Asianet Suvarna News Asianet Suvarna News

ಬಾಲಿವುಡ್​ಗೆ ಎಂಟ್ರಿ ಕೊಡಲು ಸಿದ್ಧಳಾದ ರವೀನಾ ಟಂಡನ್​ ಪುತ್ರಿ!

80-90ರ ದಶಕದಲ್ಲಿ ಚಿತ್ರರಂಗವನ್ನು ಆಳಿದ ನಟಿ ರವೀನಾ ಟಂಡನ್​ ಅವರ ಪುತ್ರಿ ರಾಶಾ ಈಗ 17 ವರ್ಷದವಳಾಗಿದ್ದು, ಬಾಲಿವುಡ್​ಗೆ ಎಂಟ್ರಿ ಕೊಡಲು ಸಿದ್ಧತೆ ನಡೆಸಿದ್ದಾರೆ. ಯಾವುದು ಈ ಚಿತ್ರ?
 

Raveena Tandon daughter rasha to bollywood debut opposite Ajay Devgn newphew Amaan movie
Author
First Published Jan 21, 2023, 7:36 PM IST

ಸ್ವಜನಪಕ್ಷಪಾತದ ಬಗ್ಗೆ ಬಾಲಿವುಡ್ ಇಂಡಸ್ಟ್ರಿಯಲ್ಲಿ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಇದರ ಹೊರತಾಗಿಯೂ, ನಟ ನಟಿಯರ ಮಕ್ಕಳು (Star Kids) ಚಿತ್ರರಂಗಕ್ಕೆ ಎಂಟ್ರಿ ಕೊಡುವ ಪ್ರಕ್ರಿಯೆ  ನಿರಂತರವಾಗಿ ನಡೆಯುತ್ತಿವೆ. ಇದೀಗ ಮತ್ತೊಬ್ಬ ಸ್ಟಾರ್‌ಕಿಡ್ ನಟನೆಗೆ ಪದಾರ್ಪಣೆ ಮಾಡುವ ಸುದ್ದಿ ಬರುತ್ತಿದೆ. ಈಕೆಯೆಂದರೆ  ಬಾಲಿವುಡ್‌ನ ಜನಪ್ರಿಯ ನಟಿ ರವೀನಾ ಟಂಡನ್ ಮತ್ತು ಅನಿಲ್ ಥಡಾನಿ  ಅವರ ಪುತ್ರಿ ರಾಶಾ. ರಾಶಾ ಶೀಘ್ರದಲ್ಲಿಯೇ ಬಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಬಿ ಟೌನ್​ನಲ್ಲಿ ಹರಿದಾಡುತ್ತಿದೆ.

ಅಂದಹಾಗೆ ರಾಶಾಗೆ ಈಗ 17ರ ಹರೆಯ. ಈಕೆ ಈಗ ತಾಯಿಯ ಹಾದಿಯಲ್ಲಿ ಸಾಗಲು ಸಿದ್ಧತೆ ನಡೆಸಿದ್ದಾಳೆ. ರವೀನಾ ಟಂಡನ್ ಅವರ ಮಗಳು ಸದ್ಯ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳದಿದಿದ್ದರೂ,  ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಈಕೆಗೆ ಬಹಳಷ್ಟು ಫಾಲೋವರ್ಸ್​ಗಳು ಇದ್ದಾರೆ. ಪಿಂಕ್ವಿಲ್ಲಾದಲ್ಲಿನ ವರದಿಯ ಪ್ರಕಾರ, ನಿರ್ದೇಶಕ ಅಭಿಷೇಕ್ ಕಪೂರ್ ತಮ್ಮ ಮುಂದಿನ ಚಿತ್ರದ ಕೆಲಸವನ್ನು ಪ್ರಾರಂಭಿಸಿದ್ದಾರೆ. ಇದರಲ್ಲಿ ಇವರು ರವೀನಾ ಟಂಡನ್ ಮತ್ತು ಅನಿಲ್ ಥಡಾನಿ ಅವರ ಪುತ್ರಿ ರಾಶಾ ಅವರನ್ನು ಪರಿಚಯಿಸಲಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ಇನ್ನೂ ಹೆಸರಿಡಲಿಲ್ಲ. ಆದರೆ ಇದೊಂದು ಸಾಹಸಮಯ ಚಿತ್ರವಾಗಿದ್ದು, ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಅದೇ ಸಮಯದಲ್ಲಿ, ಅಜಯ್ ದೇವಗನ್ ಅವರ ಸೋದರಳಿಯ ಅಮನ್ ದೇವಗನ್ ಕೂಡ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರಂತೆ. ಅಜಯ್ ದೇವಗನ್ ಅವರು ಹಿಂದೆಂದೂ ಮಾಡಿರದಂಥ ಅವತಾರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಸುಶಾತ್​ ಸಿಂಗ್​ಗೆ ಸಾವಿನ ಸುಳಿವು ಸಿಕ್ಕಿತ್ತಾ? ಸಂದರ್ಶನದಲ್ಲಿ ಅಂದು ಹೇಳಿದ್ದೇನು?

