ಜೆಹ್​ ಸಿಕ್ಕಾಪಟ್ಟೆ ಕಿಲಾಡಿ, ತೈಮೂರ್​ ಪ್ರೀತಿಯ ಪ್ರತಿರೂಪ ಎಂದ ಕರೀನಾ ಕಪೂರ್​

ನಟಿ ಶೆಫಾಲಿ ಶಾ ಅವರನ್ನು ನಟಿ ಕರೀನಾ ಕಪೂರ್​ ಸಂದರ್ಶನ ಮಾಡಿದ್ದು, ಇದರಲ್ಲಿ ಇಬ್ಬರೂ ನಟಿಯರು ಮಕ್ಕಳ ಬಗ್ಗೆ ಶೇರ್​ ಮಾಡಿದ್ದಾರೆ. ಏನು ಹೇಳಿದ್ದಾರೆ ನಟಿಯರು?  
 

Kareena Kapoor calls Taimur an understanding and loving brother to Jeh

2012ರಲ್ಲಿ ದೆಹಲಿಯಲ್ಲಿ ನಡೆದ ಗ್ಯಾಂಗ್‌ರೇಪ್ ಕುರಿತು ಮಾಡಿದ  ಭಾರತೀಯ ಚಿತ್ರ 'ದೆಹಲಿ ಕ್ರೈಂ', (Dehli Crime) ಮೊದಲ ಬಾರಿಗೆ ಇಂಟರ್‌ನ್ಯಾಷನಲ್ ಎಮಿ ಅವಾರ್ಡ್‌ ಪಡೆದಿತ್ತು. ಉತ್ತಮ ಡ್ರಾಮಾ ಸಿರೀಸ್ ವಿಭಾಗದಲ್ಲಿ ಈ ಚಿತ್ರ ಪ್ರಶಸ್ತಿ ಪಡೆದಿತ್ತು.  ರಿಚಿ ಮೆಹ್ತಾ ಬರೆದು, ನಿರ್ದೇಶನ ಮಾಡಿದ ಈ ಚಿತ್ರದಲ್ಲಿ  ನಟಿ ಶೆಫಾಲಿ ಶಾ  ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.  ಈ ಚಿತ್ರದಲ್ಲಿ ನಟಿಸಿದ್ದ ಶೆಫಾಲಿ ಶಾ (Shefali Shah ) ರಾತ್ರೋರಾತ್ರಿ ಫೇಮಸ್​ ಆಗಿದ್ದರು. ದೆಹಲಿ ಕ್ರೈಂ ಮಾತ್ರವಲ್ಲದೇ ದಿಲ್ ಧಡಕನೇ ದೋ ಸಿನಿಮಾ, ಮಾನ್ಸೂನ್ ವೆಡ್ಡಿಂಗ್ ಸೇರಿದಂತೆ ಹಲವು ಸಿನಿಮಾಗಳಲ್ಲಿ  ಪೋಷಕ ಪಾತ್ರದಲ್ಲಿ ನಟಿಸಿ ಮಿಂಚಿರೋ ನಟಿ ಶೆಫಾಲಿ ಶಾ. ಅವರು ಇತ್ತೀಚಿಗೆ ನಟಿ ಕರೀನಾ ಕಪೂರ್​ ಅವರ, Dabur Vita What Women Want ಯೂಟ್ಯೂಬ್​ನಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಜೀವನದ ಕೆಲವೊಂದು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ವೈದ್ಯೆ ಅಥವಾ ಗಗನಸಖಿಯಾಗುವ ಕನಸು ಕಂಡಿದ್ದ ತಾವು ಚಿತ್ರರಂಗಕ್ಕೆ ಕಾಲಿಟ್ಟ ಬಗೆಯನ್ನು ಅವರು ವಿವರಿಸಿದ್ದಾರೆ. ಇದೇ ವೇಳೆ ಇಬ್ಬರೂ ನಟಿಯರು ತಮ್ಮ ತಮ್ಮ  ಮಕ್ಕಳ ಬಗ್ಗೆ ಮಾತನಾಡಿದ್ದಾರೆ.

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ (Kareena Kapoor Khan) ಇದೀಗ ಎರಡು ಮಕ್ಕಳ ತಾಯಿ. 'ಸೈಫೀನಾ' ದಂಪತಿ ತೈಮೂರ್ ಅಲಿ ಖಾನ್ ಹಾಗೂ ಜೆಹ್ ಅಲಿ ಖಾನ್‌ಗೆ ಅಪ್ಪ-ಅಮ್ಮ  ಆಗಿದ್ದಾರೆ. ಡಿಸೆಂಬರ್ 2016ರಲ್ಲಿ ತೈಮೂರ್ ಅಲಿ ಖಾನ್‌ಗೆ ಕರೀನಾ ಕಪೂರ್ ಖಾನ್ ಜನ್ಮ ನೀಡಿದ್ದರು. ಫೆಬ್ರವರಿ 2021ರಲ್ಲಿ ಜೆಹ್ ಅಲಿ ಖಾನ್‌ಗೆ ಕರೀನಾ ಕಪೂರ್ ಖಾನ್ ತಾಯಿಯಾದರು. ತೈಮೂರ್ ಅಲಿ ಖಾನ್‌ಗೆ ಇನ್ನೇನು ಏಳು ವರ್ಷ ತುಂಬಲಿದೆ. ಜೆಹ್ ಅಲಿ ಖಾನ್‌ಗೆ ಕಳೆದ ತಿಂಗಳು ಎರಡು ವರ್ಷ ತುಂಬಿದೆ. ಈ ಷೋನಲ್ಲಿ ಶೆಫಾಲಿ ಷಾ ಅವರು ಕೇಳಿದ ಪ್ರಶ್ನೆಗೆ ಕರೀನಾ ಮಕ್ಕಳ ಬಗ್ಗೆ ಮಾತನಾಡಿದ್ದಾರೆ.  ತಮ್ಮ ಕಿರಿಯ ಮಗ ಜೆಹ್  ತೈಮೂರ್​ನಿಂದ ಎಲ್ಲಾ ವಸ್ತುಗಳನ್ನೂ  ಕಸಿದುಕೊಳ್ಳುತ್ತಾನೆ, ಆತ ಬಹಳ ಕಿಲಾಡಿ. ಬಳಪದಿಂದ ಹಿಡಿದು ಪುಸ್ತಕದವರೆಗೆ ಎಲ್ಲವೂ ಅವನಿಗೆ ಬೇಕು, ತೈಮೂರ್​ ತುಂಬಾ  ತಿಳಿವಳಿಕೆಯುಳ್ಳವನು ಮತ್ತು ತುಂಬಾ ಪ್ರೀತಿಸುವ ಹುಡುಗ ಎಂದಿದ್ದಾರೆ. ತೈಮೂರ್‌ನನ್ನು (Taimur Khan) ಹೊಗಳಿದ ಕರೀನಾ, ಆತನ ಕೈಯಲ್ಲಿ ಇದ್ದುದೆಲ್ಲವನ್ನೂ ಜೆಹ್​ ಕಸಿದುಕೊಳ್ಳುತ್ತಾನೆ. ಆದರೆ ತೈಮೂರ್​ ಏನೂ ಹೇಳುವುದಿಲ್ಲ. ನನಗೇ ಅಚ್ಚರಿಯಾಗಿ ನಿನಗೆ ಬೇಸರವಿಲ್ಲವೆ ಎಂದು ಕೇಳಿದರೆ, ಆತ  ' ಪರವಾಗಿಲ್ಲ, ಅವನು ನನ್ನ ಚಿಕ್ಕ ಸಹೋದರ' ಎನ್ನುತ್ತಾನೆ. ಅದನ್ನು ಕಂಡು ನಾನು ಬೆರಗಾಗಿದ್ದೇನೆ. ಆತ ತುಂಬಾ ಅರ್ಥ ಮಾಡಿಕೊಳ್ಳುತ್ತಾನೆ.  ಇಬ್ಬರೂ ಮಕ್ಕಳು  ಸ್ನೇಹಿತರಾಗಿ ಇರಬೇಕು ಎನ್ನುವುದು ನನ್ನ ಆಸೆ,  ನಾನು ಮತ್ತು ಕರಿಷ್ಮಾ, ಇಬ್ಬರು ಹುಡುಗಿಯರು, ನಾವು ಉತ್ತಮ ಸ್ನೇಹಿತರಂತೆ ಇದ್ದೇವೆ. ನನ್ನ ಮಕ್ಕಳೂ ಹಾಗೆಯೇ ಇರಬೇಕೆನ್ನುವುದು ನನ್ನ ಆಸೆ ಎಂದಿದ್ದಾರೆ.

