ಯುಟ್ಯೂಬ್‌ನಲ್ಲೂ 'ಶ್ರೀವಲ್ಲಿ' ಹವಾ; ಅತೀ ಹೆಚ್ಚು ವೀಕ್ಷಿಸಿದ ಹಾಡುಗಳ ಲಿಸ್ಟ್‌ನಲ್ಲಿ ಪುಷ್ಪ ನಂ.1

ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಸಿನಿಮಾದ ಹಾಡುಗಳು ಈ ವರ್ಷದ ಅತೀ ಹೆಚ್ಚು ವೀಕ್ಷಣೆ ಕಂಡ ಹಾಡುಗಳ ಲಿಸ್ಟ್‌ನಲ್ಲಿ ಟಾಪ್ ಸ್ಥಾನ ಪಡೆದುಕೊಂಡಿವೆ. 

Allu Arjun starrer Pushpa songs Srivalli Saami Saami Oo Antava Mawa dominate on YouTube sgk

ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಸಿನಿಮಾದ ಹಾಡುಗಳು ಈ ವರ್ಷದ ಅತೀ ಹೆಚ್ಚು ವೀಕ್ಷಣೆ ಕಂಡ ಹಾಡುಗಳ ಲಿಸ್ಟ್‌ನಲ್ಲಿ ಟಾಪ್ ಸ್ಥಾನ ಪಡೆದುಕೊಂಡಿವೆ. ಯೂಟ್ಯೂಬ್ 2022ರ ವರ್ಷಾಂತ್ಯದ ಅತೀ ಹೆಚ್ಚು ವೀಕ್ಷಣೆ ಕಂಡ ಹಾಡುಗಳ ಪಟ್ಟಿ ರಿಲೀಸ್ ಮಾಡಿದ್ದು ಅದರಲ್ಲಿ ರಶ್ಮಿಕಾ ನಟನೆಯ ಶ್ರೀವಲ್ಲಿ ಹಾಡು ಮೊದಲ ಸ್ಥಾನದಲ್ಲಿದೆ. 2023 ಪ್ರಾರಂಭಕ್ಕೂ ಮೊದಲು ಯೂಟ್ಯೂಬ್ ಮ್ಯೂಸಿಕ್ ವಿಡಿಯೋ ಲಿಸ್ಟ್ ರಿಲೀಸ್ ಮಾಡಿದ್ದು ಪುಷ್ಪ ಹಾಡುಗಳು ಸಂಗೀತ  ಪ್ರೀಯರ ಹೃದಯ ಗೆದ್ದಿವೆ. ಪುಷ್ಪ ಸಿನಿಮಾದ ಶ್ರೀವಲ್ಲಿ, ಸಾಮಿ ಸಾಮಿ  ಹಾಗೂ ಊ ಅಂಟಾವ ಮಾವ ಹಾಡುಗಳು ಟಾಪ್ ಲಿಸ್ಟ್‌ನಲ್ಲಿ ಇವೆ. ಅಂದಹಾಗೆ ಜನವರಿ 1ರಿಂದ ಅಕ್ಟೋಬರ್ 30ರ ವರೆಗಿನ ಡಾಟಾವನ್ನು ಪರಿಗಣಿಸಿ ಲಿಸ್ಟ್ ರಿಲೀಸ್ ಮಾಡಲಾಗಿದೆ. 

ಮೊದಲ ಸ್ಥಾನದಲ್ಲಿ ಪುಷ್ಪ ಸಿನಿಮಾ ಶ್ರೀವಲ್ಲಿ ಹಾಡು ಜಾಗ ಪಡೆದಿದೆ. ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಹೆಜ್ಜೆ ಹಾಕಿರುವ ಈ ಹಾಡು ಅತೀ ಹೆಚ್ಚು ವೀಕ್ಷಣೆ ಪಡೆದ ಹಾಡಿನ ಪಟ್ಟಿಯಲ್ಲಿ ಟಾಪ್ ನಲ್ಲಿದೆ. 2ನೇ ಸ್ಥಾನದಲ್ಲಿ ದಳಪತಿ ವಿಜಯ್ ಮತ್ತು ಪೂಜಾ ಹೆಗ್ಡೆ ನಟನೆಯ ಬೀಸ್ಟ್ ಸಿನಿಮಾ ಹಾಡು ಇರುವುದು ವಿಶೇಷ. ಈ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ ಆದರೆ ಹಾಡು ಸಿಕ್ಕಾಪಟ್ಟೆ ಹಿಟ್ ಆಗಿತ್ತು. 3ನೇ ಸ್ಥಾನದಲ್ಲಿ ಪುಷ್ಪ ಸಿನಿಮಾದ ಸಾಮಿ ಸಾಮಿ...ಹಾಡು ಇದೆ. 4ನೇ ಸ್ಥಾನದಲ್ಲಿ ಕಚ್ಚಾ ಬಾದಾಮ್ ಹಾಡು ಜಾಗ ಪಡೆದುಕೊಂಡಿದೆ. 7ನೇ ಸ್ಥಾನದಲ್ಲಿ ಪುಷ್ಪ ಸಿನಿಮಾ ಊ ಅಂಟಾವ ಮಾಮ...ಹಾಡು ಇದೆ. ಟಾಪ್ 10 ಪಟ್ಟಿಯಲ್ಲಿ ಕನ್ನಡ ಯಾವ ಸಿನಿಮಾದ ಹಾಡುಗಳು ಕೂಡ ಇಲ್ಲ.

