Asianet Suvarna News Asianet Suvarna News

ಮಾಜಿ ಬಾಯ್‌ಫ್ರೆಂಡ್‌ ಹೆಸರು ಕೇಳಿ ಸ್ಟನ್ ಆದ ಬೆಬೋ : ಕರೀನಾ ಕಪೂರ್‌ ರಿಯಾಕ್ಷನ್ ಸಖತ್ ವೈರಲ್‌

 ತಮ್ಮ ಹೊಸ ಸಿನಿಮಾದ ಪ್ರಚಾರದ ವೇಳೆ ಅಚಾನಕ್ ಆಗಿ ಬಂದ ತಮ್ಮ ಮಾಜಿ ಗೆಳೆಯನ ಹೆಸರು ಕೇಳಿ ನಟಿ ಕರೀನಾ ಕಪೂರ್ ಗೊಂದಲಕ್ಕೊಳಗಾಗಿದ್ದಾರೆ. ಈ ದೃಶ್ಯ ಪಪಾರಾಜಿ ಕ್ಯಾಮರಾಗಳಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಬಕಿಂಗ್‌ಹ್ಯಾಮ್‌ ಮರ್ಡರ್ಸ್‌ನ ಟ್ರೇಲರ್‌ ಬಿಡುಗಡೆ ವೇಳೆ ಈ ಘಟನೆ ನಡೆದಿದೆ.

Kareena Kapoor reaction goes viral after hearing ex boyfriend shahids name in The Buckingham Murders trailer launch akb
Author
First Published Sep 4, 2024, 5:31 PM IST | Last Updated Sep 4, 2024, 5:31 PM IST

ಬಾಲಿವುಡ್ ನಟಿ ಕರೀನಾ ಕಪೂರ್ ಪ್ರಸ್ತುತ ತಮ್ಮ ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್‌ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಸ್ವಾರಸ್ಯಕರವಾದ ಘಟನೆಯೊಂದು ನಡೆದಿದೆ. ಮಾಜಿ ಗರ್ಲ್‌ಫ್ರೆಂಡ್ ಅಥವಾ ಬಾಯ್‌ಫ್ರೆಂಡ್ ಹೆಸರು ಕೇಳಿದರೆ ಎಲ್ಲರಿಗೂ ಇರಿಸು ಮುರಿಸು ಆಗುವುದು ಸಾಮಾನ್ಯ. ಅದೇ ರೀತಿ ತಮ್ಮ ಹೊಸ ಸಿನಿಮಾದ ಪ್ರಚಾರದ ವೇಳೆ ಅಚಾನಕ್ ಆಗಿ ಬಂದ ತಮ್ಮ ಮಾಜಿ ಗೆಳೆಯನ ಹೆಸರು ಕೇಳಿ ನಟಿ ಕರೀನಾ ಕಪೂರ್ ಗೊಂದಲಕ್ಕೊಳಗಾಗಿದ್ದಾರೆ. ಈ ದೃಶ್ಯ ಪಪಾರಾಜಿ ಕ್ಯಾಮರಾಗಳಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಬಕಿಂಗ್‌ಹ್ಯಾಮ್‌ ಮರ್ಡರ್ಸ್‌ನ ಟ್ರೇಲರ್‌ ಬಿಡುಗಡೆ ವೇಳೆ ಈ ಘಟನೆ ನಡೆದಿದೆ.

ಬಕಿಂಗ್‌ಹ್ಯಾಮ್ ಮರ್ಡರ್ಸ್‌ ಸಿನಿಮಾದಲ್ಲಿ  ಕರೀನಾ ಕಪೂರ ಬರೀ ನಟನೆ ಮಾಡ್ತಿಲ್ಲ, ಈ ಸಿನಿಮಾದ ಕೋ ಪ್ರೋಡ್ಯೂಸರ್‌ ಕೂಡ ಕರೀನಾ ಆಗಿದ್ದಾರೆ. ಇವರು ಹನ್ಸಲ್ ಮೆಹ್ತಾ ಅವರು ಜೊತೆಯಾಗಿ ನಿರ್ಮಿಸುತ್ತಿರುವ ಮೊದಲ ಸಿನಿಮಾವಾಗಿದ್ದು, ಈ ಹಿನ್ನೆಲೆಯಲ್ಲಿ ಇಬ್ಬರು ಟ್ರೈಲರ್ ಲಾಂಚ್ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ಪತ್ರಕರ್ತರೊಬ್ಬರು ಹನ್ಸಲ್ ಮೆಹ್ತಾ ಅವರ ಈ ಹಿಂದೆ ನಿರ್ಮಿಸಿದ್ದ 'ಶಾಹೀದ್‌' ಸಿನಿಮಾದ ಬಗ್ಗೆ ಮಾತನಾಡುತ್ತಾ ಅವರನ್ನು ಹೊಗಳಿದ್ದಾರೆ. 

