ಪಠಾಣ್ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ನಟಿ ಕಂಗನಾ ರಣಾವತ್ ಸಿನಿಮಾರಂಗ ಇರುವುದು ಹಣ ಮಾಡುವುದಕ್ಕೆ ಅಲ್ಲ ಎಂದು ಕಿಡಿಕಾರಿದ್ದಾರೆ. 

ನಟಿ ಕಂಗನಾ ರಣಾವತ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಕಂಗನಾ ಮತ್ತೆ ಟ್ವಿಟ್ಟರ್‌ಗೆ ಮರಳಿದ್ದಾರೆ. ಕಂಗನಾ ಅವರ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಮತ್ತೆ ಪಾವಾಸ್ ಆಗುವ ಮೂಲಕ ಅಭಿಮಾನಿಗಳಿಗೆ ಸಂತಸ ಸುದ್ದಿ ನೀಡಿದ್ದಾರೆ. ಟ್ವಿಟ್ಟರ್‌ಗೆ ವಾಪಾಸ್ ಆಗ್ತಿದ್ದ ಹಾಗೆ ಬಾಲಿವುಡ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಪಠಾಣ್ ರಿಲೀಸ್ ಆದ ಬೆನ್ನಲ್ಲೇ ಕಂಗನಾ ಹೇಳಿರುವ ಮಾತು ಶಾರುಖ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಕಂಗನಾ ಸಾಲು ಸಾಲು ಟ್ವೀಟ್‌ಗಳನ್ನು ಮಾಡಿದ್ದಾರೆ. 

ಬೇರೆ ಬೇರೆ ಉದ್ಯಮಗಳು ಆರ್ಥಿಕ ಲಾಭಕ್ಕಾಗಿ ಸಿನಿಮಾ ಮಾಡಲಾಗುತ್ತಿಲ್ಲ. ಹಾಗಾಗಿ ಅವರನ್ನು ದೇವರಂತೆ ಪೂಜಿಸುತ್ತಾರೆ ಎಂದು ಕಂಗನಾ ಗುಡುಗಿದ್ದಾರೆ. ಕಲೆ ಮೊದಲು ದೇವಾಲಯಗಳಲ್ಲಿ ಅರಳಿತು. ಬಳಿಕ ಸಾಹಿತ್ಯ, ರಂಗಮಂದಿರ ಅಂತಿಮವಾಗಿ ಚಿತ್ರಮಂದಿರಳಿಗೆ ತಲುಪಿತು. ಬೇರೆ ಬಿಲಿಯನ್ ಮತ್ತು ಟ್ರಿಯಲ್ ಡಾಲರ್ ವ್ಯವಹಾರಗಳಂತೆ ಸಿನಿಮಾರಂಗ ಆರ್ಥಿಕ ಲಾಭಗಳಿಗಾಗಿ ವಿನ್ಯಾಸಗೊಂಡಿಲ್ಲ. ಅದಕ್ಕಾಗಿಯೇ ಕಲೆ ಮತ್ತು ಕಲಾವಿದರನ್ನು ಪೂಜಿಸಲಾಗುತ್ತದೆ ಕೈಗಾರಿಕೋದ್ಯಮಿಗಳು ಅಥವಾ ಬಿಲಿಯನೇರ್‌ಗಳನಲ್ಲ' ಎಂದು ಹೇಳಿದ್ದಾರೆ. 

