿಲ್ಲ, ದುರಹಂಕಾರಿ ಎನ್ನುತ್ತಿದ್ದರು; KGF 2 ನಟಿ ರವೀನಾ ಟಂಡನ್
ಕಿಸ್ಸಿಂಗ್, ರೇಪ್ ದೃಶ್ಯಗಳಲ್ಲಿ ನಟಿಸಿಲ್ಲ, ಸ್ವಿಮ್ ಸೂಟ್ ಧರಿಸಿಲ್ಲ, ನನ್ನನ್ನು ದುರಹಂಕಾರಿ ಎನ್ನುತ್ತಿದ್ದರು ಎಂದು KGF 2 ನಟಿ ರವೀನಾ ಟಂಡನ್ ಹೇಳಿದ್ದಾರೆ.
ಸೂಪರ್ ಹಿಟ್ ಕೆಜಿಎಫ್-2 ಮೂಲಕ ಮತ್ತೆ ಸಿನಿಮಾರಂಗದಲ್ಲಿ ಮಿಂಚುತ್ತಿರುವ ನಟಿ ರವೀನಾ ಟಂಡನ್ ಚಿತ್ರರಂಗದ ಕೆಲವು ಕೆಟ್ಟ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಬಾಡಿ ಶೇಮಿಂಗ್, ಸ್ವಿಮ್ ಸೂಟ್ ಧರಿಸುವುದು, ಕಿಸ್ಸಿಂಗ್ ದೃಶ್ಯಗಳ ಬಗ್ಗೆ ರವೀನಾ ಟಂಡನ್ ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. ಯಾವುದೇ ಸಿನಿಮಾಗಳಲ್ಲಿ ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡಿಲ್ಲ, ಸ್ವಿಮ್ ಸೂಟ್ ಧರಿಸಿಲ್ಲ ಎಂದು ಹೇಳಿದ್ದಾರೆ. ಈ ಕಾರಣಕ್ಕಾಗಿ ಸಿನಿಮಾರಂಗದಲ್ಲಿ ಆಕೆಯನ್ನು ದುರಹಂಕಾರಿ ಎಂದು ಕರೆಯುತ್ತಿದ್ದರು ಎಂದು ರವೀನಾ ಟಂಡನ್ ಹೇಳಿದ್ದಾರೆ.
ANI ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರವೀನಾ ಟಂಡನ್, ಸಿನಿಮಾರಂಗದಲ್ಲಿ ಇಷ್ಟವಾಗದೇ ಇರುವ ವಿಚಾರಗಳ ಬಗ್ಗೆ ಬಹಿರಂಗ ಪಡಿಸಿದ್ದಾರೆ. 'ನನಗೆ ಅನೇಕ ವಿಚಾರಗಳು ಇಷ್ಟವಾಗುತ್ತಿರಲಿಲ್ಲ. ಉದಾಹರಣೆಗೆ ಡಾನ್ಸ್ ಸ್ಟೆಪ್ ವಿಚಾರದಲ್ಲಿ ನನಗೆ ಕಷ್ಟವಾಗುತ್ತಿದ್ದರೆ, ಸರಿ ಅನಿಸದಿದ್ದರೇ ನಾನಗೆ ಯಾಕು ಸರಿ ಆಗುತ್ತಿಲ್ಲ, ನಾನು ಮಾಡಲ್ಲ ಎಂದು ಹೇಳುತ್ತಿದ್ದೆ. ನಾನು ಸ್ವಿಮ್ ಸೂಟ್ ಧರಿಸುತ್ತಿರಲಿಲ್ಲ, ನಾನು ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಯಾವುದೇ ಅತ್ಯಾಚಾರದ ದೃಶ್ಯ, ಬಟ್ಟೆ ಹರಿದ ದೃಶ್ಯಗಳಲ್ಲಿ ಕಾಣಿಸಿಕೊಳ್ಳದ ಏಕೈಕ ನಟಿ ನಾನು' ಎಂದು ಹೇಳಿದ್ದಾರೆ.
ಬಾಲಿವುಡ್‌ಗೆ ಎಂಟ್ರಿ ಕೊಡಲು ಸಿದ್ಧಳಾದ ರವೀನಾ ಟಂಡನ್ ಪುತ್ರಿ!
