Bollywood Queen ಕಂಗನಾರ ಫ್ಲಾಪ್ ಚಿತ್ರಗಳ ಲಿಸ್ಟ್ ಬಿಡುಗಡೆ ಫ್ಯಾನ್ಸ್ ಶಾಕ್!
ಬಾಲಿವುಡ್ ಕ್ವೀನ್ ಎಂದೇ ಫೇಮಸ್ ಆಗಿರೋ ನಟಿ ಕಂಗನಾ ರಣಾವತ್ ಅವರ ಚಿತ್ರಗಳ ಲಿಸ್ಟ್ ಬಿಡುಗಡೆಯಾಗಿದ್ದು, ಇದನ್ನು ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಏನಿದು ಅಂಥದ್ದು?
ಕಂಗನಾ ರಣಾವತ್ ನಿನ್ನೆ ಅಂದರೆ ಮಾರ್ಚ್ 23ರಂದು 36ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 23 ಮಾರ್ಚ್ 1987 ರಂದು ಹಿಮಾಚಲ ಪ್ರದೇಶದ ಮಂಡಿಯ ಭಂಬ್ಲಾ ಗ್ರಾಮದಲ್ಲಿ ಜನಿಸಿದ ಕಂಗನಾ ರಾಜಸ್ಥಾನದ ಉದಯಪುರದಲ್ಲಿ ತಮ್ಮ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ನೇರಾನೇರ ಮಾತುಗಳಿಂದ ಕಾಂಟ್ರವರ್ಸಿ ಕ್ವೀನ್ ಎಂದೇ ಹೆಸರುವಾಸಿಯಾಗಿರುವ ಕಂಗನಾ, ತಮ್ಮ ಅದ್ಭುತ ಅಭಿನಯಕ್ಕೂ ಹೆಸರಾದವರು. ಅವರು 36 ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ಖ್ಯಾತ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ (Pandith Jagnnath Guruji) ಅವರು ನಟಿಯ ಭವಿಷ್ಯದ ಕುರಿತು ಭವಿಷ್ಯ ನುಡಿದಿದ್ದಾರೆ. ಕಂಗನಾ ಅವರದ್ದು ಮೇಷ ರಾಶಿ. ಈ ಸೂರ್ಯ ರಾಶಿಯ ಜನರು ತಮ್ಮ ಶಕ್ತಿಯುತ, ಭಾವೋದ್ರಿಕ್ತ ಮತ್ತು ದೃಢನಿಶ್ಚಯದ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ ಎಂದು ಜ್ಯೋತಿಷಿ ಹೇಳಿದ್ದಾರೆ. ಕಂಗನಾ ಅವರ ಜನ್ಮ ಚಾರ್ಟ್ ಪ್ರಕಾರ ಅವರು ಶಕ್ತಿಯುತ ಮತ್ತು ಬಲವಾದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಜ್ಯೋತಿಷಿಯ (Astrologer) ಪ್ರಕಾರ, ನಟಿಗೆ ಉತ್ತಮ ಭವಿಷ್ಯವಿದೆ ಆದರೆ ಕೆಲವು ತೊಂದರೆಗಳನ್ನು ಸಹ ಅವರು ಅನುಭವಿಸಬೇಕಾಗುತ್ತದೆ ಎಂದಿದ್ದರು.
ಗುರೂಜಿಯವರು ಹೀಗೆ ಹೇಳುತ್ತಿದ್ದಂತೆಯೇ, ಬಾಲಿವುಡ್ ಕ್ವೀನ್ ಎಂದು ಕೂಡ ಬಿರುದು ಪಡೆದಿರುವ ನಟಿ ಕಂಗನಾ ಅವರ ಚಿತ್ರದ ವಿಷಯ ಈಗ ಬಹಿರಂಗಗೊಳ್ಳುತ್ತಿದೆ. 2006 ರಿಂದ ಚಲನಚಿತ್ರಗಳಲ್ಲಿ ಸಕ್ರಿಯರಾಗಿರುವ ಕಂಗನಾ ಇದುವರೆಗೆ 33 ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ವೈಯಕ್ತಿಕವಾಗಿ ಅವರು ಒಂದೇ ಒಂದು ಚಿತ್ರ ಮಾತ್ರ ಬ್ಲಾಕ್ ಬಸ್ಟರ್ ಎನಿಸಿದೆ. ಕಂಗನಾ ಸ್ವಂತವಾಗಿ ನೀಡಿದ ಏಕೈಕ ಬ್ಲಾಕ್ ಬಸ್ಟರ್ ಚಿತ್ರ ಎಂದರೆ 'ತನು ವೆಡ್ಸ್ ಮನು ರಿಟರ್ನ್ಸ್'. ಅವರು ಅಭಿನಯಿಸಿದ್ದ ಮತ್ತೊಂದು ಬ್ಲಾಕ್ಬಸ್ಟರ್ ಚಿತ್ರವೆಂದರೆ ಅದು 'ಕ್ರಿಶ್ 3' (Krish-3) ಆದರೆ ಈ ಚಿತ್ರದ ಕ್ರೆಡಿಟ್ ನಾಯಕ ಹೃತಿಕ್ ರೋಷನ್ ಅವರಿಗೆ ಸಲ್ಲುತ್ತದೆ ಎನ್ನಲಾಗಿರುವ ಕಾರಣ, ಕಂಗನಾ ಹೆಸರಿನಲ್ಲಿ ಇರುವುದು ಒಂದೇ ಒಂದು ಬ್ಲಾಕ್ಬಸ್ಟರ್ ಚಿತ್ರ.
