ಮಗಳು-ಸೊಸೆ ನಡುವಿನ ವ್ಯತ್ಯಾಸ ತಿಳಿಸಿದ ನಟಿ Sharmila Tagore
ನಟಿ ಕರೀನಾ ಕಪೂರ್ ಅವರ ಅತ್ತೆಯೂ ಆಗಿರುವ ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ಮಗಳು ಮತ್ತು ಸೊಸೆಯ ನಡುವಿನ ಸಂಬಂಧವನ್ನು ವಿವರಿಸಿದ್ದು ಹೇಗೆ?
ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ತಾಯಿ, ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ (Sharmila Tagore) ಕೂಡ ಒಂದು ಕಾಲದ ಅದ್ಭುತ ನಟಿ. ಬಾಲಿವುಡ್ ಸಿನಿಮಾ ಕಂಡ ಅಪರೂಪದ ನಟಿ ಇವರು. 1960ರಿಂದ 80ರ ದಶಕದವರೆಗೂ ಬಹುಬೇಡಿಕೆಯುಳ್ಳ ನಟಿ ಈಕೆ. ಬಣ್ಣದ ಲೋಕಕ್ಕೆ ಹೆಣ್ಣೊಬ್ಬಳು ಎಂಟ್ರಿ ಕೊಡುತ್ತಾಳೆಂದರೆ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ ಕಾಲವದು. ಆದರೆ ಅಂಥ ಸಮಯದಲ್ಲಿಯೇ ಅಂದರೆ ನಟನೆಗೆ ಬರುವುದೇ ಸವಾಲು ಎಂಬಂತಿದ್ದ 60 70ರ ದಶಕದಲ್ಲಿಯೇ ಬಿಕಿನಿ ಬಟ್ಟೆ ತೊಟ್ಟು ಸುದ್ದಿಯಾಗಿದ್ದವರು ನಟಿ ಶರ್ಮಿಳಾ ಟ್ಯಾಗೋರ್. 1966ರಲ್ಲಿ ಬಿಕಿನಿ (Bikini) ಡ್ರೆಸ್ ಹಾಕಿಕೊಂಡು ಮ್ಯಾಗಝೀನ್ ಒಂದಕ್ಕೆ ಫೋಟೋಶೂಟ್ ಮಾಡಿಸಿಕೊಂಡು ಸಕತ್ ಸುದ್ದಿ ಮಾಡಿದ್ದ ನಟಿ ಇವರು. ಅವರು ಹಲವಾರು ದಶಕಗಳ ಕಾಲ ಬೆಳ್ಳಿತೆರೆಯನ್ನು ಆಳಿದವರು. ಸಿನಿಮಾಗಳಿಂದ ದೂರ ಉಳಿದಿದ್ದರೂ ಬಹಳ ದಿನಗಳ ನಂತರ ‘ಗುಲ್ಮೊಹರ್’ (Gulmohar) ಚಿತ್ರದ ಮೂಲಕ ಬಾಲಿವುಡ್‌ಗೆ ಕಮ್‌ಮ್ಯಾಕ್ ಮಾಡಿದ್ದಾರೆ. 70ರ ದಶಕದಲ್ಲಿ ತಮ್ಮ ಸೌಂದರ್ಯ ಮತ್ತು ಅದ್ಭುತ ನಟನೆಯಿಂದ ಮನ ಗೆದ್ದಿದ್ದ ಶರ್ಮಿಳಾ ಟ್ಯಾಗೋರ್ ಅವರಿಗೆ ಈಗ 70 ವರ್ಷ. ಈಗ ಅಜ್ಜಿಯೂ ಆಗಿದ್ದಾರೆ. ಇದೇ ವೇಳೆ ಶರ್ಮಿಳಾ ಟ್ಯಾಗೋರ್ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಸೊಸೆ ಕರೀನಾ ಕಪೂರ್ ಖಾನ್ ಅವರ ರೇಡಿಯೊ ಟಾಕ್ ಶೋ 'ವಾಟ್ ವುಮೆನ್ ವಾಂಟ್'ನಲ್ಲಿ ಅವರು ಮಾತನಾಡಿದ್ದಾರೆ. ಇದರೊಂದಿಗೆ ಮಗಳು ಮತ್ತು ಸೊಸೆಯ ನಡುವಿನ ವ್ಯತ್ಯಾಸವನ್ನು ಹೇಳುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅಲ್ಲಿ ಅವರು ತಮ್ಮ ಸೊಸೆ ಮತ್ತು ಮಗ ಸೇರಿದಂತೆ ಇಡೀ ಕುಟುಂಬದ ಬಗ್ಗೆ ಬಹಿರಂಗವಾಗಿ ಮಾತನಾಡಿದರು.
