Asianet Suvarna News Asianet Suvarna News

ಅಪ್ಪನ ಜೊತೆ ಕಾಜೋಲ್​ ಪುತ್ರಿ ನೀಸಾ: ಮುಚ್ಕೋಬೇಕಾದದ್ದು ಪ್ರದರ್ಶಿಸಿ ಮಾಸ್ಕ್​ ಯಾಕೆ ಎಂದ ಫ್ಯಾನ್ಸ್​!

ಅಜಯ್​ ದೇವಗನ್​ ಮತ್ತು ಕಾಜೋಲ್​ ಪುತ್ರಿ ನೀಸಾ ದೇವಗನ್​ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಮಾಸ್ಕ್​ ಮುಚ್ಚಿಕೊಂಡಿರುವುದಕ್ಕೆ ಟ್ರೋಲಿಗರು ಕಾಲೆಳೆದಿದ್ದಾರೆ. 
 

Kajols daughter Nysa Devgan  trolled for wearing a mask suc
Author
First Published Aug 8, 2023, 10:10 AM IST | Last Updated Aug 8, 2023, 10:10 AM IST

ನಟರಾದ ಅಜಯ್ ದೇವಗನ್ ಮತ್ತು ಕಾಜೋಲ್ (Kajol) ಅವರ ಪುತ್ರಿ ನೀಸಾ ದೇವಗನ್ ಸಾಮಾಜಿಕ ಮಾಧ್ಯಮದ ತಾರೆ. ಇಂಟರ್​ನೆಟ್​ನಲ್ಲಿ ಪ್ರಸಿದ್ಧವಾಗಿರುವ ಎಲ್ಲಾ ಸ್ಟಾರ್​ಕಿಡ್ಸಲ್ಲಿ, ನೀಸಾ ಬಹುಶಃ ಹೆಚ್ಚು ಪ್ರೀತಿಪಾತ್ರರಾಗಿದ್ದಾರೆ. ನೀಸಾ ಪ್ರಸ್ತುತ ಉದ್ಯಮದ ಭಾಗವಾಗಿಲ್ಲ, ಆದರೂ ಅವರು ಅತ್ಯಂತ ಪ್ರಸಿದ್ಧರಾಗಿದ್ದಾರೆ. ಈ ಸ್ಟಾರ್ ಕಿಡ್ ಆಗಾಗ್ಗೆ ಪಾರ್ಟಿ ಮಾಡುವುದು ಮತ್ತು  ಸ್ನೇಹಿತರೊಂದಿಗೆ ಮೋಜು ಮಾಡುವುದು ಕಂಡುಬರುತ್ತದೆ. ಆದ್ದರಿಂದ ಅವರು ಎಲ್ಲೇ  ಹೋದರೂ ಕ್ಯಾಮೆರಾ ಕಣ್ಣುಗಳು ಅವರನ್ನು ಹಿಂಬಾಲಿಸುತ್ತಲೇ ಇರುತ್ತದೆ. ನೀಸಾ ಬಾಲಿವುಡ್‌ನ ಸ್ಟಾರ್ ಕಿಡ್‌ಗಳಲ್ಲಿ ಒಬ್ಬರಾಗಿರುವ ಕಾರಣ  ಅವರ ಹೆಸರು ಸಾಮಾನ್ಯವಾಗಿ ಎಲ್ಲರ ಬಾಯಲ್ಲಿ ಇರುತ್ತದೆ.  ಪ್ರಪಂಚದಾದ್ಯಂತದ ಅನೇಕ ನಗರಗಳಲ್ಲಿ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ನೀಸಾ,  ಕೆಲವು ಬಾರಿ  ಸ್ಟಾರ್​ ಕಿಡ್ಸ್​ ಜೊತೆ ಕಾಣಿಸಿಕೊಂಡರೆ ಇನ್ನು ಕೆಲವು ಬಾರಿ ಇನ್ನಾರದೋ ಜೊತೆ ಅಮಲಿನಲ್ಲಿ ಇರುವಂತೆ ಕಾಣಿಸಿಕೊಳ್ಳುತ್ತಾರೆ. ಆ ಚಿತ್ರವನ್ನು ನೋಡಿದಾಗಲೆಲ್ಲಾ ಈಕೆ ಈ ಹುಡುಗನ ಜೊತೆ ಡೇಟಿಂಗ್​ ಮಾಡ್ತಾ ಇದ್ದಾರೆ ಎನ್ನುವ ಅನುಮಾನ ಕಾಡುತ್ತದೆ.

