* ಶುರುವಾಗಿದೆ ಕೆಜಿಎಫ್ ಹವಾ* ಸೋಶಿಯಲ್ ಮೀಡಿಯಾದಲ್ಲಿ ರಾಖಕಿಂಗ್ ಸ್ಟಾರ್ ಸದ್ದು* ಪವರ್ ಫುಲ್ ಟ್ರೇಲರ್ ಪಂಚಭಾಷೆಗಳಲ್ಲಿ* ಪ್ಯಾನ್ ಇಂಡಿಯಾ ಸಿನಿಮಾದ ಜರ್ನಿಗೆ ವೇಗ
ಬೆಂಗಳೂರು(ಮಾ. 27) ಕೆಜಿಎಫ್(KGF 2) ಹವಾ ಶುರುವಾಗಿದೆ. ಟ್ರೇಲರ್ ಸೋಶಿಯಲ್ ಮೀಡಿಯಾದಲ್ಲಿ (Social Media) ದಾಖಲೆ ಸೃಷ್ಟಿ ಮಾಡುತ್ತಿದೆ. ಯಶ್ (Yash) ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ಕನ್ನಡ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. 'ಐ ಲವ್ ಯು, ಯು ಶುಡ್ ಲವ್ ಮಿ' ಎನ್ನುತ್ತಾ ಓಂ ಸಿನಿಮಾದ ಡೈಲಾಗ್ ಹೇಳುವ ಮೂಲಕ ಕೆಜಿಎಫ್-2ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ್ದರು.
ಕನ್ನಡದ ಜೊತೆಗೆ ಇನ್ನು 4 ಭಾಷೆಯಲ್ಲಿ ಟ್ರೈಲರ್ ಬಿಡುಗಡೆಯಾಗಿದೆ. ಹಿಂದಿಯಲ್ಲಿ ಫರ್ಹಾನ್ ಅಖ್ತರ್ ಬಿಡುಗಡೆ ಮಾಡಿದ್ದಾರೆ. ತಮಿಳಿನಲ್ಲಿ ನಟ ಸೂರ್ಯ ರಿಲೀಸ್ ಮಾಡಿದ್ದಾರೆ. ಇನ್ನು ತೆಲುಗಿನಲ್ಲಿ ರಾಮ್ ಚರಣ್ ಬಿಡುಗಡೆ ಮಾಡಿದ್ರೆ, ಮಲಯಾಳಂನಲ್ಲಿ ಪೃಥ್ವಿರಾಜ್ ಬಿಡುಗಡೆ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ ವಿಜಯ್ ಕಿರಗಂದೂರು, ಮೊದಲು ಕೆಜಿಎಫ್ ಫ್ಯಾಮಿಲಿಗೆ ಧನ್ಯವಾದ ಹೇಳಿದರು. ಬ್ಯುಸಿನೆಸ್ ಗೆ ಸಾಥ್ ನೀಡಿದ ಎಲ್ಲಾ ಬ್ಯಾನರ್ ಗಳಿಗೆ ಧನ್ಯವಾದ ಸಲ್ಲಿಸಿದರು.
ಎಂಟು ವರ್ಷದಲ್ಲಿ ಯಶ್ ಗೆ ಎರಡು ಮಕ್ಕಳ ತಂದೆ ಆಗಿದ್ದಾರೆ. ಈಗ ಕೆಜಿಎಫ್ 2 ಕೂಡ ಬರ್ತಿದೆ. ಪತ್ನಿಯ ಸಹಕಾರ ತುಂಬಾ ಇದೆ. ಕರಣ್ ಜೋಹರ್ ಬಂದಿದ್ದು ನಿಜಕ್ಕೂ ಸಂತೋಷ ತಂದಿದೆ ಎಂದರು. ಈ ವೇಳೆ ಕರಣ್ ಜೋಹರ್ ಗೆ ಕನ್ನಡ ಪಾಠ ಮಾಡಲು ನಿರೂಪಕಿ ಅನುಶ್ರೀ ಮುಂದಾದರು. ಯಶ್ ಡೈಲಾಗ್ ನ್ನು ಕರಣ್ ಜೋಹರ್ ಹೇಳಿದರು.
ಓಂ ಡೈಲಾಗ್ ಹೇಳಿ ಟ್ರೇಲರ್ ಬಿಡುಗಡೆ ಮಾಡಿದ ಶಿವಣ್ಣ
ರಾಕಿಂಗ್ ಸ್ಟಾರ್ ಯಶ್, ಕೆಜಿಎಫ್ ನ ಶಕ್ತಿ ಯಶ್ ಮಾತನಾಡಿ, ನಾನು ನರ್ವಸ್ ಆಗಲ್ಲ ಆದ್ರೆ ನಾನು ಫಸ್ಟ್ ಟೈಂ ನರ್ವಸ್ ಆಗಿದ್ದೇನೆ.ಅಪ್ಪು ಸರ್ ನಾ ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ. ಅಪ್ಪು ಸರ್ ಮೊದಲು ಹೊಂಬಾಳೆ ಪ್ರೊಡಕ್ಷನ್ ನಲ್ಲಿ ಸಿನಿಮಾ ಮಾಡಿದ್ರು. ಈಗ ನಾನು ಮಾಡಿದ್ದೇನೆ. ಶಿವಣ್ಣ ಅಳೋದನ್ನ ನನ್ನಿಂದ ನೋಡೋಕೆ ಆಗ್ತಿಲ್ಲ. ಶಿವಣ್ಣ ನೀವೆಲ್ಲಾ ಹಾಕಿರೋ ಮಾರ್ಗದರ್ಶನದಲ್ಲಿ ನಾನು ನಡೀತೇನೆ. ಅದ್ಯಾಕೋ ನನಗೆ ನಮ್ಮ ಚಿತ್ರರಂಗದ ಮೇಲೆ ಪ್ರೀತಿ ಜಾಸ್ತಿ. ಬೇರೆಯದ್ದೇ ನಿರೀಕ್ಷೆಯಿಂದ ಮತ್ತೆ ನೀವೆಲ್ಲಾ ಇಲ್ಲಿದ್ದೀರಿ ನಾವು ನಿಜಕ್ಕೂ ಏನನ್ನೋ ಮಾಡಿದ್ದೇವೆ ಅನಿಸ್ತಿದೆ ಎಂದರು.
