Asianet Suvarna News Asianet Suvarna News

ಕೆಜಿಎಫ್ 2 to ದೃಶ್ಯಂ 2; ಹಿಂದಿಯಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳು

2022 ಹಿಂದಿಯಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಲಿಸ್ಟ್ ನಲ್ಲಿ ಕನ್ನಡದ ಕೆಜಿಎಫ್-2 ಸಿನಿಮಾ ಮೊದಲ ಸ್ಥಾನದಲ್ಲಿದೆ. 

KGF Chapter 2 Hindi version To Drishyam 2; Highest Grossing Hindi Films Of 2022 sgk
Author
First Published Dec 7, 2022, 5:45 PM IST

ಬಾಲಿವುಡ್‌ಗೆ 2022 ನಿರಾಶಾದಾಯಕ ವರ್ಷವಾಗಿದೆ. ಈ ವರ್ಷ ರಿಲೀಸ್ ಆದ ಹಿಂದಿ ಸಿನಿಮಾಗಳು ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಹಿಂದಿಯ ಕೆಲವೇ ಕೆಲವು ಸಿನಿಮಾಗಳು ಅಭಿಮಾನಿಗಳ ಹೃದಯ ಗೆದ್ದಿವೆ. ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿವೆ. ವಿಶೇಷ ಎಂದರೆ ಈ ವರ್ಷ ಹಿಂದಿ ಬಾಕ್ಸ್ ಆಫೀಸ್ ನಲ್ಲಿ ಅತೀ ಕಮಾಯಿ ಮಾಡಿದ್ದು ಸೌತ್ ಸಿನಿಮಾಗಳು. ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ನಲ್ಲಿ ಭರ್ಜರಿ ಹವಾ ಎಬ್ಬಿಸಿವೆ. ದಕ್ಷಿಣದ ಕೆಜಿಎಫ್-2, ಆರ್ ಆರ್ ಆರ್ ಸಿನಿಮಾಗಳು ದಾಖಲೆಯ ಕಲೆಕ್ಷನ್ ಮಾಡಿವೆ. ಹಿಂದಿಯಲ್ಲಿ ಸಾಲು ಸಾಲು ಸಿನಿಮಾಗಳು ಸೋಲು ಕಂಡಿವೆ. ಸೋಲಿನ ಸುಳಿಯಲ್ಲಿರುವ ಬಾಲಿವುಡ್ ಅನ್ನು ಬ್ರಹ್ಮಾಸ್ತ್ರ, ದೃಶ್ಯಂ 2 ಸಿನಿಮಾಗಳು ಬಚಾವ್ ಮಾಡಿವೆ. ಅಂದಹಾಗೆ ಈ ವರ್ಷ ಹಿಂದಿಯಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಲಿಸ್ಟ್ ಹೀಗಿದೆ. ಈ ಲಿಸ್ಟ್ ನಲ್ಲಿ ಕನ್ನಡದ ಕೆಜಿಎಫ್-2 ಸಿನಿಮಾ ಮೊದಲ ಸ್ಥಾನದಲ್ಲಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. 

KGF 2,

ರಾಕಿಂಗ್ ಸ್ಟಾರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಬಂದ ಕೆಜಿಎಫ್-2 ಸಿನಿಮಾ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿದೆ. ಅತೀ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾಗಳ ಲಿಸ್ಟ್ ನಲ್ಲಿರುವ ಕೆಜಿಎಫ್2 ಹಿಂದಿಯಲ್ಲೂ ಮೊದಲ ಸ್ಥಾನದಲ್ಲಿದೆ. ಅಂದಹಾಗೆ ಕೆಜಿಎಫ್-2 ಹಿಂದಿಯಲ್ಲಿ ಬರೋಬ್ಬರಿ 583.85 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 

ಬ್ರಹ್ಮಾಸ್ತ್ರ, 

ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಹಿಂದಿಯಲ್ಲಿ ಅತೀ ಹೆಚ್ಚು ಕಮಾಯಿ ಮಾಡಿದ ಲಿಸ್ಟ್ ನಲ್ಲಿ 2ನೇ ಸ್ಥಾನದಲ್ಲಿದೆ. ಬ್ರಹ್ಮಸ್ತ್ರ ಸಿನಿಮಾ ಸಿಕ್ಕಾಪಟ್ಟೆ ಟ್ರೋಲ್ ಆದರೂ ಉತ್ತಮ ಕಲೆಕ್ಷನ್ ಮಾಡಿದೆ. 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.  