ಅಷ್ಟಕ್ಕೂ ಕೆಲ ತಿಂಗಳ ಹಿಂದಷ್ಟೇ ಈಕೆಯ ಹೆಸರು ಅರ್ಹಾನ್ ಅವತ್ರಮಣಿ ಎಂಬ ಯುವಕನ ಜೊತೆ ಥಳಕು ಹಾಕಿಕೊಂಡಿತ್ತು. ಪಾರ್ಟಿ, ಫ್ರೆಂಡ್ಸ್, ಟ್ರಿಪ್ ಅಂತ ಓಡಾಡುವ ನಿಸಾ  ಲಂಡನ್‌ನಲ್ಲಿ ಅರ್ಹಾನ್​ ಜೊತೆ ಮೋಜು ಮಸ್ತಿ ಮಾಡುತ್ತಿದ್ದರು. ಅದರ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿಸಾ ಅವರ ಬೆಸ್ಟ್ ಫ್ರೆಂಡ್‌ಗಳಲ್ಲಿ ಅರ್ಹಾನ್ ಅವತ್ರಮಣಿ ಕೂಡ ಒಬ್ಬರು. ಈತ  ಸಿನಿಮಾರಂಗದಲ್ಲಿ ಇಲ್ಲ. ಆದರೂ ಸ್ಟಾರ್ ಕಿಡ್‌ಗಳ ಜೊತೆ ಸಿಕ್ಕಾಪಟ್ಟೆ ಕ್ಲೋಸ್. ಫ್ಯಾಷನ್ ಕ್ರೇಸ್ ಅರ್ಹಾನ್ ಮತ್ತು ನಿಸಾ ಇಬ್ಬರೂ ಸಿಕ್ಕಾಪಟ್ಟೆ ಕ್ಲೋಸ್ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ  ಹರಿದಾಡುತ್ತಿತ್ತು. ನಂತರ  ನೀಸಾ ಅವರು  ಖ್ಯಾತ ಉದ್ಯಮಿ ವೇದಾಂತ್ ಮಹಾಜನ್ (Vedanth Mahajan) ಅವರೊಂದಿಗೆ  ಡೇಟಿಂಗ್ (Dating) ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. 

ಉದ್ಯಮಿ ಜೊತೆ ಕಾಜೋಲ್​ ಪುತ್ರಿ! ಅವನೊಮ್ಮೆ, ಇವನ್ನೊಮ್ಮೆ... ಏನಮ್ಮಾ ನಿನ್​ ಕಥೆ ಎಂದ ಫ್ಯಾನ್ಸ್​

ಒಟ್ಟಿನಲ್ಲಿ ಈ ಸ್ಟಾರ್​ ಕಿಡ್​ ಹೋದಲ್ಲೆಲ್ಲಾ ಆಕೆಯ ಮೇಲೆ ಪಾಪರಾಜಿಗಳ ಕಣ್ಣು ನೆಟ್ಟಿರುತ್ತದೆ. ಇದೀಗ ತಂದೆ ಅಜಯ್​ ದೇವಗನ್​ ಜೊತೆ ನೀಸಾ ಕಾಣಿಸಿಕೊಂಡಿದ್ದಾರೆ. ಇದರ ವಿಡಿಯೋ Social Media ದಲ್ಲಿ ವೈರಲ್​ ಆಗಿದೆ. ವಿಮಾನ ನಿಲ್ದಾಣದಿಂದ ಹೊರಕ್ಕೆ ಬರುತ್ತಿರುವ ವೇಳೆ ಕ್ಯಾಮೆರಾ ಕಣ್ಣಿಗೆ ಅಪ್ಪ-ಮಗಳು ಕಂಡುಬಂದಿದ್ದಾರೆ. ಅಜಯ್​ ದೇವಗನ್​ (Ajay Devagan) ಸೀದಾ ಸಾದಾ ಬಂದಿದ್ದರೆ, ನೀಸಾ ಮಾಸ್ಕ್​ ಹಾಕಿಕೊಂಡಿದ್ದಾರೆ. ತೆಳ್ಳಗಿನ ಬಿಳಿ ಟೀ ಷರ್ಟ್​, ಪ್ಯಾಂಟ್​ ಧರಿಸಿ ಮಾಸ್ಕ್​ ಹಾಕಿಕೊಂಡು ನೀಸಾ ಬಂದಿದ್ದಾರೆ. ಇದನ್ನು ಕಂಡು ಹಲವರು ಈಕೆಯ ಕಾಲೆಳೆದಿದ್ದಾರೆ. ತೆಳ್ಳಗಿನ ಟೀ ಷರ್ಟ್​ನಲ್ಲಿ ಎಲ್ಲಾ ಪ್ರದರ್ಶನ ಮಾಡುತ್ತಾ, ಮುಖ ಮುಚ್ಚಿಕೊಳ್ಳುವ ಮಾಸ್ಕ್​ ಹಾಕಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಇದಾಗಲೇ ಹಲವು ಪಾರ್ಟಿಗಳಲ್ಲಿ ಎಲ್ಲವನ್ನೂ ಓಪನ್​ ಆಗಿ ತೋರಿಸಿಯಾಗಿದೆ, ಈಗ ಮುಖ ಮುಚ್ಚಿಕೊಳ್ಳೋ ಅಗತ್ಯವಿಲ್ಲ ಎಂದು ಇನ್ನು ಹಲವರು ಹೇಳಿದ್ದಾರೆ. ಹೇಳುತ್ತಾರೆ. ಇನ್ನು ಕೆಲವರು ಈಕೆಯ ಆ್ಯಟಿಟ್ಯೂಡ್​ ನೋಡಿ ಎಂದಿದ್ದಾರೆ.