ಈ ಕಾರಣದಿಂದ ತನ್ನನ್ನುಅನೇಕ ನಿರ್ದೇಶಕರ ಅಹಂಕಾರಿ ಎಂದು ಕರೆಯುತ್ತಿದ್ದರು ಅಂತ ಹೇಳಿಕೊಂಡಿದ್ದಾರೆ. ಈ ಎಲ್ಲಾ ಕಾರಣದಿಂದ ತನಗೆ ಬಂದಿದ್ದ ಸಿನಿಮಾ ಆಫರ್‌ಗಳು ಬೇರೆ ನಟಿಯರ ಪಾಲಾಯಿತು ಎಂದು ರವೀನಾ ಹೇಳಿದ್ದಾರೆ. 'ನೀವು ಬೇಕಾದರೇ ಅತ್ಯಾಚಾರದ ದೃಶ್ಯಗಳನ್ನು ಶೂಟ್ ಮಾಡಿ ಆದರೆ ನನ್ನ ಬಟ್ಟೆ ಮಾತ್ರ ಹರಿಯುವುದಿಲ್ಲ ಎನ್ನುತ್ತಿದ್ದೆ. ಹಾಗಾಗಿ ನನ್ನನ್ನು ದುರಹಂಕಾರಿ ಎಂದು ಕರೆಯುತ್ತಿದ್ದರು' ಎಂದು ಹೇಳಿದ್ದರು. ಕರಿಶ್ಮಾ ಕಪೂರ್ ಅವರ ಮೊದಲ ಸಿನಿಮಾ ಪ್ರೇಮ್ ಖೈದಿ ರವೀನಾ ಅವರಿಗೆ ಆಫರ್ ಮಾಡಲಾಗಿತ್ತು. ಆದರೆ ರವೀನಾ ನಿರಾಕರಿಸಿದ ಕಾರಣ ಕರಿಶ್ಮಾ ಪಾಲಾಯಿತು ಎಂದು ಹೇಳಿದರು. ಒಂದೇ ಒಂದು ದೃಶ್ಯದಿಂದ ಸಿನಿಮಾ ಮಾಡಲು ನಿರಾಕರಿಸಿದೆ ಎಂದು ಹೇಳಿದರು. ಆ ಸಿನಿಮಾದಲ್ಲಿ ನಾಯಕ ಜಿಪ್ ಎಳೆದು ಸ್ಟ್ರ್ಯಾಪ್ ತೋರಿಸುವ ದೃಶ್ಯವಿತ್ತು ಹಾಗಾಗಿ ಆ ಸಿನಿಮಾ ನಿರಾಕರಿಸಿದೆ ಎಂದು ಹೇಳಿದರು.
ಹುಲಿ ಫೋಟೋ ಕ್ಲಿಕ್ಕಿಸಿ ಸಂಕಷ್ಟಕ್ಕೆ ಸಿಲುಕಿದ 'ಕೆಜಿಎಫ್-2' ನಟಿ ರವೀನಾ; ತನಿಖೆಗೆ ಆದೇಶ
ನಟಿ ರವೀನಾ ಟಂಡನ್, ಸಲ್ಮಾನ್ ಖಾನ್ ಜೊತೆಗಿನ ಪತ್ತರ್ ಕೆ ಫೂಲ್ (1991) ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಅವರು 90 ರ ದಶಕದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದರು. ಮೊಹ್ರಾ, ಅಂದಾಜ್ ಅಪ್ನಾ ಅಪ್ನಾ, ಲಾಡ್ಲಾ, ಬಡೇ ಮಿಯಾನ್ ಚೋಟೆ ಮಿಯಾನ್, ದುಲ್ಹೆ ರಾಜಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ ಕೆಜಿಎಫ್ -2 ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದ್ದು ಬೇಕಿಡೆ ಮತ್ತಷ್ಟು ಹೆಚ್ಚಾಗಿದೆ. ಸದ್ಯ ಸಂಜಯ್ ದತ್ ಜೊತೆ ಘುಡ್ಚಾಡಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ನೆಟ್‌ಫ್ಲಿಕ್ಸ್ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ.