KGF 2: ಯಶ್ ಗಿಂತ 9 ವರ್ಷ ಚಿಕ್ಕವರು ಅಮ್ಮನ ಪಾತ್ರ ಮಾಡಿದ ಅರ್ಚನಾ ಜೋಯಿಸ್! ಹೀರೋಯಿನ್‌ಗಿಂತಲೂ ಚಿಕ್ಕವಳೀಕೆ!
KGF 2 ಸಿನಿಮಾ ವಿಶ್ವಾದ್ಯಂತ ಫೇಮಸ್ ಆಗ್ತಿದೆ. ರಾಕಿಭಾಯ್ ಜೊತೆಗೆ ಅಮ್ಮನ ಪಾತ್ರದ ಸೆಂಟಿಮೆಂಟಿಗೂ ಅಪಾರ ಮೆಚ್ಚುಗೆ ಬಂದಿದೆ. ಆದರೆ ಇದರಲ್ಲಿ ರಾಕಿಭಾಯ್ ಅಮ್ಮನ ಪಾತ್ರ ಮಾಡಿದ ಅರ್ಚನಾ ಜೋಯಿಸ್ ಅವರಿಗಿಂತ 9 ವರ್ಷ ಚಿಕ್ಕವರು. ಈ ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿಗಿಂತಲೂ 2 ವರ್ಷ ಚಿಕ್ಕವರು. ಈ ನಟಿಯ ಬಗ್ಗೆ ಇಂಟರೆಸ್ಟಿಂಗ್ ಡೀಟೇಲ್ಸ್.
ಅರ್ಚನಾ ಜೋಯಿಸ್ (Archana Jois) ಇನ್ನೂ ಇಪ್ಪತ್ತೇಳರ ಹರೆಯದ ಹುಡುಗಿ. ಈಕೆ ಸದ್ಯಕ್ಕೆ KGF 2 ಚಿತ್ರದ ರಾಕಿಭಾಯ್ ಅಮ್ಮನ ಪಾತ್ರದಲ್ಲೇ ವರ್ಲ್ಡ್ ಫೇಮಸ್ ಆಗಿದ್ದಾರೆ. ಕೆಜಿಎಫ್ 2 ಚಿತ್ರದಲ್ಲಿ ತಾಯಿ ಸೆಂಟಿಮೆಂಟನ್ನು (Mother sentiment) ಬಹಳ ಚೆನ್ನಾಗಿ ತೋರಿಸಿದ್ದಾರೆ ಪ್ರಶಾಂತ್ ನೀಲ್ (Prashanth Neel). ಅಫ್‌ಕೋರ್ಸ್ ಇಡೀ ಸಿನಿಮಾ ನಿಂತಿರೋದೇ ತಾಯಿ ಮಗನ ಸೆಂಟಿಮೆಂಟಿನ ಬೇಸ್ ಮೇಲೆ. ಅಮ್ಮನಿಗೆ ಈ ಜಗತ್ತಿನ ಚಿನ್ನವನ್ನೆಲ್ಲ ತಂದು ಕೊಡ್ತೀನಿ ಅನ್ನುವ ಮಗ ಹೇಗೆ ಇಡೀ ವಿಶ್ವದ ಚಿನ್ನದ ಸರದಾರ ಆದ, ಇಷ್ಟೆಲ್ಲ ಆದರೂ ಅಮ್ಮನ ಗೋರಿ ಮುಂದೆ ಹನಿಗಣ್ಣಾಗುವ, ನೋವಾದಾಗಲೆಲ್ಲ ಅಮ್ಮನ ಸಂತೈಸುವಿಕೆ ನೆನಪಾಗಿ ಧೈರ್ಯ ತಂದುಕೊಳ್ಳುವ ರಾಕಿಬಾಯ್ ಕಥೆಯೇ ಸಿನಿಮಾದ ತಿರುಳು. ರಾಕಿಭಾಯ್ ಇನ್ನೇನು ಸತ್ತೇಹೋದ ಅನ್ನುವಾಗ ಆತನನ್ನು ಎಬ್ಬಿಸಿ ಕಳಿಸೋದು ಎಂದೋ ತೀರಿಕೊಂಡ ಅಮ್ಮನೇ. ಕೊನೆಗೆ ಅಮ್ಮನ ಸಮಾಧಿಯನ್ನೇ ಎತ್ತಿ ತನ್ನ ಮನೆಯೆದುರು ತಂದು ನಿಲ್ಲಿಸುವ ಮೂಲಕ ರಾಕಿಭಾಯ್ ಅಮ್ಮನ ಬಗೆಗಿನ ವ್ಯಾಮೋಹವನ್ನು ತೋರಿಸುತ್ತಾನೆ. ಪ್ರಶಾಂತ್ ನೀಲ್ ಅವರಿಗೆ ಅರ್ಚನಾ ಅವರ ಒಂದು ಆಡಿಶನ್ ನೋಡಿದ ಕೂಡಲೇ ನನ್ನ ಸಿನಿಮಾದ ತಾಯಿ ಪಾತ್ರ ಈಕೆಯೇ ಮಾಡಬೇಕು ಅನಿಸಿತಂತೆ. ಹದಿನಾರು ದಾಟಿ ಹದಿನೇಳರ ಹರೆಯದಲ್ಲಿರುವ ಯಂಗ್ ಮದರ್ (young mother) ಪಾತ್ರವದು. ತಾಯಿ ಪಾತ್ರ ಅನ್ನೋ ಕಾರಣಕ್ಕೆ ಆರಂಭದಲ್ಲಿ ಇದನ್ನು ಅರ್ಚನಾ ನಿರಾಕರಿಸಿದರೂ ಪ್ರಶಾಂತ್ ನೀಲ್ ಅವರ ಒತ್ತಾಯಕ್ಕೆ, ಗುರುಗಳ ಮಾತಿಗೆ ಮಣಿದು ಪಾತ್ರ ಮಾಡಲು ಒಪ್ಪಿಕೊಳ್ತಾರೆ.
ಮೇ 27ಕ್ಕೆ ಅಮೆಜಾನ್ ಪ್ರೈಮ್‌ನಲ್ಲಿ ಕೆಜಿಎಫ್ 2
ಇಂಥಾ ತಾಯಿ ಪಾತ್ರವನ್ನು ಅದ್ಭುತವಾಗಿ ನಟಿಸಿ ವಿಮರ್ಶಕರಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರ ಮೆಚ್ಚುಗೆಗೆ ಕಾರಣರಾದವರು ಅರ್ಚನಾ ಜೋಯಿಸ್. ವಿಶೇಷ ಅಂದರೆ ಈಕೆ ನಾಯಕ ಯಶ್ (Yash) ಗಿಂತ ಎಂಟು ವರ್ಷ ಚಿಕ್ಕವರು. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಯಶ್‌ಗೆ ನಾಯಕಿಯಾಗಿ ನಟಿಸಿದ ಶ್ರೀನಿಧಿ ಶೆಟ್ಟಿ (Srinidhi shetty) ಅವರಿಗಿಂತಲೂ ಎರಡು ವರ್ಷ ಚಿಕ್ಕವರು. ಯಶ್ ಹುಟ್ಟಿರೋದು 1986, ಜನವರಿ 8ರಂದು. ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಅವರ ಡೇಟ್ ಆಫ್ ಬರ್ತ್ 21 ಅಕ್ಟೋಬರ್ 1992. ಆದರೆ ಕೆಜಿಎಫ್ 2 ಚಿತ್ರದಲ್ಲಿ ಯಶ್ ತಾಯಿ ಪಾತ್ರದಲ್ಲಿ ಮಿಂಚಿದ ಅರ್ಚನಾ ಜೋಯಿಸ್ ಜನ್ಮದಿನಾಂಕ 24 ಡಿಸೆಂಬರ್ 1994. ಅರ್ಚನಾ ಡಿಸೆಂಬರ್ ಕೊನೆಯ ವಾರ ಹುಟ್ಟಿರೋ ಕಾರಣ ಯಶ್ ಜನವರಿಯಲ್ಲೇ ಹುಟ್ಟಿರೋ ಕಾರಣ ಇವರಿಬ್ಬರ ವಯಸ್ಸಿನ ಅಂತರ ಒಂಭತ್ತು ವರ್ಷ ಅಂದರೂ ತಪ್ಪಲ್ಲ.