ಕಳೆದ ವರ್ಷ ಕಂಗನಾ ರಣಾವತ್​ ನಟನೆಯ ‘ಧಾಕಡ್​’ ಸಿನಿಮಾ ಹೀನಾಯವಾಗಿ ಸೋತಿತ್ತು. ಆ ಸೋಲಿನ ಸುಳಿಯಿಂದ ಅವರು ಇನ್ನೂ ಹೊರಬಂದಿಲ್ಲ. ಈಗ ಶಾರುಖ್​ ಖಾನ್​ ಚಿತ್ರದ ಗೆಲುವಿನ ಬಗ್ಗೆ ಅವರು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ತಮ್ಮ ಪೋಸ್ಟ್​ನಲ್ಲಿ ಅವರು ಎಲ್ಲಿಯೂ ‘ಪಠಾಣ್​’ ಹೆಸರನ್ನು ಪ್ರಸ್ತಾಪಿಸಿಲ್ಲ. ಆದರೆ ಅವರು ಈ ಚಿತ್ರವನ್ನೇ ಟಾರ್ಗೆಟ್​ ಮಾಡಿಕೊಂಡು ಟ್ವೀಟ್​ ಮಾಡಿದ್ದಾರೆ ಎಂಬುದು ನೆಟ್ಟಿಗರಿಗೆ ಸ್ಪಷ್ಟವಾಗಿದೆ.

Kangana Ranaut; ಮತ್ತೆ ಟ್ವಿಟ್ಟರ್‌ಗೆ ಬಂದ ನಟಿ ಕಂಗನಾ: ಮೊದಲು ಹೇಳಿದ್ದೇನು?

ನಟಿ ಕಂಗನಾ ರಣಾವತ್ ಅವರ ಟ್ವಿಟ್ಟರ್ ಖಾತೆ ಮೇ 2021ರಲ್ಲಿ ಶಾಶ್ವತವಾಗಿ ಅಮಾನತುಗೊಳಿಸಲಾಗಿತ್ತು. ಆಕ್ಷೇಪಾರ್ಹ ಟ್ವೀಟ್‌ಗಳಿಂದ ಕಂಗನಾ ಟ್ವಿಟ್ಟರ್ ಖಾತೆ ಅಮಾನತು ಆಗಿತ್ತು. ಇದೀಗ ಟ್ವಿಟ್ಟರ್ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕೈಗೆ ಬಂದಾಗ ಕಂಗನಾ ಅಭಿಮಾನಿಗಳು ಕೇಳಿಕೊಂಡಿದ್ದರು. ನಟಿಯ ಖಾತೆಯನ್ನು ವಾಪಾಸ್ ನೀಡುವಂತೆ ಒತ್ತಾಯ ಮಾಡಿದ್ದರು. ಇದೀಗ ಕಂಗನಾ ಟ್ವಿಟ್ಟರ್‌ಗೆ ವಾಪಾಸ್ ಆಗಿದ್ದಾರೆ. ವಾಪಾಸ್ ಆಗುತ್ತಿದ್ದಂತೆ ಮತ್ತೆ ರೊಚ್ಚಿಗೆದಿದ್ದಾರೆ.

Scroll to load tweet…

ಈ ಸಿನಿಮಾಗಾಗಿ ಎಲ್ಲಾ ಆಸ್ತಿ ಅಡ ಇಟ್ಟೆ, ಇದು ನನಗೆ ಪುನರ್ಜನ್ಮ...: ನಟಿ ಕಂಗನಾ ರಣಾವತ್

ಎಮರ್ಜೆನ್ಸಿ ಸಿನಿಮಾ

ನಟಿ ಕಂಗನಾ ಸದ್ಯ ಬಹುನಿರೀಕ್ಷೆಯ ಎಮರ್ಜೆನ್ಸಿ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾಗೆ ಕಂಗನಾ ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ಕಂಗನಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದಿರಾ ಗಾಂಧಿ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಈಗಾಗಲೇ ವೈರಲ್ ಆಗಿವೆ. ಇತ್ತೀಚಿಗಷ್ಟೆ ಶೂಟಿಂಗ್ ಸಮಯದ ಕಷ್ಟದ ಅನುಭವವನ್ನು ಬಿಚ್ಚಿಟ್ಟಿದ್ದರು. ಚಿತ್ರಕ್ಕಾಗಿ ಎಲ್ಲಾ ಆಸ್ತಿ ಅಡವಿಟ್ಟಿದ್ದೆ ಎಂದು ಕಂಗನಾ ಹೇಳಿದ್ದರು.