Asianet Suvarna News Asianet Suvarna News

ಸೆಪ್ಟೆಂಬರ್​ 6 ಮನೋರಂಜನಾ ಕ್ಷೇತ್ರಗಳು ಬಂದ್​, ತಪ್ಪಿದ್ರೆ ಜೈಲು: ಕಂಗನಾ ಇದೇನು ಘೋಷಣೆ?

ಸೆಪ್ಟೆಂಬರ್​ 6 ಮನೋರಂಜನಾ ಕ್ಷೇತ್ರಗಳು ಬಂದ್​, ತಪ್ಪಿದ್ರೆ ಜೈಲು ಎನ್ನುತ್ತಲೇ ಅಂದು ಎಲ್ಲಾ ಪಾಪರಾಜಿಗಳನ್ನು ಜೈಲಿಗೆ ಹಾಕಿ ಎಂದಿದ್ದಾರೆ ನಟಿ ಕಂಗನಾ ರಣಾವತ್​. ಇದೇನು ಘೋಷಣೆ?  
 

Kangana ranaut in her Indira Avatar  She said  Saare paps ko jail main daalo suc
Author
First Published Aug 21, 2024, 9:28 PM IST | Last Updated Aug 21, 2024, 9:28 PM IST

ಬರುವ ಸೆಪ್ಟೆಂಬರ್​ 6ರಂದು ಎಲ್ಲಾ ಪಾಪರಾಜಿಗಳನ್ನು ಜೈಲಿಗೆ ಹಾಕಿ. ಮನೋರಂಜನಾ ಕ್ಷೇತ್ರಗಳು ಬಂದ್​ ಆಗಲಿವೆ, ತಪ್ಪಿದ್ದರೆ ಎಲ್ಲರನ್ನೂ ಜೈಲು ಪಾಲು ಮಾಡಲಾಗುವುದು... ಹೀಗೆಂದು ಹೇಳಿದವರು ನಟಿ, ಸಂಸದೆ ಕಂಗನಾ ರಣಾವತ್​! ಹೌದು. ಸೆಪ್ಟೆಂಬರ್​ 6ರಂದು ನಟಿ ಎಮರ್ಜೆನ್ಸಿ ಘೋಷಣೆ  ಮಾಡಿದ್ದಾರೆ. ಅಷ್ಟಕ್ಕೂ ನಟಿ ಹೇಳ್ತಿರೋದು ಸೆಪ್ಟೆಂಬರ್​ 6ರಂದು ಬಿಡುಗಡೆಯಾಗಲಿರುವ ಎಮರ್ಜೆನ್ಸಿ ಚಿತ್ರದ ಕುರಿತು. ಕಂಗನಾ ರಣಾವತ್​ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯಾಗಿ ನಟಿಸಿರುವ ಎಮರ್ಜೆನ್ಸಿ ಚಿತ್ರವು ಅಂದು ಬಿಡುಗಡೆಯಾಗಲಿದೆ. ಝೀ ಸ್ಟುಡಿಯೋಸ್ ಮತ್ತು ಮಣಿಕರ್ಣಿಕಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಬರುತ್ತಿರುವ 'ಎಮರ್ಜೆನ್ಸಿ' ಚಿತ್ರವು ಮೊದಲ ಮಹಿಳಾ ಪ್ರಧಾನಿ  ಇಂದಿರಾಗಾಂಧಿಯನ್ನು ಆಧರಿಸಿದ ಮೆಗಾ-ಬಜೆಟ್ ಚಲನಚಿತ್ರವಾಗಿದೆ. 

ಜೂನ್ 25, 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಹೇರಿದ್ದ ರಾಷ್ಟ್ರೀಯ ತುರ್ತು ಪರಿಸ್ಥಿತಿ ( National Emergency) ಕರಾಳ ಮುಖವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದು ನಟಿ ಹೇಳಿದ್ದಾರೆ.  21 ತಿಂಗಳು ಕಾಲ ತುರ್ತು ಪರಿಸ್ಥಿತಿ ಅಸ್ತಿತ್ವದಲ್ಲಿ ಇತ್ತು. 1975, ಜೂನ್ 25ರಂದು ಭಾರತದ ಇತಿಹಾಸದಲ್ಲಿ ಕರಾಳ ದಿನವಾಗಿತ್ತು.  ಸಂವಿಧಾನವನ್ನು ತಿರಸ್ಕರಿಸಿ ತುರ್ತು ಪರಿಸ್ಥಿತಿ ಹೇರಲಾಯ್ತು. ಭಾರತದ ಯುವ ಪೀಳಿಗೆ ಇದನ್ನ ಎಂದು ಮರೆಯೋದಿಲ್ಲ ಎಂದಿರುವ ನಟಿ, ತಮ್ಮ ಈ ಚಿತ್ರವನ್ನು ವೀಕ್ಷಿಸಿ, ನಮ್ಮ ಇತಿಹಾಸವನ್ನು ತಿಳಿದುಕೊಳ್ಳಿ ಎಂದಿದ್ದಾರೆ. 

ಈ ದೇಶದಿಂದ ದ್ವೇಷ ಬಿಟ್ಟು ಏನೂ ಸಿಕ್ಕಿಲ್ಲ... ಇಂದಿರಾ ಕಣ್ಣೀರು... ಕಂಗನಾ 'ಎಮರ್ಜೆನ್ಸಿ' ಟ್ರೇಲರ್​ನಲ್ಲಿ ಏನಿದೆ?

