ಅಯ್ಯೋ, ಇದೇನು ಭವಿಷ್ಯವಾಕ್ಯ ಎಂತ ಗಾಬರಿಯಾದಿರಾ? ಹಾಗೊಬ್ಬ ಖ್ಯಾತ ಜ್ಯೋತಿಷಿ ಸ್ಟುಡಿಯೋದಲ್ಲಿಕೂತುಕೊಂಡು ಹೇಳಿದ್ದಾನೆ. ಅವನ ಪ್ರಕಾರ ಅವರಿಬ್ಬರೂ ಸಾಯುವ ವಯಸ್ಸು ಹತ್ತಿರದಲ್ಲೇ ಇದೆ. ಸೈಫ್- ಕರೀನಾ ಡೈವೋರ್ಸ್ ಆಗಲಿದ್ದಾರೆ ಅಂತಲೂ ಹೇಳಿದ್ದಾನೆ!
ಸೂಪರ್‌ಸ್ಟಾರ್‌ಗಳಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಇಬ್ಬರೂ ಒಳ್ಳೆಯ ಫಿಲಂಗಳನ್ನು ಮಾಡುತ್ತ ಬಾಲಿವುಡ್‌ನ ಕಣ್ಮಣಿಗಳಾಗಿಯೇ ಇದ್ದಾರೆ. ಅವರನ್ನು ನೋಡಿದರೆ ಅರುವತ್ತರ ಆಸುಪಾಸಿನ ಹತ್ತಿರ ಇದ್ದಾರೆ ಅಂತ ಗೊತ್ತಾಗುವುದೇ ಇಲ್ಲ. ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ ಮತ್ತು ಯುವ ತಾರೆಯರಂತೆ ಮಿಂಚುತ್ತಿದ್ದಾರೆ. ಅವರ ಅಪಾರ ಅಭಿಮಾನಿಗಳು ಈ ಹೀರೋಗಳನ್ನು ಬೆಂಬಲಿಸುತ್ತಲೇ ಇದ್ದಾರೆ. ಇದರ ನಡುವೆಯೇ ಜ್ಯೋತಿಷಿಯೊಬ್ಬರು ಅವರಿಬ್ಬರ ಸಾವಿನ ಭವಿಷ್ಯ ನುಡಿದಿದ್ದಾರೆ.
ಆ ಜ್ಯೋತಿಷಿಯ ಹೆಸರು ಸುಶೀಲ್ ಕುಮಾರ್ ಸಿಂಗ್. ಇತ್ತೀಚೆಗೆ ಇಬ್ಬರು ಸೂಪರ್‌ಸ್ಟಾರ್‌ಗಳ ನಿಧನವನ್ನು ಅವರು ಭವಿಷ್ಯ ನುಡಿದಿದ್ದಾರೆ. ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಇತ್ತೀಚಿನ ಸಂದರ್ಶನದಲ್ಲಿ, ಸುಶೀಲ್ ಕುಮಾರ್ ಸಿಂಗ್ ಅವರು ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಯಾವಾಗ ಸಾಯುತ್ತಾರೆ ಎಂದು ಭವಿಷ್ಯ ಹೇಳಿದ್ದಾರೆ.