'KGF 2' ನಟಿಯ 'ಮ್ಯೂಟ್' ಸಿನಿಮಾಗೆ ಸಾಥ್ ನೀಡಿದ ಬಾಲಿವುಡ್ ಬೆಡಗಿ ರವೀನಾ ಟಂಡನ್
ಸಂಪ್ರದಾಯಸ್ಥ ಐಯ್ಯಂಗಾರಿ ಬ್ರಾಹ್ಮಣ ಕುಟುಂಬದಲ್ಲಿ ಜನಸಿದ ಅರ್ಚನಾ ಜೋಯಿಸ್ ಮಾಡೆಲಿಂಗ್‌ನಲ್ಲೂ ಮಿಂಚಿದವರು. ಶಾಸ್ತ್ರೀಯ ನೃತ್ಯ (Classical Dance) ಪರಿಣತೆ. ಮಾಯಾ ರಾವ್ ಎಂಬ ಬೆಂಗಳೂರಿನ ಪ್ರಸಿದ್ಧ ಕಥಕ್ ನೃತ್ಯಗಾರ್ತಿಯ ಶಿಷ್ಯೆಯಾಗಿ ಅರ್ಚನಾ ಅವರಿಂದ ಡ್ಯಾನ್ಸ್ ಪಾಠ ಮಾತ್ರ ಅಲ್ಲ, ಜೀವನ ಪಾಠವನ್ನೂ ಕಲಿತವರು. 'ಯಾವ ಪಾತ್ರವನ್ನೇ ಮಾಡು, ಅದಕ್ಕೆ ನಿನ್ನ 100 percent ಕೊಟ್ಟು ಜೀವ ತುಂಬಬೇಕು. ಸಣ್ಣ ಪಾತ್ರ ದೊಡ್ಡ ಪಾತ್ರ ಅಂತೆಲ್ಲ ಏನೂ ಇಲ್ಲ. ಪ್ರತಿಯೊಂದು ಪಾತ್ರಕ್ಕೂ ಅದರದೇ ವಿಶೇಷತೆ ಇರುತ್ತೆ. ಅದನ್ನು ಅರ್ಥಮಾಡಿಕೊಂಡು ನಟಿಸಿದರೆ ಖಂಡಿತಾ ಮುಂದೆ ಬರುತ್ತೀಯ..' ಅಂತ ಮಾಯಾ ರಾವ್ ಅವರು ಹೇಳಿದ್ದನ್ನೇ ಅರ್ಚನಾ ಲೈಫಲ್ಲಿ ಬಹಳ ಅಚ್ಚುಕಟ್ಟಾಗಿ ಪಾಲಿಸುತ್ತಾರೆ. ಇತ್ತೀಚೆಗೆ ಸೈಮಾ ಅವಾರ್ಡ್ (Siima Award)ವೇದಿಕೆಯಲ್ಲೂ ಈ ವಿಚಾರ ಹಂಚಿಕೊಂಡರು. ಅರ್ಚನಾ ಅವರಿಗೆ ಸಂಸ್ಕೃತ ಜ್ಞಾನವೂ ಇದೆ. ಸಂಸ್ಕೃತದಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ಅರ್ಚನಾ ಜೋಯಿಸ್ ಕಿರುತೆರೆಯ 'ತಕಧಿಮಿತಾ' ಡ್ಯಾನ್ಸ್ ಶೋ, (Takadhimita Dance show) ಧಾರಾವಾಹಿಗಳಲ್ಲೂ ಮಿಂಚಿದವರು.
KGF 2 : ಮಾತೃಪ್ರೇಮದ ಗಗನ ನೀ ಹಾಡಿಗೆ 2.6 ಮಿಲಿಯನ್‌ಗೂ ಅಧಿಕ ವೀಕ್ಷಣೆ
ಅರ್ಚನಾಗೆ ಚಿಕ್ಕ ವಯಸ್ಸಲ್ಲೇ ಮದುವೆ ಆಗಿದೆ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪತಿ ಶ್ರೇಯಸ್ (Shreyas Udupa) ಜೊತೆಗಿರುವ ಫೋಟೋ ಶೇರ್ ಮಾಡುತ್ತಿರುತ್ತಾರೆ. ಕೆಲವೊಮ್ಮೆ ಶ್ರೇಯಸ್ ಅವರನ್ನು 'ಇವ್ರು ರಾಕಿಭಾಯ್ ಫಾದರ್ರಾ' ಅಂತ ಜನ ಸೋಷಿಯಲ್ ಮೀಡಿಯಾದಲ್ಲಿ ಕಿಚಾಯಿಸೋದುಂಟು.