Asianet Suvarna News Asianet Suvarna News

ಕರೀನಾ ಜೊತೆನೂ ಸೈಫ್​ಗೆ ಬೋರ್​ ಆಗೋಕೆ ಶುರುವಾಯ್ತಾ? ಸಂದರ್ಶನದಲ್ಲಿ ಗಂಡನ ಮಾತಿಗೆ ಕಸಿವಿಸಿಗೊಂಡ ನಟಿ

ಆದರ್ಶ ದಾಂಪತ್ಯದ ಬಗ್ಗೆ ಕೇಳಿದಾಗ,  ನಟ ಸೈಫ್​ ಅಲಿ ಖಾನ್​ ಕೊಟ್ಟ ಉತ್ತರಕ್ಕೆ ಕಸಿವಿಸಿಗೊಂಡ ನಟಿ ಕರೀನಾ ಕಪೂರ್​. ಆಗಿದ್ದೇನು ನೋಡಿ...
 

When Saif Ali said Virat Kohli Anushka Sharma were acing marriage  Kareena Kapoor reaction viral suc
Author
First Published Aug 26, 2024, 12:48 PM IST | Last Updated Aug 26, 2024, 12:48 PM IST

 ಬಾಲಿವುಡ್​ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ ಅವರ ಜೋಡಿ.  ಎಲ್ಲರಿಗೂ ತಿಳಿದಿರುವಂತೆ ಇದು ಸೈಫ್​ ಅಲಿ ಅವರಿಗೆ ಎರಡನೆಯ ಮದುವೆ. ಅವರ ಮೊದಲ ಮದುವೆಯಾದದ್ದು ನಟಿ ಅಮೃತಾ ಸಿಂಗ್​ ಅವರ ಜೊತೆಗೆ. ತಮ್ಮ ಮೊದಲ ಮದುವೆಗೆ ಬಂದಿದ್ದ ಕರೀನಾ ಕಪೂರ್​ ಅವರನ್ನು ಮಗಳೇ ಎಂದು ಕರೆದಿದ್ದ ಸೈಫ್​ ಅಲಿ ನಂತರ ಆಕೆಯನ್ನೇ ಮದುವೆಯಾಗಿ ಟ್ರೋಲ್​ಗೂ ಒಳಗಾಗಿದ್ದಿದೆ. ಅದೇನೇ ಇದ್ದರೂ ಸದ್ಯ ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್​ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್​ ಸುದ್ದಿ ಮಾಡಿದವರು. ಸೈಫ್​ ಅಲಿ ಖಾನ್​ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು. 

ಸೈಫ್​ ಅಲಿ ಮತ್ತು ಕರೀನಾ ಕಪೂರ್​ ದಾಂಪತ್ಯ ಚೆನ್ನಾಗಿಯೇ ನಡೆಯುತ್ತಿದೆ. ಹೊರ ಪ್ರಪಂಚಕ್ಕೆ ಇದು ಚೆನ್ನಾಗಿರುವಂತೆಯೇ ಕಾಣುತ್ತಿದೆ. ಆದರೆ ಇದನ್ನು ಸೈಫ್​ ಅಲಿ ಖಾನ್​ ಒಳಮನಸ್ಸು ಒಪ್ಪುತ್ತಿಲ್ವಾ ಎನ್ನುವಂಥ ವಿಡಿಯೋ ಒಂದು ಈಗ ವೈರಲ್​ ಆಗಿದೆ. ಗಂಡ ಸೈಫ್​ ಅಲಿ ಮಾತು ಕೇಳಿ ಖುದ್ದು, ಕರೀನಾ ಅವರೇ ಕಸಿವಿಸಿಗೊಂಡು ಬಿಟ್ಟಿದ್ದಾರೆ. ಅಷ್ಟಕ್ಕೂ ಈ ವಿಡಿಯೋದಲ್ಲಿ, ಕರೀನಾ ಖುದ್ದು ಗಂಡ ಸೈಫ್​ ಅಲಿಯ ಸಂದರ್ಶನ ಮಾಡುತ್ತಿದ್ದಾರೆ. ಆದರ್ಶ ದಾಂಪತ್ಯ ಎಂದರೆ ಯಾರನ್ನು ಹೆಸರಿಸುವಿರಿ ಎಂದು ಕೇಳಿದ್ದಾರೆ ಕರೀನಾ. ಸೈಫ್​ ಅಲಿ ತಮ್ಮದೇ ಹೆಸರು ಉಲ್ಲೇಖ ಮಾಡುತ್ತಾರೆ ಎನ್ನುವುದು ಅವರ ಅನಿಸಿಕೆಯಾಗಿತ್ತು. ಆದರೆ ಸೈಫ್​ ಅಲಿ ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಹೆಸರು ಹೇಳಿದರು. ಅವರು ಆದರ್ಶ ದಾಂಪತ್ಯ ಎಂದು ಅವರ ಬಗ್ಗ ವರ್ಣನೆ ಮಾಡಿದರು.

ಮಕ್ಕಳು ಮದ್ವೆ ವಯಸ್ಸಿಗೆ ಬಂದ್ರೂ ಪತಿ ಮೇಲೆ ಕಣ್ಣಿಟ್ಟಿರೋ ಬಾಲಿವುಡ್​ ಸೆಲೆಬ್ರಿಟಿ ಇವ್ರೇ ನೋಡಿ... ಬಿಟ್ರೆ ಡೇಂಜರ್​ ಅಂತೆ!