ಶಾರುಖ್ ಮತ್ತು ಸಲ್ಮಾನ್ ಇಬ್ಬರಿಗೂ 2025 ವರ್ಷ ಹೇಗಿರುತ್ತದೆ ಎಂದು ಅವರನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಜ್ಯೋತಿಷಿ, “ಶಾರುಖ್ ಖಾನ್ ಅವರ ಸಮಯ ಉತ್ತಮವಾಗಿದೆ. ಆದರೆ ಸಲ್ಮಾನ್ ಖಾನ್ ಅವರ ಸಮಯವು ಮುಂದಿನ ಕೆಲವು ವರ್ಷಗಳಲ್ಲಿ ಕೆಟ್ಟದಾಗಿದೆ. 2025, 2026, 2027. ಅವರಿಬ್ಬರ ನಡುವೆ ಒಂದು ಸಾಮ್ಯತೆ ಇದೆ. ಸಲ್ಮಾನ್‌ಗೆ ದೊಡ್ಡದೊಂದು ಕಾಯಿಲೆ ಇದೆ ಎಂದು ಗೊತ್ತಾಗಲಿದೆ. ನಾನು ಅದರ ಹೆಸರನ್ನೂ ಹೇಳುವುದಿಲ್ಲ. ಸಲ್ಮಾನ್ ಮತ್ತು ಶಾರುಖ್ ಖಾನ್ ಒಂದೇ ವರ್ಷದಲ್ಲಿ ನಿಧನ ಹೊಂದುತ್ತಾರೆ. 67ನೇ ವಯಸ್ಸಿನಲ್ಲಿ ಅವರು ಇಹಲೋಕ ತ್ಯಜಿಸುತ್ತಾರೆ" ಎಂದರು.
ಸಲ್ಮಾನ್‌ಗೆ ಈಗಾಗಲೇ ಕಾಯಿಲೆ ಇದೆಯಾ ಎಂದು ಜ್ಯೋತಿಷಿಯನ್ನು ಪ್ರಶ್ನಿಸಲಾಯಿತು. ಅದಕ್ಕೆ ಆತ, ಸಲ್ಮಾನ್‌ನ ಕುಂಡಲಿಯಲ್ಲಿ ಆ ರೋಗ ಇದೆ ಎಂದು ನನಗೆ ಕಾಣುತ್ತಿದೆ. ಅವನ ಜೀವನದಲ್ಲಿ ಈ ರೋಗ ಅವನಿಗೆ ಬರಲಿದೆ. ಅದು ಗುಣಪಡಿಸಬಹುದಾದ ಕಾಯಿಲೆಯಲ್ಲ. ಸಲ್ಮಾನ್ ಅವರ ಕೊನೆಯ ದಿನಗಳು ತುಂಬಾ ಕೆಟ್ಟದಾಗಿರುತ್ತವೆ- ಎಂದಿದ್ದಾನೆ. ಈತ ಹೇಳುತ್ತಿರುವುದು ಬಹುಶಃ ಕ್ಯಾನ್ಸರ್ ಬಗೆಗೆ ಇರಬಹುದು.
ಇಷ್ಟೇ ಅಲ್ಲ, ಸೈಫ್ ಮೇಲಿನ ದಾಳಿಯ ಬಗ್ಗೆಯೂ ಕೇಳಲಾಯಿತು. “ನಾನು 2010ರಲ್ಲಿಯೇ ಈ ಭವಿಷ್ಯ ನುಡಿದಿದ್ದೆ, ಸೈಫ್- ಕರೀನಾ ಮದುವೆ ಉಳಿಯುವುದಿಲ್ಲ ಎಂದು ನಾನು ನನ್ನ ಬ್ಲಾಗ್‌ನಲ್ಲಿ ಬರೆದಿದ್ದೆ. ಇವರ ವಿಷಯ ಒಂದೂವರೆ ವರ್ಷದೊಳಗೆ ಬಗೆಹರಿಯುವುದಿಲ್ಲ, ವಿಚ್ಛೇದನ ಸಾಧ್ಯ. ಏನೋ ವಿಷಯಗಳನ್ನು ಮರೆಮಾಡಲಾಗಿದೆ. ಆದರೆ ಕುಂಡಲಿ ಎಲ್ಲವನ್ನೂ ಹೇಳುತ್ತಿದೆ. ನಾನು ಅವರ ಕುಂಡಲಿಗಳನ್ನು ವೈಯಕ್ತಿಕವಾಗಿ ತಿಳಿದಿರುವ ಹಿರಿಯ ಜ್ಯೋತಿಷಿಯಿಂದ ಪಡೆದುಕೊಂಡಿದ್ದೇನೆ.” ಎಂದಿದ್ದಾರೆ.