ಸೈಫ್​ ಅಲಿಯನ್ನೇ ಮದ್ವೆಯಾಗಿದ್ದೇಕೆ? ಗುಟ್ಟು ರಟ್ಟು ಮಾಡಿದ Kareena Kapoor
  
ಇದೇ  ವೇಳೆ ಶೆಫಾಲಿ ಅವರು ತಮ್ಮ ಮಕ್ಕಳ ಕುರಿತು ಮಾತನಾಡಿದ್ದಾರೆ. ಇವರು ಇಬ್ಬರು ಮಕ್ಕಳ ತಾಯಿ. ಶೆಫಾಲಿ ತಮ್ಮ ಮಗನನ್ನು  ಸಾಕರ್ ತರಬೇತಿಗಾಗಿ ವಿದೇಶಕ್ಕೆ ಕಳುಹಿಸಿರುವ ಕಾರಣ ಮನೆಯೆಲ್ಲವೂ ನೀರಸವಾಗಿದೆ ಎಂದಿದ್ದಾರೆ. ನನ್ನ ಮಗನ ಕೋಣೆಯಲ್ಲಿ ಯಾರಾದರೂ ಲೈಟ್ ಹಾಕದಿದ್ದರೆ  ಅಸಮಾಧಾನವಾಗುತ್ತದೆ. ಅವನು ಮನೆಯಲ್ಲಿ ಇಲ್ಲ ಎಂದು ಎನಿಸುತ್ತದೆ ಎಂದಿದ್ದಾರೆ. ಆದರೆ ಇಬ್ಬರು ಮಕ್ಕಳು ಹೇಗೆ  ಪರಸ್ಪರ  ದ್ವೇಷಿಸುತ್ತಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.  “ನನ್ನ ಹಿರಿಯ ಮಗ ಆರ್ಯಮನ್ ಮತ್ತು ಕಿರಿಯವ ಮೌರ್ಯ ಇಬ್ಬರೂ ಜಗಳವಾಡುತ್ತಿದ್ದರು. ಮೌರ್ಯನನ್ನು ಎಲ್ಲಾದರೂ ಬಿಟ್ಟುಬಿಡು, ಅದರ ಬದಲು ನಾಯಿಯನ್ನು ತೆಗೆದುಕೊಂಡು ಬಾ ಎಂದು ಆತ ಹೇಳುತ್ತಿದ್ದ. ಅವರಿಬ್ಬರನ್ನು ಸಮಾಧಾನ ಪಡಿಸುವುದೇ ದೊಡ್ಡ ಕೆಲಸವಾಗಿತ್ತು. ಅಂತೂ ಈಗ ಇಬ್ಬರೂ ಅನ್ಯೋನ್ಯವಾಗಿದ್ದಾರೆ ಎಂದರು.

ಇದೇ ವೇಳೆ ವೃತ್ತಿ ಜೀವನದ ಕುರಿತು ಕರೀನಾ ಕೇಳಿದ ಪ್ರಶ್ನೆಗೆ ಶೆಫಾಲಿ ಮಾತನಾಡಿದರು. ವೈದ್ಯೆ ಅಥವಾ ಗಗನಸಖಿಯಾಗುವ ಬದಲು ಚಿತ್ರರಂಗ ಆಯ್ಕೆ ಮಾಡಿಕೊಂಡಿರುವ ಬಗ್ಗೆ ಏನಾದರೂ ತೃಪ್ತಿ ಇದೆಯೆ ಎಂದು ಕರೀನಾ ಅವರು ಕೇಳಿದ ಪ್ರಶ್ನೆಗೆ ಶೆಫಾಲಿ ಅವರು, ಮೊದಲು ಹಾಗೆ ಅನ್ನಿಸಿರಲಿಲ್ಲ. ಆದರೆ  ಅಂತಿಮವಾಗಿ ಈಗ ಕಳೆದ ಎರಡು  ವರ್ಷಗಳಿಂದ  ನಾನು ಸಂತೋಷವಾಗಿದ್ದೇನೆ. ನಾನು ಒಳ್ಳೆಯ ಜಾಗದಲ್ಲಿದ್ದೇನೆ ಎಂದು ಎನಿಸುತ್ತಿದೆ ಎಂದಿದ್ದಾರೆ. ಆದರೆ ನಾನು ಸಂಪೂರ್ಣ ತೃಪ್ತಿ ಹೊಂದಿದ್ದೇನೆ ಎಂದು ಹೇಳುತ್ತಿಲ್ಲ, ಆದರೆ ತಕ್ಕಮಟ್ಟಿಗೆ ತೃಪ್ತಳಾಗಿದ್ದೇನೆ ಎನ್ನಬಹುದು. ಆದರೆ ನಾನು ಜೀವನದಲ್ಲಿ ಉತ್ಸುಕಳಾಗಿದ್ದೇನೆ, ಏಕೆಂದರೆ  ಯಾವಾಗಲೂ ಏನನ್ನಾದರೂ ಕಲಿಯಬಹುದು. ಇದಕ್ಕಾಗಿ ದೇವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ.