Kangana Ranaut: ಕಂಗನಾಗೆ ಉತ್ತಮ ಭವಿಷ್ಯವಿದೆ... ಆದರೆ ಖ್ಯಾತ ಜ್ಯೋತಿಷಿ ಹೇಳಿದ್ದೇನು?
ಹಾಗೆಂದು ಅವರು ಕೆಲವೊಂದು ಹಿಟ್ ಚಿತ್ರಗಳನ್ನೂ ನೀಡಿದ್ದಾರೆ. ಕಂಗನಾ ಅವರ ಹಿಟ್ ಚಿತ್ರಗಳಲ್ಲಿ 'ಗ್ಯಾಂಗ್‌ಸ್ಟರ್: ಎ ಲವ್ ಸ್ಟೋರಿ', 'ಲೈಫ್ ಇನ್ ಎ ಮೆಟ್ರೋ', 'ರಾಜ್: ದಿ ಮಿಸ್ಟರಿ ಕಂಟಿನ್ಯೂಸ್', 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ', 'ತನು ವೆಡ್ಸ್ ಮನು' ಮತ್ತು 'ಕ್ವೀನ್' ಸೇರಿವೆ. ಕೆಲವು ಸರಾಸರಿ ಚಿತ್ರಗಳನ್ನು ಹೆಸರಿಸುವುದಾದರೆ ಫ್ಯಾಷನ್, ಡಬಲ್ ಧಮಾಲ್, ಶೂಟೌಟ್ ಎಟ್ ವಡಾಲಾ ಮತ್ತು ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ. ಇವುಗಳನ್ನು ಹೊರತುಪಡಿಸಿ, ಬಹುತೇಕ ಚಲನಚಿತ್ರಗಳು ದುರಂತ ಅಥವಾ ಫ್ಲಾಪ್ ಎಂದೇ ಸಾಬೀತಾಗಿದೆ. 'ವೋ ಲಮ್ಹೆ', 'ಶಕಲಕ ಬೂಮ್ ಬೂಮ್', 'ಕೈಟ್ಸ್', 'ನೋ ಪ್ರಾಬ್ಲಂ', 'ರಾಸ್ಕಲ್ಸ್', 'ರಿವಾಲ್ವರ್ ರಾಣಿ', 'ಕಟ್ಟಿ ಬಟ್ಟಿ', 'ಸಿಮ್ರನ್', 'ಜಡ್ಜ್‌ಮೆಂಟಲ್ ಹೈ ಕ್ಯಾ' ಮತ್ತು 'ಪಂಗಾ' ಕಂಗನಾ ಅವರ ಫ್ಲಾಪ್ ಚಿತ್ರಗಳು (Flop Movies). ' .
ಕಂಗನಾ ರಣಾವತ್ ಅವರ 11 ಚಿತ್ರಗಳು 10 ಕೋಟಿ ರೂಪಾಯಿಯನ್ನೂ ಕೂಡ ಮುಟ್ಟಲು ಸಾಧ್ಯವಾಗಿಲ್ಲ. ಇವುಗಳಲ್ಲಿ 'ವೋ ಲಮ್ಹೆ' (ರೂ. 6.80 ಕೋಟಿ), 'ಶಕ ಲಕ ಬೂಮ್ ಬೂಮ್' (ರೂ. 6.77 ಕೋಟಿ), 'ವಾದಾ ರಹಾ' (ರೂ. 80 ಲಕ್ಷ), 'ನಾಕ್ ಔಟ್' (ರೂ. 6.24 ಕೋಟಿ), 'ಗೇಮ್' (ರೂ. 7.40) ಸೇರಿವೆ. ಕೋಟಿ) ), 'ಮಿಲೇ ನಾ ಮಿಲೇನ್ ಹಮ್' (ರೂ. 70 ಲಕ್ಷ), 'ರಜ್ಜೋ' (ರೂ. 87 ಲಕ್ಷ), 'ರಿವಾಲ್ವರ್ ರಾಣಿ' (ರೂ. 8.89 ಕೋಟಿ), 'ಐ ಲವ್ ಎನ್ ವೈ' (ರೂ. 1.19 ಕೋಟಿ), 'ತಲೈವಿ' ( ರೂ 1.91 ಕೋಟಿಗಳು) ಕೋಟಿಗಳು) ಮತ್ತು 'ಧಾಕಡ್' (ರೂ. 2.30 ಕೋಟಿಗಳು).
Bollywood: ಅತ್ಯಂತ ದುಬಾರಿ ವ್ಯಾನಿಟಿ ವ್ಯಾನ್ ಹೊಂದಿರುವ ಕಂಗನಾ ರಣಾವತ್