'KGF 2' ನಟಿಯ 'ಮ್ಯೂಟ್' ಸಿನಿಮಾಗೆ ಸಾಥ್ ನೀಡಿದ ಬಾಲಿವುಡ್ ಬೆಡಗಿ ರವೀನಾ ಟಂಡನ್
ಬಾಲಿವುಡ್ ಸ್ಟಾರ್ ರವೀನ ಟಂಡನ್ ಕೆಜಿಎಫ್ ಸಿನಿಮಾದ ನಟಿ ಅರ್ಚನಾ ಜೋಯಿಸ್ ನಟನೆಯ ಮ್ಯೂಟ್ ಸಿನಿಮಾದ ಟ್ರೈಲರ್ ಲಾಂಚ್ ಮಾಡುತ್ತಿದ್ದಾರೆ. ಏಪ್ರಿಲ್ 9ರಂದು ಮ್ಯೂಟ್ ಸಿನಿಮಾದ ಟ್ರೈಲರ್ ಕನ್ನಡ ಸೇರಿದಂತೆ ದಕ್ಷಿಣ ಭಾರತ ಎಲ್ಲಾ ಭಾಷೆಯಲ್ಲೂ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.
ಈಗಾಗಲೇ ತನ್ನ ಟೈಟಲ್ ಹಾಗೂ ಫಸ್ಟ್‌ಲುಕ್‌ನಿಂದ ಸಾಕಷ್ಟು ಕುತೂಹಲ ಮೂಡಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ಮ್ಯೂಟ್(Mute movie) ತೆರೆಗೆ ಬರಲು ಸಜ್ಜಾಗಿದೆ. ಇದೇ ಏಪ್ರಿಲ್ 9(ಶನಿವಾರ)ರಂದು ಸಿನಿಮಾದ ಟ್ರೈಲರ್ ಲಾಂಚ್ ಆಗುತ್ತಿದೆ. ಬಾಲಿವುಡ್ ಬೆಡಗಿ ರವೀನಾ ಟಂಡನ್(Raveena Tandon) ಕನ್ನಡ ಸಿನಿಮಾದ ಟ್ರೈಲರ್ ಲಾಂಚ್ ಮಾಡುತ್ತಿದ್ದಾರೆ. ಅಂದಹಾಗೆ ಏಕಕಾಲದಲ್ಲಿ ಕನ್ನಡ, ತೆಲುಗು, ಮಾಲಯಾಳಂ, ತಮಿಳು ಮತ್ತು ಹಿಂದಿ ಐದೂ ಭಾಷೆಗಳಲ್ಲೂ ಮ್ಯೂಟ್ ಟ್ರೇಲರ್ ಅನ್ನು ಸಾಮಾಜಿಕ ತಾಣಗಳ ಮೂಲಕ ಬಿಡುಗಡೆ ಮಾಡುತ್ತಿದ್ದಾರೆ ನಟಿ ರವೀನಾ ಟಂಡನ್.
ಅಂದಹಾಗೆ ಬಾಲಿವುಡ್ ನಟಿ ರವೀನಾ ಟಂಡನ್ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದ ಟ್ರೈಲರ್ ಲಾಂಚ್ ಮಾಡುತ್ತಿದ್ದಾರೆ. ಮ್ಯೂಟ್ ಸಿನಿಮಾದಲ್ಲಿ ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದ ಅರ್ಚನಾ ಜೋಯಿಸ್(Archana Jois) ನಾಯಕಿಯಾಗಿ ನಟಿಸಿರುವ ಸಿನಿಮಾ. ಕೆಜಿಎಫ್ ಸಿನಿಮಾದಲ್ಲಿ ರಾಕ್ ಭಾಯ್ ಅಮ್ಮನ ಪಾತ್ರದಲ್ಲಿ ಅರ್ಚನಾ ಕಾಣಿಸಿಕೊಂಡಿದ್ದರು. ಈ ಪಾತ್ರ ಅರ್ಚನಾ ಅವರಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತ್ತು. ಇದೀಗ ಅರ್ಚನಾ ಮ್ಯೂಟ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಕೆಜಿಎಫ್-2 ಬಿಡುಗಡೆಗೂ ಮೊದಲು ಅರ್ಚನಾ ಮ್ಯೂಟ್ ಟ್ರೇಲರ್ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.