ಕಾರ್ಯಕ್ರಮದ ವೇಳೆ ಕರೀನಾ ಅತ್ತೆ ಶರ್ಮಿಳಾ ಅವರಿಗೆ ‘ಬೇಟಿ ಔರ್ ಬಹು ಕೆ ಬೀಚ್ ಕಾ ಫಾರ್ಕ್ ಹೋತಾ ಹೈ’ (ಮಗಳು ಮತ್ತು ಸೊಸೆಯ ನಡುವಿನ ವ್ಯತ್ಯಾಸವೇನು) ಎಂದು ಕೇಳಿದ್ದಾರೆ. ಅದಕ್ಕೆ ಶರ್ಮಿಳಾ ಅವರು ಅದ್ಭುತ ಉತ್ತರ ನೀಡಿದ್ದಾರೆ. ಈ ಪ್ರಶ್ನೆಗೆ ತುಂಬಾ ವಿಭಿನ್ನವಾಗಿ ಉತ್ತರಿಸಿದ ಶರ್ಮಿಳಾ, 'ಹೆಣ್ಣುಮಕ್ಕಳು ನೀವು ಯಾರೊಂದಿಗೆ ಬೆಳೆಯುತ್ತೀರಿ, ಅಂತಹ ಪರಿಸ್ಥಿತಿಯಲ್ಲಿ ನೀವು ಅವರ ಸ್ವಭಾವವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೀರಿ. ಅವಳಿಗೆ ಯಾವ ವಿಷಯಗಳು ಕೋಪ ತರಿಸುತ್ತವೆ ಎಂಬುದು ನಿಮಗೆ ಚೆನ್ನಾಗಿ ಗೊತ್ತಿರುತ್ತದೆ. ಆ ವಿಷಯಗಳನ್ನು ಹೇಗೆ ಎದುರಿಸಬೇಕು ಮತ್ತು ನೀವು ಉತ್ತಮ ರೀತಿಯಲ್ಲಿ ವ್ಯವಹರಿಸುತ್ತೀರಿ ಎಂದು ನಿಮಗೆ ತಿಳಿದಿರುತ್ತದೆ. ಆದರೆ ಸೊಸೆ (Daughter in Law) ಸಂಪೂರ್ಣವಾಗಿ ವಯಸ್ಕರಾದಾಗ ನೀವು ಅವರನ್ನು ಭೇಟಿಯಾಗುತ್ತೀರಿ ಎಂದಿದ್ದಾರೆ.
ಅಜಯ್ ದೇವಗನ್ ಜೊತೆ ಲಿಪ್ಲಾಕ್ಗೆ ಕರೀನಾ ಹಿಂಜರಿಯಲು ಇದೇ ಕಾರಣ!