ಅಂದಹಾಗೆ ಸಾಮಾನ್ಯವಾಗಿ ನ್ಯಾಸ ದೇವಗನ್​ ಎಂದು ಕರೆಸಿಕೊಳ್ಳುವ ಈಕೆಯ  ನಿಜವಾದ ಹೆಸರು ನೀಸಾ (Nysa) ಅಂತೆ. ಆದರೆ  ನ್ಯಾಸ ಎನ್ನುವುದು ಜನಪ್ರಿಯ ಹೆಸರಾಗಿರುವ ಕಾರಣ ಎಲ್ಲರೂ ಹಾಗೆಯೇ ಕರೆಯುವುದುಂಟು.  ಕೆಲವರು ನೈಸಾ, ನಿಶಾ,  ನಿಶ್ಸಾ ಎಂದೂ ಕರೆಯುವುದು ಉಂಟು. ಇದೇ ರೀತಿ ಕರೆದಿರುವುದು ತಮಗೆ ಕಿರಿಕಿರಿ ಉಂಟು ಮಾಡುತ್ತದೆ ಎಂದು ಹಿಂದೊಮ್ಮೆ ನೀಸಾ ಹೇಳಿಕೊಂಡಿದ್ದರು. ಇದರ ವಿಡಿಯೋ ಒಂದು ವೈರಲ್ ಆಗಿತ್ತು. ವೈರಲ್ ವೀಡಿಯೊದಲ್ಲಿ, ನೀಸಾ, ತಮ್ಮ ಹೆಸರು ನ್ಯಾಸಾ ಅಲ್ಲ, ನೀಸಾ ಎನ್ನುವುದನ್ನು ಹೇಳುವುದನ್ನು ಕೇಳಬಹುದು. ಈಕೆ ಬರುತ್ತಿದ್ದಂತೆಯೇ  ಪಾಪರಾಜಿಗಳು ನೈಸಾ, ನೈಶಾ ಎಂದೆಲ್ಲಾ ಕರೆಯಲು ಶುರು ಮಾಡಿದಾಗ ಕಾರಿನ ಒಳಗೆ ಕುಳಿತು ಸ್ವಲ್ಪ ಬೇಸರದಿಂದಲೇ ನನ್ನ ಹೆಸರು ನೀಸಾ ಎನ್ನುತ್ತಾರೆ ಈಕೆ. ವೀಡಿಯೊದಲ್ಲಿ, ನೀಸಾ ಆಪ್ತ ಸ್ನೇಹಿತ ಓರ್ಹಾನ್ ಅವತ್ರಾಮಣಿಯೊಂದಿಗೆ ನೋಡಬಹುದು. ಇಬ್ಬರೂ ರೆಸ್ಟೋರೆಂಟ್‌ನಿಂದ (Restaurant) ಹೊರಬರುತ್ತಿರುವುದು ಕಾಣಿಸುತ್ತದೆ. ವಿಡಿಯೋದಲ್ಲಿ ಅಜಯ್​ ದೇವಗನ್​  ಪುತ್ರಿ ನೀಸಾ ದೇವಗನ್ ಕಾರಿನಲ್ಲಿ ಕುಳಿತುಕೊಳ್ಳಲು ಹೋಗುವಾಗ  ಪಾಪರಾಜಿಗಳು ಅವರನ್ನು ನ್ಯಾಸ ನ್ಯಾಸ ಎಂದು ಕರೆಯುತ್ತಾರೆ. ಅದಕ್ಕೆ ಆಕೆ,  'ನನ್ನ ಹೆಸರು ನೀಸಾ' ಎಂದು ಹೇಳಿದರು.

Nysa Devgan: ನೈಸಾ, ನಿಶಾ, ನಿಶ್ಸಾ, ನ್ಯಾಸಾ... ತಪ್ಪಾದ ಹೆಸ್ರು ಕೇಳಿ ಸುಸ್ತಾಗೋದ್ರು ಕಾಜೋಲ್​ ಪುತ್ರಿ!

 

Latest Videos
Follow Us:
Download App:
  • android
  • ios