ಸೈಫ್​ ಅಲಿಯನ್ನೇ ಮದ್ವೆಯಾಗಿದ್ದೇಕೆ? ಗುಟ್ಟು ರಟ್ಟು ಮಾಡಿದ Kareena Kapoor

ಸೈಫ್​ ಅಲಿ ಖಾನ್​ ಅವರನ್ನು ತಾವು ಮದುವೆಯಾಗಿದ್ದೇಕೆ ಎನ್ನುವ ಗುಟ್ಟನ್ನು ತಿಳಿಸಿದ್ದಾರೆ ನಟಿ ಕರೀನಾ ಕಪೂರ್​. ಅವರು ಹೇಳಿದ್ದೇನು?
 

Kareena Kapoor reveals why she married Saif Ali Khan in her career peak

ಬಾಲಿವುಡ್​ ಬೇಬೋ ಕರೀನಾ ಕಪೂರ್ (Kareena Kapoor), ನಟ ಸೈಫ್ ಅಲಿ ಖಾನ್  ಅವರನ್ನು ಮದುವೆಯಾಗಿ 10 ವರ್ಷಗಳು ಕಳೆದಿವೆ. ತಮಗಿಂತ 10 ವರ್ಷ ದೊಡ್ಡವರಾಗಿರುವ ಸೈಫ್​ ಅಲಿಯವರ ಎರಡನೆಯ ಪತ್ನಿಯಾಗಿ 2012ರಲ್ಲಿ ದಾಂಪತ್ಯ ಜೀವನಕ್ಕೆ  ಕಾಲಿಟ್ಟಾಗ ಬಹುದೊಡ್ಡ ಸುದ್ದಿಯೇ ಆಗಿತ್ತು. ಇದಕ್ಕೆ ಕಾರಣ, ಮೊದಲನೆಯದ್ದು ಸೈಫ್​ ಅಲಿಯವರು ಬೇರೆ ಧರ್ಮಕ್ಕೆ ಸೇರಿದ್ದು ಎಂದದ್ದಾದರೆ, ಇನ್ನೊಂದು ಕುತೂಹಲದ ವಿಷಯವೆಂದರೆ, ಸೈಫ್​ ಅಲಿಯವರು ತಮ್ಮ ಮೊದಲ ಮದುವೆಯ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಕರೀನಾ ಕಪೂರ್​ ಅವರನ್ನು ಮಗಳೇ ಎಂದು ಸಂಬೋಧಿಸಿದ್ದರು. ದಾಂಪತ್ಯ ಜೀವನದ ನಂತರ ಬಹಳ ಟ್ರೋಲ್​ ಆಗಿದ್ದರೂ ಸುಖಿ ಸಂಸಾರವನ್ನು ನಡೆಸುತ್ತಿದೆ ಈ ಜೋಡಿ. 2000 ಇಸವಿಯಲ್ಲಿ ಅಭಿಷೇಕ್‌ ಬಚ್ಚನ್‌ ನಟನೆಯ, ಜೆಪಿ ದತ್ತಾ ನಿರ್ದೇಶನದ 'ರೆಫ್ಯೂಜಿ' ಸಿನಿಮಾದ ಮೂಲಕ ಕರೀನಾ ಮೊದಲ ಬಾರಿ ನಾಯಕಿಯಾಗಿ ನಟಿಸಿದ್ದರು. ಅದಾದ 12 ವರ್ಷಗಳ ಬಳಿಕ ಬಾಲಿವುಡ್​ನಲ್ಲಿ ಟಾಪೆಸ್ಟ್​ ಸ್ಥಾನದಲ್ಲಿ ಇದ್ದಾಗಲೇ  ಸೈಫ್‌ ಅಲಿ ಖಾನ್‌ ಅವರನ್ನು ವರಿಸಿದರು.
 
ಆದರೆ ಕರೀನಾ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಸೈಫ್ (Saif Ali Khan) ಅವರನ್ನು ಏಕೆ ಮದುವೆಯಾದರು ಎಂದು ನಿಮಗೆ ತಿಳಿದಿದೆಯೇ?  ಈ ಕುರಿತು ಕರೀನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.  42 ವರ್ಷದ ಕರೀನಾ ಕಪೂರ್ 10 ವರ್ಷದ ಸೈಫ್ (52) ರನ್ನು ಮದುವೆಯಾಗಲು ಕಾರಣವನ್ನು ಬಹಿರಂಗಪಡಿಸಿದ್ದಾರೆ. ಕರೀನಾ ಇ -ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. 'ನಟಿಯರು ಮದುವೆಯಾದರೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಕಡಿಮೆ ಆಗುತ್ತದೆ ಎನ್ನುವ ಕಾಲದಲ್ಲೇ ನಾನು ಸೈಫ್‌ ಅವರನ್ನು ಮದುವೆಯಾದೆ. ಮದುವೆಯಾದ ಮೇಲೆಯೂ ನನ್ನ ನಟನೆಗೆ ಅವರು ಅವಕಾಶ ನೀಡುತ್ತಾರೆ ಎನ್ನುವ ಭರವಸೆಯಿಂದಲೇ ಸೈಫ್​ ಅವರನ್ನು ಆಯ್ಕೆ ಮಾಡಿಕೊಂಡೆ' ಎಂದಿದ್ದಾರೆ ಕರೀನಾ. 

ಮಗಳೇ ಎಂದು ಬಾಯ್ತುಂಬ ಕರೆದವಳನ್ನೇ ಮದ್ವೆಯಾದ ಈ ಬಾಲಿವುಡ್​ ಸ್ಟಾರ್​!