ಆಗ ಕೂಡಲೇ ಕರೀನಾ ಕಸಿವಿಸಿಗೊಂಡಂತೆ ಕಾಣಿಸಿತು. ನೀವು ನಮ್ಮದೇ ಹೆಸರು ಹೇಳಬಹುದಿತ್ತಲ್ಲಾ ಎಂದರು. ಆಗ ಸೈಫ್​ಗೆ ತಾನು ಮಾಡಿದ್ದು ತಪ್ಪು ಎನಿಸಿದ್ದರೂ ಅದನ್ನು ಸಮರ್ಥಿಸಿಕೊಂಡು, ನಮ್ಮನ್ನು ನಾವೇ ಹೊಗಳಿಕೊಳ್ಳಬಾರದಲ್ವಾ ಎಂದು ಅಲ್ಲಿಗೆ ತೇಪೆ ಹಾಕಲು ನೋಡಿದರು. ಆದರೆ ಅವರ ಮನದಾಳದ ಮಾತು ಅಲ್ಲಿ ಬಂದೇ ಬಿಟ್ಟಿತ್ತು. ಮಾತು  ಆಡಿದ ಮೇಲೆ ಮುಗಿಯಿತು ಎನ್ನುತ್ತಾರಲ್ಲ ಹಾಗೆ. ಈ ಮಾತನ್ನು ಕೇಳಿ ನೆಟ್ಟಿಗರು ಥಹರೇವಾರಿ ಕಮೆಂಟ್ಸ್​ ಹಾಕುತ್ತಿದ್ದಾರೆ. ಮನಸ್ಸಿನ ಮಾತು ಹೇಗೆ ಹೊರಗೆ ಬಂತು ನೋಡಿ ಎನ್ನುತ್ತಿದ್ದಾರೆ. ಎರಡನೆಯ ಮದ್ವೆಯಾಗಿ ತುಂಬಾ ವರ್ಷವಾಯ್ತಲ್ಲ, ಬಹುಶಃ ಬೋರ್​ ಆಗಿರಬೇಕು ಎಂದೂ ಹೇಳ್ತಿದ್ದಾರೆ. 

ಅಂದಹಾಗೆ,  ನಟ ಸೈಫ್​ ಅಲಿ ಇದೀಗ ತಮಗಿಂತ 10 ವರ್ಷ ಚಿಕ್ಕವರಾಗಿರುವ ನಟಿ ಕರೀನಾರನ್ನು (Kareena Kapoor) ಮದುವೆಯಾಗಿದ್ದರೆ, ಅಮೃತಾ ಸಿಂಗ್​ ಅವರನ್ನು ಮದುವೆಯಾದಾಗ ಸೈಫ್ ಅವರಿಗೆ ವಯಸ್ಸು 21. ಆದರೆ ಅಮೃತಾ ಸಿಂಗ್‌ ಅವರಿಗೆ 32 ವರ್ಷ ವಯಸ್ಸಾಗಿತ್ತು!  ಎಲ್ಲರನ್ನೂ ಎದುರು ಹಾಕಿಕೊಂಡು 12 ವರ್ಷ ಹಿರಿಯ ನಟಿಯನ್ನು ಮದುವೆಯಾಗಿದ್ದರು ಎಂದೇ ಸುದ್ದಿಯಾಗಿತ್ತು. ಇದು ದೊಡ್ಡ ಮಟ್ಟದಲ್ಲಿ ಹಲ್​ಚಲ್​ ಸೃಷ್ಟಿಸಿತ್ತು. ನಂತರ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ 13 ವರ್ಷಗಳ  ದಾಂಪತ್ಯದ  ನಂತರ ವಿಚ್ಛೇದನ ಪಡೆದರು. 2004ರಲ್ಲಿ ಸೈಫ್‌ ಹಾಗೂ ಅಮೃತಾ ತಮ್ಮ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದಾಗ ಸಾರಾ 10 ಮತ್ತು ಇಬ್ರಾಹಿಂ 4 ವರ್ಷ ವಯಸ್ಸಿನವರಾಗಿದ್ದರು. ಇದೀಗ 53 ವರ್ಷದ ಸೈಫ್​ ಅಲಿ ಖಾನ್​ ಅವರಿಗೆ ಅಮೃತಾ ಸಿಂಗ್​ ಮತ್ತು ಕರೀನಾ ಕಪೂರ್​ ಈ ಇಬ್ಬರು  ಪತ್ನಿಯರಿಂದ ನಾಲ್ವರು ಮಕ್ಕಳಿದ್ದಾರೆ. ಅವರ ಹೆಸರು ಸಾರಾ ಅಲಿ ಖಾನ್​ (Sara Ali Khan), ಇಬ್ರಾಹಿಂ ಅಲಿ ಖಾನ್​, ತೈಮೂರು ಅಲಿ ಖಾನ್​ ಹಾಗೂ ಜೆಹ್​  ಅಲಿ ಖಾನ್​.  

ನಟ ಸಿದ್ದಿಕಿ ಮಗಳೇ ಎಂದು ರೇಪ್​ ಮಾಡ್ದ, 'ವೀರ ಕನ್ನಡಿಗ' ನಟ ರಿಯಾಜ್‌ ಖಾನ್‌ ಫೋನ್​ನಲ್ಲೇ... ನಟಿಯ ಕರಾಳ ಅನುಭವ...

Latest Videos
Follow Us:
Download App:
  • android
  • ios