Asianet Suvarna News Asianet Suvarna News

Karan Johar: ''ಭಾರತೀಯ ಚಿತ್ರರಂಗದಲ್ಲಿ ಇನ್ನು ಬಾಲಿವುಡ್, ಕಾಲಿವುಡ್‌ ಎಂಬುದಿಲ್ಲ''

ನಾವು ಭಾರತೀಯ ಚಿತ್ರರಂಗದ ಭಾಗ ಎಂದು ಹೆಮ್ಮೆಯಿಂದ ಹೇಳುತ್ತೇವೆ. ಪ್ರತಿಯೊಂದು ಚಿತ್ರವೂ ಈಗ ಭಾರತೀಯ ಚಿತ್ರರಂಗದಿಂದ ಬರಲಿದೆ ಎಂದು ಖ್ಯಾತ ನಿರ್ಮಾಪಕ ಕರಣ್‌ ಜೋಹರ್‌ ಹೇಳಿಕೊಂಡಿದ್ದಾರೆ. 

karan johar urges to stop diving indian cinema into sub categories ash
Author
First Published Sep 3, 2022, 4:16 PM IST

ಭಾರತೀಯ ಚಿತ್ರರಂಗವನ್ನು ವಿವಿಧ ವರ್ಗಗಳಾಗಿ ವಿಭಜಿಸುವ ಬದಲು ಒಂದೇ ಉದ್ಯಮವಾಗಿ ಪರಿಗಣಿಸಲು ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಶುಕ್ರವಾರ ಮನವಿ ಮಾಡಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ‘ಬ್ರಹ್ಮಾಸ್ತ್ರ’ ಚಿತ್ರದ ಸುದ್ದಿಗೋಷ್ಠಿ ಹಾಗೂ ಪ್ರಮೋಷನ್‌ ವೇಳೆ ಕರಣ್‌ ಜೋಹರ್‌ ಈ ಮಹತ್ವದ ಸಂದೇಶ ನೀಡಿದ್ದಾರೆ. ಭಾರತೀಯ ಸಿನಿಮಾವನ್ನು ಭಾರತೀಯ ಚಿತ್ರರಂಗ ಎಂದು ಸಂಬೋಧಿಸಬೇಕೇ ಹೊರತು ಬಾಲಿವುಡ್ ಅಥವಾ ಟಾಲಿವುಡ್ ಅಲ್ಲ ಎಂದು ಹೇಳಿದರು. "ನಾವು, ನಮ್ಮದೇ ಆದ ಸಣ್ಣ ರೀತಿಯಲ್ಲಿ, ನಮ್ಮ ಚಿತ್ರದೊಂದಿಗೆ ದೇಶದ ಮೂಲೆ ಮೂಲೆಯನ್ನು ತಲುಪಲು ಪ್ರಯತ್ನಿಸುತ್ತಿದ್ದೇವೆ. ಎಸ್ಎಸ್ ರಾಜಮೌಳಿ ಸರ್ ಹೇಳಿದಂತೆ, ಇದು ಭಾರತೀಯ ಚಿತ್ರರಂಗ. ಇದನ್ನು ಬೇರೆ ಯಾವುದನ್ನೂ ಕರೆಯಬೇಡಿ. ನಾವು ಅದಕ್ಕೆ ವುಡ್‌ ಎಂದು ಕರೆಯುತ್ತೇವೆ. ಬಾಲಿವುಡ್, ಟಾಲಿವುಡ್.. ಹೀಗೆ, ನಾವು ಇನ್ನು ವುಡ್‌ನಲ್ಲಿ ಇಲ್ಲ, ನಾವು ಅವುಗಳಿಂದ ಹೊರಗಿದ್ದೇವೆ. ನಾವು ಹೆಮ್ಮೆಯಿಂದ ಭಾರತೀಯ ಚಿತ್ರರಂಗದ ಭಾಗವಾಗಿದ್ದೇವೆ. ಪ್ರತಿಯೊಂದು ಚಿತ್ರವೂ ಇನ್ನು ಮುಂದೆ ಭಾರತೀಯ ಚಿತ್ರರಂಗದಿಂದಲೇ ಆಗಲಿದೆ" ಎಂದು ಚಲನಚಿತ್ರ ನಿರ್ಮಾಪಕ ಕರಣ್‌ ಜೋಹರ್‌ ಹೇಳಿಕೊಂಡಿದ್ದಾರೆ.