  ಈ ಕುರಿತು ಹೇಳಿಕೆ ನೀಡಿರುವ ನಟಿ, ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದ ಕರಾಳ ಘಟ್ಟವನ್ನು ನೋಡಿ ಮತ್ತು ಅಧಿಕಾರದ ಲಾಲಸೆಯನ್ನು ನೋಡಿ ಎಂದಿದ್ದಾರೆ. ಚಿತ್ರದಲ್ಲಿ ಅನುಪಮ್ ಖೇರ್, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ ಮತ್ತು ದಿವಂಗತ ಸತೀಶ್ ಕೌಶಿಕ್ ಅವರ ಸಂಗೀತವನ್ನು ಸಂಚಿತ್ ಬಲ್ಹಾರಾ ಅವರು ಸಂಯೋಜಿಸಿದ್ದಾರೆ. ಕಥೆ ಮತ್ತು ಸಂಭಾಷಣೆಗಳನ್ನು ರಿತೇಶ್ ಷಾ ಬರೆದಿದ್ದಾರೆ. ಚಿತ್ರದ ಬಿಡುಗಡೆ ಪದೇ ಪದೇ ಮುಂದೂಡುತ್ತಲೇ ಹೋಗುತ್ತಿತ್ತು.  ನವೆಂಬರ್ 24, 2023 ರಂದು ಬಿಡುಗಡೆಯಾಗಬೇಕಿತ್ತು. ನಂತರ ಜೂನ್‌ 14ರಂದು ಚಿತ್ರ ರಿಲೀಸ್‌ ಆಗಲಿದೆ ಎನ್ನಲಾಗಿತ್ತು.  ಕಂಗನಾ ಥೇಟ್​ ಇಂದಿರಾ ಗಾಂಧಿಯವರಂತೆ ಮೇಕಪ್​ ಮಾಡಿಕೊಂಡು, ಅವರಂತೆಯೇ   ಟ್ರೇಲರ್​ ಕಳೆದ ವರ್ಷವೇ ಬಿಡುಗಡೆಯಾಗಿತ್ತು. ಕಂಗನಾ ಅವರ ಈ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಆದರೆ ಯಾಕೋ ಈ ಚಿತ್ರಕ್ಕೆ ಇನ್ನೂ ಮುಹೂರ್ತ ಕೂಡಿ ಬರುತ್ತಲೇ ಇರಲಿಲ್ಲ. ಇದೀಗ ಬಿಜೆಪಿಯ ಸಂಸದೆ ಆದ ಮೇಲೆ ನಟಿಯ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಮನೆ ಮಾಡಿದೆ. ಇದೀಗ ನಟಿ ಸೆಪ್ಟೆಂಬರ್​ 6ರಂದು ಚಿತ್ರ ಬಿಡುಗಡೆಯಾಗಲಿದೆ ಎಂದಿದ್ದಾರೆ. ಈ ಚಿತ್ರವನ್ನು ಸುಮಾರು 25 ಕೋಟಿ ರೂಪಾಯಿಗಳ ಬಜೆಟ್​ನಲ್ಲಿ ರೆಡಿ ಮಾಡಲಾಗಿದೆ ಎನ್ನಲಾಗುತ್ತಿದೆ. 


ಅಷ್ಟಕ್ಕೂ,  ಕಾಂಟ್ರವರ್ಸಿ ಕ್ವೀನ್​ ಎಂದೇ ಹೆಸರು ಪಡೆದಿರುವವರು  ಕಂಗನಾ ರಣಾವತ್​ ಅವರ ಇತ್ತೀಚಿನ ಅವರ ಚಿತ್ರಗಳು ಹಿಟ್​ ಆಗುತ್ತಲೇ ಇಲ್ಲ.  ಅವರ ನಸೀಬು ಸದ್ಯ ಸರಿ ಇದ್ದಂತಿಲ್ಲ. ಒಂದರ ಮೇಲೊಂದು ಫ್ಲಾಪ್‌ ಚಿತ್ರಗಳನ್ನು ನೀಡುತ್ತಿದ್ದಾರೆ. ಎಷ್ಟೇ ಕಷ್ಟಪಟ್ಟು, ಶ್ರಮವಹಿಸಿ, ಉತ್ತಮ ನಟನೆ ಮಾಡಿದ್ದರೂ ಇವರ ಚಿತ್ರಗಳು ಶಾಕ್‌ ಮೇಲೆ ಶಾಕ್‌ ನೀಡುತ್ತಿವೆ. ಆದರೆ ಮೊದಲ ಬಾರಿಗೇ ಸಂಸದೆಯಾಗಿ ಲೋಕಸಭೆಗೆ ಎಂಟ್ರಿ ಕೊಟ್ಟಿದ್ದಾರೆ ನಟಿ. ಇಲ್ಲಿ ಅದೃಷ್ಟ ಖುಲಾಯಿಸಿದೆ. ಎಮರ್ಜೆನ್ಸಿ ಚಿತ್ರ ನಟಿಗೆ ಅದೃಷ್ಟ ತಂದುಕೊಡುತ್ತಾ ನೋಡಬೇಕಿದೆ. 

‍ಅಪ್ಪುನೇ ದೇವ್ರು ಅನ್ನೋದು ಯಾಕೆ ಅಂತ ಅವತ್ತೇ ಗೊತ್ತಾಗೋಯ್ತು.. ಪವಾಡ ಬಿಚ್ಚಿಟ್ಟ ಫುಡ್‌ ವ್ಲಾಗರ್‌

 

Latest Videos
Follow Us:
Download App:
  • android
  • ios