Asianet Suvarna News Asianet Suvarna News

ಸಂಬಳ 2 ಲಕ್ಷ, ಟೇಬಲ್​ ಮಾತ್ರ ಸಪರೇಟ್​ ಯಾಕೆ? ಕರೀನಾ ಮಕ್ಕಳ ಇಂಟರೆಸ್ಟಿಂಗ್​ ಸ್ಟೋರಿ!

ಕರೀನಾ ಕಪೂರ್​ ಮಕ್ಕಳನ್ನು ನೋಡಿಕೊಳ್ಳುವ ದಾದಿಯರಿಗೆ ಎರಡು ಲಕ್ಷ ರೂಪಾಯಿ ಸಂಬಳವಿದ್ದು, ಅವರಿಗೆ ಪ್ರತ್ಯೇಕ ಟೇಬಲ್​ ಏಕೆ ಎಂದು ಮಕ್ಕಳ ಪ್ರಶ್ನೆಯ ಇಂಟರೆಸ್ಟಿಂಗ್​ ವಿಷಯ ನಟಿ ಹಂಚಿಕೊಂಡಿದ್ದಾರೆ. 
 

Kareena Kapoor reveals daddies sit at separate table stunned her suc
Author
First Published Sep 12, 2023, 5:09 PM IST

ದುಡಿಯುವ ಮಹಿಳೆಯರ ಮಕ್ಕಳನ್ನು ನೋಡಿಕೊಳ್ಳಲು ಹಲವರ ಮನೆಯಲ್ಲಿ ಕೆಲಸವರು ಇರುವುದು ಸಾಮಾನ್ಯ. ಇನ್ನು ನಟಿಯರ ಮಾತು ಬಂದರೆ ಅದರ ಮಾತೇ ಬೇರೆ. ಅದೇ ರೀತಿ ತಾರಾ ದಂಪತಿ ಕರೀನಾ ಕಪೂರ್​ ಮತ್ತು ಸೈಫ್​ ಅಲಿ ಖಾನ್​ ಅವರ ಮಕ್ಕಳ ವಿಷಯದಲ್ಲಿಯೂ ಅದೇ ರೀತಿ. ಈಗ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.  ಮೊದಲ ಮಗು  ತೈಮೂರು ಆಲಿ ಖಾನ್​ ಒಬ್ಬನೇ ಹುಟ್ಟಿದ್ದ ಸಂದರ್ಭದಲ್ಲಿ ಆತನನ್ನು ನೋಡಿಕೊಳ್ಳಲು ದಾದಿಯನ್ನು ನೇಮಕ ಮಾಡಲಾಗಿತ್ತು. ತೈಮೂರ್​ ಕರೀನಾ ಕಪೂರ್​ ಜೊತೆಗಿಂತ ಆತನನ್ನು ನೋಡಿಕೊಳ್ಳುವ ದಾದಿ ಜೊತೆ ನೋಡಿದ್ದೆ ಹೆಚ್ಚು ಎಲ್ಲರೂ. ಏಕೆಂದರೆ ತೈಮೂಲು ಹುಟ್ಟುತ್ತಲೇ ಕರೀನಾ ತಡ ಮಾಡದೇ ಬಾಡಿ ಮೆಂಟೆನ್​ ಮಾಡಲು  ಜಿಮ್​ಗೆ ಹೋಗಲು ಶುರು ಮಾಡಿದ್ದರು. ಆದ್ದರಿಂದ ತೈಮೂರು ಆಡಿ ಬೆಳದಿದ್ದು ಈ ದಾದಿಯ ಬಳಿಯೇ. ತೈಮೂರ್​ಗೆ ಒಂದರ್ಥದಲ್ಲಿ ಇದೇ ದಾದಿ ಅಮ್ಮ ಆಗಿದ್ದರು.  ಕನ್ನಡಕ ಹಾಕಿಕೊಂಡು ಬಿಳಿ ಬಟ್ಟೆಯುಟ್ಟ ಮಧ್ಯವಯಸ್ಸಿನ ಮಹಿಳೆಯೇ ಈ ದಾದಿಯಾಗಿದ್ದರು.
  