ಇನ್ನು ಈ ಸಿನಿಮಾದಲ್ಲಿ ಅರ್ಚನಾ ಜೊತೆ ತಮಿಳಿನ ಪ್ರಖ್ಯಾತ ನಟ ಆಡುಕಲಂ ನರೇನ್ ಕೂಡ ಅಭಿನಯಿಸಿದ್ದಾರೆ. ಸಿದ್ದಾರ್ಥ್ ಮಾಧ್ಯಮಿಕ, ತೇಜಸ್ ವೆಂಕಟೇಶ್ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ. ಇ.ಕೆ.ಪಿಕ್ಚರ್ಸ್ ಬ್ಯಾನರ್‌ನಲ್ಲಿ ಮುಂಗಾರುಮಳೆ-2 ಖ್ಯಾತಿಯ ಜಿ.ಗಂಗಾಧರ್ ಮ್ಯೂಟ್ ಚಿತ್ರದಕ್ಕೆ ಬಂಡವಳ ಹೂಡಿದ್ದಾರೆ. ಜಿ.ಗಂಗಾಧರ್ ಅವರು ಮುಂಗಾರುಮಳೆ ಮತ್ತು ಮೊಗ್ಗಿನ ಮನಸು ಚಿತ್ರಗಳಲ್ಲೂ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದರು. ಇನ್ನು ಮೊಗ್ಗಿನ ಮನಸ್ಸು ಖ್ಯಾತಿಯ ನಿರ್ದೇಶಕ ಶಶಾಂಕ್ ಅವರೊಂದಿಗೆ ಮುಂಗಾರುಮಳೆ-2 ರಲ್ಲಿ ಕೆಲಸ ಮಾಡಿದ್ದ ಪ್ರಶಾಂತ್ ಚಂದ್ರ ಸಾರಥ್ಯದಲ್ಲಿ ಮ್ಯೂಟ್ ಸಿನಿಮಾ ಮೂಡಿಬಂದಿದೆ.
KGF 2; ದೆಹಲಿ ಬಳಿಕ ಮುಂಬೈನಲ್ಲಿ ಯಶ್, ಸಂಜಯ್ ದತ್, ರವೀನಾ ಭರ್ಜರಿ ಪ್ರಚಾರ
ತೇಜಸ್ ಪಬ್ಲಿಕೇಷನ್ ಡಿಜಿಟಲ್ ತಂತ್ರಗಳನ್ನು ರೂಪಿಸಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದು, ನಟ ರಿಷಿ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಿದ್ದರೆ, ಡಾಲಿ ಧನಂಜಯ್ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡಿದ್ದರು. ಇದೀಗ ಚಿತ್ರದ ಟ್ರೇಲರ್ ಬಿಡುಗಡೆಗೊಳ್ಳುತ್ತುದ್ದು ರವೀನಾ ರಂಡನ್ ರಿಲೀಸ್ ಮಾಡುತ್ತಿರುವುದು ವಿಶೇಷ. ಕೆಜಿಎಫ್-2 ಸಿನಿಮಾದಲ್ಲಿ ಅರ್ಚನಾ ಮತ್ತು ರವೀನಾ ಇಬ್ಬರೂ ನಟಿಸಿದ್ದು ಇಬ್ಬರ ಬಾಂಧವ್ಯ ಉತ್ತಮವಾಗಿದೆ. ಹಾಗಾಗಿ ತನ್ನ ಸಿನಿಮಾದಲ್ಲಿ ನಟಿಸಿದ್ದ ಸಹನಟಿ ಅರ್ಚನಾ ಅವರ ಸಿನಿಮಾಗೆ ಸಾಥ್ ನೀಡಿದ್ದಾರೆ ರವೀನಾ. ಸದ್ಯ ಕೆಜಿಎಫ್-2 ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ರವೀನಾ ಪ್ರಚಾರದ ನಡುವೆಯೂ ಮ್ಯೂಟ್ ಟ್ರೈಲರ್ ರಿಲೀಸ್ ಮಾಡಿ ಸಿನಿಮಾತಂಡಕ್ಕೆ ಶುಭಹಾರೈಸಲಿದ್ದಾರೆ.
ಕಪಿಲ್ ಶರ್ಮಾ ಜೊತೆ ಟಿಪ್ ಬರ್ಸಾ ಪಾನಿ ಹಾಡಿಗೆ ಹೆಜ್ಜೆ ಹಾಕಿದ ರವೀನಾ ಟಂಡನ್!
ಇನ್ನು ಮ್ಯೂಟ್ ಚಿತ್ರ ರೋಚಕ ರಸದೌತಣ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ನಿರ್ದೇಶಕ ಪ್ರಶಾಂತ್ ಚಂದ್ರ ಹೇಳಿದ್ದು, ಪಾತ್ರಗಳ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಸದ್ಯ ಟ್ರೈಲರ್ ಮೂಲಕ ಪ್ರೇಕ್ಷಕರ ಮುಂದೆ ಬರ್ತಿರುವ ಮ್ಯೂಟ್ ಚಿತ್ರವನ್ನು ತೆರೆಮೇಲೆ ನೋಡಲು ಇನ್ನು ಸ್ವಲ್ಪ ದಿನಗಳು ಕಾಯಲೇಬೇಕು.