Pushpa 2; ಅಲ್ಲು ಅರ್ಜುನ್ ಸಿನಿಮಾಗೆ ವಿದೇಶಿ ವಿಲನ್ ಎಂಟ್ರಿ; ನಿರೀಕ್ಷೆ ಹೆಚ್ಚಿಸಿದ ಸುಕುಮಾರ್

ಪುಷ್ಪ ಸಿನಿಮಾ ರಿಲೀಸ್ ಆಗಿ ವರ್ಷದ ಮೇಲಾದರೂ ಇನ್ನೂ ಹವಾ ಕಡಿಮೆ ಆಗಿಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆದ ಪುಷ್ಪ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಿಂದಿಯಲ್ಲಿ ಅಲ್ಲು ಅರ್ಜುನ್ ಸಿನಿಮಾವನ್ನು ಪ್ರೇಕ್ಷಕರು ಅಪ್ಪಿ ಕೊಂಡರು. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. 350 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಪುಷ್ಪ ಸಿನಿಮಾ ಇತ್ತೀಚಿಗಷ್ಟೆ ರಷ್ಯಾದಲ್ಲೇ ರಿಲೀಸ್ ಆಗಿದೆ. ಡಿಸೆಂಬರ್ 1ರಂದು ಮಾಸ್ಕೋದಲ್ಲಿ ಮೊದಲ ಪ್ರದರ್ಶನ ಕಂಡಿತು. ಸಿನಿಮಾ ರಿಲೀಸ್ ವೇಳೆ ಇಡೀ ಪುಷ್ಪ ತಂಡ ಹಾಜರಿತ್ತು. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ನಿರ್ದೇಶಕ ಸುಕುಮಾರ್ ಸೇರಿದಂತೆ ಅನೇಕರು ರಷ್ಯಾಗೆ ತೆರಳಿದ್ದರು. 

ರಷ್ಯಾ ಭಾಷೆಯಲ್ಲಿ ರಶ್ಮಿಕಾ ಮಂದಣ್ಣ- ಅಲ್ಲು ಅರ್ಜುನ್ ನಟನೆಯ ಬ್ಲಾಕ್‌ಬಸ್ಟರ್ 'ಪುಷ್ಪ'; ಯಾವಾಗ ರಿಲೀಸ್?

ಪುಷ್ಪ ಸಕ್ಸಸ್ ಬಳಿಕ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಇಬ್ಬರೂ ಪಾರ್ಟ್-2ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಪುಷ್ಪ-2 ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ನಿರ್ದೇಶಕ ಸುಕುಮಾರ್ ಮೊದಲ ಭಾಗ ಸಕ್ಸಸ್ ಆದ ಬಳಿಕ ಕಥೆಯ ವಿಭಾಗದಲ್ಲಿ ಮತ್ತಷ್ಟು ಬದಲಾವಣೆ ಮಾಡಿಕೊಳ್ಳುವ  ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ. ಅಲ್ಲು ಅರ್ಜುನ್, ಫಹಾದ್ ಫಾಸಿಲ್, ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕರು ಪಾರ್ಟ್-2ನಲ್ಲಿ ನಟಿಸುತ್ತಿದ್ದಾರೆ. ಇನ್ನೂ ಯಾವೆಲ್ಲ ಕಲಾವಿದರೂ ಸೇರಿಕೊಳ್ಳಲಿದ್ದಾರೆ ಎಂದು ಕಾದುನೋಡಬೇಕು.  

  

Latest Videos
Follow Us:
Download App:
  • android
  • ios