Popular Indian Stars; ಅತ್ಯಂತ ಜನಪ್ರಿಯ ಸ್ಟಾರ್‌ಗಳ ಪಟ್ಟಿಯಲ್ಲಿ ಧನುಷ್ ನಂ.1; ಯಶ್‌ಗೆ ಎಷ್ಟನೆ ಸ್ಥಾನ?

ಆರ್ ಆರ್ ಆರ್, 

ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಲಿಸ್ಟ್ ನಲ್ಲಿದೆ. ಹಿಂದಿಯಲ್ಲಿ ಆರ್ ಆರ್ ಆರ್ 342.12 ಕೋಟಿ ಬಾಚಿಕೊಂಡಿದೆ. ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ನಟನೆಯ ಈ ಸಿನಿಮಾಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. 

ದಿ ಕಾಶ್ಮೀರ್ ಫೈಲ್ಸ್,

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್ ಸಿನಿಮಾ ಕೂಡ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಲಿಸ್ಟ್ ನಲ್ಲಿದೆ. ಕಡಿಮೆ ಬಜೆಟ್ ನಲ್ಲಿ ತಯಾರಾದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 326.95 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. 

ಯುಟ್ಯೂಬ್‌ನಲ್ಲೂ 'ಶ್ರೀವಲ್ಲಿ' ಹವಾ; ಅತೀ ಹೆಚ್ಚು ವೀಕ್ಷಿಸಿದ ಹಾಡುಗಳ ಲಿಸ್ಟ್‌ನಲ್ಲಿ ಪುಷ್ಪ ನಂ.1

ಭೂಲ್ ಭುಲೈಯಾ-2,

ಕಾರ್ತಿಕ್ ಆರ್ಯನ್ ನಟನೆಯ ಭೂಲ್ ಭುಲೈಯಾ-2 ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿ ಸೊರಗುತ್ತಿದ್ದ ಬಾಲಿವುಡ್‌ಗೆ ಜೀವ ತುಂಬಿದೆ. ಅಕ್ಷಯ್, ಆಮೀರ್ ಸಿನಿಮಾಗಳನ್ನು ಹಿಂದಿಕ್ಕಿ 260  ಕೋಟಿ ಬಾಚಿಕೊಂಡಿದೆ. 

ಗಂಗೂಬಾಯಿ ಕಾಠಿಯಾವಾಡಿ, 

ಅಲಿಯಾ ಭಟ್ ನಟನೆಯ ಬಯೋಪಿಕ್ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಸಾರಥ್ಯದಲ್ಲಿ ಬಂದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲೂ ಬರ್ಜರಿ ಕಲೆಕ್ಷನ್ ಮಾಡಿತ್ತು. ಗಂಗೂಬಾಯಿ ಸಿನಿಮಾ 208 ಕೋಟಿ ರೂಪಾಯಿ ಬಾಚಿಕೊಂಡಿತ್ತು. 

ದೃಶ್ಯಂ-2, 

ಅಜಯ್ ದೇವಗನ್ ನಟನೆಯ ದೃಶ್ಯಂ-2 ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ದಕ್ಷಿಣ ಭಾರತದ ಸಿನಿಮಾದ ರಿಮೇಕ್ ಆದರೂ ಬಾಲಿವುಡ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ದೃಶ್ಯಂ-2 ಬಾಕ್ಸ್ ಆಫೀಸ್ ನಲ್ಲಿ 274.96 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಂದಹಾಗೆ ಬಾಕ್ಸ್ ಆಫೀಸ್ ಕಲೆಕ್ಷನ್ ಲೆಕ್ಕಾ ಮೂಲಗಳ ಪ್ರಕಾರ ತಿಳಿಸಲಾಗಿದೆ. ಸಿನಿಮಾತಂಡ ಅಧಿಕೃತವಾಗಿ ಬಹಿರಂಗ ಪಡಿಸಿದ್ದಲ್ಲ.   

Follow Us:
Download App:
  • android
  • ios