Popular Indian Stars; ಅತ್ಯಂತ ಜನಪ್ರಿಯ ಸ್ಟಾರ್‌ಗಳ ಪಟ್ಟಿಯಲ್ಲಿ ಧನುಷ್ ನಂ.1; ಯಶ್‌ಗೆ ಎಷ್ಟನೆ ಸ್ಥಾನ?
2022ರ ಅತ್ಯಂತ ಜನಪ್ರಿಯ ಸ್ಟಾರ್‌ಗಳ ಪಟ್ಟಿ ರಿಲೀಸ್ ಆಗಿದ್ದು ಧನುಷ್ ನಂ.1 ಸ್ಥಾನ ಅಲಂಕರಿಸಿದ್ದಾರೆ.
ಭಾರತದ ಅತ್ಯಂತ ಜನಪ್ರಿಯ ಸ್ಟಾರ್ ಪಟ್ಟೆ ಬಿಡುಗಡೆಯಾಗಿದೆ. IMDb ಬಿಡುಗಡೆ ಮಾಡಿರುವ ಪಟ್ಟೆಯಲ್ಲಿ ತಮಿಳು ನಟ ಧನುಷ್ ಮೊದಲ ಸ್ಥಾನ ಅಲಂಕರಿಸಿದ್ದಾರೆ. IMDbಗೆ 200 ಮಿಲಿಯನ್‌ಗಿಂತಲೂ ಹೆಚ್ಚು ಪೇಜ್ ವ್ಯೂವ್ಸ್ ಗಳ ಆಧಾರದ ಮೇಲೆ IMDb ತನ್ನ ಟಾಪ್ 10 ಪಟ್ಟಿಗಳನ್ನು ರಿಲೀಸ್ ಮಾಡಿದೆ. ಈ ಲಿಸ್ಟ್ ನಲ್ಲಿ ತಮಿಳು ಸ್ಟಾರ್ ಧನುಷ್ ಈ ವರ್ಷದ ಅಗ್ರ ಸ್ಥಾನ ಪಡೆದಿದ್ದಾರೆ. ಈ ವರ್ಷ ನಟ ಧನುಷ್ ದಿ ಗ್ರೇ ಮ್ಯಾನ್ ಮತ್ತು ತಿರುಚಿತ್ರಾಂಬಲಂ ಸೇರಿದಂತೆ ಬಹುಭಾಷೆಯಲ್ಲಿ ಸಿನಿಮಾಗಳು ರಿಲೀಸ್ ಆಗಿದ್ದು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅಂದಹಾಗೆ ಪ್ರತಿವರ್ಷ IMDb ಲಿಸ್ಟ್ ರಿಲೀಸ್ ಮಾಡುತ್ತದೆ. ಮೊದಲ ಸ್ಥಾನ ಧನುಷ್ ಪಡೆದರೆ ಎರಡನೇ ಸ್ಥಾನದಲ್ಲಿ ಬಾಲಿವುಡ್ ನಟಿ ಅಲಿಯಾ ಭಟ್ ಇದ್ದಾರೆ.
ಅಂದಹಾಗೆ ಈ ಪಟ್ಟಿಯಲ್ಲಿ ಕನ್ನಡದ ಏಕೈಕ ನಟ ಸ್ಥಾನ ಪಡೆದಿದ್ದಾರೆ. ಕೆಜಿಎಫ್ ಸ್ಟಾರ್ ರಾಕಿಂಗ್ ಸ್ಟಾರ್ ಟಾಪ್ 10 ಲಿಸ್ಟ್ ನಲ್ಲಿದ್ದಾರೆ. ಅಂದಹಾಗೆ ಯಶ್ 10ನೇ ಸ್ಥಾನ ಅಲಂಕರಿಸಿದ್ದಾರೆ. ಇನ್ನೂ ವಿಶೇಷ ಎಂದರೆ IMDbಬಿಡುಗಡೆ ಮಾಡಿರುವ ಜನಪ್ರಿಯ ಸ್ಟಾರ್ಸ್ ಪಟ್ಟಿಯಲ್ಲಿ ತೆಲುಗಿನ ಮೂವರು ನಟರು ಸ್ಥಾನ ಪಡೆದಿದ್ದಾರೆ. ರಾಮ್ ಚರಣ್, ಜೂ.ಎನ್ ಟಿ ಆರ್ ಮತ್ತು ಅಲ್ಲು ಅರ್ಜುನ್ ಈ ಪಟ್ಟಿಯಲ್ಲಿ ಇರುವುದು ತೆಲುಗು ಅಭಿಮಾನಿಗಳಿಗೆ ಸಂತಸಕ್ಕೆ ಕಾರಣವಾಗಿದೆ.