ಕರೀನಾ ಜೊತೆನೂ ಸೈಫ್​ಗೆ ಬೋರ್​ ಆಗೋಕೆ ಶುರುವಾಯ್ತಾ? ಸಂದರ್ಶನದಲ್ಲಿ ಗಂಡನ ಮಾತಿಗೆ ಕಸಿವಿಸಿಗೊಂಡ ನಟಿ

'ನಿಮ್ಮ ಈ ಹಿಂದಿನ ಸಿನಿಮಾವನ್ನು ನೋಡಿದ್ದೇವೆ ನೀವು ಶಾಹಿದ್‌ನಂತಹ ಸಿನಿಮಾವನ್ನು ನಿರ್ಮಾಣ ಮಾಡಿದ್ದೀರಿ. ಇದಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಆದರೆ ಇದು ಕೊಲೆ ರಹಸ್ಯದ ಕತೆಯನ್ನು ಹೊಂದಿರುವ ಸಿನಿಮಾ, ಇದರಲ್ಲೂ ಬಹಳಷ್ಟು ಸೂಕ್ಷ್ಮ ವಿಚಾರಗಳಿವೆ. ಹೀಗಾಗಿ ನಾನು ಇಲ್ಲಿ ಶಾಹಿದ್ ಸಿನಿಮಾವನ್ನು ಉಲ್ಲೇಖಿಸಿದೆ ಈ ಎರಡು ಸಿನಿಮಾಗಳ ಸ್ಕ್ರಿಫ್ಟ್‌ ಹಾಗೂ ನಿರ್ದೇಶನದ ಹಂತದಲ್ಲಿ ಎಷ್ಟು ಕಷ್ಟವಾಗಿತ್ತು' ಎಂದು  ವರದಿಗಾರರೊಬ್ಬರು ಕೇಳಿದ್ದಾರೆ. 

ಈ ವೇಳೆ ನಿರ್ದೇಶಕ ಹನ್ಸಲ್ ಮೆಹ್ತಾ ಅವರು ತಮ್ಮ ಸಿನಿಮಾ ಬಗ್ಗೆ ವಿವರಿಸುತ್ತಿದ್ದರೆ ಇತ್ತ ಕರೀನಾ ಕಪೂರ್, ಕಣ್ಣಗಲಿಸಿ ಶಾಹೀದ್  ಶಾಹೀದ್ ಎಂದು ನಸುನಕ್ಕಿದ್ದಾರೆ. ಬೆಬೋ ಈ ರಿಯಾಕ್ಷನ್ ನೋಡಿ ಅಲ್ಲಿದ್ದವರೆಲ್ಲಾ ಜೋರಾಗಿ ಬೊಬ್ಬೆ ಹೊಡೆದಿದ್ದಾರೆ. ಕರೀನಾ ಕಪೂರ ರಿಯಾಕ್ಷನ್ ಹೇಗಿತ್ತು ಎಂಬುದನ್ನು ನೀವು ನೋಡಿ.

 

ಅಂದಹಾಗೆ 'ಶಾಹಿದ್' ಹನ್ಸಲ್ ಮೆಹ್ತಾ ನಿರ್ದೇಶನ 2010ರಲ್ಲಿ ತೆರೆಕಂಡ ಸಿನಿಮಾವಾಗಿದೆ. ರಾಜ್‌ ಕುಮಾರ್ ರಾವ್ ನಾಯಕನಾಗಿ ಈ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರವು 2010 ರಲ್ಲಿ ಹತ್ಯೆಗೀಡಾದ ವಕೀಲ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಶಾಹಿದ್ ಅಜ್ಮಿ ಅವರ ಜೀವನವನ್ನು ಆಧರಿಸಿದ ಸಿನಿಮಾವಾಗಿದೆ. ಜನರಿಂದ ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿದ ಈ ಸಿನಿಮಾಗೆ ಎರಡು ರಾಷ್ಟ್ರ ಪ್ರಶಸ್ತಿ ಬಂದಿದೆ. 61 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ರಾಜ್‌ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ ಹನ್ಸಲ್ ಮೆಹ್ತಾ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು.

ಮಗನಿಗೆ ಕ್ರೈಸ್ತ ಧರ್ಮವನ್ನು ಪರಿಚಯಿಸಿದ್ದು ಕರೀನಾ.. ಹಾಗಾಗಿ ಆ ಪ್ರಶ್ನೆಗಳನ್ನ ಕೇಳ್ತಾನೆ ಎಂದ ಸೈಫ್ ಅಲಿ ಖಾನ್

ಈ ನಡುವೆ, ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್ ಈ ತಿಂಗಳು ಬಿಡುಗಡೆಯಾಗಲಿದೆ. ಈ ಚಲನಚಿತ್ರವು ಕಳೆದ ವರ್ಷ ಮಾಮಿ (MAMI)ಚಲನಚಿತ್ರೋತ್ಸವದಲ್ಲಿ ಮೊದಲ ಬಾರಿ ಪ್ರದರ್ಶನ ಕಂಡಿದ್ದು, ನೋಡುಗರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಸಿನಿಮಾದಲ್ಲಿ ಕರೀನಾ ಕಪೂರ್ ಖಾನ್ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗ ಹಲವು ಅಂತರರಾಷ್ಟ್ರೀಯ ಕಲಾವಿದರು ಸಿನಿಮಾದಲ್ಲಿದ್ದಾರೆ.  ಅಂದಹಾಗೆ ಶಾಹೀದ್ ಕಪೂರ್ ಹಾಗೂ ಕರೀನಾ ಕಪೂರ್ ಬಾಲಿವುಡ್‌ನ ಒಂದು ಕಾಲದ ಲವ್‌ ಬರ್ಡ್ಸ್‌ ಆಗಿದ್ದವರು. ಆದರೆ ಈಗ ಕರೀನಾ ಕಪೂರ್ ಸೈಫ್ ಅಲಿಖಾನ್ ಅವರನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಇತ್ತ ಶಾಹೀದ್ ಕಪೂರ್ ಕೂಡ ಮೀರಾ ರಾಜ್‌ಪುತ್ ಅವರನ್ನು ಮದುವೆಯಾಗಿದ್ದು, ಅವರಿಗೂ ಇಬ್ಬರು ಮಕ್ಕಳಿದ್ದಾರೆ. 

Latest Videos
Follow Us:
Download App:
  • android
  • ios