ಮುಂಬೈನ ಜುಹೂನಲ್ಲಿರುವ ಬಹುದೊಡ್ಡ ಏಜೆನ್ಸಿಯಿಂದ ಇವರನ್ನು ನೇಮಕ ಮಾಡಿಕೊಂಡಿದ್ದರು. ಅಂದಹಾಗೆ ಈ ದಾದಿಗೆ ಆಗ ದಂಪತಿ ನೀಡುತ್ತಿದ್ದುದು  ತಿಂಗಳಿಗೆ 1.50 ಲಕ್ಷ ಸಂಬಳ! ನಂತರ ಅದು 2 ಲಕ್ಷಕ್ಕೆ ಏರಿದೆ. ಹೌದು. ಮಗುವನ್ನು ನೋಡಿಕೊಳ್ಳುವುದು ಬಿಟ್ಟು  ಹೆಚ್ಚುವರಿಯಾಗಿ ಕೆಲಸ ಮಾಡಿದರೆ ಅದಕ್ಕೆ ಹೆಚ್ಚುವರಿ ಹಣ.  ವಿದೇಶಕ್ಕೆ ಹೋದರೆ ಎಕ್ಸ್​ಟ್ರಾ ಹಣ ಎಲ್ಲವೂ ಇತ್ತು. ನಂತರ  ಪ್ರಯಾಣ ಬೆಳಸಿದರೂ ಇದರ ಖರ್ಚು ಸೈಫಿನಾ ದಂಪತಿಯದ್ದೆ. ಇದಾದ ಬಳಿಕ ಇನ್ನೊಬ್ಬ ಮಗ ಜೇಯ್​ ಹುಟ್ಟಿದ. ಅವನನ್ನು ನೋಡಿಕೊಳ್ಳಲು ಇನ್ನೋರ್ವ ದಾದಿಯನ್ನು ನೇಮಕ ಮಾಡಲಾಗಿತ್ತು. ಅವರಿಗೂ ಇದೇ ರೀತಿಯ ಸೌಲಭ್ಯ. 

ಅಮೃತಾ ಸಿಂಗ್​ರನ್ನು ಗುಟ್ಟಾಗಿ ಮದ್ವೆಯಾಗಿದ್ರಾ ಕರೀನಾ ಕಪೂರ್ ಪತಿ ಸೈಫ್​?

ಸಂಬಳ ಎಷ್ಟೇ ಕೊಡಲಿ, ಮನೆ ಮಂದಿಗಿಂತಲೂ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲಿ. ಹಲವರ ಮನೆಯಲ್ಲಿ ಕೆಲಸವರು ಎಂದರೆ ಕೆಲಸದವರೇ. ಅದೇ ರೀತಿ ಕರೀನಾ ಮನೆಯಲ್ಲಿಯೂ ಇತ್ತು. ಈ ಬಗ್ಗೆ ಕರೀನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ತಮ್ಮನ್ನು ಮತ್ತು ಮನೆಯನ್ನು ನೋಡಿಕೊಳ್ಳುವ ದಾದಿಯರಿಗೆ ಪ್ರತ್ಯೇಕ ಟೇಬಲ್​ನಲ್ಲಿ ಊಟ ಬಡಿಸಲಾಗುತ್ತಿತ್ತು. ಆದರೆ ಇದನ್ನು ತಮ್ಮ ಮಕ್ಕಳಿಂದ ನೋಡಲು ಆಗಲಿಲ್ಲ.  ತೈಮೂರ್ ಮತ್ತು ಜೆಹ್ ಇದನ್ನು ಒಮ್ಮೆ ಪ್ರಶ್ನಿಸಿದರು.  ದಾದಿಯರನ್ನು ಏಕೆ ಸೆಪರೇಟ್​  ಊಟಕ್ಕೆ ಕುಳಿಸುತ್ತೀರಿ ಎಂದು ಕೇಳಿದರು. ಇದಾದ ಬಳಿಕ ನಮ್ಮ ಮನೆಯ ನಿಯಮಗಳೇ ಬದಲಾದವು ಎಂದು ಕರೀನಾ ಹೇಳಿಕೊಂಡಿದ್ದಾರೆ.
 
