ಕರೀನಾ ಕಪೂರ್ ಅವರ AI ತಂತ್ರಜ್ಞಾನದಿಂದ ಸೃಷ್ಟಿಸಲಾದ ನೃತ್ಯದ ವಿಡಿಯೋ ಪಾಕಿಸ್ತಾನದ ಕರಾಚಿಯ ರೇವ್ ಪಾರ್ಟಿಯೊಂದರಲ್ಲಿ ಪ್ರದರ್ಶನಗೊಂಡು ವೈರಲ್ ಆಗಿದೆ. ಪರ್ಪಲ್ ಟೀ-ಶರ್ಟ್ ಮತ್ತು ನೀಲಿ ಸ್ಕರ್ಟ್‌ನಲ್ಲಿ ಕರೀನಾ ಕುಣಿದಿರುವ ಈ ವಿಡಿಯೋ ಅವರ ಶೈಲಿಗೆ ವಿರುದ್ಧವಾಗಿದೆ ಎಂದು ಟ್ರೋಲ್ ಆಗುತ್ತಿದೆ. ಕರೀನಾರನ್ನು ಅವಮಾನಿಸಲಾಗಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಈ ವಿಡಿಯೋ ವೈರಲ್ ಆಗಲು ಇದೇ ಕಾರಣವಾಗಿದೆ.

ಬಾಲಿವುಡ್ ಯಂಗ್ ಮಮ್ಮಿ, ಸೈಫ್ ಅಲಿ ಖಾನ್ ಪ್ರೀತಿಯ ಹೆಂಡತಿ ಹಾಗೂ ಸೆಲೆಬ್ರಿಟಿ ಕಿಡ್‌ಗಳ ಮಮ್ಮಾ ಕರೀನಾ ಕಪೂರ್ ಈಗ ಸುದ್ದಿಯಲ್ಲಿದ್ದಾರೆ. ಇದೆನಪ್ಪ ಕರೀನಾ ಯಾವ ಸಿನಿಮಾನೂ ಅನೌನ್ಸ್ ಮಾಡಿಲ್ಲ, ಯಾವ ಪ್ರಾಜೆಕ್ಟ್‌ಗೂ ಬಂಡವಾಳ ಹಾಕುತ್ತಿಲ್ಲ, ಗಂಡ ಮಕ್ಕಳು ಜೊತೆ ಸುತ್ತಾಡುತ್ತಿಲ್ಲ ಅದು ಬಿಡಿ ಸ್ನೇಹಿತೆಯರ ಜೊತೆನೂ ಕಾಣಿಸಿಕೊಂಡಿಲ್ಲ. ಮತ್ತೆ ಯಾಕೆ ಸುದ್ದಿಯಲ್ಲಿ ಇರುವುದು? ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಏನಿದು? 

ಹೌದು! ಪಾಕಿಸ್ತಾನದ ಕರಾಚಿಯಲ್ಲಿ ಇತ್ತೀಚಿಗೆ ಒಂದು ರೇವ್ ಪಾರ್ಟಿ ನಡೆದಿದೆ. ಈ ಪಾರ್ಟಿಯಲ್ಲಿ ಎಲ್ಲರೂ ಕುಣಿದು ಕುಪ್ಪಳಿಸಿ ಎಂಜಾಯ್ ಮಾಡಿದ್ದಾರೆ. ರಾತ್ರಿ ಎಲ್ಲಾ ನಡೆದಿರುವ ಈ ಪಾರ್ಟಿಯಲ್ಲಿ ಪುಂಡರೇ ಹೆಚ್ಚಿದ್ದರು. ಒಂದು ಸಮಯದಲ್ಲಿ ದೊಡ್ಡದಾಗಿ ಹಾಕಿರುವ ಪರದೆ ಮೇಲೆ ಬಾಲಿವುಡ್‌ ನಟಿ ಕುಣಿದು ಕುಪ್ಪಳಿಸುತ್ತಿರುವ ವಿಡಿಯೋ ಬಂದು ಬಿಡ್ತು. ಅದು ಬೇರೆ ಯಾರೂ ಅಲ್ಲ ಕರೀನಾ ಕಪೂರ್ ವಿಡಿಯೋ. ಏನ್ ಫ್ಯಾನ್ಸ್ ಇರ್ಬೇಕು ವಿಡಿಯೋ ಹಾಕಿಕೊಳ್ಳಿ ಅಂದ್ರೆ ಇದು ಯಾವ ಸಿನಿಮಾ ವಿಡಿಯೋನೂ ಅಲ್ಲ ಬದಲಿಗೆ AIನಲ್ಲಿ ಸೃಷ್ಟಿ ಮಾಡಿರುವ ವಿಡಿಯೋ. ಪರ್ಪಲ್ ಬಣ್ಣದ ಟೀ-ಶರ್ಟ್ ಮತ್ತು ನೀಲಿ ಬಣ್ಣದ ಸ್ಕರ್ಟ್‌ನಲ್ಲಿ ಕರೀನಾ ಕಪೂರ್ ಕುಣಿಸಿದ್ದಾರೆ. ಇದು ಕರೀನಾ ಕಪೂರ್ ಸ್ಟೈಲ್ ಅಲ್ವೇ ಅಲ್ಲ ಪಕ್ಕಾ ಮಾಸ್ ಸ್ಟೆಪ್‌ಗಳನ್ನು ಹಾಕಿದ್ದಾರೆ. ಹೀಗಾಗಿ ಹಲವರು ಇದು ನಿಜವಾದ ವಿಡಿಯೋ ಅಂದುಕೊಂಡು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. 

ಜೇನುಹುಳಗಳು ತುಂಬಿರುವ ಈ ಸ್ವೀಟ್‌ನ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಕರಾಚಿ ಜನರಿಗೆ ಹಣ ಕೊಟ್ಟು ಸೆಲೆಬ್ರಿಟಿಗಳನ್ನು ಕರೆಸಲು ಆಗಲ್ಲ ಬಜೆಟ್ ಸಮಸ್ಯೆ ಅಂತ AI ವಿಡಿಯೋ ಮಾಡ್ಕೊಂಡು ಹಾಕಿದ್ದಾರೆ, ಏನ್ ಅಣ್ಣ ನಮ್ಮ ನಟಿಯರಿಗೆ ಅವಮಾನ ಮಾಡ್ತಿದ್ದೀರಾ?, ಕರೀನಾ ಕಪೂರ್ ದೂರು ದಾಖಲಿಸಬೇಕು, ಕ್ರಿಯೇಟಿವ್ ಆಗಿ ಮಾಡಿದ್ರಿ ಆದರೆ ಒಳ್ಳೆ ಡ್ಯಾನ್ಸ್ ಸ್ಟೆಪ್ ಹಾಕಿಸಬೇಕಿತ್ತು' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಭಾರತಗಳಲ್ಲಿ ರೇವ್ ಪಾರ್ಟಿಗಳ ಸಂಖ್ಯೆ ತೀರಾ ಕಡಿಮೆ ಆದರೆ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರೇವ್ ಪಾರ್ಟಿಯನ್ನು ಸ್ಪಷ್ಟವಾಗಿ ಮೆನ್ಶನ್ ಮಾಡಿದ್ದಾರೆ. ಭಾರತದಲ್ಲಿ ಈ ವಿಡಿಯೋ ವೈರಲ್ ಯಾಕೆ ಆಗುತ್ತಿದೆ ಅಂದ್ರೆ ಕರಾಚಿಯಲ್ಲಿ ನಮ್ಮ ನಟಿಯರಿಗೆ ಅವಮಾನ ಮಾಡಿದ್ದಾರೆ ಬಾಲಿವುಡ್ ಮಂದಿ ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ನಮ್ಮ ಕನ್ನಡಿಗರಿಗೆ ಈ ರೀತಿ ಮಾಡಿಬಿಟ್ಟರೆ ಪರಿಣಾಮ ಬೇರೆ ಅಂತಿದ್ದಾರೆ. 

Anti-Dandruff ಶಾಂಪೂನ ಜಾಸ್ತಿ ದಿನ ಬಳಸಬೇಡಿ...ಈ ಅಪಾಯ ತಪ್ಪಿದಲ್ಲ

View post on Instagram