ಇದೇ ರೀತಿ, ಈ ಹಿಂದೆ ಏಪ್ರಿಲ್ 2022 ರಲ್ಲಿ, ಕೆಜಿಎಫ್ ಸ್ಟಾರ್ ಯಶ್ ಭಾರತೀಯ ಸಿನಿಮಾವನ್ನು ಉಪ-ವರ್ಗಗಳಾಗಿ ವರ್ಗೀಕರಿಸುವುದನ್ನು ನಿಲ್ಲಿಸುವಂತೆ ಎಲ್ಲರಿಗೂ ಕೇಳಿಕೊಂಡಿದ್ದರು. "ಜನರು ಮುಂದೆ ಹೋಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇದು ಒಂದು ಉದ್ಯಮ ಎಂದು ನಾವು ಅರ್ಥಮಾಡಿಕೊಳ್ಳಲು ಮತ್ತು ಅದನ್ನು ವರ್ಗಗಳಾಗಿ ವರ್ಗೀಕರಿಸುವುದನ್ನು ನಿಲ್ಲಿಸಲು ಇದು ಉತ್ತಮ ಸಮಯ. ಅದರ ನಂತರ ತುಂಬಾ ಬದಲಾಗಿದೆ. ಇದು ಬದಲಾಗದಿದ್ದರೆ, ಜನರು ಅದನ್ನು (ವಿವಿಧ ಚಿತ್ರೋದ್ಯಮಗಳ ತಾರಾಗಣವಿರುವ ಪ್ಯಾನ್ ಇಂಡಿಯನ್ ಚಲನಚಿತ್ರಗಳನ್ನು) ಇಷ್ಟು ದೊಡ್ಡ ರೀತಿಯಲ್ಲಿ ಸ್ವೀಕರಿಸುತ್ತಿರಲಿಲ್ಲ’’ ಎಂದು ಅವರು ತಮ್ಮ ಚಿತ್ರ ಕೆಜಿಎಫ್ 2 ಮತ್ತು ಎಸ್‌ಎಸ್ ರಾಜಮೌಳಿ ಅವರ ಅದ್ಭುತ ಕೃತಿ ಆರ್‌ಆರ್‌ಆರ್‌ ಬಿಡುಗಡೆಯನ್ನು ಉಲ್ಲೇಖಿಸಿ ಹೇಳಿದ್ದರು. ಕೆಜಿಎಫ್ 2 ನಲ್ಲಿ ಯಶ್ ಹೊರತುಪಡಿಸಿ ಸಂಜಯ್ ದತ್ ಮತ್ತು ರವೀನಾ ಟಂಡನ್ ನಟಿಸಿದ್ದಾರೆ. ಇನ್ನು, RRR ನಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಜೊತೆಗೆ ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಕಾಣಿಸಿಕೊಂಡಿದ್ದಾರೆ.

ಕರಣ್‌ ಜೋಹರ್‌ ಶೋನಲ್ಲಿ ರಣವೀರ್‌ ಸಿಂಗ್‌ನಿಂದ ಶಾಕಿಂಗ್‌ ಫ್ಯಾಮಿಲಿ ಸಿಕ್ರೇಟ್‌ ರಿವೀಲ್‌!

ಕನ್ನಡ ಚಲನಚಿತ್ರ ಕೆಜಿಎಫ್ - ಚಾಪ್ಟರ್ 2 ಮತ್ತು ತೆಲುಗು ಚಲನಚಿತ್ರ ಪುಷ್ಪ - ದಿ ರೈಸ್ ದೇಶಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸನ್ನು ಕಂಡಿದೆ. ಆ ಸಮಯದಲ್ಲಿ ಹೆಚ್ಚಿನ ದೊಡ್ಡ ನಟರ ಹಾಗೂ ಹೈ ಬಜೆಟ್‌ನ ಹಿಂದಿ ಚಲನಚಿತ್ರಗಳು ಮಕಾಡೆ ಮಲಗಿವೆ. ಅಕ್ಷಯ್ ಕುಮಾರ್, ರಣಬೀರ್ ಕಪೂರ್ ಮತ್ತು ರಣವೀರ್ ಸಿಂಗ್ ಅವರಂತಹ ತಾರೆಯರು ಥಿಯೇಟರ್‌ಗೆ ಅಭಿಮಾನಿಗಳನ್ನು ಆಕರ್ಷಿಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆ, ಬಾಲಿವುಡ್ ತನ್ನ ಚಲನಚಿತ್ರ ನಿರ್ಮಾಣವನ್ನು ಮರುಶೋಧಿಸಬೇಕು ಮತ್ತು ಪ್ರೇಕ್ಷಕರು ಏನು ಬಯಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಹಲವರು ಪ್ರತಿಪಾದಿಸಿದರು.

ಅಲ್ಲದೆ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಪ್ರೇಕ್ಷಕರಿಗೆ ನೀಡುತ್ತಿರುವ ಮಾನ್ಯತೆಯನ್ನು ಪರಿಗಣಿಸಿ, ಭಾರತೀಯ ಚಲನಚಿತ್ರಗಳನ್ನು ಅವರು ಪ್ರಮುಖವಾಗಿ ಮಾಡಿದ ಭಾಷೆಗೆ ಸೀಮಿತಗೊಳಿಸದೆ, ಭಾರತೀಯ ಚಲನಚಿತ್ರಗಳನ್ನು ನಿರ್ಮಿಸುವ ಸಮಯ ಬಂದಿದೆ ಎಂದು ಹಿಂದಿ ಚಲನಚಿತ್ರ ನಿರ್ಮಾಪಕರು ಒತ್ತಾಯಿಸುತ್ತಿದ್ದಾರೆ. ಆಯನ್‌ ಮುಖರ್ಜಿ ನಿರ್ದೇಶನದ ಮಹತ್ವಾಕಾಂಕ್ಷೆಯ ಯೋಜನೆಯಾದ ಬ್ರಹ್ಮಾಸ್ತ್ ಚಿತ್ರಕ್ಕೆ ಕರಣ್ ಜೋಹರ್ ನಿರ್ಮಾಪಕರಾಗಿದ್ದಾರೆ. ರಣಬೀರ್ ಕಪೂರ್, ಆಲಿಯಾ ಭಟ್, ನಾಗಾರ್ಜುನ, ಮೌನಿ ರಾಯ್ ಮತ್ತು ಅಮಿತಾಭ್‌ ಬಚ್ಚನ್ - ಬ್ರಹ್ಮಾಸ್ತ್ರ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಭಾರತೀಯ ಪುರಾಣಗಳಿಂದ ಪ್ರೇರಿತವಾದ ಸ್ಕೈ - ಫೈ ಚಲನಚಿತ್ರವಾಗಿದೆ. ಹಿಂದಿ, ಇಂಗ್ಲೀಷ್‌, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬರಲಿರುವ ಬ್ರಹ್ಮಾಸ್ತ್ರ ಚಿತ್ರವು ಸೆಪ್ಟೆಂಬರ್ 9 ರಂದು ಬಿಡುಗಡೆಯಾಗಲಿದೆ. 

ಶಾರುಖ್‌ ಜೊತೆಯ ಲೈಂಗಿಕ ಸಂಬಂಧದ ವಂದತಿಗಳ ಬಗ್ಗೆ ಬಾಯಿಬಿಟ್ಟ ಕರಣ್‌ ಜೋಹರ್‌

Follow Us:
Download App:
  • android
  • ios