ಊಟ ಮಾಡುವಾಗ ದಾದಿಯರು ಬೇರೆ ಕಡೆ ಕುಳಿತುಕೊಳ್ಳುವುದನ್ನು ಕಂಡ ಮಕ್ಕಳು ಅವರನ್ನು ತಮ್ಮೊಂದಿಗೆ ಕುಳಿತುಕೊಳ್ಳುವಂತೆ ಒತ್ತಾಯ ಮಾಡಿದವು. ಅಲ್ಲಿಂದ ನಮ್ಮ ಮನೆಯ ವಾತಾವರಣ ಬದಲಾಗಿದೆ. ಅವರೂ ಈಗ ನಮ್ಮ ಜೊತೆ ಕುಳಿತುಕೊಳ್ಳುತ್ತಾರೆ.  ಅವರು ನಮ್ಮ ಮಕ್ಕಳನ್ನು ನೋಡಿಕೊಳ್ಳುವವರು.  ನಾನು ಕೆಲಸ ಮಾಡುತ್ತಿರುವಾಗ ಅವರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಅಪ್ಪ-ಅಮ್ಮನಿಗೆ ನೀಡುವ ಗೌರವವನ್ನೇ ಅವರಿಗೂ ನೀಡಬೇಕು ಎಂದು ಮಕ್ಕಳು ನಮಗೆ ಕಲಿಸಿದರು. ಆದ್ದರಿಂದ ಈಗ ನಿಯಮ ಬದಲಾಗಿದ್ದು, ಮಕ್ಕಳ ಇಷ್ಟದಂತೆ ಎಲ್ಲರೂ ಒಟ್ಟಾಗಿ ಕುಳಿತುಕೊಳ್ಳುತ್ತೇವೆ ಎಂದಿದ್ದಾರೆ.  ಇದೇ ವೇಳೆ ಮೊದಲ ಮಗನಿಗೆ ತೈಮೂರು ಎಂದು ಹೆಸರು ಇಟ್ಟ ವಿಷಯವನ್ನೂ ಅವರು ತಿಳಿಸಿದರು. ಇದು ಸೈಫ್​ ಅಲಿಯ ಬಾಲ್ಯದ ಗೆಳೆಯನ ಹೆಸರು ಎಂದು ಹೇಳಿದರು.

ಮಗಳೇ ಎಂದು ಬಾಯ್ತುಂಬ ಕರೆದವಳನ್ನೇ ಮದ್ವೆಯಾದ ಈ ಬಾಲಿವುಡ್​ ಸ್ಟಾರ್​!
 
ಕರೀನಾ ಮತ್ತು ಸೈಫ್ ತಮ್ಮ ಎರಡನೇ ಮಗ ಜೆಹ್ ಅಥವಾ ಜಹಾಂಗೀರ್ ಅಲಿ ಖಾನ್ ಅವರನ್ನು 2021 ರಲ್ಲಿ ಸ್ವಾಗತಿಸಿದರು ಮತ್ತು ನಾಲ್ಕನೇ ಮೊಘಲ್ ಚಕ್ರವರ್ತಿ ಜಹಾಂಗೀರ್ ಅವರ ನಂತರ ತಮ್ಮ ಮಗನ ಹೆಸರನ್ನು ಇಟ್ಟುಕೊಂಡಿದ್ದಕ್ಕಾಗಿ   ಟ್ರೋಲ್​ಗೆ ಒಳಗಾಗಿದ್ದಾರೆ.
 

Follow Us:
Download App:
  • android
  • ios