ಯುಟ್ಯೂಬ್‌ನಲ್ಲೂ 'ಶ್ರೀವಲ್ಲಿ' ಹವಾ; ಅತೀ ಹೆಚ್ಚು ವೀಕ್ಷಿಸಿದ ಹಾಡುಗಳ ಲಿಸ್ಟ್‌ನಲ್ಲಿ ಪುಷ್ಪ ನಂ.1
ಮೊದಲೇ ಸ್ಥಾನ ಧನುಷ್, 2ನೇ ಸ್ಥಾನ ಅಲಿಯಾ ಭಟ್, 3ನೇ ಸ್ಥಾನದಲ್ಲಿ ಐಶ್ವರ್ಯಾ ರೈ ಬಚ್ಚನ್ ಇದ್ದಾರೆ. 4ನೇ ಸ್ಥಾನ ರಾಮ್ ಚರಣ್, ಸಮಂತಾ, ಹೃತಿಕ್ ರೋಷನ್, ಜೂ.ಎನ್ ಟಿ ಆರ್, ಅಲ್ಲು ಅರ್ಜುನ್ ಮತ್ತು ಯಶ್ ಕ್ರಮವಾಗಿ ಇದ್ದಾರೆ.
ರಿಷಬ್ ನೀವು ತುಂಬಾ ಹೆಮ್ಮೆ ಪಡಬೇಕು; 'ಕಾಂತಾರ' ನೋಡಿ ಹೊಗಳಿದ ನಟ ಧನುಷ್
ಈ ಬಗ್ಗೆ ಅಲಿಯಾ ಭಟ್ ಪ್ರತಿಕ್ರಿಯೆ ನೀಡಿದ್ದು ಈ ವರ್ಷ ತುಂಬಾ ವಿಶೇಷವಾದ ವರ್ಷ ಎಂದು ಹೇಳಿದ್ದಾರೆ. '2022 ಸಿನಿಮಾರಂಗದಲ್ಲಿ ನಾನು ಅನುಭವಿಸಿದ ಅತ್ಯಂತ ಸ್ಮರಣೀಯ ವರ್ಷವಾಗಿದೆ. ಈ ವರ್ಷ ನನ್ನ ಎಲ್ಲಾ ಚಿತ್ರಗಳಿಗೆ ಪ್ರೇಕ್ಷಕರು ನೀಡಿದ ಪ್ರೀತಿಗೆ ನಾನು ಶಾಶ್ವತವಾಗಿ ಕೃತಜ್ಞನಾಗಿದ್ದೇನೆ. ನಮ್ಮ ದೇಶದ ಅತ್ಯುತ್ತಮ ಚಲನಚಿತ್ರ ನಿರ್ಮಾಪಕರು ಮತ್ತು ಕಲಾವಿದರೊಂದಿಗೆ ಸಹಕರಿಸಿದ ಗೌರವವನ್ನು ಅನುಭವಿಸುತ್ತೇನೆ. ನಾನು ಕೊನೆಯವರೆಗೂ ಸಿನಿಮಾ ಮಾಡುತ್ತೇನೆ. ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು' ಎಂದು ಅಲಿಯಾ ಭಟ್ ಸಂತಸ ಹಂಚಿಕೊಂಡಿದ್ದಾರೆ.
ಅಂದಹಾಗೆ ಅಲಿಯಾ ಭಟ್ ಅವರಿಗೆ ಈ ವರ್ಷ ವಿಶೇಷ. ಅಲಿಯಾ ನಟನೆಯ ಗಂಗೂಬಾಯಿ ಕಾಠೀಯವಾಡಿ, ಆರ್ ಆರ್ ಆರ್ ಮತ್ತು ಬ್ರಹ್ಮಾಸ್ತ್ರ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಸಿನಿಮಾಗಳ ಜೊತೆಗೆ ವೈಯಕ್ತಿಕ ಜೀವನದಲ್ಲೂ ಅಲಿಯಾ ತುಂಬಾ ಸಂತೋಷವಾಗಿದ್ದಾರೆ. ರಣಬೀರ್ ಕಪೂರ್ ಜೊತೆ ಹಸೆಮಣೆ ಏರಿದರು. ಸದ್ಯ ಹೆಣ್ಣು ಮಗುವಿನ ತಾಯಿ ಆಗಿದ್ದಾರೆ. ಹಾಗಾಗಿ ಅಲಿಯಾಗೆ ಈ ವರ್ಷ ತುಂಬಾ ವಿಶೇಷವಾಗಿದೆ.