Asianet Suvarna News Asianet Suvarna News

Nysa Devgan: ನೈಸಾ, ನಿಶಾ, ನಿಶ್ಸಾ, ನ್ಯಾಸಾ... ತಪ್ಪಾದ ಹೆಸ್ರು ಕೇಳಿ ಸುಸ್ತಾಗೋದ್ರು ಕಾಜೋಲ್​ ಪುತ್ರಿ!

ಅಜೆಯ್​ ದೇವಗನ್ ಮತ್ತು ಕಾಜೋಲ್​ ಪುತ್ರಿಯ ಹೆಸರನ್ನು ಹಲವರು ಹಲವು ರೀತಿಯಲ್ಲಿ ಕರೆಯುತ್ತಿದ್ದುದರಿಂದ ಕಿರಿಕಿರಿ ಅನುಭವಿಸಿದ ನೀಸಾ ದೇವಗನ್​ ಹೇಳಿದ್ದೇನು?

 

Nysa Devgan Asks Paparazzi To Spell Her Name Correctly During  Outing With Orhan Awatramani
Author
First Published Apr 14, 2023, 5:58 PM IST

ನಟರಾದ ಅಜಯ್ ದೇವಗನ್ ಮತ್ತು ಕಾಜೋಲ್ (Kajol) ಅವರ ಪುತ್ರಿ ನೀಸಾ ದೇವಗನ್ ಸಾಮಾಜಿಕ ಮಾಧ್ಯಮದ ತಾರೆ. ಇಂಟರ್​ನೆಟ್​ನಲ್ಲಿ  ಪ್ರಸಿದ್ಧವಾಗಿರುವ ಎಲ್ಲಾ ಬಾಲಿವುಡ್ ಮಕ್ಕಳಲ್ಲಿ, ನೀಸಾ ಬಹುಶಃ ಹೆಚ್ಚು ಪ್ರೀತಿಪಾತ್ರರಾಗಿದ್ದಾರೆ. ನೀಸಾ ಪ್ರಸ್ತುತ ಉದ್ಯಮದ ಭಾಗವಾಗಿಲ್ಲ, ಆದರೂ ಅವರು ಅತ್ಯಂತ ಪ್ರಸಿದ್ಧರಾಗಿದ್ದಾರೆ. ಈ ಸ್ಟಾರ್ ಕಿಡ್ ಆಗಾಗ್ಗೆ ಪಾರ್ಟಿ ಮಾಡುವುದು ಮತ್ತು  ಸ್ನೇಹಿತರೊಂದಿಗೆ ಮೋಜು ಮಾಡುವುದು ಕಂಡುಬರುತ್ತದೆ. ಆದ್ದರಿಂದ ಅವರು ಎಲ್ಲೇ  ಹೋದರೂ ಕ್ಯಾಮೆರಾ ಕಣ್ಣುಗಳು ಅವರನ್ನು ಹಿಂಬಾಲಿಸುತ್ತಲೇ ಇರುತ್ತದೆ. ನೀಸಾ ಬಾಲಿವುಡ್‌ನ ಸ್ಟಾರ್ ಕಿಡ್‌ಗಳಲ್ಲಿ ಒಬ್ಬರಾಗಿರುವ ಕಾರಣ  ಅವರ ಹೆಸರು ಸಾಮಾನ್ಯವಾಗಿ ಎಲ್ಲರ ಬಾಯಲ್ಲಿ ಇರುತ್ತದೆ. ಅನೇಕ ಜನರು ಸಾಮಾನ್ಯವಾಗಿ ಯಾರ ಹೆಸರಿನ ಬಗ್ಗೆ ಗೊಂದಲಕ್ಕೊಳಗಾಗುವುದಿಲ್ಲ. ಆದರೆ ಕೆಲವೊಮ್ಮೆ ಇಂಗ್ಲಿಷ್​ ಸ್ಪೆಲ್ಲಿಂಗ್​ಗಳು ವಿಚಿತ್ರವಾಗಿರುವ ಕಾರಣ, ಅವುಗಳನ್ನು ತಪ್ಪಾಗಿ ಉಚ್ಛರಿಸುವುದು ಸಹಜ. ಅದೇ ರೀತಿ ಆಗಿದೆ ಈಗ  ಅಜಯ್ ದೇವಗನ್ ಮತ್ತು ಕಾಜೋಲ್ ಅವರ ಮಗಳ ಕಥೆ ಕೂಡ.

ಈಕೆಯ ನಿಜವಾದ ಹೆಸರು ನೀಸಾ (Nysa). ಆದರೆ ಹಲವರು ಈಕೆಯನ್ನು ನ್ಯಾಸ ಎಂದು ಕರೆಯುವುದು ಉಂಟು. ಬಹುತೇಕ ಎಲ್ಲಾ ಮಾಧ್ಯಮಗಳಲ್ಲಿ ಕೂಡ ಈಕೆಯ ಹೆಸರು ನ್ಯಾಸ ಎಂದೇ ಬಿತ್ತರಗೊಳ್ಳುತ್ತದೆ ಹಾಗೂ ಪ್ರಕಟಗೊಳ್ಳುತ್ತದೆ. ಏಕೆಂದರೆ ನ್ಯಾಸ ಎನ್ನುವುದು ಜನಪ್ರಿಯ ಹೆಸರು. ಆದರೆ ಕಾಜೋಲ್​ ಪುತ್ರಿಯ ಹೆಸರನ್ನು ಹಲವರು ನೈಸಾ, ನಿಶಾ,  ನಿಶ್ಸಾ ಎಂದೂ ಕರೆಯುವುದು ಉಂಟು. ಇದೇ ರೀತಿ ಕರೆದಿರುವುದು ನೀಸಾ ಅವರಿಗೆ ಕಿರಿಕಿರಿ ಉಂಟು ಮಾಡಿರುವ ಘಟನೆ ನಡೆದಿದ್ದು, ಅದರ ವಿಡಿಯೋ ವೈರಲ್​ ಆಗಿದೆ. 

ಹಿಂದಿಯಲ್ಲಿ ಮಾತನಾಡಲು ಬರದೇ ಪರದಾಡಿದ ಅಜಯ್ ದೇವಗನ್ ಪುತ್ರಿಗೆ ರಾಷ್ಟ್ರಭಾಷೆ ಪಾಠ!
 
ವೈರಲ್ ವೀಡಿಯೊದಲ್ಲಿ, ನೀಸಾ, ತಮ್ಮ ಹೆಸರು ನ್ಯಾಸಾ ಅಲ್ಲ, ನೀಸಾ ಎನ್ನುವುದನ್ನು ಹೇಳುವುದನ್ನು ಕೇಳಬಹುದು. ಈಕೆ ಬರುತ್ತಿದ್ದಂತೆಯೇ  ಪಾಪರಾಜಿಗಳು ನೈಸಾ, ನೈಶಾ ಎಂದೆಲ್ಲಾ ಕರೆಯಲು ಶುರು ಮಾಡಿದಾಗ ಕಾರಿನ ಒಳಗೆ ಕುಳಿತು ಸ್ವಲ್ಪ ಬೇಸರದಿಂದಲೇ ನನ್ನ ಹೆಸರು ನೀಸಾ ಎನ್ನುತ್ತಾರೆ ಈಕೆ. ವೀಡಿಯೊದಲ್ಲಿ, ನೀಸಾ ಆಪ್ತ ಸ್ನೇಹಿತ ಓರ್ಹಾನ್ ಅವತ್ರಾಮಣಿಯೊಂದಿಗೆ ನೋಡಬಹುದು. ಇಬ್ಬರೂ ರೆಸ್ಟೋರೆಂಟ್‌ನಿಂದ (Restorant) ಹೊರಬರುತ್ತಿರುವುದು ಕಾಣಿಸುತ್ತದೆ. ವಿಡಿಯೋದಲ್ಲಿ ಅಜಯ್​ ದೇವಗನ್​ (Ajay Devagan) ಪುತ್ರಿ ನೀಸಾ ದೇವಗನ್ ಕಾರಿನಲ್ಲಿ ಕುಳಿತುಕೊಳ್ಳಲು ಹೋಗುವಾಗ  ಪಾಪರಾಜಿಗಳು ಅವರನ್ನು ನ್ಯಾಸ ನ್ಯಾಸ ಎಂದು ಕರೆಯುತ್ತಾರೆ. ಅದಕ್ಕೆ ಆಕೆ,  'ನನ್ನ ಹೆಸರು ನೀಸಾ' ಎಂದು ಹೇಳುತ್ತಾರೆ. ಹೀಗೆ ಹೇಳಿದ ಮೇಲೂ ಕೆಲವರು ಉದ್ದೇಶಪೂರ್ವಕವಾಗಿ ನೀಶಾ, ನೈಸಾ ಎಂದೆಲ್ಲಾ ಕರೆಯುತ್ತಾರೆ. ಈ ಹೆಸರು ಕೇಳಿ ಕಿರಿಕಿರಿಯಾದರೂ ನಗು ಮುಖದಿಂದಲೇ ನೀಸಾ  ದೇವಗನ್ ತಮ್ಮ ಹೆಸರನ್ನು ಹೇಳುವುದನ್ನು ವಿಡಿಯೋದಲ್ಲಿ (Vedio)ನೋಡಬಹುದು.