 ರವೀನಾ ಟಂಡನ್ 1990 ರ ದಶಕದಲ್ಲಿ ಟಾಪ್​ ಸ್ಟಾರ್​ ಆಗಿ ಗುರುತಿಸಿಕೊಂಡವರು. ಮುಂಬೈನಲ್ಲಿ ನೆಲೆಸಿರುವ ಇವರು ಬಾಲಿವುಡ್ ಚಿತ್ರರಂಗದ ಪ್ರಮುಖ ನಟಿ. ಪರಭಾಷೆಯ ಕೆಲ ಬೆರೆಳೆಣಿಕೆಯ ಚಿತ್ರಗಳಲ್ಲಿ ನಟಿಸಿರುವ ಇವರು ಕನ್ನಡದಲ್ಲಿ ಉಪೇಂದ್ರ ನಿರ್ದೇಶಿಸಿ ನಟಿಸಿದ `ಉಪೇಂದ್ರ' ಚಿತ್ರದಲ್ಲಿ ನಟಿಸಿದ್ದಾರೆ.  ಪತ್ಥರ್ ಕೆ ಫೂಲ್ (1991) ಮ‌ೂಲಕ ಅವರ ವೃತ್ತಿ ಜೀವನ ಆರಂಭವಾಯಿತು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಇವರು 'ಫಿಲ್ಮ್‌ಫೇರ್ ಲಕ್ಸ್ ಹೊಸ ಮುಖ ಪ್ರಶಸ್ತಿ' ಕೂಡ ಪಡೆದರು. 90ರ ದಶಕದಲ್ಲಿ ತೆರೆ ಕಂಡ ಚಿತ್ರಗಳ ಪೈಕಿ ಮೊಹ್ರಾ (1994), ಖಿಲಾಡಿಯೋಂ ಕಾ ಖಿಲಾಡಿ (1996) ಮತ್ತು ಝಿದ್ದಿ (1997) ಚಿತ್ರಗಳಲ್ಲಿ ರವೀನಾ ನಟಿಸಿದ್ದಾರೆ. 

ಆದರೆ ಇವರಿಗೆ ಬ್ರೇಕ್​ ಕೊಟ್ಟದ್ದು  2000ದ ಹೊತ್ತಿಗೆ ಗಂಭೀರ ಪಾತ್ರಗಳಲ್ಲಿ ಅಭಿನಯಿಸಲು ತೊಡಗಿದಾಗ. ಆರ್ಟ್‌ಹೌಸ್ ಹಾಗೂ ಪ್ಯಾರಲಲ್ ಸಿನಿಮಾದತ್ತ ಇವರು ಗಮನ ಹರಿಸಿದರು. ಅಕ್ಸ್ (2001) ಮತ್ತು ಸತ್ತಾ (2003)ದಲ್ಲಿ ಅವರ ಅಭಿನಯ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. 2002ನೇ ಸಾಲಿನಲ್ಲಿ ಇವರು ಟಾಪೆಸ್ಟ್​ ನಟಿಯರಲ್ಲಿ ಒಬ್ಬರು ಎನಿಸಿದರು.  ಕಲ್ಪನಾ ಲಾಜ್ಮಿಯವರ ಡಮಾನ್: ಅ ವಿಕ್ಟಿಮ್ ಆಫ್​ ಮಾರ್ಷಿಯಲ್ ವೈಲೆನ್ಸ್ (2001)ರ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದರು.  ಇವರು 2004 ರಲ್ಲಿ ಅನಿಲ್ ಥಡಾನಿ ಅವರನ್ನು ವಿವಾಹವಾದರು. ದಂಪತಿಗೆ ರಾಶಾ ಮತ್ತು ರಣಬೀರ್ ಎಂಬ ಇಬ್ಬರು ಮಕ್ಕಳಿದ್ದಾರೆ. ಮದುವೆಗೆ ಮುನ್ನ ರವೀನಾ ಟಂಡನ್ ಪೂಜಾ ಮತ್ತು ಛಾಯಾ ಎಂಬ ಇಬ್ಬರು ಹುಡುಗಿಯರನ್ನು ದತ್ತು ಪಡೆದಿದ್ದರು. 

ಜೀನ್ಸ್ ಪ್ಯಾಂಟ್, ಟೀ ಶರ್ಟ್ ಹಾಕಿದ್ದೆ ತಪ್ಪಾಯ್ತು; ಜಾನ್ ಅಬ್ರಾಹಂ ನಿಶ್ಚಿತಾರ್ಥ ಸಂಭ್ರಮದ ಲುಕ್ ಟ್ರೋಲ್

ಇನ್ನು ರಾಶಾ ಅವರ ಬಗ್ಗೆ ಮಾತನಾಡುವುದಾದರೆ ಈಕೆ ಹುಟ್ಟಿದ್ದು 2005ರ ಮಾರ್ಚ್ 16ರಂದು.  ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್​ನ್ಯಾಷನಲ್​ ಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಈ ಸಂಸ್ಥೆಯಿಂದ ಈಕೆ ಐಜಿಸಿಎಸ್‌ಇ (ಇಂಟರ್‌ನ್ಯಾಷನಲ್ ಜನರಲ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್) ಪರೀಕ್ಷೆ ಮುಗಿಸಿದ್ದಾರೆ.  ಇನ್​ಸ್ಟಾಗ್ರಾಮ್​ನಲ್ಲಿ (Instagram) ಸದಾ ಆ್ಯಕ್ಟೀವ್​ ಆಗಿರುವ ರಾಶಾ, ಅದರಲ್ಲಿ ಹಾಡುವ ಮತ್ತು ವಿವಿಧ ವಾದ್ಯಗಳನ್ನು ನುಡಿಸುವ ವಿಡಿಯೋ ಪೋಸ್ಟ್​ ಮಾಡುತ್ತಿರುತ್ತಾರೆ. ಈಕೆ ಬ್ಲ್ಯಾಕ್ ಬೆಲ್ಟ್ ಮಾರ್ಷಲ್ ಆರ್ಟ್ ಟೇಕ್ವಾಂಡೋ ಕೂಡ. 

Follow Us:
Download App:
  • android
  • ios