Asianet Suvarna News Asianet Suvarna News

ಎಮರ್ಜೆನ್ಸಿ ಪಾರ್ಟಿಯಲ್ಲಿ ಶಾರುಖ್ 'ಪಠಾಣ್' ಹೊಗಳಿದ ಕಂಗನಾ ರಣಾವತ್; ಹೇಳಿದ್ದೇನು?

ಬಾಲಿವುಡ್ ನಟಿ ಕಂಗನಾ ರಣಾವತ್, ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾವನ್ನು ಹಾಡಿಹೊಗಳಿದ್ದಾರೆ. 

Kangana Ranaut praises Shah Rukh Khan starrer Pathaan at Emergency party sgk
Author
First Published Jan 26, 2023, 4:51 PM IST

ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ  ವರ್ಷಗಳ ಬಳಿಕ ಶಾರುಖ್ ಖಾನ್ ಅಭಿಮಾನಿಗಳ ಮುಂದೆ ಬಂದಿದ್ದು ಅದ್ದೂರಿಯಾಗಿ ಸ್ವಾಗತ ಮಾಡಲಾಗಿದೆ. ಶಾರುಖ್ ಜೊತೆ ನಾಯಕಿಯಾಗಿ ದೀಪಿಕಾ ಕಾಣಿಸಿಕೊಂಡಿದ್ದರು. ಇಬ್ಬರನ್ನು ತೆರೆಮೇಲೆ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಪಠಾಣ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ. ಮೊದಲ ಕೋಟಿ ಕೋಟಿ ಬಾಚಿ ಕೊಂಡಿರುವ ಪಠಾಣ್ ಮೊದಲ ದಿನ 50 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ಅಂದಾಜಿಸಲಾಗಿದೆ. 

ಶಾರುಖ್ ಖಾನ್ ಪಠಾಣ್ ಸಿನಿಮಾವನ್ನು ಪ್ರೇಕ್ಷಕರು ಮಾತ್ರವಲ್ಲದೇ ಸಿನಿಮಾ ಗಣ್ಯರು ಹೊಗಳುತ್ತಿದ್ದಾರೆ. ವಿಶೇಷ ಎಂದರೆ ಬಾಲಿವುಡ್ ನಟಿ ಕಂಗನಾ ರಣಾವತ್ ಪಠಾಣ್ ಸಿನಿಮಾವನ್ನು ಹಾಡಿಹೊಗಳಿದ್ದಾರೆ. ಕಂಗನಾ ಇತ್ತೀಚಿಗಷ್ಟೆ ಎಮರ್ಜೆನ್ಸಿ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಶೂಟಿಂಗ್ ಮುಗಿಸಿದ ಬಳಿಕ ತಂಡದ ಜೊತೆ ಪಾರ್ಟಿ ಮಾಡಿದ್ದ ಕಂಗನಾ ಪಠಾಣ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. 

'ಪಠಾಣ್ ತುಂಬಾ ಚೆನ್ನಾಗಿದೆ. ಈ ರೀತಿಯ ಚಿತ್ರಗಳು ಇರಬೇಕು ಎಂದು ನನಗೆ ಅನಿಸುತ್ತದೆ. ಖಂಡಿತವಾಗಿಯೂ ಈ ರೀತಿಯ ಸಿನಿಮಾಗಳು ಕೆಲಸ ಮಾಡುತ್ತದೆ. ಹಿಂದಿ ಚಿತ್ರರಂಗವು ಇತರ ಚಿತ್ರೋದ್ಯಮಗಳಿಗಿಂತ ಹಿಂದುಳಿದಿತ್ತು. ನಾವೆಲ್ಲರೂ ಅಂತಿಮವಾಗಿ ನಮ್ಮದೇ ಆದ ರೀತಿಯಲ್ಲಿ ಮರಳಿ ತರಲು ಪ್ರಯತ್ನಿಸುತ್ತಿದ್ದೇವೆ' ಎಂದು ಹೇಳಿದ್ದಾರೆ. ಕಂಗನಾ ಹೊಗಳಿರುವುದು ಅಚ್ಚರಿ ಮೂಡಿಸಿದೆ. ಸದಾ ಬಾಲಿವುಡ್ ವಿರುದ್ಧ ಹರಿಹಾಯುತ್ತಿದ್ದ ಕಂಗನಾ ಇದೀಗ ಈಗ ಮೆಚ್ಚಿಕೊಂಡಿದ್ದಾರೆ. 

