ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ವಿಚ್ಛೇದನ ಪಡೆಯಲಿದ್ದಾರೆ ಎಂದು ಜ್ಯೋತಿಷಿ ಸುಶೀಲ್ ಕುಮಾರ್ ಭವಿಷ್ಯ ನುಡಿದಿದ್ದಾರೆ. ಅವರ ಪ್ರಕಾರ, ಇವರಿಬ್ಬರ ದಾಂಪತ್ಯ ಹೆಚ್ಚು ದಿನ ಉಳಿಯುವುದಿಲ್ಲ. ಮದುವೆಯ ಸಂದರ್ಭದಲ್ಲಿಯೇ ಈ ಬಗ್ಗೆ ಬರೆದಿದ್ದೆ ಎಂದಿದ್ದಾರೆ. ಸೈಫ್‌ಗೆ ಯಾವುದೇ ಜೀವ ಬೆದರಿಕೆ ಇಲ್ಲ, ಸಲ್ಮಾನ್ ಖಾನ್‌ಗೂ ಅಪಾಯವಿಲ್ಲ ಎಂದು ಅವರು ಹೇಳಿದ್ದಾರೆ. ಈ ಸುದ್ದಿ ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿದೆ.

ಬಾಲಿವುಡ್ (Bollywood) ನಲ್ಲಿ ಸದ್ಯ ಡಿವೋರ್ಸ್ (Divorce) ಟ್ರೆಂಡ್ ನಡೆಯುತ್ತಿದೆ. ಒಂದಾದ್ಮೇಲೆ ಒಂದು ಜೋಡಿ ಬೇರೆಯಾಗ್ತಿವೆ. ಈ ಮಧ್ಯೆ ಬಾಲಿವುಡ್ ಹಾಟ್ ಜೋಡಿ ಎಂದೇ ಪ್ರಸಿದ್ಧಿ ಪಡೆದಿರುವ ಕರೀನಾ ಕಪೂರ್ ಖಾನ್ (Kareena Kapoor Khan) ಹಾಗೂ ಸೈಫ್ ಅಲಿ ಖಾನ್ (Saif Ali Khan) ಕೂಡ ಬೇರೆಯಾಗ್ತಾರೆ ಎನ್ನುವ ಸುದ್ದಿ ಬಂದಿದೆ. ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಇನ್ನು ಒಂದುವರೆ ವರ್ಷದೊಳಗೆ ಬೇರೆ ಆಗ್ತಾರೆ, ವಿಚ್ಛೇದನ ಪಡೆಯುತ್ತಾರೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

ಇತ್ತೀಚೆಗೆ ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಮಾತನಾಡಿದ ಜ್ಯೋತಿಷಿ ಸುಶೀಲ್ ಕುಮಾರ್ ಸಿಂಗ್ ಈ ವಿಷ್ಯವನ್ನು ಬಹಿರಂಗಪಡಿಸಿದ್ದಾರೆ. ಸುಶೀಲ್ ಕುಮಾರ್ ಸಿಂಗ್ ಪ್ರಕಾರ, ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ದಾಂಪತ್ಯ ಹೆಚ್ಚು ದಿನ ಬಾಳೋದಿಲ್ಲ. ಹೆಚ್ಚೆಂದ್ರೆ ಇನ್ನು ಒಂದುವರೆ ವರ್ಷ ಇಬ್ಬರು ಒಟ್ಟಿಗೆ ಇರಬಹುದು ಎಂಬುದು ಸುಶೀಲ್ ಕುಮಾರ್ ಸಿಂಗ್ ಅಭಿಪ್ರಾಯ.

ಸಲ್ಮಾನ್‌ ಖಾನ್‌ ಮತ್ತು ಶಾರುಖ್‌ ಖಾನ್‌ ಒಂದೇ ವರ್ಷ ಸಾಯುತ್ತಾರಂತೆ!

ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ ಮದುವೆ ಸಮಯದಲ್ಲಿಯೇ ಈ ದಾಂಪತ್ಯ ಹೆಚ್ಚು ದಿನ ನಡೆಯೋದಿಲ್ಲ ಎಂದು ಸುಶೀಲ್ ಕುಮಾರ್ ತಮ್ಮ ಬ್ಲಾಗ್ ನಲ್ಲಿ ಬರೆದಿದ್ದರಂತೆ. ಈಗ ಸೈಫ್ ಮತ್ತು ಕರೀನಾ ಆಪ್ತ ಜ್ಯೋತಿಷಿಯಿಂದ ಜಾತಕ ಪಡೆದು ಪರಿಶೀಲನೆ ನಡೆಸಿದ್ದಾರೆ. ಇಬ್ಬರು ವ್ಯಕ್ತಿಗಳ ಮದುವೆ ಮತ್ತು ವಿಚ್ಛೇದನದ ಬಗ್ಗೆ ತಿಳಿಯಲು ನನಗೆ ಜನ್ಮ ಸಮಯದ ಅಗತ್ಯವಿಲ್ಲ. ಅವರ ಹುಟ್ಟಿದ ದಿನಾಂಕ, ತಿಂಗಳು ಮತ್ತು ವರ್ಷ ತಿಳಿದಿದ್ದರೆ ಸಾಕು ಎಂದು ಸುಶೀಲ್ ಕುಮಾರ್ ಹೇಳಿದ್ದಾರೆ. ಜಾತಕದ ಪ್ರಕಾರ, ಅವರಿಬ್ಬರು ಬೇರೆಯಾಗೋದು ಸ್ಪಷ್ಟವಾಗಿದೆ. ಸುಶೀಲ್ ಕುಮಾರ್ ಪ್ರಕಾರ, ಸೈಫ್ ಅಲಿ ಖಾನ್ ಮತ್ತು ಕರೀನಾ ಮಧ್ಯೆ ಬಿರುಕು ಉಂಟಾಗಲಿದೆ. ಈಗಾಗಲೇ ಇಬ್ಬರು ಮಾತನಾಡ್ತಿಲ್ಲ ಎಂಬುದನ್ನು ಜಾತಕ ಹೇಳ್ತಿದೆ ಎಂದು ಸುಶೀಲ್ ಕುಮಾರ್ ಹೇಳಿದ್ದಾರೆ. ಏನೇ ಹೇಳಿದ್ರೂ, ಯಾವುದನ್ನು ಮರೆಮಾಚಿದ್ರೂ ಜಾತಕ ಎಲ್ಲವನ್ನೂ ಸ್ಪಷ್ಟಪಡಿಸುತ್ತದೆ ಎಂದು ಸುಶೀಲ್ ಕುಮಾರ್ ಹೇಳಿದ್ದಾರೆ.