'ನಾನು ಮದುವೆಯಾದ ಸಮಯದಲ್ಲಿ ವೃತ್ತಿ ಬದುಕಿನ ಭದ್ರತೆಯ (Security) ದೃಷ್ಟಿಯಿಂದ ನಟಿಯರು ಮದುವೆಯಾಗಲು ಹಿಂದೇಟು ಹಾಕುತ್ತಿದ್ದರು. ಆದರೆ ನನ್ನ ವಿಷಯದಲ್ಲಿ ಮದುವೆ ನನ್ನ ಸ್ವಂತ ಆಯ್ಕೆಯಾಗಿತ್ತು. ನಾನು ಮದುವೆಯಾಗಿ, ಮಕ್ಕಳಾದ ಮೇಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಸಿನಿಮಾ ಹಾಗೂ ಸಾಂಸಾರಿಕ ಬದುಕು ಎರಡನ್ನೂ ಸಮನಾಗಿ ಸ್ವೀಕರಿಸಿದ್ದೇನೆ' ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. ‘ನಾನು  ಯಾವಾಗಲೂ ನನಗೆ ಬೇಕಾದ್ದನ್ನೇ ನಾನು ಆಯ್ಕೆ ಮಾಡಿಕೊಂಡವಳು. ಮದುವೆ ವಿಷಯದಲ್ಲಿಯೂ ಅಷ್ಟೇ. ಅದಕ್ಕಾಗಿ ಎಲ್ಲದರಲ್ಲಿಯೂ ನಾನು  ಅದೃಷ್ಟವಂತೆ. ಮದುವೆ ಆಗಬೇಕು ಎನಿಸಿದಾಗ ಮದುವೆ ಆದೆ. ಆ ಸಂದರ್ಭದಲ್ಲಿ ಬೇರೆ ಯಾವ ನಟಿಯರೂ ಮದುವೆ ಆಗುತ್ತಿರಲಿಲ್ಲ. ಈಗ ತುಂಬ ನಟಿಯರು ಮದುವೆ ಆಗುತ್ತಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರವೂ ಸಿನಿಮಾದಲ್ಲಿ ಕೆಲಸ ಮಾಡುವುದು ತುಂಬ ಸಹಜ ಎಂಬಂತಾಗಿದೆ. ಮೊದಲು ಮಕ್ಕಳಾದರೆ ಸಮಸ್ಯೆ ಎನ್ನುತ್ತಿದ್ದರು. ಆದರೆ ಈಗ ಮಕ್ಕಳಿಗೆ ಜನ್ಮ ನೀಡಿದ ಬಳಿಕವೂ ಸಿನಿಮಾದಲ್ಲಿ ಕೆಲಸ ಮಾಡಬಹುದು’ ಎಂದು ಕರೀನಾ ಕಪೂರ್​ ಹೇಳಿದ್ದಾರೆ.

ಇನ್ನು ಕರೀನಾ ಮದುವೆಯ ಬಗ್ಗೆ ಮಾತನಾಡುವುದಾದರೆ ಅದು 2012ರಲ್ಲಿ ನಡೆದಿತ್ತು. ಈಗ ಅವರು ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್ ಎಂಬ ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ಸೈಫ್ ಗೆ ಇದು ಎರಡನೇ ಮದುವೆ. ಅವರು ಮೊದಲು ಅಮೃತಾ ಸಿಂಗ್ (Amrutha Singh) ಅವರನ್ನು ವಿವಾಹವಾದರು, ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಮಗಳು ಸಾರಾ ಅಲಿ ಖಾನ್ ಮತ್ತು ಮಗ ಇಬ್ರಾಹಿಂ ಅಲಿ ಖಾನ್. ಮದುವೆ, ಸಂಸಾರ, ಮಕ್ಕಳ ಸಲುವಾಗಿ ಕರೀನಾ ಕಪೂರ್​ ಅವರು ಹೆಚ್ಚು ಬ್ರೇಕ್​ ತೆಗೆದುಕೊಂಡಿಲ್ಲ. ಗರ್ಭಿಣಿ ಆಗಿದ್ದಾಗಲೂ ಅವರು ಕೆಲವು ಫೋಟೋಶೂಟ್​ನಲ್ಲಿ ಭಾಗಿ ಆಗಿದ್ದರು. ರ‍್ಯಾಂಪ್​ ವಾಕ್​ ಕೂಡ ಮಾಡಿದ್ದರು. ತೈಮೂರ್​ ಅಲಿ ಖಾನ್​ಗೆ (Taimur Ali Khan) ಜನ್ಮ ನೀಡಿದ ಬಳಿಕ ಕೇವಲ 2 ತಿಂಗಳು ವಿಶ್ರಾಂತಿ ಪಡೆದು ಮತ್ತೆ ನಟನೆಗೆ ಮರಳಿದ್ದರು.  ಕರೀನಾ ಕಪೂರ್ ಕೊನೆಯದಾಗಿ ಅಮೀರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಕರೀನಾ ಮುಂದೆ ಹನ್ಸಲ್ ಮೆಹ್ತಾ ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಜೋಯ್ ಘೋಷ್ ನಿರ್ದೇಶನದ ಚಿತ್ರದಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ.

'ಅಸ್ಮಿತಾಜೀ... ಪ್ಲೀಸ್​ ಸೈಫ್​ ಅಲಿ ಮುಂದೆ ಕಾಣಿಸಿಕೊಳ್ಬೇಡಿ' ಅಂತಿದ್ದಾರೆ ಕರೀನಾ ಫ್ಯಾನ್ಸ್​! ಯಾಕೋ?

Latest Videos
Follow Us:
Download App:
  • android
  • ios