ಸಿನಿಮಾರಂಗ ಇರೋದು ಹಣ ಮಾಡೋಕೆ ಅಲ್ಲ; 'ಪಠಾಣ್' ಸೂಪರ್ ಹಿಟ್ ಬೆನ್ನಲ್ಲೇ ಗುಡುಗಿದ ನಟಿ ಕಂಗನಾ

ಇತ್ತೀಚಿಗಷ್ಟೆ ಕಂಗನಾ ಸಿನಿಮಾರಂಗ ಇರುವುದು ಹಣ ಮಾಡುವುದಕ್ಕೆ ಮಾತ್ರವಲ್ಲ ಎಂದು ಹೇಳಿದ್ದರು. 'ಬೇರೆ ಬೇರೆ ಉದ್ಯಮಗಳು ಆರ್ಥಿಕ ಲಾಭಕ್ಕಾಗಿ ಸಿನಿಮಾ ಮಾಡಲಾಗುತ್ತಿಲ್ಲ. ಹಾಗಾಗಿ ಅವರನ್ನು ದೇವರಂತೆ ಪೂಜಿಸುತ್ತಾರೆ ಎಂದು ಕಂಗನಾ ಗುಡುಗಿದ್ದರು. ಕಲೆ ಮೊದಲು ದೇವಾಲಯಗಳಲ್ಲಿ ಅರಳಿತು. ಬಳಿಕ ಸಾಹಿತ್ಯ, ರಂಗಮಂದಿರ ಅಂತಿಮವಾಗಿ ಚಿತ್ರಮಂದಿರಳಿಗೆ ತಲುಪಿತು. ಬೇರೆ ಬಿಲಿಯನ್ ಮತ್ತು ಟ್ರಿಯಲ್ ಡಾಲರ್ ವ್ಯವಹಾರಗಳಂತೆ ಸಿನಿಮಾರಂಗ ಆರ್ಥಿಕ ಲಾಭಗಳಿಗಾಗಿ ವಿನ್ಯಾಸಗೊಂಡಿಲ್ಲ. ಅದಕ್ಕಾಗಿಯೇ ಕಲೆ  ಮತ್ತು ಕಲಾವಿದರನ್ನು ಪೂಜಿಸಲಾಗುತ್ತದೆ ಕೈಗಾರಿಕೋದ್ಯಮಿಗಳು ಅಥವಾ ಬಿಲಿಯನೇರ್‌ಗಳನಲ್ಲ' ಎಂದು ಹೇಳಿದ್ದರು. 

ಕಂಗನಾ ಮತ್ತೆ ಟ್ವಿಟ್ಟರ್‌ಗೆ ವಾಪಾಸ್ ಆಗಿದ್ದಾರೆ. ಟ್ವಿಟ್ಟರ್ ನಲ್ಲಿ ಆಕ್ಟೀವ್ ಆಗುತ್ತಿದಂದೆ ಸಾಲು ಸಾಲು ಟ್ವೀಟ್ ಗಳನ್ನು ಮಾಡಿದ್ದಾರೆ. ಸಿನಿಮಾರಂಗ ಇರುವುದು ಹಣ ಮಾಡುವುದಕ್ಕೆ  ಅಲ್ಲ ಎಂದಿದ್ದ ಕಂಗನಾ ಇದೀಗ ಪಠಾಣ್ ಕಲೆಕ್ಷನ್ ಹೊಗಲಿರುವುದು ಅಚ್ಚರಿ ಮೂಡಿಸಿದೆ. ಕಂಗನಾ ಜೊತೆಗೆ ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್ ಕೂಡ ಸಿನಿಮಾವನ್ನು ಹಾಡಿಹೊಗಳಿದ್ದಾರೆ. 

ಈ ಸಿನಿಮಾಗಾಗಿ ಎಲ್ಲಾ ಆಸ್ತಿ ಅಡ ಇಟ್ಟೆ, ಇದು ನನಗೆ ಪುನರ್ಜನ್ಮ...: ನಟಿ ಕಂಗನಾ ರಣಾವತ್

ಪಠಾಣ್ ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿದೆ. ಮೊದಲ ದಿನ ಪಠಾಣ್ ಬರೋಬ್ಬರಿ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಇದು ಸೊರಗಿದ್ದ ಬಾಲಿವುಡ್‌ಗೆ ಜೀವಬಂದಂತೆ ಆಗಿದೆ. 2023 ಅನ್ನು ಬಾಲಿವುಡ್ ಅದ್ಭುತವಾಗಿ ಪ್ರಾರಂಭಿಸಿದೆ. ಮುಂದಿನ ದಿನಗಳಲ್ಲೂ ಬಾಲಿವುಡ್ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗುವ ಮೂಲಕ ಮತ್ತೆ ಟ್ರ್ಯಾಕ್‌ಗೆ ಮರಳುತ್ತಾ ಎಂದು ಕಾದುನೋಡಬೇಕಿದೆ. 

Follow Us:
Download App:
  • android
  • ios