ಬಜರಂಗಿ ಭಾಯಿಜಾನ್-2ನಲ್ಲಿ ಕರೀನಾ ಬದ್ಲು ಸಲ್ಮಾನ್​ ಗರ್ಲ್​ಫ್ರೆಂಡ್​?
 
ದೆಹಲಿ ಕ್ರೈಂ ಚಿತ್ರದಲ್ಲಿ  ಸ್ಟೀರಿಯೊಟೈಪ್ ಮುರಿದಿದ್ದೀರಿ ಎಂದು ನಾನು ಭಾವಿಸುತ್ತೇನೆ. ಕೇವಲ ಪೋಷಕ ಪಾತ್ರದಲ್ಲಿ ಮಾತ್ರ ಮಿಂಚಿರುವ ನಿಮ್ಮನ್ನು  ಅಭಿಮಾನಿಗಳು  ಮುಖ್ಯ ನಾಯಕನಾಗಿ ನೋಡಲು ಬಯಸುತ್ತಾರೆ. ಹಾಗಾದರೆ ಆ ಯೋಜನೆ ಏನು ಎಂದು ಕರೀನಾ ಪ್ರಶ್ನಿಸಿದಾಗ, ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಎಲ್ಲ ಪಾತ್ರಗಳಿಗೂ  ಸಮಾನವಾದ ಪ್ರಾಮುಖ್ಯತೆಯನ್ನು ನೀಡಬೇಕು.  ಉದಾಹರಣೆಗೆ, ನಾನು ಅಭಿನಿಯಿಸಿದ 'ಮಾನ್ಸೂನ್ ವೆಡ್ಡಿಂಗ್'  ಚಿತ್ರದಲ್ಲಿ  ಪ್ರಮುಖರು ಒಬ್ಬರೂ ಇಲ್ಲ, ಇದರಲ್ಲಿ ಪ್ರತಿಯೊಂದು ಪಾತ್ರವು ತುಂಬಾ ಮುಖ್ಯವಾಗಿದೆ. ಖಂಡಿತವಾಗಿಯೂ ನಾನು ನಾಯಕಿಯಾಗಿ  (Heroine) ನಟಿಸಲು ಬಯಸುತ್ತೇನೆ ಎಂದಿದ್ದಾರೆ.'ನಾನು ಯಾವುದೇ ಪಾತ್ರ ಮಾಡುವಾಗಲೂ ಆ ಪಾತ್ರದ ಕುರಿತು ಗೀಳು ಹೊಂದಿರುತ್ತೇನೆ.  ನಾನು ಅದನ್ನು ಸಂಪೂರ್ಣವಾಗಿ ಪ್ರೀತಿಸುತ್ತೇನೆ.  ನಾನು ಒಬ್ಸೆಸಿವ್ ಆಗಿರುತ್ತೇನೆ. ಆ ಪಾತ್ರದಲ್ಲಿ ಮುಳುಗುತ್ತೇನೆ. ಅದರ ಅರ್ಥ  ನಾನು  ಕೋಪಗೊಳ್ಳುವ ದೃಶ್ಯವನ್ನು ಮಾಡುತ್ತಿದ್ದರೆ, ನಾನು ಮನೆಗೆ ಬಂದು ನನ್ನ ಮಕ್ಕಳ ತಲೆಯನ್ನು ಕಚ್ಚುತ್ತೇನೆ ಎಂದು ಅರ್ಥವಲ್ಲ. ಆದರೆ ಪಾತ್ರದಲ್ಲಿ ನನ್ನ ಇನ್​ವಾಲ್ವ್​ಮೆಂಟ್​ ಅಷ್ಟರಮಟ್ಟಿಗೆ ಇರುತ್ತದೆ' ಎಂದಿದ್ದಾನೆ. 

Latest Videos
Follow Us:
Download App:
  • android
  • ios