ಇನ್ನು ಸೈಫ್ ಅಲಿ ಖಾನ್ ಜೀವ ಬೆದರಿಕೆ ಬಗ್ಗೆ ಮಾತನಾಡಿ ಸುಶೀಲ್ ಕುಮಾರ್, ಸೈಫ್ ಅಲಿ ಖಾನ್ ಅವರಿಗೆ ಯಾವುದೇ ಜೀವ ಬೆದರಿಕೆ ಇಲ್ಲ. ಅದು ನೆಪ ಮಾತ್ರ ಎಂದಿದ್ದಾರೆ. ಸೈಫ್ ಅಲಿ ಖಾನ್‌ಗೆ ಯಾವುದೇ ಬೆದರಿಕೆ ಇಲ್ಲ. ಸಲ್ಮಾನ್ ಖಾನ್ ಕೂಡ ಯಾವುದೇ ಅಪಾಯದಲ್ಲಿಲ್ಲ. ಲಾರೆನ್ಸ್ ಬಿಷ್ಣೋಯ್ ಪ್ರಕರಣದಂತೆ, ಅವರಿಗೆ ಏನೂ ಆಗುವುದಿಲ್ಲ. ಅವರಿಗೆ ಏನಾಗುತ್ತದೆಯೋ ಅದು ಅವರ ಆರೋಗ್ಯದ ಕಾರಣದಿಂದಾಗಿರುತ್ತದೆ ಎಂದು ಸುಶೀಲ್ ಕುಮಾರ್ ಹೇಳಿದ್ದಾರೆ. 

ಅಲ್ಲು ಅರ್ಜುನ್ ಚಿತ್ರದಲ್ಲಿ 5 ನಾಯಕಿಯರು, 3 ವಿದೇಶಿ ಮತ್ತು 2 ಭಾರತೀಯರು, ಈ ನಟಿ ಮುಖ್ಯ ಪಾತ್ರದಲ್ಲಿ, ಮುಂದಿನ ಚಿತ್ರ ಯಾವುದು?

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಮದುವೆಯಾಗಿ 13 ವರ್ಷ ಕಳೆದಿದೆ. ಮದುವೆಗೆ ಮುನ್ನ ಇಬ್ಬರು ನಾಲ್ಕು ವರ್ಷ ಪ್ರೀತಿಯ ಬಂಧನದಲ್ಲಿದ್ದರು. ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ 2008 ರಲ್ಲಿ ತಶನ್ ಚಿತ್ರದ ಸೆಟ್‌ನಲ್ಲಿ ಹತ್ತಿರವಾಗಿದ್ದರು. ನಾಲ್ಕು ವರ್ಷ ಡೇಟ್ ಮಾಡಿ 2012 ರಲ್ಲಿ ಮದುವೆಯಾಗಿದ್ದರು. ಇಬ್ಬರಿಗೆ ಮುದ್ದಾದ ಇಬ್ಬರು ಮಕ್ಕಳಿವೆ. ಸೈಫ್ ಅಲಿ ಖಾನ್ ಹಾಗೂ ಕರೀನಾ ಮಧ್ಯೆ ವಯಸ್ಸಿನ ಅಂತ್ರ ಹೆಚ್ಚಿದ್ರೂ, ಈಗಾಗಲೇ ಸೈಫ್ ಮದುವೆಯಾಗಿ ವಿಚ್ಛೇದನ ಪಡೆದಿದ್ದರೂ, ಇಬ್ಬರ ಬಾಂಡಿಂಗ್ ಚೆನ್ನಾಗಿದೆ. ಇಬ್ಬರು ಬೇರೆಯಾಗ್ತಾರೆ ಎನ್ನುವ ಸುದ್ದಿ ಕೇಳಿ ಫ್ಯಾನ್ಸ್ ಕೋಪಗೊಂಡಿದ್ದಾರೆ. ಅಸಂಬದ್ಧ ಭವಿಷ್ಯ ಹೇಳ್ಬೇಡಿ ಎಂದು ಕಿಡಿಕಾರಿದ್ದಾರೆ. ಸಂದರ್ಶನದಲ್ಲಿ ಸುಶೀಲ್ ಕುಮಾರ್, ಶಾರುಕ್ ಖಾನ್ ಮತ್ತು ಸಲ್ಮಾನ್ ಖಾನ್ ಸಾವಿನ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ.