Anti-Dandruff ಶಾಂಪೂನ ಜಾಸ್ತಿ ದಿನ ಬಳಸಬೇಡಿ...ಈ ಅಪಾಯ ತಪ್ಪಿದಲ್ಲ
ತಲೆಹೊಟ್ಟು ಕಡಿಮೆ ಆಗಲಿ ಎಂದು ಅಂಗಡಿಯಲ್ಲಿ ಸಿಗುವ ಶಾಂಪೂ ಹೆಚ್ಚಾಗಿ ಬಳಸಬೇಡಿ. ತಪ್ಪದೆ ಈ ಕೆಲಸವನ್ನು ಈಗಲೇ ಮಾಡಿ....

ಬೇಸಿಗೆ ಇರಲಿ ಮಳೆ ಇರಲಿ ಎಲ್ಲರಿಗೂ ಕಾಡುವ ಸಮಸ್ಯೆ ಏನೆಂದರೆ ತಲೆಹೊಟ್ಟು. ಡಾಕ್ಟರ್‌ಗೆ ತೋರಿಸಬೇಕಾ ಅಥವಾ ಅಂಗಡಿಯಲ್ಲಿ ಸಿಗುವ Anti-Dandruff ಬಳಸಬೇಕಾ ಅನ್ನೋ ಗೊಂದಲ ಸೃಷ್ಟಿಯಾಗುತ್ತದೆ. ಅದಕ್ಕೆ ಉತ್ತರ ಇಲ್ಲಿದೆ...
ತಲೆಹೊಟ್ಟಿನ ಸಮಸ್ಯೆ ಕಡಿಮೆ ಆಗಲು ಸಮಯ ತೆಗೆದುಕೊಳ್ಳುತ್ತದೆ ಹಾಗಂತ ನೀವು ಪ್ರತಿದಿನ ಶಾಂಪೂ ಬಳಸಬೇಕು ಅನ್ನೋದು ಏನ್ ಇಲ್ಲ. ದಿನ ಶಾಂಪೂ ಮಾಡಿದರೂ ಸಮಸ್ಯೆ ಹೆಚ್ಚಾಗುತ್ತದೆ.
ಡಾ.ವಿಜಯ ಸಿಂಘಾಲ್ ಅವರು ಈ ಡ್ಯಾಂಡ್ರಫ್ ಶಾಂಪೂಗಳ ಬಗ್ಗೆ ಚರ್ಚೆ ಮಾಡಿದ್ದಾರೆ. Anti-Dandruff ಶ್ಯಾಂಪೂಗಳಲ್ಲಿ ಪೆಟ್ರೋಲಿಯಂ ಅಂಶ ಹೆಚ್ಚಿರುತ್ತದೆ ಇದರಿಂದ ನಿಮ್ಮ ನೆತ್ತಿಯ ಮೇಲೆ ಹಾನಿಕಾರಕ.
ಕೂದಲಿನ ರಕ್ಷಣಾತ್ಮಕ ಪರದೆಯಂತೆ ಥಿಮೆಥಿಕೋನ್ ಕೆಲಸ ಮಾಡುತ್ತದೆ. ಪದೇ ಪದೇ ಇದೇ ಶ್ಯಾಂಪೂ ಬಳಸಿದರೆ ಖಂಡಿತ ನೆತ್ತಿಯನ್ನು ಡ್ರೈ ಮಾಡುತ್ತದೆ.
ಶ್ಯಾಂಪೂನಲ್ಲಿರವ ರೆಟಿನಾಲ್ ಮತ್ತು ಪಾಲ್ಮಿಟಿಕ್ ಆಮ್ಲದ ಎಸ್ಟರ್ ನೆತ್ತಿಯ ಭಾಗವನ್ನು ಕೆಂಪು ಮಾಡಿ ತುರಿಕೆ ಹಾಗೂ ಸಿಪ್ಪೆ ಸುಲಿಯುವಂತೆ ಮಾಡುತ್ತದೆ. ಸ್ಕ್ಯಾಲ್ಪ್ ಡ್ರೈ ಆದಷ್ಟು ಹೊಟ್ಟು ನಿವಾರಣೆ ಆಗುವುದು ತಡವಾಗುತ್ತದೆ.
ಇನ್ನು ಡ್ಯಾಂಡ್ರಫ್ ಕಡಿಮೆ ಆಗುತ್ತಿದ್ದಂತೆ Anti-Dandruff ಶ್ಯಾಂಪೂ ನಿಲ್ಲಿಸಬೇಕು. ಇದು ಕನಿಷ್ಠ ಒಂದು ತಿಂಗಳ. ಅದಾದ ಮೇಲೆ ನೀವು ಸದಾ ಬಳಸುತ್ತಿದ್ದ ಶ್ಯಾಂಪೂ ಬಳಸಬೇಕು. ವರ್ಷವಿಡೀ ಈ ಶ್ಯಾಂಪೂ ಬಳಸುತ್ತಿದ್ದರೆ ನಿಮ್ಮ ಕೂದಲು ತೆಳುವಾಗುತ್ತದೆ.
Anti-Dandruff ಬಳಸಿದ ನಂತರ ಸರಿಯಾದ ಕಂಡಿಷನರ್ ಬಳಸಬೇಕು. ಕೂದಲನ್ನು ಸರಿಯಾಗಿ ಡ್ರೈ ಮಾಡಬೇಕು ಆನಂತರ ಹೇರ್ ಸೀರಮ್‌ನ ತಪ್ಪದೆ ಬಳಸಬೇಕು. ಸುಮಾರು ಒಂದೆರಡು ಗಂಟೆ ನಂತರ ತಪ್ಪದೆ ತಲೆ ಬಾಚಬೇಕು.