ಇದರ ಬಗ್ಗೆ ಮತ್ತಷ್ಟು ಹೇಳುತ್ತಾ, 'ಸೊಸೆ ವಯಸ್ಕಳಾಗಿದ್ದಾಳೆ, ಆದ್ದರಿಂದ ಅವಳ ಸ್ವಭಾವ ನಿಮಗೆ ತಿಳಿಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವಳನ್ನು ತಿಳಿದುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನಿಮ್ಮ ಮನೆಗೆ ಹೊಸ ಹುಡುಗಿ ನಿಮ್ಮ ಸೊಸೆಯಾಗಿ ಬಂದಾಗ, ಅವಳನ್ನು ಚೆನ್ನಾಗಿ ಸ್ವಾಗತಿಸುವುದು ನಿಮ್ಮ ಕರ್ತವ್ಯ. ಅವಳನ್ನು ತುಂಬಾ ಆರಾಮದಾಯಕವಾಗಿಸಿ. ಆಕೆಯನ್ನು ಸಂಪೂರ್ಣವಾಗಿ ನೋಡಿಕೊಳ್ಳಿ. ಮಗ ಮತ್ತು ಸೊಸೆಯ ನಡುವಿನ ಸಂಬಂಧವನ್ನು ಎಂದಿಗೂ ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನ ಮಾಡಬಾರದು, ಅವರಿಗೆ ಪೂರ್ಣ ಜಾಗವನ್ನು ನೀಡಬೇಕು ಎಂದು ಶರ್ಮಿಳಾ ಹೇಳಿದ್ದಾರೆ. ಈ ಮಾತು ನೆಟ್ಟಿಗರ ಮನಸ್ಸನ್ನು ಗೆದ್ದಿದೆ.
ಈ ಹಿಂದೆ ಕೂಡ ಮಗ ಸೈಫ್ ಅಲಿ ಖಾನ್ ಅವರು ಸಂದರ್ಶನವೊಂದರಲ್ಲಿ ತಾಯಿ ಶರ್ಮಿಳಾ ಅವರ ಬಗ್ಗೆ ಹೇಳಿದ್ದರು. ಸೈಫ್ ಅವರ ಎರಡನೆಯ ಪತ್ನಿ ಕರೀನಾ ಕಪೂರ್ (Kareena Kapoor) ಮಗ ತೈಮೂರ್ನನ್ನು ಹೆತ್ತಾಗ ಮಾಡಿದ ಸಂದರ್ಶನವದು. ಇದರಲ್ಲಿ ಸೈಫ್ ಅಲಿ ಖಾನ್, ತಾನು ಮನೆಯಲ್ಲಿಯೇ ಇದ್ದು, ತೈಮೂರ್ನನ್ನು (Taimur Khan) ನೋಡಿಕೊಳ್ಳಬಲ್ಲೆ. ಕರೀನಾ ಬೇಕಿದ್ದರೆ ಕೆಲಸಕ್ಕೆ ಹೋಗಬಹುದು ಎಂದಿದ್ದರು. ತಮ್ಮ ತಾಯಿ ಅಂಥದ್ದೊಂದು ಮೌಲ್ಯಗಳನ್ನು ನಮಗೆ ಕಲಿಸಿದ್ದಾಳೆ. ಗಂಡನಾದವ ಮನೆಯಲ್ಲಿ ಮಕ್ಕಳನ್ನು ನೋಡಿಕೊಂಡರೆ ತಪ್ಪೇನಿಲ್ಲ ಎಂದಿದ್ದರು. ಅವರ ಈ ಸಂದರ್ಶನ ಬಹಳ ವೈರಲ್ ಆಗಿದ್ದು, ಸೈಫ್ ಅಲಿ ಅವರ ಬಗ್ಗೆ ಹಲವರು ಅದರಲ್ಲಿಯೂ ಮಹಿಳೆಯರು ಭಾರಿ ಶ್ಲಾಘನೆ ವ್ಯಕ್ತಪಡಿಸಿದ್ದರು.
ಜೆಹ್ ಸಿಕ್ಕಾಪಟ್ಟೆ ಕಿಲಾಡಿ, ತೈಮೂರ್ ಪ್ರೀತಿಯ ಪ್ರತಿರೂಪ ಎಂದ ಕರೀನಾ ಕಪೂರ್