ಆದರೆ ಇವರ ಭವಿಷ್ಯವಾಣಿಯ ಬಗ್ಗೆ ನೆಟಿಜನ್‌ಗಳು ರೇಗಿದ್ದಾರೆ. "ಒಳ್ಳೆಯ ಜ್ಯೋತಿಷಿಗಳು ಒಬ್ಬ ವ್ಯಕ್ತಿಯ ಸಾವಿನ ಬಗ್ಗೆ ಎಂದೂ ಮಾತಾಡುವುದಿಲ್ಲ" ಎಂದಿದ್ದಾರೆ ಒಬ್ಬರು. "ಭಯಾನಕ ಭವಿಷ್ಯ. ಆದರೆ ಇವನನ್ನು ನಂಬುವುದು ಹೇಗೆ?" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, "ನನ್ನ ಅಜ್ಜ ಜ್ಯೋತಿಷಿ. ಜ್ಯೋತಿಷಿಯ ಮೊದಲ ನಿಯಮವೆಂದರೆ ವ್ಯಕ್ತಿಯ ಸಾವನ್ನು ಎಂದಿಗೂ ಹೇಳಬಾರದು. ಸುಶೀಲ್ ಕುಮಾರ್ ಹೇಳುತ್ತಿರುವುದು ವಿಚಿತ್ರವಾಗಿದೆ" ಎಂದು ಬರೆದಿದ್ದಾರೆ.
ಕೇವಲ 3 ತಿಂಗಳಲ್ಲೇ 3 ಅಪಾರ್ಟ್‌ಮೆಂಟ್ ಮಾರಿದ ಅಕ್ಷಯ್ ಕುಮಾರ್! ದಿವಾಳಿಯಾಗ್ತಿದ್ದಾರಾ ನಟ?
ಒಬ್ಬ ಬಳಕೆದಾರರು, "ಎಲ್ಲಾ ನಕಾರಾತ್ಮಕ ಭವಿಷ್ಯವಾಣಿಗಳು ನಿಜವಾಗುವುದು ಅನಿವಾರ್ಯವಲ್ಲ ಎಂದು ನಾನು ಭಾವಿಸುತ್ತೇನೆ. ಹಿರಿಯರು ಮತ್ತು ಹಿತೈಷಿಗಳ ಪ್ರಾರ್ಥನೆಗಳು ಮತ್ತು ಆಶೀರ್ವಾದಗಳು ವ್ಯತ್ಯಾಸವನ್ನುಂಟುಮಾಡಬಹುದು. ದೇವರು ದಯಾಮಯ" ಎಂದಿದ್ದಾರೆ. "ಅನ್ಯರ ಸಾವಿನ ಬಗ್ಗೆ ನುಡಿಯುವ ಈ ಜ್ಯೋತಿಷಿಗೆ ತನ್ನ ಸಾವು ಯಾವಾಗ ಎಂಬುದು ಗೊತ್ತಿದೆಯಾ?" ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. "ಈತನ ಮಾತುಗಳನ್ನು ಬಾಂಡ್ ಪೇಪರ್‌ನಲ್ಲಿ ಬರೆಸಿಕೊಳ್ಳಬೇಕು, ಅದು ನಿಜವಾಗದಿದ್ದರೆ ಈತನನ್ನು ಜೈಲಿಗೆ ಕಳಿಸಬೇಕು. ಹುಸಿ ಜ್ಯೋತಿಷಿಗಳಿಗೆ ಇದು ಪಾಠ ಆಗಬೇಕು" ಎಂದು ಮತ್ತೊಬ್ಬರು ಟೀಕಿಸಿದ್ದಾರೆ.
'ರಾಮಾಯಣ'ದಲ್ಲಿ ಡಬಲ್ ರೋಲ್ ಮಾಡಿದ್ದ ನಟಿ, ದ್ವೇಷ ತಾಳಲಾರದೇ ಅಮೆರಿಕಾಕ್ಕೆ ಹೋದ್ರಾ?