ವಿಜಯ್ ಕಿರಗಂದೂರು ನಿಜಕ್ಕೂ ಒಳ್ಳೆಯ ನಿರ್ಮಾಪಕ. ಪ್ರಶಾಂತ್ ನೀಲ್ ಇಲ್ಲ ಅಂದ್ರೆ ಕೆಜಿಎಫ್ ಇಲ್ಲ ಪ್ರಶಾಂತ್ ನೀಲ್ ಹೀರೋಗಳನ್ನ ತುಂಬಾ ಇಷ್ಟ ಪಡ್ತಾರೆ. ನೀಲ್ ಸಿನಿಮಾ ಚೆನ್ನಾಗಿ ಬರಲು ಕಾರಣ ಇದೇ ಆಗಿದೆ ಕೆಜಿಎಫ್ 2 ಸಿನಿಮಾದ ಹೀರೋ ಪ್ರಶಾಂತ್ ನೀಲ್ .ತಂತ್ರಜ್ಞರು, ಸೆಟ್ ವರ್ಕ್ ಗೆ ಯಶ್ ವಿಶೇಷ ಧನ್ಯವಾದ ಹೇಳಿದರು.
ಕಳೆದ ಬಾರಿ ತಮಿಳುನಾಡಿನಲ್ಲಿ ಸಿನಿಮಾ ವಿತರಿಸಿದ ಗೆಳೆಯ ವಿಶಾಲ್ ಗೆ ಧನ್ಯವಾದ ತಿಳಿಸಿದರು. ಸಂಜಯ್ ಸರ್ ನೀವು ನಿಜವಾದ ಫೈಟರ್ . ರವೀನಾ ಮೇಡಂ ನಿಮ್ಮ ಹೊಸ ಅವತಾರ ನೋಡ್ತೀವಿ ಸಂಜಯ್ ದತ್ ನನ್ನನ್ನ ಯಶ್ ಭಾಯ್ ಅಂತಿದ್ರು, ಅದು ನನಗೆ ಇಷ್ಟ ಆಗ್ತಿರಲಿಲ್ಲ. ನಾನು ನಿಜಕ್ಕೂ ನಿಮ್ಮ ದೊಡ್ಡ ಫ್ಯಾನ್ ಸಂಜಯ್ ಸರ್. ನಮ್ಮ ಹುಡ್ಗರೆಲ್ಲಾ ಇಲ್ಲಿದ್ದಾರೆ. ನಾಟಕದಲ್ಲಿ ಸಣ್ಣ ಪಾತ್ರ ಮಾಡ್ತಿದ್ದೆ ಈಗ ಸಿನಿಮಾ ಮಾಡಿರೋದು ಖುಷಿ. ನಾಗಾಭರಣ ಸರ್ ನಮ್ಮ ಗುರುಗಳು. ಶ್ರೀನಿಧಿ ಶೆಟ್ಟಿ ಡೆಡಿಕೇಷನ್, ಹಾರ್ಡ್ ವರ್ಕ್ ತುಂಬಾ ದೊಡ್ಡದು. ನನ್ನ ಡಿಸೈನರ್ ಸಾನಿಯಾಗೆ ಸ್ಪೆಷಲ್ ಥ್ಯಾಂಕ್ಸ್ ಎಂದರು.
ನನ್ನ ಫಿಟ್ನೆಸ್ ಗೆ ಕಿಟ್ಟಿ ಸರ್ ಕಾರಣ.. ಥ್ಯಾಂಕ್ಯೂ ಸರ್. ಡಬ್ಬಿಂಗ್ ಕಾರ್ಯಗಳ ಉಸ್ತುವಾರಿ ಡಾಕ್ಟರ್ ಸೂರಿ ತಗೊಂಡಿದ್ದರು ಸೂರಿಗೆ ದೊಡ್ಡ ಥ್ಯಾಂಕ್ಸ್ ಎಂದು ತಿಳಿಸಿದರು.
ರಾಧಿಕಾ ಪಂಡಿತ್ ಮಾತನಾಡಿ, ಮೂರು ವರ್ಷ ಆಯ್ತು ಎಲ್ಲರನ್ನ ನೋಡಿ, ಮಾತಾಡಿ..ನನಗೆ ನನ್ನ ಪತಿಯ ಕಾರಣಕ್ಕಾಗಷ್ಟೇ ಹೆಮ್ಮೆ ಇಲ್ಲ. ಸಾಕಷ್ಟು ಮಂದಿ ಪಿಲ್ಲರ್ ಗಳಿಂದ ಈ ಸಿನಿಮಾ ಆಗಿದೆ. ರವೀನಾ, ಶಿವಣ್ಣ, ಸಂಜಯ್ ದತ್ ಗೆ ವಿಶೇಷ ಧನ್ಯವಾದ ತಿಳಿಸಿದರು. ಏಪ್ರಿಲ್ 14ಕ್ಕೆ ನಿಮಗೆಲ್ಲಾ ಹಬ್ಬ, ಟ್ರೀಟ್ ಪಕ್ಕಾ ಸಿಗಲಿದೆ ಎಂದು ಭರವಸೆ ನೀಡಿದರು.