ಕೆಲ ತಿಂಗಳುಗಳಿಂದ ನೀಸಾ ಮತ್ತು ಓರ್ಹಾನ್ ಅವತ್ರಮಣಿ (Orhan Awatramani) ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.  ಹಿಂದೆ, ಇಬ್ಬರೂ ರಾಜಸ್ಥಾನ ರಜೆಯನ್ನು ಆನಂದಿಸುತ್ತಿದ್ದರು. ರಾಜಸ್ಥಾನ ರಜೆಯ ಚಿತ್ರಗಳನ್ನು ಓರ್ಹಾನ್ ಅವತ್ರಮಣಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದರು.  

ಮಗಳು ನ್ಯಾಸಾಳ ಬೋಲ್ಡ್‌ನೆಸ್‌: ಅವಳು ಏನೇ ಮಾಡಿದರೂ ನಂಗೆ ಹೆಮ್ಮೆ ಎಂದ ಕಾಜೋಲ್!

ಕೆಲ ದಿನಗಳ ಹಿಂದೆ ಹಿಂದಿ ಸರಿಯಾಗಿ ಮಾತನಾಡದೇ ನೀಸಾ ಟ್ರೋಲ್​ಗೆ ಒಳಗಾಗಿದ್ದರು. ಹಿಂದಿ ರಾಷ್ಟ್ರಭಾಷೆಯ ಪರವಾಗಿ ನಟ ಅಜಯ್ ದೇವಗನ್​ ಮಾತನಾಡಿದ್ದರಿಂದ ಅವರ  ಪುತ್ರಿ ನೀಸಾ ಮಾತು ಬಹಳ ಟ್ರೋಲ್​ ಆಗಿತ್ತು.  ಇವೆಂಟ್‌ವೊಂದರಲ್ಲಿ ಹಿಂದಿ ಮಾತನಾಡಲಾಗದೆ ಅಜಯ್​- ಕಾಜೋಲ್​ ಪುತ್ರಿ ನೀಸಾ ಪೇಚಿಗೆ ಸಿಲುಕಿದ್ದರು.  ಈ ವಿಡಿಯೋ ನೋಡಿದ ಅನೇಕರು ನೀಸಾ ಅವರನ್ನು ಮಾತ್ರವಲ್ಲದೇ ರಾಷ್ಟ್ರಭಾಷೆಯ ಪಾಠ ಮಾಡಿದ್ದ ಅಪ್ಪ ಅಜಯ್​ ದೇವಗನ್​ ಅವರನ್ನೂ ಟ್ರೋಲ್​ ಮಾಡಿದ್ದರು. ನೆಪೋಟಿಸಂ ಮಕ್ಕಳಿಗೆ ಮಾತನಾಡುವ ಬೇಸಿಕ್ ಕೌಶಲ್ಯ ಆದ್ರೂ ಇದ್ಯಾ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಕನ್ನಡಿಗರಂತೂ ಸಿಕ್ಕಿದ್ದೇ ಚಾನ್ಸ್​ ಎಂದು ಸುದೀಪ್​  (Sudeep) ಮತ್ತು ಅಜಯ್​ ದೇವಗನ್​ ನಡುವೆ ನಡೆದಿದ್ದ ರಾಷ್ಟ್ರಭಾಷೆಯ ಕುರಿತ ಟ್ವೀಟ್​ ಸಮರವನ್ನು ಉಲ್ಲೇಖಿಸಿ ಕಾಲೆಳೆದಿದ್ದರು. ಅಷ್ಟಕ್ಕೂ ನೀಡಾ ಟ್ರೋಲ್​  ಆಗುತ್ತಿರುವುದು ಇದೇ ಮೊದಲಲ್ಲ. ಕೆಲ ದಿನಗಳ ಹಿಂದೆ ಹೈ ಹೀಲ್ಸ್ ಹಾಕಿಕೊಂಡು ನಡೆಯಲು ಒದ್ದಾಡಿದ ನೀಸಾರನ್ನು ನೋಡಿದವರು ಕುಡಿದಿದ್ದು ಹೆಚ್ಚಾಯ್ತು ಎಂದೆಲ್ಲ ಜನರು ಕಾಮೆಂಟ್ ಮಾಡಿದ್ದರು. ಅದಕ್ಕೂ ಮುನ್ನ ಫುಲ್​ ಡ್ರೆಸ್​ ಹಾಕಿಕೊಂಡು ಅಪ್ಪ-ಅಮ್ಮನ ಜೊತೆ ದೇವಸ್ಥಾನಕ್ಕೆ ಹೋದಾಗಲೂ ಆಕೆಯ ಕಾಲೆಳೆಯಲಾಗಿತ್ತು. ಒಹ್​ ನಿನಗೂ ಫುಲ್​ ಡ್ರೆಸ್ ಹಾಕಲು ಬರುತ್ತಾ ಎಂದಿದ್ದರು.  

Follow Us:
Download App:
  • android
  • ios